ಕೆಎಸ್ಆರ್ಟಿಸಿ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಕುರಿತ ಸಂಪೂರ್ಣ ಮಾಹಿತಿ: https://ksrtcarogya.in/ 
ಬೆಂಗಳೂರು: ಮಾರ್ಚ್21ರಿಂದ ಏ.4ರವರೆಗೆ ರಾಜ್ಯದಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಇಂದು ಪ್ರಕಟವಾಗಿದ್ದು ಪರೀಕ್ಷೆ ಬರೆದ 8.40 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ 22 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದು ಇದರಲ್ಲಿ ಇಬ್ಬರು ಸರ್ಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಇದ್ದಾರೆ.
ಇಂದು ನಗರದ ಮೌಲ್ಯಮಾಪನ ಮಂಡಳಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರೌಢಶಾಲಾ ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರು ಈ ಬಾರಿ ಒಟ್ಟಾರೆ ಶೇ.62.34 ಫಲಿತಾಂಶ ಪ್ರಕಟವಾಗಿದೆ. ಅದರಲ್ಲಿ ಮೊದಲ ಬಾರಿಗೆ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಶೇ.66.10ರಷ್ಟು ಫಲಿತಾಂಶ ಪಡೆದುಕೊಂಡಿದ್ದಾರೆ.
ಇನ್ನು ಪ್ರತಿ ವರ್ಷದಲ್ಲೇ ಈ ಬಾರಿಯೂ ಕೂಡ ಹಣ್ಣುಮಕ್ಕಳೆ ಮೇಲುಗೈ ಸಾಧಿಸಿದ್ದಾರೆ. ಈ ಬಾರಿ ವಿಶೇಷ ಎಂದರೆ ಶೇ.60ಕ್ಕಿಂತ ಹೆಚ್ಚು ಅಂಕಪಡೆದು ಶೇ.70ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ ಎಂದು ತಿಳಿಸಿದರು.
ಫಲಿತಾಂಶವನ್ನು https://karresults.nic.in ಜಾಲತಾಣದಲ್ಲಿ ಮಧ್ಯಾಹ್ನ 12.30ರ ನಂತರ ವೀಕ್ಷಿಸಬಹುದಾಗಿದೆ.
ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ, ಉಡುಪಿ ಜಿಲ್ಲೆ 2ನೇ ಸ್ಥಾನ, ಉತ್ತರ ಕನ್ನೆ ಜಿಲ್ಲೆ 3ನೇ ಸ್ಥಾನ ಹಾಗೂ ಕಲಬುರಗಿ ಜಿಲ್ಲೆ ಕೊನೆಯ ಸ್ಥಾನ ಪಡೆದುಕೊಂಡಿದೆ.
ಇನ್ನು ಈ ಬಾರಿ ಅನುತ್ತೀರ್ಣಗೊಂಡಿರುವ ವಿದ್ಯಾರ್ಥಿಗಳಿಗೆ ಎರಡನೇ ಪರೀಕ್ಷೆಯನ್ನು ಇದೇ ಮೇ 26 ರಿಂದ ಜೂ.2ರವೆಗೆ ನಡೆಸಲಾಗುವುದು. ಅದರಂತೆ ಮೂರನೇ ಪರೀಕ್ಷೆಯನ್ನು ಜೂ.23ರಿಂದಜೂ.30ರವರೆಗೆ ನಡೆಸಲಾಗುವುದು. ಈ ಪರೀಕ್ಷೆಗಳಿಗೆ ಹಾಜರಾಗುವ ಮಕ್ಕಳಿಗೆ ಯಾವುದೇ ಶುಲ್ಕ ಇರುವುದಿಲ್ಲ ಹೀಗಾಗಿ ಅನುತ್ತೀರ್ಣರಾದ ಮಕ್ಕಳು ಮತ್ತೆ ಪರೀಕ್ಷೆಗೆ ಸಿದ್ಧರಾಗಿ ಎಂದು ತಿಳಿಸಿದ್ದಾರೆ.

ಮಂಡಲಿಯ ಅಧ್ಯಕ್ಷ ಎಚ್.ಬಸವರಾಜೇಂದ್ರ ಮತ್ತಿತರರು ಇದ್ದರು.
Related
