ಬಳ್ಳಾರಿ: ತಮ್ಮ ನಾಯಕನ ಸೋಲಿಗೆ ಅಭಿಮಾನಿಗಳು ಬಿಕ್ಕಿ, ಬಿಕ್ಕಿ ಅತ್ತರೆ, ಅವರ ಕಣ್ಣಿರಿಗೆ ಮಾಜಿ ಸಚಿವ, ಗ್ರಾಮೀಣ ಕ್ಷೇತ್ರದ ಬಿಜೆಪಿಯ ಪರಾಜಿತ ಅಬವ್ಯರ್ಥಿ ಬಿ.ಶ್ರೀರಾಮುಲು ಸಹ ಭಾವುಕರಾಗಿದ್ದಾರೆ.
ಶ್ರೀರಾಮುಲು ಬಳಿ ನಿಮಗೆ ಅನ್ಯಾಯ ಮಾಡಿಬಿಟ್ಟೇವು ಎಂದು ಅಭಿಮಾನಿಗಳು ಅಳುತ್ತಿದ್ದಾರೆ. ಅಭಿಮಾನಿಗಳ ಸಮಾಧಾನ ಮಾಡಲು ಸಹ ಶ್ರೀರಾಮುಲು ಕೂಡ ಕ್ಷಣಕಾಲ ಗದ್ಗದಿತರಾಗಿ ಕಣ್ಣಿರು ಹಾಕಿದ್ದಾರೆ.
ಸೋಲಿನ ಬಳಿಕ ಸಹೋದರಿ ಜೆ. ಶಾಂತಾ ಮತ್ತಿತರ ಬೆಂಬಲಿಗರೊಂದಿಗೆ ಕ್ಷೇತ್ರದ ಮೋಕಾ ಮತ್ತಿತರ ಹಳ್ಳಿಗಳಲ್ಲಿ ತಮಗೆ ಮತ ನೀಡಿದ ಜನರ ಜತೆ ಸಮಾಲೋಚನೆ, ಸೋಲಿನ ಪರಾಮರ್ಶೆಗೆ ಹಳ್ಳಿಗಳ ಪ್ರವಾಸದಲ್ಲಿದ್ದಾರೆ.
ಮೂವತ್ತು ಸಾವಿರ ಅಂತರದಿಂದ ಶಾಸಕ ನಾಗೇಂದ್ರ ಅವರ ವಿರುದ್ಧ ಸೋತಿರುವ ಬಗ್ಗೆ ರಾಮುಲು ಅವರು ಸಹ ತೀವ್ರ ಖಿನ್ನತೆಗೆ ಒಳಗಾಗಿದ್ದಾರೆ. ಈ ನಡುವೆ ಆಗಿದ್ದು, ಆಗಿದೆ. ಬಂದುದ್ದನ್ನು ಎದರಿಸೋಣ, ಹೋರಾಟ ಮಾಡೋಣ ಎಂದು ಶ್ರೀರಾಮುಲು ಹೇಳಿದ್ದಾರೆ.
ಮೊದಲು 1999ರ ಚುನಾವಣೆಯ ರಾಜಕೀಯ ಆರಂಭಗೊಂಡು ಅಂದು ಮೊದಲಬಾರಿ ಸೋತರೂ ಅಷ್ಟು ನೋವಾಗಿರಲಿಲ್ಲ. ನಂತರ 2004ರಿಂದ ಈವರೆಗೆ ಸೋತಿರಲಿಲ್ಲ. 2004 ಬಳ್ಳಾರಿ ನಗರ, 2008, 2011ರ ಉಪಚುನಾವಣೆ 2013 ಚುನಾವಣೆಯಲ್ಲಿ ಬಳ್ಳಾರಿ ಗ್ರಾಮೀಣದಿಂದ ಗೆದ್ದಿದ್ದರು. 2014ರಲ್ಲಿ ಕ್ಷೇತ್ರ ಬಿಟ್ಟು ಎಂಪಿಯಾಗಿದ್ದ ಶ್ರೀರಾಮುಲು 2018ರಲ್ಲಿ ಮೊಳಕಾಲ್ಮೂರಿನಿಂದ ಗೆದ್ದಿದ್ದರು.
ಈ ಬಾರಿ ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ನಿಂತು ಕಾಂಗ್ರೆಸ್ ಅಭ್ಯರ್ಥಿ ನಾಗೇಂದ್ರ ಅವರ ವಿರುದ್ಧ ಸೋತು ಖಿನ್ನತೆಗೆ ಒಳಗಾಗಿದ್ದಾರೆ. ಹೀಗಾಗಿ ಅಭಿಮಾನಿಗಳು ಅವರ ಮುಂದೆ ಕಣ್ಣೀರು ಹಾಕುತ್ತಿದ್ದಾರೆ. ಅದನ್ನು ಕಂಡು ತಾನೂ ಕೂಡ ಕಣ್ಣಿರು ಹಾಕಿದ್ದಾರೆ ಶ್ರೀರಾಮುಲು. ಇನ್ನು ಇದಕ್ಕೆಲ್ಲ ಸಾರಿಗೆ ನೌಕರರ ಶಾಪವೇ ಕಾರಣ ಎಂದು ಅವರ ಪಕ್ಷದವರೇ ಹೇಳುತ್ತಿದ್ದಾರೆ.