NEWSನಮ್ಮರಾಜ್ಯಬೆಂಗಳೂರು

ಸಣ್ಣ ಕೈಗಾರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳ ಪರಿಹರಿಸಿ: ಸಣ್ಣ ಕೈಗಾರಿಕಾ ಸಚಿವರ  ಭೇಟಿ ಮಾಡಿದ ಕಾಸಿಯಾ ನಿಯೋಗ 

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯಾದ್ಯಂತ ಇರುವ ಸಣ್ಣ ಕೈಗಾರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರೋಪಾಯ  ಕಂಡುಕೊಳ್ಳುವ  ಸಂಬಂಧ ಸಣ್ಣ ಕೈಗಾರಿಕೆಗಳ ಸಚಿವ  ಶರಣಬಸಪ್ಪ ದರ್ಶನಾಪುರ ಅವರನ್ನು ಭೇಟಿ ಮಾಡಿದ ಕಾಸಿಯಾ ಅಧ್ಯಕ್ಷ ಸಿ.ಎ. ಶಶಿಧರ ಶೆಟ್ಟಿ ನೇತೃತ್ವದ ನಿಯೋಗ  ಸಚಿವರೊಂದಿಗೆ ಸಮಸ್ಯೆಗಳ ಕುರಿತು ಚರ್ಚಿಸಿತು.

ಈ ವೇಳೆ ಸಚಿವರು ಸಮಸ್ಯೆ ಬಗೆಹರಿಸುವ  ಭರವಸೆಡಿದ್ದಾರೆ ಎಂದು ಕಾಸಿಯಾ ಅಧ್ಯಕ್ಷ ಸಿ.ಎ. ಶಶಿಧರ ಶೆಟ್ಟಿ ತಿಳಿಸಿದ್ದಾರೆ.  ಸಚಿವರ  ಭೇಟಿ ವೇಳೆ  ಕಾಸಿಯಾ  ಉಪಾಧ್ಯಕ್ಷ ಎಂ. ಜಿ. ರಾಜಗೋಪಾಲ್, ಗೌರವ ಪ್ರಧಾನ ಕಾರ್ಯದರ್ಶಿ ಎಸ್. ನಾಗರಾಜು,  ಜಂಟಿ ಕಾರ್ಯದರ್ಶಿ ಶ್ರೇಯಾನ್ಸ್ ಕುಮಾರ್ ಜೈನ್‌ ಮತ್ತು  ಖಜಾಂಚಿ ಎಚ್. ಕೆ. ಮಲ್ಲೇಶಗೌಡ ಇದ್ದರು.

ಚರ್ಚಿಸಲಾದ ವಿಷಯಗಳ ವಿವರ:

01. ಕೆಐಎಡಿಬಿ ಮತ್ತು ಕೆಎಸ್‌ಎಸ್‌ಐಡಿಸಿ ಕೈಗಾರಿಕಾ ಪ್ರದೇಶಗಳು/ವಸಾಹತುಗಳ ಮೂಲಭೂತ ಸೌಕರ್ಯಗಳ ಉನ್ನತೀಕರಣ: ಕೆಐಎಡಿಬಿ ಮತ್ತು ಕೆಎಸ್‌ಎಸ್‌ಐಡಿಸಿ ನಿರ್ವಹಿಸುತ್ತಿರುವ ಕೈಗಾರಿಕಾ ಪ್ರದೇಶಗಳು/ವಸಾಹತುಗಳು ಮೂಲಸೌಕರ್ಯಗಳ ಕೊರತೆಯಿಂದ ಬಹಳಷ್ಟು ಬಳಲುತ್ತಿವೆ. ಸಾಮಾನ್ಯವಾಗಿ ಈ ಕೈಗಾರಿಕಾ ಪ್ರದೇಶಗಳು/ವಸಾಹತುಗಳಲ್ಲಿನ ನಿವೇಶನಗಳನ್ನು ಮೂಲಸೌಕರ್ಯವಿಲ್ಲದೆ ಹಂಚಿಕೆ ಮಾಡಲಾಗುತ್ತಿದೆ. ಇದರಿಂದ ಉದ್ಯಮಿಗಳಿಗೆ ಅನಾನುಕೂಲವಾಗುತ್ತಿದೆ.

ಉದ್ಯಮಿಗಳು ಸಾಕಷ್ಟು ಪ್ರಮಾಣದ ಆಸ್ತಿ ತೆರಿಗೆಯನ್ನು ಪಾವತಿಸಿದರೂ, ಈ ಪ್ರದೇಶಗಳಲ್ಲಿ ಮತ್ತು ಪಂಚಾಯತ್‌ಗಳ ವ್ಯಾಪ್ತಿಯೊಳಗೆ ಹಾಗೂ ಅವರು ಕಾರ್ಯನಿರ್ವಹಿಸುವ ಇತರ ಸ್ಥಳಗಳಲ್ಲಿ ಮೂಲಭೂತ ಕೈಗಾರಿಕಾ ಮೂಲಸೌಕರ್ಯಗಳ ಕೊರತೆ ಇದೆ.

ಈ ಸಮಸ್ಯೆಗೆ ಶಾಶ್ವತ ಪರಿಹಾರೋಪಾಯ ಕಂಡುಕೊಳ್ಳಲು ಇಂಥ ಪ್ರದೇಶಗಳಿಂದ ಸಂಗ್ರಹಿಸಲಾಗುವ ತೆರಿಗೆ ಸ್ವತ್ತಿನ ಶೆಕಡಾ 40ರಷ್ಟು ಹಣವನ್ನು ಅಲ್ಲಿನ ಮೂಲಸೌಕರ್ಯಾಭಿವೃದ್ದಿಗಾಗಿ ಮೀಸಲಿಡಬೇಕೆಂದು ಮಾನ್ಯ ಸಚಿವರಲ್ಲ್ಲಿ ನಾವು ವಿನಂತಿಸಿಕೊಳ್ಳುತ್ತಿದ್ದೇವೆ.

02. ಕ್ಲಸ್ಟರ್ ಆಧಾರಿತ ಕೈಗಾರಿಕಾ ಪ್ರದೇಶಗಳು: ಕೇಂದ್ರ ಸರ್ಕಾರದ ಎಂಎಸ್‌ಇ ಸಿಡಿಪಿ ಯೋಜನೆಯಡಿಯಲ್ಲಿ ಕೈಗಾರಿಕಾ ಮೂಲಭೂತ ಸೌಕರ್ಯಗಳಿಗೆ ಹಣಕಾಸಿನ ಹಂಚಿಕೆ ಇರುತ್ತದೆ ಹಾಗೂ ಕೈಗಾರಿಕಾ ಕ್ಲಸ್ಟರ್‌ಗಳಿಗೆ ಅನುದಾನದ ಅವಕಾಶವಿರುತ್ತದೆ. ಆದುದರಿಂದ ಕೆಐಎಡಿಬಿ/ಕೆಎಸ್‌ಎಸ್‌ಐಡಿಸಿ ರವರು ಕ್ಲಸ್ಟರ್ ಆಧಾರಿತ ನಿವೇಶನ ಹಂಚಿಕೆ ಮಾಡಿದಲ್ಲಿ ಕೇಂದ್ರ ಮತ್ತ ರಾಜ್ಯ ಸರ್ಕಾರಗಳ ಅನುದಾನಗಳನ್ನುಯ ಬಳಸಿಕೊಂಡು ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿ ಪಡಿಸಿದ್ದಲ್ಲಿ ನಿವೇಶನಗಳ ಬೆಲೆ ಗಣನೀಯವಾಗಿ ಕಡಿಮೆಯಾಗುವುದರಿಂದ ವಸತಿ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೈಗಾರಿಕೆಗಳನ್ನು ಕ್ಲಸ್ಟರ್ ಆಧಾರಿತ ಕೈಗಾರಿಕಾ ಪ್ರದೇಶಗಳಿಗೆ ಸ್ಥಳಾಂತರಿಸಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ತಾವು ಗಮನ ಹರಿಸಿದಲ್ಲಿ ಕೈಗಾರಿಕೆಗಳಿಗೆ ಬಹಳ ಉಪಯೋಗವಾಗುವುದಲ್ಲದೆ ತಮಗೂ ಹಾಗೂ ಸರ್ಕಾರಕ್ಕೂ ಒಳ್ಳೆಯ ಹೆಸರು ಬರುತ್ತದೆ.

03. ನೂತನ ಕೈಗಾರಿಕಾ ವಸಾಹತುಗಳ ಸ್ಥಾಪನೆ: ಎಂ.ಎಸ್.ಎಂ.ಇ.ಗಳಿಗೆ ಕೈಗಾರಿಕಾ ಭೂಮಿ ಬೆಲೆಯು ತುಂಬಾ ದುಬಾರಿಯಾಗಿದೆ. ಎಂಎಸ್‌ಎಂಇಗಳಿಗೆ ಕೈಗೆಟಕುವ ಬೆಲೆಯಲ್ಲಿ ಭೂಮಿ ನೀಡಲು ಕೆಎಸ್‌ಎಸ್‌ಐಡಿಸಿಗೆ ಸಾಧ್ಯವಾಗುತ್ತಿಲ್ಲ. ಕೆಎಸ್‌ಎಸ್‌ಐಡಿಸಿ ರವರು ಕೆಐಎಡಿಬಿ ಮುಖಾಂತರ ಭೂಸ್ವಾಧೀನ ಪಡೆಯಬೇಕಾಗಿರುವುದರಿಂದ ಭೂಮಿಯ ಬೆಲೆ ಅತ್ಯಂತ ದುಬಾರಿಯಾಗಿರುತ್ತದೆ. ಈ ನಿಟ್ಟಿನಲ್ಲಿ ಸೂಕ್ಷö್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಕೈಗೆಟುಕುವ ಬೆಲೆಯಲ್ಲಿ ನಿವೇಶನಗಳನ್ನು ನೀಡಬೇಕಾಗಿರುವುದರಿಂದ ಭೂಸುಧಾರಣಾ ಕಾಯ್ದೆಯಲ್ಲಿ ಸೂಕ್ತ ತಿದ್ದುಪಡಿ ಮಾಡಿಕೆಎಸ್‌ಎಸ್‌ಐಡಿಸಿಗೆ ಭೂಸ್ವಾಧಿನ ಮಾಡುವ ಅಧಿಕಾರವನ್ನು ನೀಡುವಂತೆ ಮಾಡಲು ತಮ್ಮಲ್ಲಿ ಕೋರಿಕೊಳ್ಳುತ್ತಿದ್ದೇವೆ.

04. ಮಹಾನಗರಪಾಲಿಕೆ/ಸ್ಥಳೀಯ ಸಂಸ್ಥೆಗಳ ವತಿಯಿಂದ ಅಸ್ತಿ ತೆರಿಗೆ ವಸೂಲಾತಿ: ಕೆಐಎಡಿಬಿ ಮತ್ತು ಕೆ.ಎಸ್.ಎಸ್.ಐ.ಡಿ.ಸಿ. ವತಿಯಿಂದ ಅಭಿವೃದ್ದಿ ಪಡಿಸಿದ ಕೈಗಾರಿಕಾ ಪ್ರದೇಶ ಹಾಗೂ ಕೈಗಾರಿಕಾ ವಸಾಹತುಗಳಲ್ಲಿ ಸದರಿ ಸಂಸ್ಥೆಗಳು ಸೇವಾ ಶುಲ್ಕವನ್ನು ವಸೂಲು ಮಾಡುತ್ತಿವೆ. ಮಹಾನಗರಪಾಲಿಕೆ/ಸ್ಥಳೀಯ ಸಂಸ್ಥೆಗಳು ಯಾವುದೇ ಮೂಲಭೂತ ಸೌಕರ್ಯಗಳನ್ನು ಒದಗಿಸದೇ ಆಸ್ತಿ ತೆರಿಗೆ ವಿಧಿಸುತ್ತಿದೆ. ಹಾಗೂ ಆಸ್ತಿ ತೆರಿಗೆ ಮೇಲೆ ಬಡ್ಡಿ ವಿಧಿಸುತ್ತಿದೆ. ಇದು ದ್ವಿಗುಣ ತೆರಿಗೆಗೆ ಸಮಾನವಾಗಿದೆ.

ಕೆಐಎಡಿಬಿ ಮತ್ತು ಕೆ.ಎಸ್.ಎಸ್.ಐ.ಡಿ.ಸಿ. ಅಭಿವೃದ್ದಿಪಡಿಸಿದ ಕೈಗಾರಿಕಾ ಪ್ರದೇಶ ಹಾಗೂ ಕೈಗಾರಿಕಾ ವಸಾಹತುಗಳನ್ನು ನಿರ್ವಹಣೆಗಾಗಿ ಸಂಬಂದಿಸಿದ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸಲು ಹಾಗೂ ಔಪಚಾರಿಕವಾಗಿ ಹಸ್ತಾಂತರಿಸುವ ಪೂರ್ವದಲ್ಲಿ ಸ್ಥಳೀಯ ಸಂಸ್ಥೆಗಳು ಯಾವುದೇ ಆಸ್ತಿ ತೆರಿಗೆ ವಿಧಿಸದಂತೆ ಸೂಕ್ತ ಆದೇಶ ನೀಡಿ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ.

ಪ್ರಸ್ತುತ ವಸತಿ ಮತ್ತು ವಾಣಿಜ್ಯ ವರ್ಗಗಳಿಗೆ ಮಾತ್ರ ಆಸ್ತಿ ತೆರಿಗೆ ನಿಗದಿಪಡಿಸುತ್ತಿದ್ದು, ಉದ್ದಿಮೆಗಳನ್ನು ವಾಣಿಜ್ಯ ವರ್ಗದಲ್ಲಿ ಪರಿಗಣಿಸಲಾಗಿದೆ. ಇದರಿಂದಾಗಿ ಉದ್ದಿಮೆಗಳ ಸಂಕಷ್ಟದಲ್ಲಿದ್ದು, ಸರ್ಕಾರವು ಕೈಗಾರಿಕೆಗಳಿಗೆ ಪ್ರತ್ಯೇಕ ತೆರಿಗೆ ವಿಧಿಸಬೇಕಾದ ಅಗತ್ಯತೆ ಇದೆ. ಎಂ.ಎಸ್.ಎಂ.ಇ. ವಲಯದ ಘಟಕಗಳಿಗೆ ವಸತಿ ತೆರಿಗೆಗೆ ಸಮಾನವಾಗಿ ರಾಜ್ಯಾದ್ಯಂತ ಏಕರೂಪ ಆಸ್ತಿ ತೆರಿಗೆ ವಿಧಿಸುವ ಕುರಿತು ಪರಿಗಣಿಸಲು ಕೋರಿದೆ. ಸಂಬಂಧಪಟ್ಟ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ಈ ಬೇಡಿಕೆಯನ್ನು ಈಡೇರಿಸಲು ಸಂಬಂಧಪಟ್ಟ ಇಲಾಖೆಗಳಿಗೆ ತಿದ್ದುಪಡಿ ಮಾಡಲು ಸೂಚಿಸಲು ತಮ್ಮಲ್ಲಿ ವಿನಂತಿಸಿಕೊಳ್ಳಲಾಗಿದೆ.

ನಗರ ಪ್ರದೇಶಗಳಲ್ಲಿ ತೆರಿಗೆಗಳನ್ನು ಎಂಟರಿಂದ ಹತ್ತು ವರ್ಷಗಳಿಗೊಮ್ಮೆ ಪರಿಷ್ಕರಿಸುತ್ತಿದ್ದರೂ, ಗ್ರಾಮೀಣ ಪ್ರದೇಶಗಳಲ್ಲಿ ತೆರಿಗೆಗಳನ್ನು ಮತ್ತು ಎಲ್ಲಾ ವಿಧದ ದರಗಳು ಮತ್ತು ಶುಲ್ಕಗಳನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ಸರ್ಕಾರದ ಮಾರ್ಗಸೂಚಿಗಳನ್ವಯ ಕಡ್ಡಾಯವಾಗಿ ಪರಿಷ್ಕರಿಸಲು ಗ್ರಾಮ ಪಂಚಾಯತಿಗಳಿಗೆ ಅಧಿಕಾರ ನೀಡಲಾಗಿದೆ. ಇಂತಹ ನಿಯಮಗಳು ಕೈಗಾರಿಕೆಗಳಿಗೆ ಅಧಿಕ ಹೊರೆಯಾಗಲಿವೆ. ಹಾಗೂ 2023-24 ರ ಆಯವ್ಯಯ ಘೋಷಣೆಯನ್ವಯ ಮಾರ್ಗಸೂಚಿ ದರವನ್ನು ಶೇಕಡಾ 15ರಷ್ಟು ಹೆಚ್ಚಿಸಲು ಸರ್ಕಾರ ನಿರ್ಧರಿಸಿದ್ದು, ಇಂತಹ ನಿರ್ಧಾರ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ತೆರಿಗೆ ಹೆಚ್ಚಳಕ್ಕೆ ಕಾರಣವಾಗಲಿದೆ.

ಇದರಿಂದಾಗಿ ಗ್ರಾಮೀಣ ಭಾಗಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಉತ್ಸುಕರಾಗಿರುವ ಉದ್ದಿಮೆದಾರರು ವಿಶೇಷವಾಗಿ ಸಣ್ಣ ಕೈಗಾರಿಕೋದ್ಯಮಿಗಳು ತಮ್ಮ ಯೋಜನೆಗಳಿಂದ ವಿಮುಖರಾಗುವ ಹಾಗೂ ಹಾಲಿ ಕಾರ್ಯಚಟುವಟಿಕೆ ನಡೆಸುತ್ತಿರುವ ಕೈಗಾರಿಕೆಗಳು ತಮ್ಮ ಕೈಗಾರಿಕೆಗಳನ್ನು ಮುಚ್ಚುವ ಅಥವಾ ಸ್ಥಳಾಂತರಿಸುವ ಸಾಧ್ಯತೆಗಳು ಹೆಚ್ಚಾಗಿವೆ ಹಾಗೂ ಗ್ರಾಮೀಣ ಕೈಗಾರಿಕಾಭಿವೃದ್ಧಿ ಹಾಗೂ ಉದ್ಯೋಗ ಸೃಜನೆಗೆ ದೊಡ್ಡ ಹೊಡೆತ ಬೀಳಲಿದೆ. ಹಾಗೂ ಇದು ಗ್ರಾಮೀಣ ಪ್ರದೇಶಗಳಲ್ಲಿ ಕೈಗಾರಿಕೆಗಳನ್ನು ಉತ್ತೇಜಿಸುವ ಸರ್ಕಾರದ ಮೂಲ ಉದ್ದೇಶವನ್ನೇ ವಿಫಲಗೊಳಿಸುತ್ತದೆ.

ಸೂಕ್ಷ ಮತ್ತು ಸಣ್ಣ ಕೈಗಾರಿಕೆಗಳಿಗೆ ಈ ತೆರಿಗೆಯಲ್ಲಿ ಶೇಕಡಾ 50 ರಷ್ಟು ವಿಧಿಸುವಂತೆ ಸಂಬAಧಪಟ್ಟ ಇಲಾಖೆಗಳಿಂದ ಚರ್ಚಿಸಿ ಅನುವು ಮಾಡಿಕಡಬೇಕಾಗಿ ಕೇಳಿಕೊಳ್ಳುತ್ತೇವೆ.

05. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಸಮಸ್ಯೆಗಳು: ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯು ಕೈಗಾರಿಕೆಗಳು ಮತ್ತು ಸಂಸ್ಥೆಗಳು ಸ್ಥಾಪಿಸಲು, ವಿಸ್ತರಿಸಲು ಅಥವಾ ಕಾರ್ಯನಿರ್ವಹಿಸಲು ಕೆಂಪು, ಕಿತ್ತಳೆ ಮತ್ತು ಹಸಿರು ವಿಭಾಗಗಳಲ್ಲಿ, ಪಾವತಿಸಬೇಕಾದ ಸಮ್ಮತಿ ಶುಲ್ಕವನ್ನು ಹೆಚ್ಚಿಸಿದೆ, ಇದು ಸೂಕ್ಷ್ಮ ಮತ್ತು ಸಣ್ಣ ಪ್ರಮಾಣದ ಉದ್ಯಮಗಳ ಆರ್ಥಿಕ ಸ್ಥಿತಿಯ ಮೇಲೇ ತೀವ್ರವಾದ ಪರಿಣಾಮ ಬೀರುತ್ತಿದೆ. ನಿಮಗೆ ತಿಳಿದಿರುವಂತೆ, ಕೋವಿಡ್ -19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ಮುರಿದ ಪೂರೈಕೆ ಸರಪಳಿಗಳು, ಮುಂದುವರಿದ ಆರ್ಥಿಕ ಮಂದಗತಿ ಮತ್ತು ತೀವ್ರ ನಗದು ಹರಿವಿನ ಸಮಸ್ಯೆಗಳ ಹಿನ್ನೆಲೆಯಲ್ಲಿ ಕಾರ್ಯಾಚರಣೆಗಳನ್ನು ಪುನರುಜ್ಜೀವನಗೊಳಿಸಲು ಎಂ.ಎಸ್.ಎಂ.ಇ.ಗಳು ತುಂಬಾ ಕಷ್ಟಪಡುತ್ತಿವೆ.

ಇಂತಹ ಪರಿಸ್ಥಿತಿಯಲ್ಲಿ, ಎಂ.ಎಸ್.ಎಂ.ಇ.ಗಳ ಹಿತರಕ್ಷಣೆಯನ್ನು ಕಾಪಾಡುವ ಸಲುವಾಗಿ ಸಮ್ಮತಿ ಶುಲ್ಕದಲ್ಲಿನ ಹೆಚ್ಚಳವನ್ನು ಘೋಷಿಸಲಾಗಿರುವ ಗೆಜೆಟ್ ಅಧಿಸೂಚನೆಯನ್ನು ಪರಿಷ್ಕರಿಸಲು ನಾವು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಒತ್ತಾಯತಪೂರ್ವಕವಾಗಿ ವಿನಂತಿಸುತ್ತೇವೆ. ಸಮ್ಮತಿ ಶುಲ್ಕವನ್ನು ಯಂತ್ರೋಪಕರಣಗಳ ಮೌಲ್ಯ ಮಾತ್ರ ಆಧರಿಸಿ ನಿರ್ಧರಿಸಬೇಕೆ ವಿನಃ ಕಟ್ಟಡ ಮೌಲ್ಯವನ್ನು ಸೇರಿಸಿ ನಿಗದಿಪಡಿಸುವುದು ಅವೈಜ್ಞಾನಿಕವಾಗಿದೆ. ಈ ನಿಟ್ಟಿನಲ್ಲಿ ತಾವು ಸಂಬಂಧಪಟ್ಟ ಇಲಾಖೆಯೊಂದಿಗೆ ವ್ಯವಹರಿಸಿ ಸಮ್ಮತಿ ಶುಲ್ಕವನ್ನು ಯಂತ್ರೋಪಕರಣಗಳ ಮೌಲ್ಯದ ಮೇಲೆ ನಿಗಧಿಪಡಿಸಲು ಸೂಚಿಸಲು ತಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇವೆ.

06. ಸಾಮಾನ್ಯ ತ್ಯಾಜ್ಯ ಸಂಸ್ಕರಣಾ ಘಟಕಗಳು: ಎಲ್ಲಾ ಕೈಗಾರಿಕಾ ವಸಾಹತುಗಳು/ಪ್ರದೇಶಗಳಲ್ಲಿ ಸಾಮಾನ್ಯ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಕೆಎಸ್‌ಪಿಸಿಬಿ ತನ್ನ ಸಂಪನ್ಮೂಲಗಳು ಮತ್ತು ಪರಿಣತಿಯನ್ನು ಬಳಸಬೇಕು. ಅಸ್ತಿತ್ವದಲ್ಲಿರುವ ಕಾನೂನು ಇದಕ್ಕೆ ಅಡಚಣೆಯಾಗಿದ್ದರೆ, ಸಾಮಾನ್ಯ ತ್ಯಾಜ್ಯ ಸಂಸ್ಕರಣಾ ಘಟಕಗಳ ಸ್ಥಾಪನೆಯನ್ನು ಸುಗಮಗೊಳಿಸಲು ಕಾನೂನನ್ನು ಸೂಕ್ತವಾಗಿ ತಿದ್ದುಪಡಿ ಮಾಡಬಹುದು. ಕೈಗಾರಿಕಾ ಸಮೂಹಗಳಲ್ಲಿ ಇಂಥ ಘಟಕಗಳ ಅಗತ್ಯವಿರುವ ಹಿನ್ನೆಲೆಯಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ವಿನಂತಿಸುತ್ತೇವೆ.

07. ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ: ರಾಜ್ಯದ ಶೇಕಡಾ 94ರಷ್ಟು ಎಸ್‌ಎಂಇಗಳು ಖಾಸಗಿ ಕೈಗಾರಿಕಾ ಪ್ರದೇಶಗಳಲ್ಲಿ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ ಹಾಗೂ ಈ ಕೈಗಾರಿಕೆಗಳಿಗೆ ಅತ್ಯಲ್ಪ ನೀರಿನ ಅವಶ್ಯಕತೆ ಇರುವುದರಿಂದ ಹಾಗೂ BWSSB ವಿಧಿಸಿರುವ ಅಸಹಜ ಪ್ರೊರ‍್ಯಾಟಾ ಶುಲ್ಕಗಳಿಂದಾಗಿ ಬಹುತೇಕ ಕೈಗಾರಿಕೆಗಳು ಕುಡಿಯುವ ನೀರಿಗೆ ತಮ್ಮದೇ ಆದ ವ್ಯವಸ್ಥೆಯನ್ನು ಮಾಡಿಕೊಂಡು ಒಳಚರಂಡಿ ಮಂಡಳಿ ಮೂಲಕ ಈಗಾಗಲೇ ಒಳಚರಂಡಿ ಸಂಪರ್ಕವನ್ನು ಪಡೆದುಕೊಂಡು ತಮ್ಮ ಕಾರ್ಯಚಟುವಟಿಕೆಗಳನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.

ಆದಾಗ್ಯೂ ಈಗ ಏಕಾಏಕಿ ಖಾಸಗಿ ಕೈಗಾರಿಕಾ ವಸಾಹತುಗಳಲ್ಲಿನ ಒಳಚರಂಡಿ ಸಂಪರ್ಕಗಳನ್ನು ಅಕ್ರಮ ಸಂಪರ್ಕ ಎಂದು ಕಾರಣ ನೀಡಿ ಕೈಗಾರಿಕೆಗಳಿಗೆ ನೀರು/ಒಳಚರಂಡಿ ಸರಬರಾಜನ್ನು ಕಡಿತಗೊಳಿಸುವುದಾಗಿ BWSSB ನೋಟಿಸ್ ನೀಡಲು ಪ್ರಾರಂಭಿಸಿದೆ ಎಂದು ಬಹಳಷ್ಟು ಕಾಸಿಯಾ ಸದಸ್ಯರು ನಮ್ಮ ಗಮನಕ್ಕೆ ತಂದಿರುತ್ತಾರೆ.

ಮೇಲೆ ತಿಳಿಸಿರುವಂತೆ ಬಹತೇಕ ಕೈಗಾರಿಕೆಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಬಹುತೇಕ ಘಟಕಗಳು ಕುಡಿಯುವ ನೀರಿಗೆ ತಮ್ಮದೇ ಆದ ವ್ಯವಸ್ಥೆಗಳನ್ನು ಮಾಡಿಕೊಂಡು BWSSB ಯಿಂದ ಕೇವಲ ಒಳಚರಂಡಿ ಸಂಪರ್ಕಗಳನ್ನು ಪಡೆದುಕೊಂಡು ಕಾರ್ಯನಿರ್ವಹಿಸುತ್ತಿರುವುದರಿಂದ, ರಾಜ್ಯದ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಹಿತದೃಷ್ಟಿಯಿಂದ ಖಾಸಗಿ ಕೈಗಾರಿಕಾ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸೂಕ್ಷ ಮತ್ತು ಸಣ್ಣ ಕೈಗಾರಿಕೆಗಳಿಗೆ ಕೇವಲ ಒಳಚರಂಡಿ ಸಂಪರ್ಕ ಪಡೆಯಲು ಅನುಮತಿ ನೀಡುವ ಹಾಗೂ ಸಂಬಂಧಿಸಿದ ಶುಲ್ಕಗಳನ್ನು ಕಟ್ಟಡದ ಮಾಲೀಕರಿಂದ ವಸೂಲಿ ಮಾಡುವ ಕುರಿತು ಪರಿಗಣಿಸಲು ತಮ್ಮಲ್ಲಿ ಈ ಮೂಲಕ ವಿನಂತಿಸಲಾಗಿದೆ.

08. ಖಾಸಗಿ ಕೈಗಾರಿಕಾ ಪ್ರದೇಶಗಳಲ್ಲಿ ಮೂಲಸೌಕರ್ಯಾಭಿವೃದ್ಧಿಗಾಗಿ ಧನಸಹಾಯ ಒದಗಿಸಲು ಮನವಿ:
ಮಾನ್ಯ ಸಚಿವರ ಗಮನಕ್ಕೆ ತರಬಯಸುವುದೇನೆಂದರೆ ಕರ್ನಾಟಕ ರಾಜ್ಯದಲ್ಲಿ 6 ರಿಂದ 7 ಶೇಕಡಾ ಕೈಗಾರಿಕೆಗಳು ಮಾತ್ರ ಕೆಐಎಡಿಬಿ ಮತ್ತು ಕೆಎಸ್‌ಎಸ್‌ಐಡಿಸಿ ಅಭಿವೃದ್ಧಿಪಡಿಸಿರುವ ಕೈಗಾರಿಕಾ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಉಳಿದ 93 ರಿಂದ 94 ಶೇಕಡಾ ಕೈಗಾರಿಕೆಗಳು ಖಾಸಗಿ ಕೈಗಾರಿಕಾ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ.

ಈ ಖಾಸಗಿ ಕೈಗಾರಿಕಾ ಪ್ರದೇಶಗಳಲ್ಲಿ ಕೈಗಾರಿಕೆಗಳ ಕಾರ್ಯನಿರ್ವಹಣೆಗೆ ಅಗತ್ಯವಾದ ಮೂಲಭೂತ ನಾಗರಿಕ ಸೌಕರ್ಯಗಳಿಂದ ಸಂಪೂರ್ಣವಾಗಿ ವಂಚಿತವಾಗಿವೆ. ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಹಿತದೃಷ್ಟಿಯಿಂದ ಖಾಸಗಿ ಕೈಗಾರಿಕಾ ಪ್ರದೇಶಗಳಲ್ಲಿ ಈ ಕೆಳಕಂಡ ಮೂಲಭೂತ ಸೌಕರ್ಯಗಳನ್ನು ತುರ್ತಾಗಿ ಒದಗಿಸುವ ಅಗತ್ಯವಿದ.

ರಸ್ತೆಗಳು: ರಸ್ತೆಗಳು ಸ್ಥಿತಿ ತೀರಾ ಹದಗೆಟ್ಟಿದ್ದು, ಕೈಗಾರಿಕೆಗಳಿಗೆ ಬೇಕಾದ ಸರಕು ಮತ್ತು ಸಾಮಗ್ರಿಗಳ ಸಾಗಣಿಕೆಗಾಗಿ ಹಾಗೂ ಉದ್ಯಮಿಗಳು ಮತ್ತು ಕೆಲಸಗಾರರ ಸುಲಲಿತ ಓಡಾಟಕ್ಕೆ ತೊಂದರೆಯಾಗಿದೆ. ರಸ್ತೆಗಳ ಈ ದುಸ್ಥಿತಿಯಿಂದಾಗಿ ಈ ಕೈಗಾರಿಕೆಗಳಿಗೆ ಗ್ರಾಹಕರು ಕೆಲಸದ ಆದೇಶಗಳನ್ನು ನೀಡಲು ಹಿಂeರಿಯುತ್ತಿದ್ದಾರೆ. ಈ ಕೈಗಾರಿಕೆಗಳು ಸರ್ಕಾರಕ್ಕೆ ಗಣನೀಯ ಪ್ರಮಾಣದ ತೆರಿಗೆ ಸಲ್ಲಿಸುತ್ತಿರುವುದಲ್ಲದೆ, ಲಕ್ಷಾಂತರ ಕಾರ್ಮಿಕರಿಗೆ ಉದ್ಯೋಗಾವಕಾಶವನ್ನು ನೀಡುತ್ತಿವೆ. ಈ ನಿಟ್ಟಿನಲ್ಲಿ ಮಾನ್ಯ ಸಚಿವರು ಸಂಬಂಧಪಟ್ಟ ಇಲಾಖೆಗಳೊಂದಿಗೆ ವ್ಯವಹರಿಸಿ ತುರ್ತಾಗಿ ಉತ್ತಮ ಗುಣಮಟ್ಟದ ರಸ್ತೆಯನ್ನು ನಿರ್ಮಿಸಿಕೊಡಬೇಕಾಗಿದೆ.

ಬೀದಿ ದೀಪಗಳು: ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ವಿಶೇಷವಾಗಿ ಮಹಿಳಾ ಉದ್ಯೋಗಿಗಳು ಬೀದಿ ದೀಪಗಳಿಲ್ಲದ ಕಾರಣ ರಾತ್ರಿ ವೇಳೆಯಲ್ಲಿ ಈ ರಸ್ತೆಗಳಲ್ಲಿ ನಡೆಯಲು ಕಷÀ್ಟಪಡುತ್ತಿದ್ದಾರೆ ಹಾಗೂ ಇದರಿಂದ ಅವರ ವೈಯಕ್ತಿಕ ಭದ್ರತೆಗೆ ಅಪಾಯವನ್ನುಂಟುಮಾಡುತ್ತಿದೆ.

ಆದ್ದರಿಂದ, ಮಾನ್ಯ ಸಚಿವರು ಬಿಬಿಎಂಪಿ ಹಾಗೂ ಇತರೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಖಾಸಗಿ ಕೈಗಾರಿಕಾ ಪ್ರದೇಶಗಳಲ್ಲಿ ಬೀದಿ ದೀಪಗಳನ್ನು ಅಳವಡಿಸಲು ಆದೇಶಿಸಬೇಕೆಂದು ಕೇಳಿಕೊಳ್ಳುತ್ತಿದ್ದೇವೆ.
ಮಳೆ ನೀರಿನ ಚರಂಡಿಗಳು:- ಖಾಸಗಿ ವ್ಯಕ್ತಿಗಳಿಂದ ರೆವಿನ್ಯೂ ನಿವೇಶನಗಳಲ್ಲಿ ಕೈಗಾರಿಕಾ ನಿವೇಶನಗಳನ್ನು ನಿರ್ಮಿಸಿದ್ದು, ಕೈಗಾರಿಕಾ ಗುಣಮಟ್ಟದ ಒಳಚರಂಡಿಯನ್ನು ಇಲ್ಲಿ ನಿರ್ಮಿಸಲಾಗಿಲ್ಲ.

ಇತ್ತೀಚಿನ ದಿನಗಳಲ್ಲಿ ಬಿಬಿಎಂಪಿ/ಇತರೆ ಸ್ಥಳೀಯ ಸಂಸ್ಥೆಗಳು ಅಲ್ಲೊಂದು ಇಲ್ಲೊಂದು ಪ್ರದೇಶಗಳಲ್ಲಿ ಒಳಚರಂಡಿ ನಿರ್ಮಿಸುವ ಕಾರ್ಯ ಮಾಡಿದ್ದರೂ ಸಹ ಅವುಗಳು ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿದ್ದು ಬಹಳ ದಿನಗಳು ಬಾಳಿಕೆ ಬರುವುದಿಲ್ಲ. ಈ ನಿಟ್ಟಿನಲ್ಲಿ ಮಳೆ ನೀರು ಹಾಗೂ ಸಾಮಾನ್ಯ ತ್ಯಾಜ್ಯವನ್ನು ಹೊರಹಾಕಲು ಉತ್ತಮ ಗುಣಮಟ್ಟದ ಒಳಚರಂಡಿ ವ್ಯವಸ್ಥೆ ಅತ್ಯಗತ್ಯವಾಗಿರುತ್ತದೆ.

ಈ ನಿಟ್ಟಿನಲ್ಲಿ ಮಾನ್ಯ ಸಚಿವರು ಸಂಬಂಧಪಟ್ಟ ಇಲಾಖೆಗಳಿಗೆ ಆದೇಶ ನೀಡಿ ನಿಗದಿತ ಕಾಲಮಿತಿಯಲ್ಲಿ ಕಾರ್ಯ ನಿರ್ವಹಿಸುವಂತೆ ಆದೇಶ ನೀಡಲು ಕೋರಿಕೊಳ್ಳುತ್ತಿದೇವೆ.

ಕುಡಿಯುವ ನೀರು: ಕೈಗಾರಿಕಾ ಪ್ರದೇಶಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೇ ಇರುವುದರಿಂದ ಉದ್ಯಮಿಗಳು ಮತ್ತು ಉದ್ಯೋಗಿಗಳ ಆರೋಗ್ಯದ ಹಿತದೃಷ್ಟಿಯಿಂದ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಮಾಡಬೇಕಾಗಿದೆ. ಇದು ತುರ್ತಾಗಿ ಒದಗಿಸಬೇಕಾದ ಮೂಲಭೂತ ಸೌಕರ್ಯವಾಗಿದೆ.

ಖಾಸಗಿ ಕೈಗಾರಿಕಾ ಪ್ರದೇಶಗಳ ಈ ಮೇಲಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ವಿಶೇಷ ಹಣಕಾಸಿನ ವ್ಯವಸ್ಥೆಯನ್ನು ಮೀಸಲಿಡುವಂತೆ ನಾವು ಸರ್ಕಾರವನ್ನು ಕೋರುತ್ತೇವೆ.

09. ಕಾಸಿಯಾಗೆ ವಾರ್ಷಿಕ ಅನುದಾನ: ಕಾಸಿಯಾ ತನ್ನ ಅಭಿವೃದ್ಧಿ ಚಟುವಟಿಕೆಗಳ ವ್ಯಾಪ್ತಿಯನ್ನು ವಿಸ್ತರಿಸಿರುವುದರಿಂದ ಮತ್ತು ಎಂ.ಎಸ್.ಎಂ.ಇ. ವಲಯವು ವಿಸ್ತೃತಗೊಂಡಿರುವುದರಿAದ, ರಾಜ್ಯದ ದೂರ ಪ್ರದೇಶದ ಕಟ್ಟಕಡೆಯ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳನ್ನು ತಲುಪುವ ನಿಟ್ಟಿನಲ್ಲಿ, ವಿವಿಧ ಪ್ರದೇಶಗಳು ಮತ್ತು ವಿವಿಧ ಉದ್ಯಮ ಗುಂಪುಗಳನ್ನು ಒಳಗೊಂಡ ಹಲವಾರು ಯೋಜನೆಗಳನ್ನು ರಾಜ್ಯಾದ್ಯಂತ ಏಕಕಾಲದಲ್ಲಿ ನಡೆಸಲು ಅನುವಾಗುವಂತೆ ಪ್ರತ್ಯೇಕ ಖಾತೆಯಡಿ ಕಾಸಿಯಾಗೆ ವಾರ್ಷಿಕ ರೂ. 5.00 ಕೋಟಿ ಅನುದಾನ ನೀಡುವಂತೆ ಮನವಿ ಮಾಡುತ್ತೇವೆ.

10. ಕೈಗಾರಿಕಾ ಅದಾಲತ್: ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಕೈಗಾರಿಕಾ ಅದಾಲತ್ ಶ್ಲಾಘನೀಯ ಉಪಕ್ರಮವಾಗಿದ್ದರೂ, ದೀರ್ಘಕಾಲದಿಂದ ಬಾಕಿ ಉಳಿದಿರುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿರುವುದಿಲ್ಲ. ಆದುದರಿಂದ ಎಂ.ಎಸ್.ಎಂ.ಇ. ವಲಯದ ಕೈಗಾರಿಕೋದ್ಯಮಿಗಳ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸುವ ದೃಷ್ಟಿಯಿಂದ ಮೂರು ತಿಂಗಳಿಗೊಮ್ಮೆ ನಿಯತಕಾಲಿಕವಾಗಿ ಸಭೆ ನಡೆಸಬಹುದಾದ ಹಾಗೂ ಇರುವ ಸಮಸ್ಯೆಗಳನ್ನು ಪರಿಹರಿಸಬಹುದಾದ “ಉದ್ಯಮ ಸ್ನೇಹಿ” ಎಂಬ ಶಾಶ್ವತ ಕಂದಾಯ ವಿಭಾಗವಾರು ಪೀಠಗಳನ್ನು ರಚಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ.

12. ಸರ್ಕಾರಿ ಖರೀದಿ ನೀತಿ: ಸೂಕ್ಷö್ಮ ಮತ್ತು ಸಣ್ಣ ತಯಾರಿಕಾ ಘಟಕಗಳಿಂದ ಶೇ.25 ರಷ್ಟು ಖರೀದಿಸಬೇಕು ಹಾಗೂ ಶೇ.15 ರಷ್ಟು ದರ ಆದ್ಯತೆ ನೀಡಬೇಕೆಂದು ಕೈಗಾರಿಕಾ ನೀತಿಯಲ್ಲಿ ಕಡ್ಡಾಯ ನಿಯಮಗಳು ಇರುತ್ತವೆ. ಆದರೆ ಬೆಸ್ಕಾಂ, ಕೆಪಿಸಿಟಿಎಲ್, ಕೆಎಸ್‌ಆರ್‌ಟಿಸಿ, BWSSWB ಗಳಂಥ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಖರೀದಿ ನೀತಿಗಳು ಮತ್ತು ಪದ್ಧತಿಗಳು. ರಾಜ್ಯದ ಎಸ್‌ಎಂಇಗಳಿಗೆ ಇವುಗಳಿಂದ ಸೂಕ್ತ ರೀತಿಯಲ್ಲಿ ಬೆಂಬಲ ಮತ್ತು ಸಹಕಾರ ಲಭಿಸುತ್ತಿಲ್ಲ. ಈ ಸಂಸ್ಥೆಗಳು ಸರ್ಕಾರದ ನೀತಿಗೆ ಆದ್ಯತೆ ನೀಡದೆ ನಿರ್ಲಕ್ಷಿಸುತ್ತಿವೆ.

ನೆರೆಯ ರಾಜ್ಯಗಳು ತಮ್ಮ ರಾಜ್ಯದಲ್ಲಿನ ಎಂ.ಎಸ್.ಎಂ.ಇ ಗಳನ್ನು ಪೂರ್ವಭಾವಿಯಾಗಿ ಬೆಂಬಲಿಸುತ್ತಿರುವಂತೆ, ರಾಜ್ಯದಲ್ಲಿನ ಎಂ.ಎಸ್.ಎಂ.ಇ.ಗಳ ಹಿತದೃಷ್ಟಿಯಿಂದ, ರಾಜ್ಯ ಸರ್ಕಾರದ ಇಲಾಖೆಗಳು ಮತ್ತು ಸರ್ಕಾರಿ ಸೌಮ್ಯದ ಸಂಸ್ಥೆಗಳು ಖರೀದಿ ನೀತಿ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಕ್ತ ಅಧಿಸೂಚನೆಗಳನ್ನು ಹೊರಡಿಸಲು ವಿನಂತಿಸಿಕೊಳ್ಳುತ್ತಿದ್ದೇವೆ.

13. ವಿದ್ಯುತ್ ತೆರಿಗೆಯನ್ನು ಕಡಿತಗೊಳಿಸುವುದು: ಸಾಂಕ್ರಾಮಿಕ ಬಿಕ್ಕಟ್ಟಿನ ನಿರ್ಣಾಯಕ ಸಮಯದಲ್ಲಿ ಹಾಗೂ ಅದರ ನಂತರ ವಿದ್ಯುತ್ ತೆರಿಗೆಯನ್ನು ಶೆಕಡಾ 6 ರಿಂದ ಶೇಕಡಾ 9 ಕ್ಕೆ ಹೆಚ್ಚಿಸಿರುವುದು ಕೈಗಾರಿಕೆಗಳನ್ನು ತೀವ್ರ ಸಂಕಷ್ಟಕ್ಕೀಡು ಮಾಡಿದೆ ಎಂದು ಎಂ.ಎಸ್.ಎಂ.ಇ. ಭ್ರಾತೃತ್ವದಿಂದ ಹೆಚ್ಚಿನ ಸಂಖ್ಯೆಯ ಮನವಿಗಳು ಸ್ವೀಕೃತವಾಗಿವೆ.

ಪ್ರಸಕ್ತ ವಿದ್ಯುತ್ ದರದಲ್ಲಿ ಆಗಿರುವ ಹೆಚ್ಚಳ ವಿದ್ಯುತ್ ತೆರಿಗೆಯನ್ನು ಶೇಕಡಾ 9 ರಿಂದ ಶೇಕಡಾ 3 ಕ್ಕೆ ಇಳಿಸುವ ಕುರಿತು ತ್ವರಿತವಾಗಿ ಪರಿಗಣಿಸಲು ನಾವು ಸರ್ಕಾರವನ್ನು ವಿನಂತಿಸಿಕೊಳ್ಳುತ್ತಿದ್ದೇವೆ.

14. ವಿದ್ಯುತ್ ದರ ಏರಿಕೆಯನ್ನು ಮುಂದೂಡಿ: ಮೇಲೆ ವಿವರಿಸಿದ ಕಾರಣಗಳಿಗಾಗಿ, ಎಸ್ಕಾಂಗಳಿಂದ ಉದ್ದೇಶಿತ ವಿದ್ಯುತ್ ದರದ ಹೆಚ್ಚಳವನ್ನು ಹಿಂತೆಗೆದುಕೊಳ್ಳಲು ಮತ್ತು ಈ ನಿರ್ಣಾಯಕ ಹಂತದಲ್ಲಿ ಸೂಕ್ಷ್ ಮತ್ತು ಸಣ್ಣ ಕೈಗಾರಿಕಾ ವಲಯಕ್ಕೆ ಪರಿಹಾರವನ್ನು ನೀಡಲು ನಾವು ಕೆ.ಇ.ಆರ್.ಸಿ. ಮತ್ತು ರಾಜ್ಯ ಸರ್ಕಾರವನ್ನು ವಿನಂತಿಸುತ್ತೇವೆ. ತಪ್ಪಿದಲ್ಲಿ ಅನೇಕ ಎಂ.ಎಸ್.ಎಂ.ಇ.ಗಳು ತಮ್ಮ ಕಾರ್ಯಾಚರಣೆಗಳನ್ನು ಬಲವಂತವಾಗಿ ಸ್ಥಗಿತಗೊಳಿಸಲೇಬೇಕಾದ ಸಂದರ್ಭ ಒದಗಲಿದೆ. 2019 ರ ನಂತರ ವಿದ್ಯುತ್ ದರ ಮತ್ತು ಸ್ಥಿರ ಶುಲ್ಕಗಳನ್ನು ನಿಯಮಿತವಾಗಿ ಹೆಚ್ಚಿಸುತ್ತಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

15. ಎಂ.ಎಸ್.ಎಂ.ಇ.ಗಳಿಗೆ ಆದೇಶಿಸಲಾದ ಸಹಾಯಧನ: ಉತ್ಪಾದನಾ ವಲಯದಲ್ಲಿರುವ ಸೂಕ್ಷö್ಮಮತ್ತು ಸಣ್ಣ ಕೈಗಾರಿಕೆಗಳಿಗೆ ಕೆ.ಇ.ಆರ್.ಸಿ. ಆದೇಶದಂತೆ ಪ್ರತಿ ಯೂನಿಟ್ ಗೆ 50 ಪೈಸೆಯಂತೆ ನೀಡಬೇಕಾದ ಸಹಾಯಧನವನ್ನು ನೀಡಲು ಬೆಸ್ಕಾಂ ವಿಫಲವಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಎಸ್ಕಾಂಗಳಿಗೆ ಕೇವಲ ಉದ್ಯಮಿ ದೃಢೀಕರಣ ಪತ್ರವನ್ನು ಪಡೆದ ಇನ್ಯಾವುದೇ ನಿಬಂಧನೆಗಳನ್ನು ವಿಧಿಸದೇ ಆದೇಶ ಜಾರಿಯಾದ ದಿನಾಂಕದಿAದ ಬಾಕಿ ಇರುವ ಎಲ್ಲಾ ಮೊತ್ತಗಳನ್ನು ನೀಡಲು ಆದೇಶಿಸಬೇಕೆಂದು ತಮ್ಮಲ್ಲಿ ವಿನಂತಿಸುತ್ತೇವೆ.

16. ಎಂ.ಎಸ್.ಇ.ಎಫ್.ಸಿ – ಹೆಚ್ಚುವರಿ ಪರಿಷತ್ತುಗಳನ್ನು ಸ್ಥಾಪಿಸುವ ಕುರಿತು: ಸೂಕ್ಷ್ಮ ಮತ್ತು ಸಣ್ಣ ಉದ್ದಿಮೆದಾರರ ಅಭಿವೃದ್ಧಿ ಹಿತದೃಷ್ಟಿಯಿಂದ, ಎಂ.ಎಸ್.ಎಂ.ಇ.ಗಳಿಗೆ ಶಾಸನಬದ್ಧ ಬೆಂಬಲ ನೀಡುವ ಸಲುವಾಗಿ ಜಾರಿಗೊಳಿಸಲಾದ ಕಾಯ್ದೆಯ ಪ್ರಯೋಜನವನ್ನು ಸುದುಪಯೋಗಪಡಿಸಿಕೊಳ್ಳಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ, ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಪರಿಷತ್ತುಗಳನ್ನು ಸ್ಥಾಪಿಸಲು ನಿರ್ಧರಿಸಿರುವುದನ್ನು ಕಾಸಿಯಾ ಶ್ಲಾಘಿಸುತ್ತದೆ.

ಪರಿಷತ್ತುಗಳು ಹೆಚ್ಚು ಪರಿಣಾಮಕಾರಿಯಾಗಿ ಹಾಗೂ ಸಮರ್ಥವಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಕೆಳಕಂಡ ಅಂಶಗಳನ್ನು ತಮ್ಮ ಗಮನಕ್ಕೆ ತರಬಯಸುತ್ತೇವೆ.

ಬೆಂಗಳೂರು ಪರಿಷತ್ತು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರೂ, ಇತರೆ ಪರಿಷತ್ತುಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸದೇ ಹಲವಾರು ಪ್ರಕರಣಗಳು ಬಾಕಿ ಉಳಿದಿರುವುದು ಕಂಡುಬರುತ್ತದೆ. ಇದಕ್ಕೆ ಪ್ರಮುಖ ಕಾರಣ, ಕೆಲವು ಪರಿಷತ್ತುಗಳಲ್ಲಿ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಪ್ರತಿನಿಧಿಗಳನ್ನು ಸದಸ್ಯರಾಗಿ ನೇಮಿಸುವ ಬದಲು ವಾಣಿಜ್ಯ ಮಂಡಳಿಗಳ ಪ್ರತಿನಿಧಿಗಳನ್ನು ಸದಸ್ಯರನ್ನಾಗಿ ನೇಮಿಸಿರುವುದು.

ವಾಣಿಜ್ಯ ಮಂಡಳಿಯು ಬಹತೇಕ ಸದಸ್ಯರುಗಳು ಟ್ರೇಡಿಂಗ್‌ನಲ್ಲಿ ನಿರತರಾಗಿರುವುದರಿಂದ ಅವರುಗಳಿಗೆ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಾಮಾನ್ಯ ಙ್ಙಾನ ಲಭ್ಯವಿಲ್ಲದೇ ಇರುವುದರಿಂದ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ.

ಸೂಕ್ಷ್ಮ ಮತ್ತು ಸಣ್ಣ ಉದ್ದಿಮೆದಾರರ ಅಭಿವೃದ್ಧಿ ಹಿತದೃಷ್ಟಿಯಿಂದ, ಎಂ.ಎಸ್.ಎಂ.ಇ.ಗಳಿಗೆ ಶಾಸನಬದ್ಧ ಬೆಂಬಲ ನೀಡುವ ಸಲುವಾಗಿ ಜಾರಿಗೊಳಿಸಲಾದ ಕಾಯ್ದೆಯ ಪ್ರಯೋಜನವನ್ನು ಸುದುಪಯೋಗಪಡಿಸಿಕೊಳ್ಳಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ, ತ್ವರಿತವಾಗಿ ಜಿಲ್ಲಾವಾರು ಪರಿಷತ್ತುಗಳನ್ನು ಸ್ಥಾಪಿಸುವ ಮೂಲಕ ಪರಿಷತ್ತಿನ ಕಾರ್ಯ ಚಟುವಟಿಕೆಗಳು ಸುಲಲಿತವಾಗಿ ನಡೆಸಲು ಅನುವಾಗುವಂತೆ ಸೂಕ್ತ ಕ್ರಮ ಕೈಗೊಳ್ಳಲು ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ.

17. ಶೇಕಡಾ 4 ರ ದರದಲ್ಲಿ ಕೆ.ಎಸ್.ಎಫ್.ಸಿ. ಸಾಲಗಳು: ಕೆ.ಎಸ್.ಎಫ್.ಸಿ. ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕಾ ಘಟಕಗಳಿಗೆ ಶೇಕಡಾ 4 ರ ಸಹಾಯಧನ ಬಡ್ಡಿ ದರದಲ್ಲಿ ನೀಡುತ್ತಿರುವ ಸಾಲಗಳು ಎಸ್.ಎಂ.ಇ. ವಲಯದ ಕೈಗಾರಿಕೆಗಳಿಗೆ ಬಹಳ ಸಹಾಯಕವಾಗಿದೆ. ಎಸ್.ಎಂ.ಇ. ವಲಯಕ್ಕೆ ನೀಡಲಾಗಿರುವ ಸಾಲಗಳಿಗೆ ಸಹಾಯಧನದ ಬಡ್ಡಿ ಯೋಜನೆ ವಿಸ್ತರಿಸುವ ಸಲುವಾಗಿ ಕೆ.ಎಸ್.ಎಫ್.ಸಿ. ಗೆ ಹೆಚ್ಚುವರಿ ಅನುದಾನದ ಅಗತ್ಯವಿರುತ್ತದೆ. ಹೆಚ್ಚುವರಿ ಸಾಲಗಳನ್ನು ನೀಡಲು ಇದು ಕೆ.ಎಸ್.ಎಫ್.ಸಿ. ಯ ಆರ್ಥಿಕತೆಯನ್ನು ಬಲಪಡಿಸುತ್ತದೆ.

ಸಂಚಿತ ಮೊತ್ತಗಳು ಸೇರಿದಂತೆ ಈಗಾಗಲೇ ಮಂಜೂರು ಮಾಡಿರುವ ಸಾಲಗಳ ಸಹಾಯಧನದ ಅಂತರವನ್ನು ಪೂರೈಸಲು ಕೆ.ಎಸ್.ಎಫ್.ಸಿ. ಗೆ ನೀಡಬೇಕಾದ ಸಹಾಯಧನ ಬಿಡುಗಡೆ ಮಾಡಲು ವಿನಂತಿಸುತ್ತೇವೆ. ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನವೋದ್ಯಮಗಳಿಗೆ ಕೆ.ಎಸ್.ಎಫ್.ಸಿ.ವತಿಯಿಂದ ಇದೇ ರೀತಿ ಶೇಕಡಾ 4ರ ಸಹಾಯಧನ ಬಡ್ಡಿ ದರದಲ್ಲಿ ಸಾಲಗಳನ್ನು ವಿಸ್ತರಿಸಲು ಸರ್ಕಾರವನ್ನು ನಾವು ವಿನಂತಿಸುತ್ತೇವೆ.

18. ಸಾಲಗಳ ಮೇಲಿನ ಸ್ಟ್ಯಾಂಪ್ ಡ್ಯೂಟಿ (ಶುಲ್ಕ): ಈ ಹಿಂದಿನ ಸರ್ಕಾರವು ಬ್ಯಾಂಕ್ ಸಾಲಗಳಿಗೆ ಮೇಲಾಧಾರದ ಮೇಲಿನ ಆಸ್ತಿಗಳ ಹೈಪೋಥಿಕೇಶನ್ ಹಾಗೂ ಅಡಮಾನಗಳಿಗೆ ಮುದ್ರಾಂಕ ಶುಲ್ಕವನ್ನು ಶೇಕಡಾ 0.1 ರಿಂದ ಶೇಕಡಾ 0.2 ಕ್ಕೆ ಹೆಚ್ಚಿಸಿದ್ದು, ಗರಿಷ್ಠ ಮಿತಿಯನ್ನು ರೂ. 50,000/- ದಿಂದ ರೂ. 10.00 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಈ ಹೆಚ್ಚಳದಿಂದಾಗಿ ಸೂಕ್ಷö್ಮ ಮತ್ತು ಸಣ್ಣ ಕೈಗಾರಿಕೆಗಳ ದುಡಿಯುವ ಬಂಡವಾಳದ ವೆಚ್ಚದಲ್ಲಿ ಗಣನೀಯವಾಗಿ ಹೆಚ್ಚಾಗಲಿದೆ. ಈ ಶುಲ್ಕವು ಇತರೆ ರಾಜ್ಯಗಳಿಗೆ ಹೋಲಿಸಿದಾಗ ತುಂಬಾ ಜಾಸ್ತಿಯಾಗಿರುತ್ತದೆ. ತಾವುಗಳು ಎಂಎಸ್‌ಇ ವಲಯಕ್ಕೆ ವಿಧಿಸಲಾಗಿರುವ ಸ್ಟಾಂಪ್ ಡ್ಯೂಟಿ ದರವನ್ನು ಹಿಂದೆ ಇದ್ದಂತೆ ಶೇಕಡಾ 0.1 ಮತ್ತು ರೂ. 50,000/- ದ ಗರಿಷ್ಠ ಮಿತಿಯನ್ನು ನಿಗದಿಪಡಿಸಿದಲ್ಲಿ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಹೆಚ್ಚಿನ ರೀತಿಯಲ್ಲಿ ಸಹಕಾರವಾಗಲಿದೆ ಎಂದು ಸಚಿವರ ಗಮನಕ್ಕೆ ತರಲಾಯಿತು.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು