NEWSVideosವಿಡಿಯೋ

KSRTC ನೌಕರರ ವೇತನ ಕುರಿತು ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಒಕ್ಕೂಟದ ಸಭೆಯೂ ವಿಫಲ ಮತ್ತೆ ಡಿ.5ಕ್ಕೆ ನಿಗದಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು/ನೌಕರರ ವೇತನ ಹೆಚ್ಚಳ ಸಂಬಂಧ ಇಂದು ಸಂಜೆ ವಿಧಾನಸೌಧದಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ನಡೆದ KSRTC ನೌಕರರ ಒಕ್ಕೂಟದ ಪದಾಧಿಕಾರಿಗಳ ಸಭೆಯಲ್ಲಿಯೂ ಯಾವುದೇ ಅಂತಿಮ ತೀರ್ಮಾನವಾಗದೆ ವಿಫಲಗೊಂಡಿದೆ.

ಮತ್ತೆ ಡಿಸೆಂಬರ್‌ 5ರಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೆ ಪದಾಧಿಕಾರಿಗಳ ಸಭೆ ಆಯೋಜಿಸುವಂತೆ ಸಿಎಂ ತಿಳಿಸಿದ್ದಾರೆ ಅಂದು ಮತ್ತೆ ಚರ್ಚೆಯಾಗಿಲಿದೆ ಎಂದು ಒಕ್ಕೂಟದ ಮುಖಂಡರು ಮಾಧ್ಯಮದವರಿಗೆ ತಿಳಿಸಿದ್ದಾರೆ.

ಸಭೆಯಲ್ಲಿ ಏನಾಯಿತು?: ನಮಗೆ 2020 ಜನವರಿ 1ರಿಂದ ಶೇ.15ರಷ್ಟು ಆಗಿರುವ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿಯನ್ನು ಕೊಡಿ ಮತ್ತೆ 2024 ಜನವರಿ 1ರಿಂದಲೇ ಸರಿಸಮಾನ ವೇತನ ಜಾರಿ ಮಾಡಿ ಎಂದು ಸಭೆಯಲ್ಲಿ ಒತ್ತಾಯಿಸಿದ್ದೇವೆ ಎಂದು ತಿಳಿಸಿದರು.

ಇನ್ನು ಮನಗೆ ಈ ನಾಲ್ಕು ವರ್ಷಕ್ಕೊ ಆಗುತ್ತಿರುವ ಜಂಜಾಟ ಬೇಡ ಹೀಗಾಗಿ ತಾವು ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟಿರುವ ಭರವಸೆಯಂತೆ ಸರಿ ಸಮಾನ ವೇತನ ಕೊಡಬೇಕು ಎಂದು ಚರ್ಚಿಸಿದ್ದೇವೆ. ಹೀಗಾಗಿ ಮತ್ತೆ ಡಿ.6ರಂದು ಸಾರಿಗೆ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ ಎಂದರು.

ಇಂದು ನಡೆದ ಜಂಟಿ ಕ್ರಿಯಾ ಸಮಿತಿ ಹಾಗೂ ನೌಕರರ ಒಕ್ಕೂಟ ಈ ಎರಡೂ ಸಭೆಯಲ್ಲಿಯೂ ಯಾವುದೂ ಕೂಡ ಅಂತಿಮವಾಗಿಲ್ಲ. ಹೀಗಾಗಿ ಮತ್ತೆ ಡಿಸೆಂಬರ್‌ 5 ಹಾಗೂ 6ರಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಜತೆಗೆ ಮತ್ತೊಂದು ಸಭೆ ನಡೆಯಲಿದೆ.

Megha
the authorMegha

Leave a Reply

error: Content is protected !!
Latest news
ಆದೇಶ ಕಾಯ್ದಿರಿಸಿದ 3 ತಿಂಗಳೊಳಗಾಗಿ ಎಲ್ಲ ಕೋರ್ಟ್‌ಗಳಲ್ಲೂ ಅಂತಿಮ ತೀರ್ಪು ಹೊರಬೀಳಬೇಕು: ಸುಪ್ರೀಂ ಮಹತ್ವದ ಆದೇಶ ಗೃಹಲಕ್ಷ್ಮಿ ಹಣ ಮೃತರ ಖಾತೆಗೆ ಜಮೆ ಆಗದಂತೆ ನೋಡಿಕೊಳ್ಳಿ: ಅಧಿಕಾರಿಗಳಿಗೆ ಗ್ಯಾರಂಟಿ ಯೋಜನೆ ಅಧ್ಯಕ್ಷ ತಾಕೀತು ವಿದ್ಯುತ್ ಗ್ರಾಹಕರಿಗೆ ಗುಡ್‌ನ್ಯೂಸ್‌: ಬಿಲ್‌ಗಳಿಗೆ ಕನಿಷ್ಠ 15 ದಿನಗಳ ಪಾವತಿ ಅವಧಿ ಕಡ್ಡಾಯ ಮಾಡಿ KERC ಆದೇಶ- ಜೂನ್‌... BMTC KSRTC ನಿವೃತ್ತ ನೌಕರರ ಪ್ರತಿಭಟನೆ: ಕನಿಷ್ಠ ಪಿಂಚಣಿ 7500 ರೂ. ನೀಡಲು ಆಗ್ರಹ ಕಾಂಗ್ರೆಸ್​​ ಹಿರಿಯ ನಾಯಕ ಮಾಜಿ ಕಾರ್ಮಿಕ ಸಚಿವ ವೆಂಕಟರಮಣಪ್ಪ ನಿಧನ ಕಾರಿನ ಟೈಯರ್ ಸ್ಫೋಟಗೊಂಡು ಲಾರಿಗೆ ಡಿಕ್ಕಿ: ಕಾರಿನಲ್ಲಿದ್ದ ಐವರು ಸ್ಥಳದಲ್ಲೇ‌ ಮೃತ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ರಾಜೀನಾಮೆಗೂ ಮುನ್ನ ಸಿಎಂ ಕಚೇರಿ ಸಿಬ್ಬಂದಿ ವರ್ಗಾವಣೆ: ಆಪ್ತ, ಬೆಂಬಲಿಗ ಅಧಿಕಾರಗಳ ರಕ್ಷಣೆ ಮಾಡಿದರ ಸಿದ್ದು!? ಸಿಎಂ ಸ್ಥಾನಕ್ಕೆ ಹೈಕಮಾಂಡ್‌ ರಾಜೀನಾಮೆ ಕೊಡಿ ಅಂತ ಹೇಳಿದ್ರೆ ಕೊಡ್ತೀನಿ ಅಂದಿದ್ದೆ, ಮೊನ್ನೆ ಹೇಳಿದರು ಇಂದು ಕೊಟ್ಟೆ: ಸ... ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯರಿಂದ ಒಂದು ಪುಟದ ರಾಜೀನಾಮೆ ಪತ್ರ ಸಲ್ಲಿಕೆ