NEWSನಮ್ಮಜಿಲ್ಲೆನಮ್ಮರಾಜ್ಯ

BMTC: ಏಪ್ರಿಲ್‌ ತಿಂಗಳ ವೇತನದೊಂದಿಗೆ ತುಟ್ಟಿಭತ್ಯೆ ಹಿಂಬಾಕಿ ಪಾವತಿಸಲು ಆದೇಶ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಅಧಿಕಾರಿ/ಸಿಬ್ಬಂದಿಗಳಿಗೆ ಏಪ್ರಿಲ್‌ ತಿಂಗಳ ವೇತನದೊಂದಿಗೆ ಮಾರ್ಚ್‌ 2023ರ ಬಾಕಿ 1 ತಿಂಗಳ ತುಟ್ಟಿಭತ್ಯೆ ಹಿಂಬಾಕಿ ಪಾವತಿಸಲು ಸೂಕ್ತಾಧಿಕಾರಿಗಳು ಇಂದು ಆದೇಶ ಹೊರಡಿಸಿದ್ದಾರೆ.

ತುಟ್ಟಿಭತ್ಯೆ ಹಿಂಬಾಕಿ ಮೊತ್ತವನ್ನು ಪಾವತಿಸುವ ಕುರಿತು ಆದೇಶ ಹೊರಡಿಸಿರುವ ನಿಗಮದ ಮುಖ್ಯಲೆಕ್ಕಾಧಿಕಾರಿಗಳು, ತುಟ್ಟಿಭತ್ಯೆ ಹಿಂಬಾಕಿ ಪಾವತಿಯನ್ನು ಮುಂದಿನ ದಿನಗಳಲ್ಲಿ ಪ್ರತ್ಯೇಕ ಆದೇಶ ಹೊರಡಿಸಲಾಗುವುದು ಎಂದು ಆದೇಶಿಸಿ ಕಾಯ್ದಿರಿಸಲಾಗಿತ್ತು.

ಅದರಂತೆ ಇಂದು ಅಂದರೆ ಮೇ 2ರಂದು ಸಮಸ್ತ ಸಿಬ್ಬಂದಿಗಳ ಹಿತದೃಷ್ಠಿಯಿಂದ ಸಂಸ್ಥೆಯ ಅಧಿಕಾರಿ/ಸಿಬ್ಬಂದಿಗಳಿಗೆ ಮಾರ್ಚ್‌-2023ರ ಮಾಹೆಯ ಒಂದು ತಿಂಗಳ ಶೇ.4 ತುಟ್ಟಿಭತ್ಯ ಹಿಂಬಾಕಿ ಮೊತ್ತ ಏಪ್ರಿಲ್‌ -2025ರ ವೇತನದೊಂದಿಗೆ ಸೇರಿಸಿ ಪಾವತಿಸಲಯ ಸೂಕ್ತಾಧಿಕಾರಿಗಳು ಅನುಮೋದಿಸಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ನು ಈ ಹಿಂದೆ ಅಂದರೆ ಕಳೆದ 2024ರ ಡಿಸೆಂಬರ್‌ 24ರಂದು ನೌಕರರಿಗೆ 7 ತಿಂಗಳ ತುಟ್ಟಿಭತ್ಯೆ ಹಿಂಬಾಕಿಯನ್ನು ಪಾವತಿಸಲಾಗಿತ್ತು. ಅಂದು ಜುಲೈ-2022 ರಿಂದ ನವೆಂಬರ್-2022 ನೇ ಮಾಹೆಯವರೆಗಿನ 05 ತಿಂಗಳಿನ 3.75% ತುಟ್ಟಿಭತ್ಯೆ ಹಿಂಬಾಕಿ ಮೊತ್ತ ಹಾಗೂ ಜನವರಿ- 2023 ರಿಂದ ಜುಲೈ-2023 ರ ವರೆಗಿನ 07 ತಿಂಗಳು ತುಟ್ಟಿಭತ್ಯೆ ಹಿಂಬಾಕಿಯಲ್ಲಿ ಜನವರಿ-2023 ಹಾಗೂ ಫೆಬ್ರವರಿ- 2023ರ ಎರಡು ತಿಂಗಳಿನ 4% ತುಟ್ಟಿಭತ್ಯೆ ಹಿಂಬಾಕಿ ಮಾತ್ರ (ಒಟ್ಟಾರೆ 07 ತಿಂಗಳಿನ ತುಟ್ಟಿಭತ್ಯೆ ಹಿಂಬಾಕಿ ಮಾತ್ರ) 24.12.2024 ರಂದು ಇ.ಸಿ.ಎಸ್ ಮೂಲಕ ಪಾವತಿಸಲಾಗಿತ್ತು.

ಇನ್ನು ಜನವರಿ- 2023 ರಿಂದ ಜೂನ್‌ -2023 ರ ವರೆಗಿನ 06 ತಿಂಗಳ ಶೇ.4 ತುಟ್ಟಿಭತ್ಯೆ ಹಿಂಬಾಕಿಯಲ್ಲಿ ಜನವರಿ-2023 ಹಾಗೂ ಫೆಬ್ರವರಿ- 2023ರ ಎರಡು ತಿಂಗಳಿನ ಹಿಂಬಾಕಿ ಮಾತ್ರ ಪಾವತಿಸಲು ಆದೇಶ ಹೊರಡಿಸಿದ್ದರು. ಉಳಿದ 4 ತಿಂಗಳ ಹಿಂಬಾಕಿ ಪಾವತಿ ಬಗ್ಗೆ ಯಾವುದೇ ಹೇಳಿಕೆ ನೀಡಿರಲಿಲ್ಲ.

ಇನ್ನು ಈಗ ಏಪ್ರಿಲ್‌ ತಿಂಗಳಿನ ವೇತನದೊಂದಿಗೆ 2023ರ ಮಾರ್ಚ್‌ ತಿಂಗಳ ಹಿಂಬಾಕಿಯನ್ನಷ್ಟೇ ಪಾವತಿಸಲು ಆದೇಶ ಹೊರಡಿಸಿದ್ದು ಉಳಿದ ಏಪ್ರಿಲ್‌, ಮೇ ಹಾಗೂ ಜೂನ್‌ -2023ರ ತುಟ್ಟಿಭತ್ಯ ಹಿಂಬಾಕಿ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ಆದರೆ ಏಪ್ರಿಲ್‌ ತಿಂಗಳ ವೇತನದೊಂದಿಗೆ 2023ರ ಮಾರ್ಚ್‌ ತಿಂಗಳ ಡಿಎ ಪಾವತಿ ಮಾಡಲು ಆದೇಶಿಸಿದ್ದು, ಈ ಸಂಬಂಧ ಎಲ್ಲ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಕಾರ್ಯ ವ್ಯವಸ್ಥಾಪಕರು, ನಿಲ್ದಾಣಾಧಿಕಾರಿಗಳು, ಹಿರಿಯ/ ಘಟಕ ವ್ಯವಸ್ಥಾಪಕರು. ಆಪ್ತ ಕಾರ್ಯದರ್ಶಿ, ನಿರ್ದೇಶಕರು, ಆಪ್ತ ಕಾರ್ಯದರ್ಶಿ, ನಿರ್ದೇಶಕರು(ಭ&ಜಾ), ಎಲ್ಲ ಇಲಾಖಾ ಮುಖ್ಯಸ್ಥರಿಗೆ ಮಾಹಿತಿಗಾಗಿ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

Deva
the authorDeva

Leave a Reply

error: Content is protected !!
Latest news
NWKRTC: ಧಾರವಾಡ ಗ್ರಾ.ವಿಭಾಗದ ನಿವೃತ್ತ ಅಧಿಕಾರಿಗಳಿಗೆ ಹೃದಯಸ್ಪರ್ಷಿ ಬೀಳ್ಕೊಡುಗೆ KSRTC: ಮೂರು ದಶಕಗಳ ಸುದೀರ್ಘ ಸೇವೆ ಬಳಿಕ ಸಂಸ್ಥೆಯ ಬಸ್‌ ಚಾಲಕ ನಿವೃತ್ತಿ-  ಮರೆಯಲಾಗದ ಸಂದರ್ಭ ಸೆರೆ! ಇಂಧನ, ಗ್ಯಾಸ್ ಬೆಲೆಯೇರಿಕೆ, ವಿದ್ಯುತ್ ಖಾಸಗೀಕರಣ ವಿರೋಧಿಸಿ ರಾರೈಸಂ ಪ್ರತಿಭಟನೆ -ಸರ್ಕಾರಗಳ ವಿರುದ್ಧ ಘೋಷಣೆ KKRTC: ಬಸ್ ನಿಲ್ದಾಣದಲ್ಲಿ ಮಹಿಳೆ ಜತೆ ಅನುಚಿತ ವರ್ತನೆ-ಕಿಡಿಗೇಡಿಗೆ ಚಪ್ಪಲಿ ಏಟು ಪ್ರಮಾಣ ವಚನ ಸ್ವೀಕಾರಕ್ಕೆ ಮುಹೂರ್ತ ಫಿಕ್ಸ್ – ಜೂ.3ರಂದು ನೂತನ ಸಿಎಂಆಗಿ ಗದ್ದುಗೆ ಏರಲಿರುವ ಡಿ.ಕೆ.ಶಿವಕುಮಾರ್‌ ಪೆಟ್ರೋಲ್‌, ಡೀಸೆಲ್‌ ಬಳಿಕ CNG ದರದಲ್ಲೂ ಏರಿಕೆ- ಎರಡನೇ ಬಾರಿಗೆ 2ರೂ. ಹೆಚ್ಚಳ -ಗ್ರಾಹಕರಿಗೆ ಶಾಕ್‌ ಕೊಟ್ಟ MGL ಆದೇಶ ಕಾಯ್ದಿರಿಸಿದ 3 ತಿಂಗಳೊಳಗಾಗಿ ಎಲ್ಲ ಕೋರ್ಟ್‌ಗಳಲ್ಲೂ ಅಂತಿಮ ತೀರ್ಪು ಹೊರಬೀಳಬೇಕು: ಸುಪ್ರೀಂ ಮಹತ್ವದ ಆದೇಶ ಗೃಹಲಕ್ಷ್ಮಿ ಹಣ ಮೃತರ ಖಾತೆಗೆ ಜಮೆ ಆಗದಂತೆ ನೋಡಿಕೊಳ್ಳಿ: ಅಧಿಕಾರಿಗಳಿಗೆ ಗ್ಯಾರಂಟಿ ಯೋಜನೆ ಅಧ್ಯಕ್ಷ ತಾಕೀತು ವಿದ್ಯುತ್ ಗ್ರಾಹಕರಿಗೆ ಗುಡ್‌ನ್ಯೂಸ್‌: ಬಿಲ್‌ಗಳಿಗೆ ಕನಿಷ್ಠ 15 ದಿನಗಳ ಪಾವತಿ ಅವಧಿ ಕಡ್ಡಾಯ ಮಾಡಿ KERC ಆದೇಶ- ಜೂನ್‌... BMTC KSRTC ನಿವೃತ್ತ ನೌಕರರ ಪ್ರತಿಭಟನೆ: ಕನಿಷ್ಠ ಪಿಂಚಣಿ 7500 ರೂ. ನೀಡಲು ಆಗ್ರಹ