ಚಾಮರಾಜನಗರ: ಪ್ರತಿ ವರ್ಷ ಕೊನೆಯ ಕಾರ್ತಿಕ ಸೋಮುವಾರ ಸಿದ್ದಪ್ಪಾಜೀ ಜಾತ್ರೆ ನಡೆಯುತ್ತದೆ. ಈ ಜಾತ್ರೆಗೆ ಅನೇಕ ಭಾಗಗಳಿಂದ ಭಕ್ತರು ಬಂದು ಆಶೀರ್ವಾದ ಪಡೆದು ದೇವರ ಕೃಪೆಗೆ ಪಾತ್ರರಾಗುತ್ತಾರೆ.
ಅದೇ ರೀತಿ ದು(ನ.21) ಬೆಳ್ಳಂಬೆಳಗ್ಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅರ್ಚಕ ಸಿದ್ದರಾಜು ಅವರು ಕುದಿಯುವ ಎಣ್ಣೆಗೆ ಕೈ ಹಾಕಿ ಕಜ್ಜಾಯ ತೆಗೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅಲ್ಲದೆ ಈ ಮೈನವಿರೇಳಿಸುವ ಘಟನೆಗೆ ನೂರಾರು ಭಕ್ತರು ಸಾಕ್ಷಿಯಾದರು.
ಹೌದು! ಭಾರತದಲ್ಲಿ ಎಲ್ಲ ಧರ್ಮದವರು (Religion) ವಾಸವಾಗಿದ್ದಾರೆ. ಧಾರ್ಮಿಕ ಆಚರಣೆಗಳಿಗೆ (Tradition) ಭಾರತದಲ್ಲಿ (India) ವಿಶೇಷ ಸ್ಥಾನ. ಪ್ರದೇಶದಿಂದ ಪ್ರದೇಶಕ್ಕೆ ಆಚರಣೆಗಳು, ಭಾಷೆ. ಜೀವನಶೈಲಿ ಹೀಗೆ ಎಲ್ಲವೂ ಬದಲಾಗುತ್ತಾ ಇರುತ್ತದೆ. ಕೆಲವು ಆಚರಣೆಗಳಿಗೆ ಮೂಢನಂಬಿಕೆ ಎಂಬ ಅನ್ವರ್ಥ ನಾಮ ಸಹ ಇರೋದುಂಟು. ಇದು ನಂಬಿಕೆ ವಿಷಯ ಆಗಿರೋದದರಿಂದ ಅಂತಹ ಆಚರಣೆಗಳು ಇಂದಿಗೂ ನಡೆದುಕೊಂಡು ಬಂದಿವೆ.
ದೇವರಿಗೆ ಹರಕೆ ಕಟ್ಟಿಕೊಳ್ಳುವುದು, ಉಪವಾಸ ವ್ರತ ಆಚರಣೆ, ವಿಶೇಷ ದಿನಗಳಲ್ಲಿ ವಿಶೇಷ ಪೂಜೆ ಹೀಗೆ ಹತ್ತು ಹಲವು ಸಂಪ್ರದಾಯದ ನಡುವೆ ನಮ್ಮ ಜೀವನದ ಬಂಡಿ ಸಾಗುತ್ತಿದೆ. ಇನ್ನು ಇವು ಕೆಲವೊಮ್ಮೆ ಆಶ್ಚರ್ಯವನ್ನುಂಟು ಮಾಡುತ್ತವೆ. ಕೆಲವರು ಈ ಆಚರಣೆಗಳನ್ನು ಪರೀಕ್ಷೆ ನಡೆಸಲು ಮುಂದಾಗಿ ಹಲವು ಕಾರಣಗಳನ್ನು ನೀಡಬಹುದು. ಅದೇ ಕಾರಣ ನೀಡಿದ್ರೂ ನಂಬಿಕೆ ಮುಂದೆ ಅದು ಶೂನ್ಯವಾಗುತ್ತದೆ.
ಅದರಂತೆ ಜಿಲ್ಲೆಯ ಹನೂರು ತಾಲೂಕಿನ ಲೊಕ್ಕನಹಳ್ಳಿಯಲ್ಲಿ ಪ್ರತಿ ವರ್ಷ ಕಾರ್ತಿಕ ಮಾಸದ ಕೊನೆಯ ಸೋಮವಾರ ಸಿದ್ದಪ್ಪಾಜಿಯ ಜಾತ್ರೆ ನಡೆಯುತ್ತದೆ. ಈ ಜಾತ್ರೆಗೆ ಸುತ್ತಮುತ್ತಲಿನ ಗ್ರಾಮದ ಸಾವಿರಾರು ಜನರು ಬಂದು ಸೇರುತ್ತಾರೆ.
ಈ ವೇಳೆ ಸಾವಿರಾರು ಜನರ ಸಮ್ಮುಖದಲ್ಲಿ ಸಿದ್ದಪ್ಪಾಜಿ ಎಂಬ ಅರ್ಚಕ ಕೊತ ಕೊತ ಕುದಿಯುವ ಎಣ್ಣೆಗೆ ಕೈ ಹಾಕುತ್ತಾರೆ. ಬರಿಗೈಯಲ್ಲಿಯೇ ಬಿಸಿ ಬಿಸಿ ಕಜ್ಜಾಯ ತೆಗೆಯುತ್ತಾರೆ. ಅರ್ಚಕರ ಮೇಲೆ ಸಿದ್ದಾಪ್ಪಾಜ್ಜಿ ಬರುತ್ತಾರೆ ಎಂದು ಭಕ್ತರು ಹೇಳುತ್ತಾರೆ. ಇನ್ನು ಈ ವಿಸ್ಮಯವನ್ನು ನೋಡಲು ಆಗಮಿಸುವ ಭಕ್ತರು ವಿಶೇಷ ಪೂಜೆ ಸಲ್ಲಿಸಿ ಹಿಂದಿರುಗುತ್ತಾರೆ. ಇನ್ನು ಇದೇ ವೇಳೆ ಕೆಲವರು ಬಿಸಿ ಬಿಸಿ ಎಣ್ಣೆಗೆ ಕೈ ಹಾಕುತ್ತಾರೆ. ಇಂದು ಬೆಳಗ್ಗೆ ಈ ವಿಶೇಷ ಜಾತ್ರೆ ನಡೆದಿದೆ.
ಅಡುಗೆ ಮಾಡುವಾಗ ಬಿಸಿ ಎಣ್ಣೆ ಒಂದು ಹನಿ ತಾಗಿದರೆ ಜೋರು ಜೋರಾಗಿ ಕೂಗುತ್ತಾರೆ, ಇದರ ನೋವು ಅನುಭವಿಸಿದವರಿಗೆ ಮಾತ್ರ ಗೊತ್ತು.