ಬೇಡಿಕೆ ಈಡೇರದಿದ್ದರೆ ಹೋರಾಟ ತೀವ್ರ : ಇಪಿಎಸ್ ಪಿಂಚಿಣಿದಾರರ ಸಭೆಯಲ್ಲಿ ನಿರ್ಧಾರ- BMTC & KSRTC ನಿನೌಸಂ

ಬೆಂಗಳೂರು: ಇಪಿಎಸ್ ಪಿಂಚಿಣಿದಾರರ 98ನೇ ಮಾಸಿಕ ಸಭೆ ನಿನ್ನೆ (ಮಾ.1) ಭಾನುವಾರ ಲಾಲ್‌ಬಾಗ್ ಆವರಣದಲ್ಲಿ ಯಶಸ್ವಿಯಾಗಿ ಜರುಗಿತು.

ಇಪಿಎಸ್-95, ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘ ಮತ್ತು ಚಿಕ್ಕಬಳ್ಳಾಪುರ ಕೆಎಸ್ಆರ್‌ಟಿಸಿ ನಿವೃತ್ತ ನೌಕರರ ಟ್ರಸ್ಟ್ ವತಿಯಿಂದ ನಡೆದ ಈ ಮಾಸಿಕ ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಿದ ಅಂಶಗಳೇನೆಂದರೆ, ಮಾ.2ರಂದು ಸಿಬಿಟಿ ಸಭೆ ದೆಹಲಿಯಲ್ಲಿ ನಡೆಯಲಿದ್ದು, ಇದಾದ ನಂತರ ಮಾ.9 ರಿಂದ ಎರಡನೇ ಹಂತದ ಪಾರ್ಲಿಮೆಂಟ್ ಬಜೆಟ್ ಅಧಿವೇಶನ ನಡೆಯಲಿದೆ.
ಹೀಗಾಗಿ ಇವೆರಡು ಮುಕ್ತಾಯವಾಗುವ ಮುನ್ನ ಇಪಿಎಸ್ ನಿವೃತ್ತರ ಮೂಲಭೂತ ಬೇಡಿಕೆ 7,500 ರೂ.ಗಳು + ಭತ್ಯೆ ಹಾಗೂ ವೈದ್ಯಕೀಯ ಸೌಲಭ್ಯವನ್ನು ನೀಡಲೇಬೇಕು. ಒಂದು ವೇಳೆ ನಮ್ಮ ಬೇಡಿಕೆಗಳನ್ನು ಈಡೇರಿಸದೇ ಹೋದಲ್ಲಿ ಏಪ್ರಿಲ್ 2ರ ನಂತರ ನಮ್ಮ ಹೋರಾಟವನ್ನು ತೀವ್ರಗೊಳಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು ಎಂದು ಬಿಎಂಟಿಸಿ & ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಂಜುಂಡೇಗೌಡ ಪತ್ರಿಕೆ ತಿಳಿಸಿದ್ದಾರೆ.
ಇನ್ನು ಅಧಿಕ ಹೆಚ್ಚುವರಿ ಪಿಂಚಣಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ನೀಡಿರುವ ತೀರ್ಪು ಹಾಗೂ ವಿವಿಧ ರಾಜ್ಯಗಳ ಉಚ್ಚ ನ್ಯಾಯಾಲಯಗಳು ನೀಡಿರುವ ತೀರ್ಪಿನ ಬಗ್ಗೆ ಪರಾಮರ್ಶೆ ನಡೆಸಿ, ನ್ಯಾಯಾಲಯಗಳ ತೀರ್ಪುಗಳನ್ನು ಅನುಷ್ಠಾನಗೊಳಿಸುವಂತೆ ಆಗ್ರಹಿಸಿ, ಪಿಎಫ್ ಕಚೇರಿ ಆವರಣದಲ್ಲಿ ಕಳೆದ ಫೆಬ್ರವರಿ 27ರಂದು ಇಪಿಎಸ್ ನಿವೃತ್ತರು ನಡೆಸಿದ ಪ್ರತಿಭಟನೆ, ಮಾಧ್ಯಮಗಳಲ್ಲಿ ಪ್ರಕಟಗೊಂಡ ಬಳಿಕ ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು.
ಈ ಎಲ್ಲದರ ನಡುವೆ ಎರಡನೇ ಹಂತದ ಬಜೆಟ್ ಅಧಿವೇಶನದಲ್ಲಿ ರಾಜ್ಯದ ಸಂಸದರು ಇಪಿಎಸ್ ನಿವೃತ್ತರ ಪರ ಧ್ವನಿ ಎತ್ತಿ, ನಮ್ಮ ಮೂಲಭೂತ ಬೇಡಿಕೆಗಳನ್ನು ಸಂಸತ್ತಿನಲ್ಲಿ ಚರ್ಚಿಸಿ, ನಿರ್ಣಯಿಸಬೇಕೆಂದು ಆಗ್ರಹ ಪಡಿಸಲಾಯಿತು.
ಸಭೆಯಲ್ಲಿ ಬಿಎಂಟಿಸಿ ಹಾಗೂ ಕೆಎಸ್ಆರ್‌ಟಿಸಿ ಸಂಘದ ಖಜಾಂಚಿ, ಡೋಲಪ್ಪನವರು ಎಲ್ಲ ಸದಸ್ಯರನ್ನು ಸ್ವಾಗತಿಸುವ ಮೂಲಕ ಮಾಸಿಕ ಸಭೆಗೆ ಚಾಲನೆ ನೀಡಿದರು. ಅಧ್ಯಕ್ಷ ನಂಜುಂಡೇಗೌಡ ಅವರು ಕಾನೂನು ಅಂಶಗಳ ಬಗ್ಗೆ ಪ್ರಸ್ತಾಪಿಸಿದರು. ಸಂಘಟನಾ ಕಾರ್ಯದರ್ಶಿಗಳಾದ ಮನೋಹರ್ ಹಾಗೂ ನಾಗರಾಜು ಮಾತನಾಡಿದರು.
ಪತ್ರಕರ್ತರ ಬಿ.ಪಿ. ನಟರಾಜ್‌ಗೆ ಸನ್ಮಾನ: ಈ ಮಾಸಿಕ ಸಭೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಕಾರ್ಯಕಾರಿ ಸಮಿತಿಯ ನೂತನ ಸದಸ್ಯ ಬಿ.ಪಿ.ನಟರಾಜ್ ಅವರಿಗೆ ಸಂಘದ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.
ನಟರಾಜ್ ಅವರು ಕಳೆದ ಏಳೆಂಟು ವರ್ಷಗಳಿಂದ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಸಂಘಟನೆಯ ಎಲ್ಲ ಸಭೆ ಹಾಗೂ ಸಮಾವೇಶಗಳನ್ನು ತಮ್ಮ ಬಿಪಿಎನ್ ಟಿವಿ ಮಾಧ್ಯಮದಲ್ಲಿ ಪ್ರಸಾರ ಮಾಡುವುದರ ಜತೆಗೆ ಸಂಜೆ-ಸಮಾಚಾರ ದಿನಪತ್ರಿಕೆಯಲ್ಲಿಯು ಸಹಾ ಪ್ರಕಟಣೆ ಹೊರಡಿಸುವ ಮೂಲಕ ನಮ್ಮ ಹೋರಾಟಕ್ಕೆ ಶಕ್ತಿ ತುಂಬಿದ್ದು, ಅವರ ಕಾರ್ಯವೈಖರಿಯನ್ನು ಮೆಚ್ಚಿ ಹರ್ಷೋದ್ಗಾರಗಳೊಂದಿಗೆ ಗೌರವಿಸಲಾಯಿತು ಎಂದು ನಂಜುಂಡೇಗೌಡ ತಿಳಿಸಿದ್ದಾರೆ.
Related










ಇಪಿಎಸ್-95 ಪಿಂಚಣಿದಾರರು 7,500 ರೂ.ಗಳ ಮೂಲ ಪಿಂಚಣಿ ಹಾಗೂ ವೈದ್ಯಕೀಯ ಸೌಲಭ್ಯಕ್ಕಾಗಿ ಮತ್ತೆ ಹೋರಾಟದ ನಿರ್ಧಾರ ತೆಗೆದುಕೊಂಡಿರುವುದು ಅವರ ದೀರ್ಘಕಾಲದ ಸಂಕಷ್ಟವನ್ನು ತೋರಿಸುತ್ತದೆ. ಸಿಬಿಟಿ ಸಭೆ ಮತ್ತು ಸಂಸತ್ ಬಜೆಟ್ ಅಧಿವೇಶನದ ಮುನ್ನವೇ ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಂಡರೆ ಸಾವಿರಾರು ನಿವೃತ್ತ ನೌಕರರಿಗೆ ಭರವಸೆ ಸಿಗಲಿದೆ. ಸಂವಾದದ ಮೂಲಕ ಸಮಸ್ಯೆ ಪರಿಹರಿಸಿದರೆ ಹೋರಾಟದ ತೀವ್ರತೆ ತಪ್ಪಿಸಲು ಸಾಧ್ಯವಾಗುತ್ತದೆ ಎಂಬುದು ಎಲ್ಲರ ಆಶೆಯಾಗಿದೆ.