ತಿ.ನರಸೀಪುರ: ಕೇಂದ್ರ ಸರ್ಕಾರ ವಿದ್ಯುತ್ ಖಾಸಗೀಕರಣದ ಬಗ್ಗೆ ತೆಗೆದುಕೊಂಡಿರುವ ತೀರ್ಮಾನ ಗ್ರಾಮೀಣ ಬಡ ಜನರ ಹಾಗೂ ರೈತದ್ರೋಹಿ ತೀರ್ಮಾನ ವಾಗಲಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ಖಂಡಿಸಿದ್ದಾರೆ.
ವಿದ್ಯುತ್ ಉತ್ಪಾದನೆಯನ್ನು ಖಾಸಗಿ ಕಂಪನಿಗಳು ನಿರ್ವಹಣೆ ಮಾಡಿದರೆ ದೇಶದ ಗ್ರಾಮೀಣ ಬಡ ಜನರು ಕಗ್ಗತ್ತಲಿಗೆ ಸಿಲುಕಲಿದ್ದಾರೆ ಹಾಗೂ ರೈತರು ಕೃಷಿ ಚಟುವಟಿಕೆ ನಡೆಸಲು ಅಸಾಧ್ಯವಾಗಲಿದೆ, ಕೃಷಿ ಚಟುವಟಿಕೆ ಕುಂಠಿತವಾಗುತ್ತದೆ. ಉಚಿತ ವಿದ್ಯುತ್ ಬಳಕೆ ಮಾಡಿಯೂ ಲಾಭವಿಲ್ಲದೆ ರೈತರು ಕೃಷಿಯಿಂದ ದೂರವಾಗುತ್ತಿದ್ದಾರೆ ಎಂದು ಹೇಳಿದ್ದಾರೆ.
ಬಡ ಜನತೆಗೆ ಭಾಗ್ಯ ಜೊತಿ, ಕುಟೀರ ಜ್ಯೋತಿ ಇತ್ಯಾದಿ ವಿದ್ಯುತ್ ಸೌಲಭ್ಯ ಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಖಾಸಗೀಕರಣ ಮಾಡಿದರೆ ನಾವು ಫೋನ್ ಮತ್ತು ಟಿವಿ ಚಾನಲ್ ಗಳಿಗೆ ಕರೆನ್ಸಿ ಹಾಕಿಸುವ ರೀತಿಯಲ್ಲಿ ಪಂಪ್ ಸೆಟ್, ಗೃಹ ಬಳಕೆಗೆ ಮುಂಗಡ ಹಣ ನೀಡಿ ವಿದ್ಯುತ್ ಬಳಕೆ ಮಾಡಲು ಅಸಾಧ್ಯ. ಆದ್ದರಿಂದ ಸರ್ಕಾರ ವಿದ್ಯುತ್ ಖಾಸಗೀಕರಣ ನಿರ್ಧಾರವನ್ನು ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ಸರ್ಕಾರ ಖಾಸಗೀಕರಣದ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಮುಂದಿನ ದಿನಗಳಲ್ಲಿ ವಿದ್ಯುತ್ ಬಳಕೆ ದಾರರು, ರೈತರು ಹಾಗೂ ರೈತಪರ ಸಂಘಟನೆಗಳಿಂದ ಉಗ್ರ ಪ್ರತಿಭಟನೆ ಎದುರಿಸ ಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.