NEWSನಮ್ಮರಾಜ್ಯರಾಜಕೀಯ

ಮಾ.21ರಿಂದ ಜಂಟಿ ಕ್ರಿಯಾ ಸಮಿತಿ ಕರೆ ನೀಡಿರುವ ಮುಷ್ಕರ ಬೆಂಬಲಿಸಲು ಸಿದ್ಧ : ಸಮಾನ ಮನಸ್ಕರ ವೇದಿಕೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಇದೇ ಮಾರ್ಚ್‌ 21ರಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕಾರ್ಮಿಕ ಜಂಟಿ ಕ್ರಿಯಾ ಸಮಿತಿ ಕರೆ ನೀಡಿರುವ ಮಷ್ಕರವನ್ನು ಬೆಂಬಲಿಸಲು ಸಮಾನ ಮನಸ್ಕರ ವೇದಿಕೆ ಸಿದ್ಧವಿದೆ, ಆದರೆ ನಮ್ಮ ಕೆಲ ಬೇಡಿಕೆಗಳನ್ನು ಈಡೇರಿಸುವುದಕ್ಕೆ ನೀವು ಲಿಖಿತ ಭರವಸೆ ಕೊಡಬೇಕು ಎಂದು ವೇದಿಕೆ ಪದಾಧಿಕಾರಿಗಳು ತಿಳಿಸಿದ್ದಾರೆ.

ಈ ಸಂಬಂಧ ಇಂದು ಕ.ರಾ.ರ.ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಗೆ ಮುಷ್ಕರ ಬೆಂಬಲಿಸುವ ಬಗ್ಗೆ ಪತ್ರ ಬರೆದಿರುವ ಅವರು ಕೆಲ ಷರತ್ತುಗಳನ್ನು ಹಾಕಿದ್ದಾರೆ. ಆ ಷರತ್ತುಗಳು ಏನು ಎಂಬುದನ್ನು ಅವರೇ ತಿಳಿಸಿರುವ ಯಥಾ ಪ್ರತಿ ಹೀಗಿದೆ.

ಮಾನ್ಯರೇ: ಜಂಟಿ ಕ್ರಿಯಾ ಸಮಿತಿ ವತಿಯಿಂದ 21/03/2023 ಕರೆ ನೀಡಿರುವ ಅನಿರ್ದಿಷ್ಟಾವಧಿ ಸಾರಿಗೆ ಮುಷ್ಕರಕ್ಕೆ ಸಮಾನ ಮನಸ್ಕರ ವೇದಿಕೆಗೆ ಬೆಂಬಲ ನೀಡುವಂತೆ ನೀಡಿರುವ ಪತ್ರಕ್ಕೆ ಉತ್ತರಿಸುವ ಬಗ್ಗೆ..

ಮೇಲ್ಕಂಡ ವಿಷಯಕ್ಕೆ ಸಂಬಂಧಪಟ್ಟಂತೆ ಕಳೆದ ಮೂರು ವರ್ಷಗಳಿಂದ ನಾಲ್ಕು ನಿಗಮಗಳ ಬಹು ಪಾಲು (ಶೇ-98% ರಷ್ಟು ನೌಕರರು ಸರ್ಕಾರಿ ನೌಕರರ ಸರಿ ಸಮಾನ ವೇತನ, ವೇತನ ಆಯೋಗ ಮಾದರಿಯಲ್ಲಿ ನೀಡುವಂತೆ ಅನೇಕ ಹೋರಾಟಗಳನ್ನು ಮಾಡಿ, ಅನೇಕ ತ್ಯಾಗ, ಬಲಿದಾನ ಹಾಗೂ ಕಷ್ಟ-ನಷ್ಟಗಳನ್ನು ಅನುಭವಿಸಿದ್ದಾರೆ.

ಆದರೂ ಕೂಡ ಎದೆಗುಂದದೆ ಸಮಾನ ಮನಸ್ಕರ ವೇದಿಕೆಯಿಂದ ಎಲ್ಲ ಪದಾಧಿಕಾರಿಗಳ ಒಪ್ಪಿಗೆ ಪಡೆದು ನಂತರ ಸಾವಿರಕ್ಕೂ ಹೆಚ್ಚು ನೌಕರರು ಫ್ರೀಡಂ ಪಾರ್ಕ್‌ನಲ್ಲಿ ಸೇರಿದ ಎಲ್ಲ ನೌಕರರಿಗೆ ವಿಚಾರ ತಿಳಿಸಿ, ಅವರ ಅಭಿಪ್ರಾಯ ಪಡೆದು, ಕಾನೂನು ಬದ್ಧವಾಗಿ ಸಂಬಂಧ ಪಟ್ಟ ಎಲ್ಲರಿಗೂ ನೋಟಿಸ್ ನೀಡಿ, 24/03/2023 ರಿಂದ ಕರೆ ನೀಡಿರುವ ಅನಿರ್ದಿಷ್ಟಾವಧಿ ಸಾರಿಗೆ ಮುಷ್ಕರವನ್ನು ಯಶಸ್ಸುಗೊಳಿಸಲು ಮಾನಸಿಕವಾಗಿ ಸಿದ್ದರಾಗುತ್ತಿದ್ದಾರೆ.

ಈ ಸಮಯದಲ್ಲಿ ತಮ್ಮ ಜಂಟಿ ಕ್ರಿಯಾ ಸಮಿತಿಯಿಂದ ತುರ್ತಾಗಿ ಅಂದರೆ 21/03/2023 ರಿಂದ ಸಾರಿಗೆ ಮುಷ್ಕರ ಮಾಡುವ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ನಮ್ಮ ಸಂಘಟನೆಯ ಬೆಂಬಲ ಕೋರಿ ಪತ್ರ ಬರೆದಿರುವುದು ಸಂತೋಷದ ವಿಷಯ.

ಮಾನ್ಯರೇ ತಾವು ಕರೆ ನೀಡಿರುವ ಮುಷ್ಕರಕ್ಕೆ ಬೆಂಬಲ ನೀಡಲು ಕೆಲವು ವಿಚಾರಗಳಲ್ಲಿ ಸಮಾನ ಮನಸ್ಕರ ವೇದಿಕೆ ಮತ್ತು ಜಂಟಿ ಕ್ರಿಯಾ ಸಮಿತಿ ಮಧ್ಯದಲ್ಲಿ ಇರುವ ವಿಷಯಾಧಾರಿತ ಭಿನ್ನಾಭಿಪ್ರಾಯ ನೌಕರರ ಭವಿಷ್ಯದ ಹಿತ ದೃಷ್ಟಿಯಿಂದ ನಿವಾರಣೆ ಮಾಡಿಕೊಂಡು ಒಗ್ಗಟ್ಟಿನಿಂದ ಮುಂದುವರಿಯುವುದು ಸೂಕ್ತವೆಂದು ತಿಳಿದು ಈ ಪತ್ರವನ್ನು ತಮಗೆ ಬರೆಯುತ್ತಿದ್ದೇವೆ.

ವಿಷಯಾಧಾರಿತ ಭಿನ್ನಾಭಿಪ್ರಾಯಗಳು:
1) ಏಪ್ರಿಲ್‌-2021 ರ ಮುಷ್ಕರದ ಸಮಯದಲ್ಲಿ ನಾಲ್ಕು ನಿಗಮಗಳಲ್ಲಿ ನೌಕರರಿಗೆ ಆಗಿರುವ ಎಲ್ಲ ಶಿಕ್ಷಾದೇಶಗಳನ್ನು ರದ್ದು ಮಾಡಿ 06/04/2021 ರ ಯಥಾಸ್ಥಿತಿ ಕಾಪಾಡಬೇಕು.

2) ಡಿಸೆಂಬರ್-2020 ಮತ್ತು ಏಪ್ರಿಲ್-2021 ರ ಮುಷ್ಕರದ ಸಮಯದಲ್ಲಿ ನಾಲ್ಕು ನಿಗಮಗಳಲ್ಲಿ ನೌಕರರು ಮತ್ತು ಅವರ ಕುಟುಂಬದ ಸದಸ್ಯರ ಮೇಲೆ ದಾಖಲಿಸಿರುವ ಪೊಲೀಸ್‌ ಪ್ರಕರಣಗಳನ್ನು ಹಿಂಪಡೆಯಬೇಕು.

3) ಜಂಟಿ ಕ್ರಿಯಾ ಸಮಿತಿಯಿಂದ ಸರ್ಕಾರ/ ಆಡಳಿತ ಮಂಡಳಿಗೆ ಸಲ್ಲಿಸಿರುವ ಬೇಡಿಕೆಯಂತೆ ಮೂಲವೇತನ+ಬಿ.ಡಿ.ಎ ಸೇರಿಸಿ ಶೇ. 25 ರಷ್ಟು ವೇತನ ಪರಿಷ್ಕರಣೆ ಮಾಡಿಸಬೇಕು. ಯಾವುದೇ ಕಾರಣಕ್ಕೂ ಶೇ. 25 ಕ್ಕಿಂತ ಶೇ. 1 ರಷ್ಟು ಸಹ ಕಡಿಮೆ ವೇತನ ಪರಿಷ್ಕರಣೆ ಆಗಬಾರದು.

4) ಮುಂಬರುವ 01/01/2024 ರ ವೇತನ ಪರಿಷ್ಕರಣೆ ಸಮಯದಲ್ಲಿ ಸಾರಿಗೆ ನೌಕರರಿಗೂ ಸರ್ಕಾರಿ ನೌಕರರಿಗೆ ಇರುವ ಸರಿ ಸಮಾನ ವೇತನ ಪಡೆಯುವ ಹೋರಾಟದಲ್ಲಿ ಸಮಾನ ಮನಸ್ಕರ ವೇದಿಕೆಯ ಜತೆ ಜಂಟಿ ಕ್ರಿಯಾ ಸಮಿತಿ ಯಾವುದೇ ಕಾರಣಗಳನ್ನು ಹೇಳದೆ ಕೈ ಜೋಡಿಸಬೇಕು.

5) 1996 ರಿಂದ ನಡೆಯಬೇಕಾದ ಕಾರ್ಮಿಕ ಸಂಘಟನೆಗಳ ಚುನಾವಣೆಯನ್ನು ಕೂಡಲೇ ನಡೆಸುವಂತೆ ಸರ್ಕಾರ, ಆಡಳಿತ ಮಂಡಳಿಯಿಂದ ಅಖಿತ ಸರ್ಕಾರಿ ಆದೇಶ ಪಡೆಯಬೇಕು.

6) ಸಂಸ್ಥೆಯಲ್ಲಿ ಶುರುವಾಗಿರುವ ಖಾಸಗೀಕರಣ ತಡೆಯಲು ಸಮಾನ ಮನಸ್ಕರ ವೇದಿಕೆ ಜೊತೆಗೂಡಿ ಹೋರಾಟ ಮಾಡಬೇಕು.

ಸಾರಿಗೆ ಸಂಸ್ಥೆಯ ಬಹುಪಾಲು ನೌಕರರ ಈ ಮೇಲ್ಕಂಡ ಬೇಡಿಕೆಗಳನ್ನು ಜಂಟಿ ಕ್ರಿಯಾ ಸಮಿತಿಯ ಬೇಡಿಕೆಗಳ ಪಟ್ಟಿಯಲ್ಲಿ ಸೇರಿಸಿಕೊಂಡು ಯಾವುದೇ ಒತ್ತಡಕ್ಕೆ ಮಣಿಯದೆ ಈ ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕವಾಗಿ ಮತ್ತು ಪಾರದರ್ಶಕವಾಗಿ ಹೋರಾಟ ಮಾಡುವ ಅಖಿತ ಭರವಸೆ ನೀಡಿದ ತಕ್ಷಣ ಸಮಾನ ಮನಸ್ಕರ ವೇದಿಕೆಯ ಪದಾಧಿಕಾರಿಗಳ ತುರ್ತು ಸಭೆಯನ್ನು ಕರೆದು ಎಲ್ಲರ ಒಮ್ಮತ ಪಡೆದು 21/03/2023 ತಾವು ಕರೆ ನೀಡಿರುವ ಅನಿರ್ದಿಷ್ಟಾವಧಿ ಸಾರಿಗೆ ಮುಷ್ಕರಕ್ಕೆ ನೌಕರರ ಹಿತದೃಷ್ಟಿಯಿಂದ ನಾವು ತನು, ಮನ, ಧನ ದಿಂದ ತಮ್ಮ ಜೊತೆಗೂಡಿ ಹೋರಾಟ ಮಾಡಲು ಸಿದ್ಧರಾಗಿದ್ದೇವೆ ಎಂದು ತಿಳಸುತ್ತೇವೆ ಮತ್ತು ತಮ್ಮ ಲಿಖಿತ ಉತ್ತರದ ನಿರೀಕ್ಷೆಯಲ್ಲಿದ್ದೇವೆ ಎಂದು ವೇದಿಕೆಯ ನಾಲ್ಕಾರು ಪದಾಧಿಕಾರಿಗಳು ಸಹಿ ಮಾಡಿರುವ ಪತ್ರವನ್ನು ಜಂಟಿ ಕ್ರಿಯಾ ಸಮಿತಿಗೆ ರವಾನೆ ಮಾಡಿದ್ದಾರೆ.

Leave a Reply

error: Content is protected !!
LATEST
ಸಾರಿಗೆ ನೌಕರರಿಗೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಅನುಷ್ಠಾನಗೊಳಿಸಿ : ಸರ್ಕಾರಕ್ಕೆ ಬೈರಣ್ಣ ಒತ್ತಾಯ KSRTC: ಸಮಸ್ತ 4ನಿಗಮಗಳ ಅಧಿಕಾರಿಗಳು-ನೌಕರರು ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವುದು ಅಸಾಧ್ಯವೆ ಅಲ್ಲ! ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್...