CrimeNEWSನಮ್ಮರಾಜ್ಯ

ಪ್ರಜ್ವಲ್ ರೇವಣ್ಣನ ಪಕ್ಷದಿಂದ ಅಮಾನತು ಮಾಡಿ: ಎಚ್‌ಡಿಡಿಗೆ ಶಾಸಕ ಶರಣಗೌಡ ಕಂದಕೂರ ಒತ್ತಾಯ

ವಿಜಯಪಥ ಸಮಗ್ರ ಸುದ್ದಿ

ಯಾದಗಿರಿ: ಅಶ್ಲೀಲ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್ ರೇವಣ್ಣನನ್ನು ಜೆಡಿಎಸ್ ಪಕ್ಷದಿಂದ ಅಮಾನತು ಮಾಡಬೇಕು ಎಂದು ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಶಾಸಕ ಶರಣಗೌಡ ಕಂದಕೂರ ಒತ್ತಾಯ ಮಾಡಿದ್ದಾರೆ.

ಈ ಸಂಬಂಧ ಪಕ್ಷದ ವರೀಷ್ಠ ಎಚ್.ಡಿ.ದೇವೇಗೌಡ ಅವರಿಗೆ ಪತ್ರ ಬರೆದಿದ್ದು, ಅತ್ಯಂತ ಹಿರಿಯರಾದ ತಮಗೆ ನಾನು‌ ಸಲಹೆ ‌ಕೊಡುವಷ್ಟು ದೊಡ್ಡವನಲ್ಲ. ನಾನು ಪತ್ರ ಬರೆದು ನನ್ನ ಅಂತರಾಳದ ಅಭಿಪ್ರಾಯವನ್ನು ಮುಕ್ತ ಮನಸ್ಸಿನಿಂದ ವ್ಯಕ್ತಪಡಿಸ್ತಿದ್ದೇನೆ ಎಂದು ಹೇಳುತ್ತಾ ಮನವಿ ಮಾಡಿದ್ದಾರೆ.

ಪತ್ರದಲ್ಲಿ ಏನಿದೆ?: ಕೆಲದಿನಗಳಿಂದ ರಾಜ್ಯಾದ್ಯಂತ ಹರಿದಾಡ್ತಿರುವ ಕೆಲ ಅಶ್ಲೀಲ ವಿಡಿಯೋ ಪಕ್ಷಕ್ಕೆ ಮುಜುಗರ ಉಂಟು ಮಾಡಿದೆ. ಆ ವಿಡಿಯೋದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಕಾಣಿಸಿಕೊಂಡಿದ್ದಾರೆ. ಮೇಲ್ನೋಟಕ್ಕೆ ಪ್ರಜ್ವಲ್ ರೇವಣ್ಣ ತಪ್ಪಿಸ್ಥರೆಂಬ ಭಾವನೆ ಉಂಟಾಗಿದೆ. ಹೀಗಾಗಿ ಕೂಡಲೇ ಅವರನ್ನು ಪಕ್ಷದಿಂದ ಅಮಾನತು ‌ಮಾಡಬೇಕು.

ಪ್ರಧಾನಿಯಾದ ಮೊದಲ ಕನ್ನಡಿಗ ಎಂಬ ಅಭಿಮಾನ ತಮ್ಮದಾಗಿದೆ. ಹೆಣ್ಣು ಸಾಕ್ಷಾತ್‌ ಕಪಿಲ ಸಿದ್ದರಾಮ ಮಲ್ಲಿಕಾರ್ಜುನ ಎಂಬ ಶರಣರ ವಾಣಿಯಂತೆ ಹೆಣ್ಣು ಮಕ್ಕಳನ್ನ ಅತ್ಯಂತ ಗೌರವದಿಂದ ನೋಡಿಕೊಂಡು ಬಂದಿದ್ದೀರಿ. ತಮ್ಮ ಪಕ್ಷದ ಚಿಹ್ನೆಯೂ ತೆನೆ ಹೊತ್ತ ಮಹಿಳೆಯಾಗಿದ್ದು, ನಿಮಗೆ ಮಹಿಳೆಯರ ಮೇಲಿರುವ ಗೌರವವನ್ನ ಇದು ಪ್ರತಿನಿಧಿಸುತ್ತದೆ ಎಂದು ಎಲ್ಲರೂ ಭಾವಿಸಿರುತ್ತಾರೆ.

ಈ ಎಲ್ಲ ಹಿನ್ನೆಲೆಯಲ್ಲಿ ಪರಂಪರೆ ಹೊಂದಿರುವ ಪಕ್ಷಕ್ಕೆ ವಿಡಿಯೋ ಪ್ರಕರಣ ತೀವ್ರ ಮುಜುಗರ ತಂದಿರುವುದಂತೂ ಸುಳ್ಳಲ್ಲ. ತಾವು ಪಕ್ಷದಲ್ಲಿ ಆಂತರಿಕ ಸಮಿತಿ ರಚನೆ ಮಾಡಿ. ತಾಯಂದಿರಿಗೆ ಅದರ ಸತ್ಯ ಗೊತ್ತು ಮಾಡುವಂತಾಗಲಿ ಎಂದು ಉಲ್ಲೇಖಿಸಿದ್ದಾರೆ.

Leave a Reply

error: Content is protected !!
LATEST
KSRTC : ಗಣಪತಿ ಪ್ರತಿಷ್ಠಾಪಿಸಿದ್ದರಿಂದ ಡಿಪೋ ಮುಂದೆ ಚಾಲಕ ರವಿ ಪಾರ್ಥಿವ ಶರೀರ ಇಡಲಾತ್ತು, ಪ್ರಮಾದವಾಗಿಲ್ಲ- ಡಿಎಂ ಸಮ... 10 ವರ್ಷದ ಆಧಾರ್‌ ನವೀಕರಣಕ್ಕೆ ಡೆಡ್‌ಲೈನ್‌ ಫಿಕ್ಸ್‌: ನಾಳೆ ಅಂತಿಮ ಗಡುವು- ಬಳಿಕ ದಂಡ ನಾಗಮಂಗಲ ಕೋಮುಗಲಭೆ ಪ್ರಕರಣ: ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್ ಅಮಾನತು KSRTC ಸಿಬ್ಬಂದಿಯಿಂದಲೇ ಡಿಸಿಗೆ ಇರಿಯಲು ಯತ್ನ- ಕೈ ಅಡ್ಡಹಾಕಿ ಪ್ರಾಣಾಪಾಯದಿಂದ ಪಾರಾದ ಜಗದೀಶ್ ಕುಮಾರ್‌ "ARM" ಸಿನಿಮಾ ಇಂದು ಪ್ರಪಂಚದಾದ್ಯಂತ ಐದು ಭಾಷೆಗಳಲ್ಲಿ ಬಿಡುಗಡೆ ಸೆ.14ರಂದು ಸಾರಿಗೆ ಸಿಬ್ಬಂದಿಗಳಿಗೆ ಔಷಧೀಯ ಸಸ್ಯಗಳ  ಉಚಿತ ವಿತರಣೆ: ಅಧಿಕಾರಿಗಳು ಭಾಗಿ ಟೊವಿನೋ ಥಾಮಸ್ ಸಿನಿಮಾ ವಿತರಿಸಲಿದೆ ಹೊಂಬಾಳೆ ಫಿಲ್ಮ್! ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌ ಬಂಧನ ಅವಧಿ ಮತ್ತೆ ಒಂದು ದಿನ ವಿಸ್ತರಣೆ KSRTC ಚಿಕ್ಕಮಗಳೂರು: ಘಟಕದ ಗೇಟ್‌ ಬಳಿ ತ್ಯಾಜ್ಯಗಳ ನಡುವೆ ಚಾಲಕನ ಪಾರ್ಥಿವ ಶರೀರವಿಟ್ಟು ಅಂತಿಮ ದರ್ಶನಕ್ಕೆ ವ್ಯವಸ್ಥೆ-... ವಾಲ್ಮೀಕಿ ಹಗರಣ: ಬಳ್ಳಾರಿಯಿಂದ ಬಿಜೆಪಿ ಪಾದಯಾತ್ರೆ - ಛಲವಾದಿ ನಾರಾಯಣಸ್ವಾಮಿ