NEWSಕ್ರೀಡೆದೇಶ-ವಿದೇಶ

2024ರ ಐಪಿಎಲ್‌ ಆವೃತ್ತಿಯ ಪ್ಲೇ ಆಫ್‌ಗೆ ಲಗ್ಗೆಯಿಟ್ಟ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಡಬಲ್‌ ಹ್ಯಾಟ್ರಿಕ್‌ ಗೆಲುವಿನೊಂದಿಗೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 2024ರ ಐಪಿಎಲ್‌ ಆವೃತ್ತಿಯ ಪ್ಲೇ ಆಫ್‌ಗೆ ಲಗ್ಗೆಯಿಟ್ಟಿದೆ. ಈ ಗೆಲುವು ಅಭಿಮಾನಿಗಳಿಗೆ ಟ್ರೋಫಿ ಗೆದ್ದಷ್ಟೇ ಖುಷಿ ಕೊಟ್ಟಿದೆ.

ಹೌದು. 20ನೇ ಓವರ್‌ 5ನೇ ಎಸೆತದಲ್ಲೇ ಆರ್‌ಸಿಬಿಗೆ ಗೆಲುವು ಖಚಿತವಾಗುತ್ತಿದಂತೆ ಅಭಿಮಾನಿಗಳು ನಿಂತಲ್ಲಿ ನಿಲ್ಲದೇ, ಕೂತಲ್ಲಿ ಕೂರದೇ ಕುಣಿದು ಕುಪ್ಪಳಿಸತೊಡಗಿದರು. ಕೆಲವರು ಅಲ್ಲಲ್ಲಿ ಕೇಕ್‌ ಮಾಡಿ ಸಂಭ್ರಮಿಸಿದರು. ಇನ್ನೂ ಕೆಲವರು ರಸ್ತೆಯಲ್ಲಿ ಆರ್‌ಸಿಬಿ ಬಾವುಟ ಹಿಡಿದು ರಸ್ತೆಯಲ್ಲೇ ಅಪ್ಪಿಕೊಂಡು ಕುಣಿಯುತ್ತಿದ್ದರು.

ಇನ್ನೂ ಚಿನ್ನಸ್ವಾಮಿ ಸ್ಟೇಡಿಯಂನ 2 ಕಿಲೋಮೀಟರ್ ಸುತ್ತಮುತ್ತ ಬರುವ ರಾಜಭವನ ರಸ್ತೆ ಕ್ವೀನ್ಸ್ ರಸ್ತೆ, ಎಂ.ಜಿ ರಸ್ತೆಗಳಲ್ಲಿಯೂ ಆರ್‌ಸಿಬಿ, ಆರ್‌ಸಿಬಿ ಎಂದು ಘೋಷಣೆ ಕೂಗುತ್ತಾ ಸಂಭ್ರಮಿಸಿದರು. ಮ್ಯಾಚ್ ಮುಗಿದ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂ ನಿಂದ ಆರ್‌ಸಿಬಿ ಆಟಗಾರರ ಬಸ್ ಹೊರಗಡೆ ಬರುತ್ತಿದ್ದಂತೆ ಅಭಿಮಾನಿಗಳು ಬಸ್ ಅಡ್ಡಗಟ್ಟಿ ಕುಣಿಯುತ್ತಿದ್ದರು.

ಈ ಸಂಭ್ರಮವನ್ನು ವಿರಾಟ್‌ ಕೊಹ್ಲಿ ಸಹ ಬಸ್‌ನೊಳಗೆ ಕುಳಿತು ಕಣ್ತುಂಬಿಕೊಂಡು, ನಗೆ ಬೀರಿದರು. ಅಭಿಮಾನಿಗಳ ಸಂಭ್ರಮವನ್ನ ತನ್ನ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡು ನಗೆ ಬಿರುತ್ತಿದ್ದಂತೆ ಆರ್‌ಸಿಬಿ ಅಭಿಮಾನಿಗಳು ಮತ್ತಷ್ಟೂ ಕುಣಿಯಲಾರಂಭಿಸಿದರು.

ʻಇದು ಆರ್‌ಸಿಬಿಯ ಹೊಸ ಅಧ್ಯಾಯʼ ಎಂದು ಹೇಳಿಕೊಂಡು ಸೋಲಿನೊಂದಿಗೆ ಲೀಗ್‌ ಆರಂಭಿಸಿದ್ದ ಆರ್‌ಸಿಬಿ ನಿಜಕ್ಕೂ ಹೊಸ ಅಧ್ಯಾಯವನ್ನೇ ಸೃಷ್ಟಿಸಿದೆ. ಮೊದಲ 8 ಪಂದ್ಯಗಳಲ್ಲಿ ಒಂದೇ ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ಆರ್‌ಸಿಬಿಗೆ ಮಾಡು ಇಲ್ಲವೇ ಮಡಿಯುವ ಅವಕಾಶವಷ್ಟೇ ಇತ್ತು. ಇದರಿಂದ ಲೀಗ್‌ ಸುತ್ತಿನಲ್ಲೇ ಹೊರ ಬೀಳುವ ಸಾಧ್ಯತೆಯಿತ್ತು. ಅಷ್ಟರಲ್ಲಿ ಪುಟಿದೆದ್ದ ಆರ್​ಸಿಬಿ ಇದೀಗ ಯಾರೂ ಊಹಿಸಿದ, ಪವಾಡ ಸಂಭವಿಸಿದ ರೀತಿಯಲ್ಲಿ ಗೆದ್ದು ಪ್ಲೇ ಆಫ್​ಗೆ ಅಧಿಕೃತ ಎಂಟ್ರಿ ಕೊಟ್ಟಿದೆ.

ಪ್ಲೇ ಆಫ್​ ಪ್ರವೇಶಕ್ಕೆ ಗೆಲ್ಲಲೇ ಬೇಕಿದ್ದ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ 27 ರನ್​ ಗಳ ಗೆಲುವು ಸಾಧಿಸಿ ಈ ಅಭೂತಪೂರ್ವ ಸಾಧನೆ ಮಾಡಿದೆ. ಒಂದೊಮ್ಮೆ ಚೆನ್ನೈ 201 ರನ್​ ಬಾರಿಸುತ್ತಿದ್ದರೂ ಆರ್​ಸಿಬಿ ಪ್ಲೇ ಆಫ್​ನಿಂದ ಹೊರ ಬೀಳಬೇಕಿತ್ತು. ಸದ್ಯ ಆರ್‌ಸಿಬಿ ತಂಡದ ಅದ್ಭುತ ಜಯ ದೇಶಾದ್ಯಂತ ಸದ್ದು ಮಾಡುತ್ತಿದೆ. ಎಕ್ಸ್‌, ಇನ್ಸ್ಟಾಗ್ರಾಮ್‌, ಫೇಸ್‌ಬುಕ್‌ ಸೋಷಿಯಲ್‌ ಮೀಡಿಯಾಗಳಲ್ಲಿ ಅಭಿಮಾನಿಗಳು ಆರ್‌ಸಿಬಿ ಪಂದ್ಯದ ಒಂದೊಂದೇ ದೃಶ್ಯಗಳನ್ನು ಹಂಚಿಕೊಳ್ಳುತ್ತಾ ಕೊಂಡಾಡುತ್ತಿದ್ದಾರೆ.

ಶನಿವಾರ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ಆರ್‌ಸಿಬಿ 218 ರನ್‌ ಸಿಡಿಸಿ, ಸಿಎಸ್‌ಕೆ ಗೆಲುವಿಗೆ 219 ರನ್‌ಗಳ ಗುರಿ ನೀಡಿತ್ತು. ಆದ್ರೆ ಸಿಎಸ್‌ಕೆ ಪ್ಲೇ ಆಫ್‌ ತಲುಪಲು 201 ರನ್‌ಗಳ ಅಗತ್ಯವಿತ್ತು. ಕೊನೆಯವರೆಗೂ ಹೋರಾಡಿದ ಸಿಎಸ್‌ಕೆ 27 ರನ್‌ಗಳ ಅಂತರದಿಂದ ಸೋತು ಪ್ಲೇ ಆಫ್‌ ಪ್ರವೇಶಿಸುವ ಅರ್ಹತೆಯನ್ನೇ ಕಳೆದುಕೊಂಡಿತು.

ಗೆದ್ದು ಬೀಗಿದ RCB: ಎಂ. ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಮಾಡು ಇಲ್ಲವೇ ಮಾಡಿ ಪಂದ್ಯದಲ್ಲಿ ಚೆನ್ನೈ ಸೂಪರ್​​ ಕಿಂಗ್ಸ್​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಗೆದ್ದು ಬೀಗಿದೆ.

ಬೆಂಗಳೂರು ನೀಡಿದ 219 ರನ್​ಗಳ ಬಿಗ್​ ಟಾರ್ಗೆಟ್​ ಬೆನ್ನತ್ತಿದ ಚೆನ್ನೈ ಸೂಪರ್​ ಕಿಂಗ್ಸ್​ ಪರ ಓಪನರ್​ ಆಗಿ ಬಂದ ಋತುರಾಜ್​ ಗಾಯಕ್ವಾಡ್​​ ಡಕೌಟ್​ ಆದ್ರು. ರಾಚಿನ್​ ರವೀಂದ್ರ ತಾನು ಆಡಿದ 37 ಬಾಲ್​ನಲ್ಲಿ 3 ಭರ್ಜರಿ ಸಿಕ್ಸರ್​​, 5 ಫೋರ್​ ಸಮೇತ 61 ರನ್​​ ಸಿಡಿಸಿ ವಿಕೆಟ್​ ಒಪ್ಪಿಸಿದ. ರಹಾನೆ 33, ಜಡೇಜಾ 42, ಎಂ.ಎಸ್​​ ಧೋನಿ 25 ರನ್​ ಹೊಡೆದ್ರು. ಚೆನ್ನೈ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 191 ರನ್​​ ಗಳಿಸಿದೆ. ಆರ್​​ಸಿಬಿ ಚೆನ್ನೈ ವಿರುದ್ಧ 27 ರನ್​ನಿಂದ ಗೆದ್ದು ಪ್ಲೇ ಆಫ್​ಗೆ ಕ್ವಾಲಿಫೈ ಆಗಿದೆ.

ಟಾಸ್​ ಸೋತರೂ ಫಸ್ಟ್​ ಬ್ಯಾಟಿಂಗ್​ ಮಾಡಿದ ಆರ್​​ಸಿಬಿ ಪರ ಮಾಜಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ತಾನು ಆಡಿದ 29 ಬಾಲ್​ನಲ್ಲಿ ಬರೋಬ್ಬರಿ 4 ಸಿಕ್ಸರ್​ ಜತೆಗೆ 3 ಫೋರ್​ ಸಿಡಿಸಿದ್ರು. ಬರೋಬ್ಬರಿ 47 ರನ್​ ಸಿಡಿಸಿ ಕೇವಲ ಮೂರು ರನ್​ಗಳಿಂದ ಅರ್ಧಶತಕ ವಂಚಿತರಾದ್ರು. ಸಿಕ್ಸ್​ ಹೊಡೆಯಲು ಹೋಗಿ ಔಟಾದ್ರು. ಸ್ಲೋ ಪಿಚ್​ ಮಧ್ಯೆಯೂ ಇವರ ಬ್ಯಾಟಿಂಗ್​ ಸ್ಟ್ರೈಕ್​ ರೇಟ್​ 162ಕ್ಕೂ ಹೆಚ್ಚಿತ್ತು.

ಇನ್ನು, ಕೊಹ್ಲಿ ಔಟಾದ ಬಳಿಕ ಫಾಫ್​ ಡುಪ್ಲೆಸಿಸ್​​​ ಭರ್ಜರಿ ಬ್ಯಾಟಿಂಗ್​ ಮುಂದುವರಿಸುತ್ತಿದ್ದರು. ತಾನು ಎದುರಿಸಿದ 39 ಬಾಲ್​ನಲ್ಲಿ 3 ಸಿಕ್ಸರ್​​, 3 ಫೋರ್​ ಸಮೇತ 54 ರನ್​​ ಚಚ್ಚಿದ್ರು. ಆದ್ರೆ, ರಜತ್​ ಪಾಟಿದಾರ್​ ಹೊಡೆತಕ್ಕೆ ಬೈ ಮಿಸ್​ ಆಗಿ ರನ್​ ಔಟ್​ ಆಗಿದ್ದಾರೆ. ರಜತ್​ ಪಾಟಿದಾರ್​ ಸ್ಟ್ರೈಟ್​​ ಹಿಟ್​ ಹೊಡೆದ್ರು. ಬಾಲ್​​ ಬೌಲರ್​ ಕೈ ಟಚ್​ ಆಗಿ ವಿಕೆಟ್​ಗೆ ಬಿದ್ದಿದೆ. ಫಾಫ್​ ಔಟ್​​ ಅಲ್ಲದೇ ಹೋದ್ರೂ ಹೇರ್​​ನಲ್ಲಿತ್ತು ಬ್ಯಾಟ್​ ಎಂದು ರನೌಟ್​ ನೀಡಿದ್ರು.

ಬಳಿಕ ತನ್ನ ಬ್ಯಾಟಿಂಗ್​ ಆರ್ಭಟ ಮುಂದುವರಿಸಿದ ರಜತ್​ ಪಾಟಿದಾರ್ ಕೇವಲ 23 ಬಾಲ್​ನಲ್ಲಿ 4 ಸಿಕ್ಸರ್​​, 2 ಫೋರ್​ನೊಂದಿಗೆ 41 ರನ್​ ಚಚ್ಚಿದ್ರು. ಕೊನೆವರೆಗೂ ಕ್ರೀಸ್​ನಲ್ಲಿದ್ದ ಕ್ಯಾಮೆರಾನ್​ ಗ್ರೀನ್​​ 17 ಬಾಲ್​ನಲ್ಲಿ 3 ಸಿಕ್ಸರ್​​, 3 ಫೋರ್​ನೊಂದಿಗೆ 38 ರನ್​ ಬಾರಿಸಿದ್ರು. ಕೊನೆಗೆ ಬಂದ ದಿನೇಶ್​ ಕಾರ್ತಿಕ್​​ 1 ಸಿಕ್ಸ್​​, 1 ಫೋರ್​​ ಸಮೇತ 14 ರನ್​ ಗಳಿಸಿದ್ರು. ಮ್ಯಾಕ್ಸಿ ಕೇವಲ 5 ಬಾಲ್​ನಲ್ಲಿ 1 ಸಿಕ್ಸರ್​, 2 ಫೋರ್​​ ಜತೆಗೆ 16 ರನ್​​​ ಚಚ್ಚಿದ್ರು. ಆರ್​​​ಸಿಬಿ ನಿಗದಿತ 20 ಓವರ್​​ನಲ್ಲಿ 218 ರನ್​​ ಕಲೆ ಹಾಕಿತ್ತು.

Leave a Reply

error: Content is protected !!
LATEST
KRSನಿಂದ ಕಾವೇರಿ ನದಿಗೆ 1.30 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ... ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನ: ಕಳ್ಳನ ಹೆಡೆಮುರಿಕಟ್ಟಿದ ಮಹಿಳಾ ಎಸ್‌ಐ ಕೃಷ್ಣರಾಜಪೇಟೆ: ಶ್ರೀ ಚೌಡೇಶ್ವರಿ ಅಮ್ಮನವರ ಕರಗ ಮಹೋತ್ಸವ ಅದ್ದೂರಿ