NEWSನಮ್ಮಜಿಲ್ಲೆನಮ್ಮರಾಜ್ಯ

ರಾಜ್ಯದ ಸಾರಿಗೆ ನಿಗಮಗಳ ಕೆಲ ಅಧಿಕಾರಿಗಳು – ಸಂಘಟನೆಗಳ ನಡೆಗೆ ನೌಕರರ ಖಂಡನೆ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಕೆಲ ಅಧಿಕಾರಿಗಳು ನೌಕರರ ವಿರುದ್ಧ ನಡೆಸು ಪಿತೂರಿ ಲಂಚಬಾಕತನದಿಂದ ಹಲವು ನೌಕರರು ಇತ್ತ ತಮ್ಮ ಮಕ್ಕಳಿಗೆ ಸರಿಯಾದ ಭವಿಷ್ಯ ರೂಪಿಸಿಕೊಳ್ಳಲಾಗದೆ ಅತ್ತ ನೌಕರಿಯನ್ನು ಬಿಟ್ಟು ಬೇರೆ ಕೆಲಸವನ್ನೂ ಮಾಡಲಾಗದೆ ತ್ರಿಶಂಕು ಸ್ಥಿತಿಯನ್ನು ಅನುಭವಿಸುತ್ತಿದ್ದಾರೆ.

ಈ ಬಗ್ಗೆ ಸರ್ಕಾರದ ಜಮನ ಸೆಳೆಯುವುದಕ್ಕೆ ಹೋರಾಟ, ಮನವಿ ಪತ್ರ ಸೈಕಲ್‌ ಜಾಥಾ, ಉಪವಾಸ ಸತ್ಯಾಗ್ರಹ ಹೀಗೆ ಹತ್ತಾರು ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಆಳುವವರ ಕಚೇರಿ ಮನೆಗಳ ಬಳಿಗೆ ಹೋಗಿ ಹೋಗಿ ಚಪ್ಪಲಿ ಸವೆಸಿದ್ದು ಹಾಗೂ ಹೋಗಿದ್ದರ ಫಲ ಶೂನ್ಯವಾಗಿ ಹಿಂದಿರುಗಿದ್ದು ಬಿಟ್ಟರೆ ಬೇರೆ ಏನು ಪ್ರಯೋಜನವಾಗಿಲ್ಲ.

ಹೀಗಾಗಿ ಈ ಬಗ್ಗೆ ಮನನೊಂದ ಸಾರಿಗೆ ನೌಕರರೊಬ್ಬರು ತಮ್ಮ ನಮದಾಳದ ದುಡುವನ್ನು ಈ ಕೆಳಗಿನ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ. ನಮ್ಮ ಇಷ್ಟು ತೊಂದರೆಗೆ ಯಾರು ಕಾರಣ ಎಂಬುದನ್ನು ಬಹಳ ಆಳವಾಗಿ ವಿವರಿಸಿದ್ದಾರೆ ಅವರು.

ಆತ್ಮೀಯ ಸಾರಿಗೆ ಬಂಧುಗಳಿಗೆ ನನ್ನ ನಮಸ್ಕಾರ. ತಮಗೆಲ್ಲರಿಗೂ ತಿಳಿದಿರುವಂತೆ ಸಾರಿಗೆ ಸಂಸ್ಥೆಯಲ್ಲಿ ಅನೇಕ ವರ್ಷದಿಂದ ತಾವೆಲ್ಲರೂ ಕರ್ತವ್ಯ ಮಾಡುತ್ತಿದ್ದು. ಎಷ್ಟೇ ಕಷ್ಟ ಬಂದರು ಯಾರೆ ಏನು ಅಂದರು ಸಹಿಸಿಕೊಂಡು ನಮ್ಮ ಕರ್ತವ್ಯ ಮಾಡಿಕೊಂಡು ಬಂದಿದ್ದೇವೆ ಬರುತ್ತಿದ್ದೇವೆ.

ಈ ಹಿಂದೆ ಸಾರಿಗೆ ಸಂಸ್ಥೆಯಲ್ಲಿ ಇಂದಂತಹ ಒಳ್ಳೆ ಅಧಿಕಾರಿಗಳ ಸಖ್ಯೆ ಈಗ ಇಲ್ಲ. ಹಿಂದಿನ ಅಧಿಕಾರಿಗಳಿಗೆ ನೌಕರರನ್ನು ಯಾವ ರೀತಿ ಬಳಸಿಕೊಂಡು ಅವರಿಂದ ಕೆಲಸ ಮಾಡಿಸಿಕೊಂಡು ಮತ್ತು ನೌಕರರಿಗೆ ಯಾವುದೆ ತೊಂದರೆ ಆಗದಂತೆ ಅಂದರೆ ಒಂದೆ ಕುಟುಂಬದ ಹಾಗೆ ನಮ್ಮನ್ನು ಕಾಣುತ್ತ ಪ್ರೀತಿಯಿಂದಲೇ ಕೆಲಸ ಮಾಡಿಸುವ ಮೂಲಕ ಸಂಸ್ಥೆಯನ್ನೂ ಬೆಳಿಸಿ ಹೋಗಿದ್ದಾರೆ.

ಆದರೆ ಇವತ್ತಿನ ಪರಸ್ಥಿತಿ ನೋಡಿದರೆ ಅಂಥ ಅಧಿಕಾರಿಗಳು ತೀರಾತಿತೀರ ವಿರಳವಾಗಿದ್ದು, ನೌಕರಿಂದ ಕಿತ್ತು ತಿನ್ನುವ ಅಧಿಕಾರಿಗಳ ಸಂಖ್ಯೆಯೇ ಹೆಚ್ಚಾಗಿ ಬಿಟ್ಟಿದೆ. ಇದನ್ನು ಈಗ ತಮಗೆಲ್ಲರಿಗೂ ಗೊತ್ತಿರುವ ವಿಷಯ. ಬರುವ ಅಲ್ಪ ಸ್ವಲ್ಪ ಸಂಬಳದಲ್ಲಿ ಹೊರಗಡೆ ಮಾಡಿರುವ ಸಾಲಕ್ಕೆ ಬಡ್ಡಿ ಕಟ್ಟದಿದ್ದರೂ ಸಹ ನಮ್ಮ ಅಧಿಕಾರಿಗಳಿಗೆ ಮಂತ್ಲಿ ಮಾತ್ರ ಕೊಡಲೇಬೇಕು. ಕೊಡದಿದ್ದರೆ ನಾಳೆ ಮಾರ್ಗ ಬದಲಾವಣೆ ಮಾಡುವುದು ಸೇರಿ ಅಂದಿನಿಂದಲೇ ಅನೇಕ ಕಿರುಕುಳು ಶುರುವಾಗಿ ಬಿಡುತ್ತವೆ. ಇದು ನಮಗೆ ಸಾಮಾನ್ಯವಾಗಿಬಿಟ್ಟಿದೆ. ಆದರೆ ಸಾಲ ಕೊಟ್ಟವರು ಮನೆ ಬಳಿ ಬಂದು ಹೀಯಾಳಿಸಿ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದರು ನಾವು ಏನು ಮಾಡದ ಸ್ಥಿತಿಗೆ ತಲುಪಿದ್ದೇವೆ.

ಮುಂದುವರಿದಂತೆ ಈ ಅಧಿಕಾರಿಗಳ ಕಿರುಕುಳದ ಜತೆಗೆ ಅನೇಕ ವರ್ಷಗಳಿಂದಲೂ ನಮ್ಮ ಮೇಲೆ ಅಧಿಕಾರ ಚಲಾಯಿಸಿಕೊಂಡೇ ಬಂದ ಕೆಲವೊಂದು ಸಂಘಟನೆಗಳು, ನಮಗೆ ಆದ ಅನ್ಯಾಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಹೆಜ್ಜೆ ಇಡಲೇ ಇಲ್ಲ. ನೌಕರರಿಗೆ ಆದಂತಹ ಅನ್ಯಾಯ ಸರಿಪಡಿಸುತ್ತಿದ್ದೇವೆ ಎಂದು ಬೊಬ್ಬೆಹೊಡೆದು ತಾವು ಮಾತ್ರ ಲಾಭ ಮಾಡಿಕೊಂಡು ನಮ್ಮನ್ನು ಬೀದಿಪಾಲು ಮಾಡಿಕೊಂಡೇ ಬಂದವು. ಈಗಲೂ ಅದೇ ನಡೆಯುತ್ತಿದೆಯೇ ಹೊರತು ನಮ್ಮ ಹಿತ ಕಾಪಾಡುವ ಮನಸ್ಸು ಮಾಡಿಲ್ಲ.

ವೇತನ ತಾರತಮ್ಯ, ಅಂತರ ನಿಗಮ ವರ್ಗಾವಣೆ ಸೇರಿದಂತೆ ಇನ್ನು ಅನೇಕ ಸೌಲಭ್ಯ ಕೊಡಿಸುವಲ್ಲಿ ವಿಫಲವಾದದ್ದು ಹಾಗೂ ಅನೇಕ ವರ್ಷದಿಂದ ಸಾರಿಗೆ ಸಂಘಟನೆಗಳ ಚುನಾವಣೆ ನಡೆಸಲು ಹಿಂದೇಟು ಹಾಕಿಕೊಂಡೆ ತಾವೇ ಯಾವಾಗಲು ಮುಂಚೂಣಿಯಲ್ಲಿ ನಿಂತು ನೌಕರರ ಬಾಯಿಸಿ ಮೊಸರು ಸವರಿ ಹೋಗಬೇಕು ಎಂದೂ ಮುಂದೆಯೂ ನಾವೇ ಇರಬೇಕು ಅಂತ ಯಾವ ಸಂಘಟನೆಯವರು ಚುನಾವಣೆ ನಡೆಸುವ ಬಗ್ಗೆ ಕೇಳಲು ಮುಂದೆ ಬರಲೇ ಇಲ್ಲ. ಆದರೆ ಈ ಎಲ್ಲ ಸಮಸ್ಯೆಗಳಿಗೆ ಇತಿಶ್ರೀ ಹಾಡಬೇಕು ಎಂದು ನಮ್ಮ ನೌಕರರೇ ಸೇರಿ ಹುಟ್ಟಿಹಾಕಿದ ಸಂಘಟನೆ ನಮಗೆ ಒಳಿತು ಬಹಿಸಲು ಹೋರಾಟಕ್ಕೆ ದುಮುಕಿತು.

ಆದರೆ ಆ ಹೋರಾಟದಲ್ಲಿ ಅನೇಕ ರೀತಿಯ ಅಡೆ ತಡೆಗಳು ಪಿತೂರಿಗಳನ್ನು ಮಾಡಿದ ಕೆಲ ಸಂಘಟನೆಗಳ ಮುಖಂಡರು ಅನೇಕ ನೌಕರರು ಕೆಲಸ ಕಳೆದುಕೊಂಡು, ಅಮಾನತಾಗಿ, ವರ್ಗಾವಣ, ಪೊಲೀಸ್‌ ಕೇಸ್‌ ಹೀಗೆ ಅನೇಕ ಸಮಸ್ಯೆಗಳನ್ನು ಅನುಭವಿಸುವಂತೆ ಮಾಡಿದರು. ಆದರೆ ಇದಾವುದಕ್ಕೂ ಎದೆಗುಂದದೆ ಈಗಲೂ ಹೋರಾಟ ಮಾಡುತ್ತಿದ್ದೇವೆ. ಈ ಹೋರಟದ ವೇಳೆ ಕೆಲ ಸಂಘಟನೆ ನಾಯಕರು ಹೂಡಿದ ಕುತಂತ್ರ ಜತೆಗೆ ಹೋರಾಟದಲ್ಲಿ ಭಾಗವಹಿಸಿದಂತೆ ನಟಿಸಿ ಜತೆಯಲ್ಲಿ ನಿಂತುಕೊಂಡು ನಮ್ಮ ಬೆನ್ನಿಗೆ ಚೂರಿ ಹಾಕಿ ಹೋದರು. ಇದು ಎಲ್ಲರಿಗೂ ಗೊತ್ತಿರುವ ವಿಷಯ.

ಇಷ್ಟೇಲ್ಲ ಆದರೂ ನೌಕರರಿಗೆ ಧೈರ್ಯ ತುಂಬಿ ಎಲ್ಲ ಸರಿಪಡಿಸುತ್ತೇವೆ ಅಂತ ಮತ್ತೆ ಹೋರಾಟದ ಹಾದಿ ಹಿಡಿದು ಅನೇಕ ಬಾರಿ ಸಾರಿಗೆ ಸಚಿವರನ್ನು ಭೇಟಿ ಮಾಡಿ ಅವರಿಗೆ ನೌಕರರ ಕಷ್ಟ ಮನವರಿಕೆ ಮಾಡಿದ ಮೇಲೆ ವರ್ಗಾವಣೆ ಆದಂತ ನಮ್ಮ ನೌಕರರು ಮಾತ್ರ ವಿಭಾಗಕ್ಕೆ ಬಂದು ಮತ್ತೆ ಕೆಲವು ತಿಂಗಳು ಕಳೆದ ನಂತರ ಮಾತೃ ಘಟಕಕ್ಕೆ ಮರಳಿರುತ್ತಾರೆ ಹಾಗೂ ವಜಾ ಆದ ಕೆಲವೊಂದಿಷ್ಟು ನೌಕರರು ಸಹ ಮರಳಿ ಕರ್ತವ್ಯಕ್ಕೆ ಹಾಜರಾಗಿದ್ದು ಆದರೆ ಇನ್ನು ಕೆಲವು ನೌಕರರು ಸಂಸ್ಥೆ ವಿಧಿಸಿದ ಷರತ್ತು ಒಪ್ಪಿಗೆ ಇಲ್ಲದೆ ಕಾನೂನು ಹೋರಾಟಕ್ಕೆ ಸಜ್ಜಾಗಿದ್ದಾರೆ.

ನಾವು ಯಾವುದೆ ತಪ್ಪು ಮಾಡದಿದ್ದರೂ ಸಹ ನಮ್ಮನ್ನು ವಜಾ ಮಾಡಿದ್ದೂ ನಾವು ನಮ್ಮ ಹಕ್ಕು ಕೇಳುವುದು ತಪ್ಪಾ. ಈವಾಗ ಮತ್ತೆ ಹೊಸದಾಗಿ ಜಾಯಿಂಟ್ ಮೆಮೊ ಬಿಟ್ಟಿದ್ದು ಅದರಲ್ಲಿ ಕೂಡ ನೌಕರರಿಗೆ ಯಾವುದು ಒಳ್ಳೇದು ಇಲ್ಲ. ಅದಕ್ಕಾಗಿ ತಾವುಗಳು ನಿರ್ಧಾರ ತೆಗೆದುಕೊಳ್ಳುವಾಗ ಸಾವಿರ ಸಾರಿ ವಿಚಾರ ಮಾಡಿ ಒಳ್ಳೆಯ ನಿರ್ಧಾರ ಮಾಡಿ. ಬೆಳಗಾವಿಯಲ್ಲಿ ಸಾರಿಗೆ ಸಚಿವರು ಯಾವುದೆ ಷರತ್ತು ಇಲ್ಲದೆ ಮರು ನೇಮಕ ಮಾಡಿಕೊಳ್ಳುತ್ತೇನೆ ಅಂತ ಹೇಳಿದ್ದರು. ಆದರೆ ನಮ್ಮ ಸಂಸ್ಥೆಯ ಕೆಲವೇ ಕೆಲವೊಂದು ಅಧಿಕಾರಿಗಳು ನೌಕರರ ಜತೆ ಜಿದ್ದಿಗೆ ಬಿದ್ದ ಹಾಗೆ ನಡೆದುಕೊಳ್ಳುತ್ತಿದ್ದಾರೆ.

ಆದರೆ ಮುಂದೊಂದು ದಿನ ನಮ್ಮ ನೌಕರರ ಹೆಂಡತಿ ಮಕ್ಕಳ ಶಾಪ ತಟ್ಟಿ ಪಡಬಾರದ ಕಷ್ಟ ಪಡುತ್ತಾರೆ. ಇದರಲ್ಲಿ ಯಾವುದೆ ಸಂದೇಹವಿಲ್ಲ. ಆದರೆ ಯಾವುದೋ ಕೆಲವೊಂದು ಸಂಘಟನೆಗಳು ಮಾಡುವ ಕೆಲಸಕ್ಕೆ ನೌಕರರ ಪಾಠ ಕಲಿಸುವ ಸಮಯ ದೂರವಿಲ್ಲ. ಸಂಘಟನೆಗಳಿಗೆ ನೇರವಾಗಿ ಹೇಳುವುದೇನೆಂದರೆ ಸಾರಿಗೆ ನೌಕರರಿಗೆ ಸರ್ಕಾರಿ ನೌಕರರ ಸರಿಸಮಾನ ವೇತನ ಕೊಡಿಸಲಿಕ್ಕೆ ಯಾಕೆ ನಿಮ್ಮ ವಿರೋಧ. ಸರಿಸಮಾನ ವೇತನ ಏನು ಸಂಘಟನೆಗಳು ಅವರಪ್ಪ ಮನೆಯಿಂದ ಕೊಡುವುದಿಲ್ಲ. ನಿಮ್ಮ ಕಡೆಯಿಂದ ಕೊಡಿಸಲಿಕ್ಕೆ ಆಗದಿದ್ದರೆ ಸುಮ್ಮನಿರಬೇಕು ಇಲ್ಲ ಅಂದರೆ ಬನ್ನಿ ಎಲ್ಲ ಡಿಪೋಗಳ ಮುಂದೆ. ಆವಾಗ ನಿಮ್ಮ ಹಣೆಬರಹ ಗೊತ್ತಾಗುತ್ತೆ.

ನಿಮ್ಮ ಯೋಗ್ಯತೆಗೆ 2016ರಲ್ಲಿ ವಜಾ ಆದ ವರ್ಗಾವಣೆ ಆದ ನೌಕರನ್ನು ಮರಳಿ ಮಾತೃ ಘಟಕಕ್ಕೆ ಯಾಕೆ ಕರೆಸಿಕೊಳ್ಳಲಿಲ್ಲ. ನಿಮಗೆ ನೌಕರರು ಯಾವತ್ತು ಕಷ್ಟದಲ್ಲಿ ಇರಬೇಕು ನಿಮಗೆ. ಅವರು ಯಾವತ್ತಿದ್ದರು ನಮ್ಮ ಹಿಂದೆ ಸುತ್ತಬೇಕು. ಅದೆ ನಿಮ್ಮ ಅಜೆಂಡಾ ಆದರೆ ಈಗಿನ ನೌಕರರು ಎಲ್ಲ ಹಳೆ ಸಂಘಟನೆಗಳಿಗೆ ಅಂತ್ಯ ಹಾಡುತ್ತಾರೆ. ಅಷ್ಟೆ ಅಲ್ಲದೆ ನೌಕರರಿಗೆ ಯಾರು ಮೋಸ ಮಾಡುತ್ತಾರೋ ಅವರಿಗೆ ಯಾವತ್ತು ಉಳಿಗಾಲ ಇಲ್ಲ ಅನ್ನೋದು ಎಲ್ಲ ಸಂಘಟನೆಗಳು ಅರಿಕೊಳ್ಳಬೇಕು.

ಇಂತಿ
l ನೊಂದ ನೌಕರ ಹೆಸರು ಬೇಡ

Leave a Reply

error: Content is protected !!
LATEST
ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ