NEWSಕ್ರೀಡೆದೇಶ-ವಿದೇಶ

ಸೆಕ್ಸ್‌ಗೆ ಕ್ರೀಡೆಯ ಮಾನ್ಯತೆ ಕೊಟ್ಟ ಸ್ವೀಡನ್‌: ಜೂ. 8ಕ್ಕೆ ಪ್ರಥಮ ಯೂರೋಪಿಯನ್ ಸೆಕ್ಸ್ ಚಾಂಪಿಯನ್‌ಶಿಪ್ ಪಂದ್ಯ!

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಸ್ವೀಡನ್: ಸೆಕ್ಸ್‌ ಎಂದರೆ ಸಂಪ್ರದಾಯಸ್ಥರು ಸೇರಿದಂತೆ ಪ್ರತಿಯೊಬ್ಬರೂ ನೇರವಾಗಿ ಆ ಬಗ್ಗೆ ಮಾತನಾಡುವುದಕ್ಕೆ ಮುಜುಗರಪಡುತ್ತಾರೆ. ಇದರ ನಡುವೆಯೂ ಲೈಂಗಿಕತೆಯನ್ನು ಕ್ರೀಡೆಯಾಗಿ ಸ್ವೀಡನ್ ದೇಶ ನೋಂದಾಯಿಸಿಕೊಂಡಿರುವ ಮೊದಲ ದೇಶವಾಗಿದೆ.

ಹೀಗಾಗಿ ಇದೇ ಜೂನ್‌ 8ರಂದು ಯೂರೋಪಿಯನ್ ಸೆಕ್ಸ್ ಚಾಂಪಿಯನ್ ಶಿಪ್ ಆಯೋಜಿಸಿದ್ದು, ಈ ಪಂದ್ಯ ಗೋಥೆನ್‌ಬರ್ಗ್‌ನಲ್ಲಿ ನಡೆಯಲಿದೆ.

ಸೆಕ್ಸ್ ಚಾಂಪಿಯನ್ ಶಿಪ್ 16 ವಿಭಾಗಗಳಲ್ಲಿ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಸೆಕ್ಸ್ ಚಾಂಪಿಯನ್​ಶಿಪ್ ಸ್ಪರ್ಧೆಯಲ್ಲಿ ಭಾಗವಹಿಸುವುದಾಗಿ ಈಗಾಗಲೇ ವಿವಿಧ ಯುರೋಪಿಯನ್ ದೇಶಗಳ 20 ಪ್ರತಿನಿಧಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಸ್ಪರ್ಧೆಯಲ್ಲಿ ವಿಜೇತರು ಯಾರೆಂಬುದನ್ನು ಮೂವರು ತೀರ್ಪುಗಾರರು ಮತ್ತು ಪ್ರೇಕ್ಷಕರ ರೇಟಿಂಗ್‌ ಮೂಲಕ ನಿರ್ಧರಿಸಲಾಗುತ್ತದೆ. ಅಂತಿಮವಾಗಿ ಪ್ರೇಕ್ಷಕರಿಂದ 70% ಮತಗಳನ್ನು ಪರಿಗಣಿಸಲಾಗುತ್ತದೆ. ಉಳಿದ 30% ಮತಗಳನ್ನು ತೀರ್ಪುಗಾರರು ನೀಡುತ್ತಾರೆ ಎನ್ನಲಾಗುತ್ತಿದೆ.

ಸ್ವೀಡಿಷ್ ಫೆಡರೇಶನ್ ಆಫ್ ಸೆಕ್ಸ್‌ನ ಅಧ್ಯಕ್ಷ ಡ್ರ್ಯಾಗನ್ ಬ್ರಾಟಿಚ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಲೈಂಗಿಕತೆಯನ್ನು ಕ್ರೀಡೆಯಾಗಿ ಪರಿವರ್ತಿಸುವುದು ಅನಿವಾರ್ಯ. ಇದು ಗಂಡು ಮತ್ತು ಹೆಣ್ಣಿನ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಉತ್ತೇಜಿಸುತ್ತದೆ ಎಂದು ಹೇಳಿಕೊಂಡಿದ್ದಾರೆ.

Leave a Reply

error: Content is protected !!
LATEST
KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ ದೀಪಾವಳಿ ಹಬ್ಬ ಹಿನ್ನೆಲೆ KKRTC ನೌಕರರಿಗೆ ಅ.29ರಂದೇ ವೇತನ ಕೊಡಲು ಎಂಡಿ ರಾಚಪ್ಪ ನಿರ್ದೇಶನ