KSRTC ನೌಕರರಿಗೆ ವೇತನ ಹೆಚ್ಚಳ ಮಾಡಿ ಅಂಬೇಡ್ಕರರ ಗೌರವಿಸಿ- ಸಿಎಂ ಸಿದ್ದ ರಾಮಯ್ಯಗೆ ಸಂಚಾರ ನಿಯಂತ್ರಕರ ಆಗ್ರಹ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ತಾವು ಮುಖ್ಯಮಂತ್ರಿಯಾಗಿ ಎರಡೂವರೆ ವರ್ಷ ಪೂರೈಸಿರುವಿರಿ. ಸಂವಿಧಾನ ದಿನಾಚರಣೆಯ ಸಂದರ್ಭದಲ್ಲಿ ತಾವೇ ಉವಾಚಿಸಿರುವಂತೆ ಸ್ವಾತಂತ್ರ್ಯ , ಸಮಾನತೆ, ಭ್ರಾತೃತ್ವದ ಆಶಯಗಳನ್ನು ನೀಡಿದ ಅಂಬೇಡ್ಕರ್ ಅವರಂತೆ ತಾವು ನಡೆದುಕೊಳ್ಳುತ್ತಿರುವಿರಾ?

ಕ.ವಿ.ಪ್ರ.ಮಂಡಳಿಗೊಂದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೊಂದು ಸಂವಿಧಾನ ವಿದೆಯೇ? ಎಲ್ಲಿ ಹೋಯಿತು ಸಮಾನತೆ 2020 ರಿಂದ ಪರಿ ಪರಿಯಾಗಿ ಬೇಡಿದರೂ ಸಹ ಬಾಕಿ ವೇತನ ಪರಿಷ್ಕರಣೆ/ ಕ.ವಿ.ಪ್ರ.ಮಂಡಳಿಯವರಿಗೆ ನೀಡುತ್ತಿರುವ ಸರಿಸಮಾನ ವೇತನ ನೀಡಲು ನಿಮಗೇನಾಗಿದೆ?
ಕೆಎಸ್‌ಆರ್‌ಟಿಸಿ ನೌಕರರಿಗೆ ಅಂಬೇಡ್ಕರ್ ಸಂವಿಧಾನ ಅನ್ವಯಿಸುವುದಿಲ್ಲವೇ? ಮನುವಾದಿ ನೀವು, ನಿಮ್ಮ ಸರಕಾರ. ಅಂಬೇಡ್ಕರ್ ವಿರೋಧಿ ನೀವು. ನೀವು ನಿಜವಾಗಿಯೂ ಅಂಬೇಡ್ಕರ್ ಸಂವಿಧಾನ ಅಧ್ಯಯನ ಮಾಡಿದ್ದರೆ ಮೊದಲು ಸಾರಿಗೆ ನೌಕರರಿಗೆ ಕ.ವಿ.ಪ್ರ.ಮಂ. ನೌಕರರಿಗೆ ನೀಡುತ್ತಿರುವ ಸರಿ ಸಮಾನವೇತನ ನೀಡಿ.
ಇದರ ಜತೆಗೆ ವೇತನ ಪರಿಷ್ಕರಣೆಯ ಬಾಕಿ ಮೊಬಲಗು ಕೂಡಲೇ ಬಿಡುಗಡೆ ಮಾಡುವ ಮೂಲಕ ಅಂಬೇಡ್ಕರ್ ಅವರನ್ನು ಗೌರವಿಸಿ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಸಂಚಾರ ನಿಯಂತ್ರಕರೊಬ್ಬರು ಒತ್ತಾಯಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ನಿನ್ನೆ ಸಮಾಜ ಕಲ್ಯಾಣ ಇಲಾಖೆಯು ಡಾ.ಬಿ.ಆರ್. ಅಂಬೇಡ್ಕರ್ ಭವದಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ-2025 ಉದ್ಘಾಟಿಸಿ ಮಾತನಾಡಿದರು.
ಈ ವೇಳೆ ಸಂವಿಧಾನ ವಿರೋಧಿ ಮನುವಾದಿಗಳ ಗುರುತಿಸಿ ಎಂದು ಹೇಳಿದ್ದರು. ಅಲ್ಲದೆ ಮನುವಾಧಿಗಳು ಸಂವಿಧಾನವನ್ನು ವಿರೋಧಿಸುತ್ತಾರೆ ಎಂದು ಹೇಳಿದ್ದರು. ತಾವು ಹೇಳಿರುವಂತ ನಡೆದುಕೊಂಡು ಸಾರಿಗೆ ನೌಕರರಿಗ ಸರಿ ಸಮಾನ ವೇತನ ಜಾರಿ ಮಾಡುವ ಮೂಲಕ ಸಂವಿಧಾನಕ್ಕೆ ಬದ್ಧರಾಗಿರಿ ಎಂದು ಆಗ್ರಹಿಸಿದ್ದಾರೆ.
Related









