Search By Date & Category

NEWSನಮ್ಮಜಿಲ್ಲೆರಾಜಕೀಯ

ಪಕ್ಷ ಸಂಘಟನೆ ಹೆಸರಿನಲ್ಲಿ ಕಾರ್ಯ ಕರ್ತರಿಗೆ ಬೈಕ್‌ ಕೊಡುತ್ತಿರುವ ರೆಡ್ಡಿ

ವಿಜಯಪಥ ಸಮಗ್ರ ಸುದ್ದಿ

ಬಳ್ಳಾರಿ: ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ಎಂಬ ಹೊಸ ಪಕ್ಷ ಕಟ್ಟಿರುವ ಗಾಲಿ ಜನಾರ್ದನ ರೆಡ್ಡಿ ಈಗ ಪಕ್ಷ ಸಂಘಟನೆಗೆ ಸರ್ಕಸ್ ಮಾಡುತ್ತಿದ್ದು, ಅದಕ್ಕಾಗಿ ತಮ್ಮತ್ತ ಕಾರ್ಯಕರ್ತರನ್ನು ಸೆಳೆಯಲು ವಿವಿಧ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ.

ಹೌದು! ಕಳೆದ ಎರಡು ದಿನಗಳ ಹಿಂದೆ ರೆಡ್ಡಿ ಪುತ್ರಿ ಬ್ರಾಹ್ಮಣಿ ಸೀರೆ ಹಂಚಿಕೆ ಮಾಡಿದ್ರೆ, ಈಗ ರೆಡ್ಡಿ ಅವರು ಪಕ್ಷ ಸಂಘಟನೆ ಮಾಡುವವರಿಗೆ ಬೈಕ್ ನೀಡಲು ಮುಂದಾಗಿದ್ದಾರೆ.

ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಕೆಆರ್‌ಪಿ ಪಕ್ಷ ಸಂಘಟನೆಗೆ ಗಂಗಾವತಿ ಮತ್ತು ಬಳ್ಳಾರಿ ನಗರದದ ಪ್ರಮುಖ ಮುಖಂಡರು ಓಡಾಡಲು 100 ಟಿವಿಎಸ್ ಸ್ಪೋರ್ಟ್ಸ್ ಬೈಕ್‌ಗಳನ್ನು ಪಕ್ಷದ ಹೆಸರು ಮತ್ತು ಚಿನ್ಹೆಗಳನ್ನು ಬಳಸಿ ವಿಶೇಷವಾಗಿ ಸಿದ್ಧಪಡಿಸಿದ್ದಾರೆ.

ಈಗಾಗಲೇ ತಲಾ ಒಂದೊಂದು ಕ್ಷೇತ್ರದಲ್ಲಿ ಐದು ಬೈಕ್‌ಗಳು ಬಂದಿವೆ. ಪ್ರಮುಖ ಕಾರ್ಯಕರ್ತರು ಕ್ಷೇತ್ರದೆಲ್ಲೆಡೆ ಪಕ್ಷದ ಪ್ರಮುಖ ಸಭೆ, ಸಮಾರಂಭಗಳನ್ನು ಹಮ್ಮಿಕೊಳ್ಳಲು ಸಂಘಟನಾತ್ಮಕ ಕಾರ್ಯಗಳಿಗೆ ಓಡಾಡುವುದಕ್ಕೆ ಇವುಗಳನ್ನು ಬಳಸಲಿದ್ದಾರೆ ಎಂದು ತಿಳಿದು ಬಂದಿದೆ.

ಈ ಹಿಂದೆ ಬಿಜೆಪಿಯಲ್ಲಿದ್ದಾಗಲೂ ರೆಡ್ಡಿ ಬಳಗ ಪ್ರಚಾರದಲ್ಲಿ ವಿಶೇಷವಾಗಿ ನಡೆಸುತ್ತಿತ್ತು. ಈಗಲೂ ಅದೇ ರೀತಿ ಕೆಆರ್‌ಪಿ ಸಹ. ಹೊಟೇಲ್‌ಗಳಲ್ಲಿ, ವಾರ್ಡ್‍ಗಳಲ್ಲಿ ಬೃಹತ್ ಸಭೆಗಳನ್ನು ನಡೆಸಿ ಅದರಲ್ಲೂ ಮಹಿಳಾ ಮತದಾರರ ಹೆಚ್ಚಿನ ಗಮನ ಸೆಳೆಯತೊಡಗಿದ್ದಾರೆ. ಇದು ಕ್ಷೇತ್ರದ ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಪಕ್ಷಗಳಿಗೂ ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದೆ. ಇನ್ನು ಮಹಿಳೆಯರಿಗೆ ನೀಡುತ್ತಿರುವ ಇಳಕಲ್ ಸೀರೆಗಳು ಸಹ ಮತದಾರರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿವೆ ಎಂದು ಹೇಳಲಾಗುತ್ತಿದೆ.

Leave a Reply

error: Content is protected !!