ಕನಕಪುರ: ಸಮಯಕ್ಕೆ ಸರಿಯಾಗಿ ಬಸ್ ಗಳು ಬರುವುದಿಲ್ಲ ಬಂದರೂ ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳುವುದಿಲ್ಲ ಎಂದು ಆರೋಪಿಸಿ ನೂರಾರು ವಿದ್ಯಾರ್ಥಿಗಳು ಕನಕಪುರ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.
ಮಂಗಳವಾರ ಕನಕಪುರ ಬಸ್ ನಿಲ್ದಾಣದಲ್ಲಿ ಜಮಾಯಿಸಿದ ನೂರಾರು ವಿದ್ಯಾರ್ಥಿಗಳು ಕೆಎಸ್‌ಆರ್‌ಟಿಸಿ ವಿರುದ್ಧ ಪ್ರತಿಭಟನೆ ಮಾಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು.
ಈ ವೇಳೆ ಬಸ್ ನಿರ್ವಹಣಾ ಸಮಿತಿ ನಿರ್ವಾಹಕರ ಮತ್ತು ಚಾಲಕರ ವಿರುದ್ಧ ವಿದ್ಯಾರ್ಥಿಗಳು ಧಿಕ್ಕಾರ ಕೂಗುತ್ತಾ ಪ್ರತಿಭಟನೆ ನಡೆಸಿದರು. ಸಮಯಕ್ಕೆ ಸರಿಯಾಗಿ ಬಸ್ ಗಳು ಬರುವುದಿಲ್ಲ ಬಂದರೂ ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳುವುದಿಲ್ಲ ಎಂದು ಆರೋಪಿಸಿದರು.
ಇನ್ನು ಇಷ್ಟೆಲ್ಲದರ ಮಧ್ಯೆ ಹತ್ತಿದ ಹುಡುಗರಿಗೆ ನೀನು ಪಾಸ್ ಹಿಂದೆ ಹೋಗು, ಮುಂದೆ ಹೋಗು, ಎದ್ದೇಳು ಮೇಲೆ, ನಿತ್ಕೋ ಹೀಗೆ ಗೌರವ ಇಲ್ಲದೆ ನಡೆಸಿಕೊಳ್ಳುತ್ತಾರೆ ಎಂದು ನಿರ್ವಾಹಕರ ವಿರುದ್ಧವೂ ಕಿಡಿಕಾರಿದರು.
ಬಸ್‌ನಲ್ಲಿ ನಮಗೆ ನಿತ್ಯ ಕಿರುಕುಳ ನೀಡುತ್ತಾರೆ. ಇದನ್ನು ತಪ್ಪಿಸಬೇಕು. ನಾವು ಕೂಡ ಹಣಕೊಟ್ಟು ಬಸ್‌ಪಾಸ್ ಪಡೆದಿದ್ದೇವೆ ಸಾರಿಗೆ ನಿಗಮದಿಂದ ಉಚಿತವಾಗಿ ಏನು ನಮಗೆ ಬಸ್‌ಪಾಸ್ ಕೊಟ್ಟಿಲ್ಲ. ಆದರೂ ಈ ರೀತಿ ತೊಂದರೆ ಕೊಡುವುದು ಎಷ್ಟು ಸರಿ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಸಾರಿಗೆ ಸ್ಥಳೀಯ ಅಧಿಕಾರಿಗಳು ಬಂದು ವಿದ್ಯಾರ್ಥಿಗಳನ್ನು ಸಮಾಧಾಣಗೊಳಿಸಿ ಮುಂದೆ ಈ ರೀತಿ ತೊಂದರೆ ಬರದಂತೆ ನೋಡಿಕೊಳ್ಳುತ್ತೇವೆ ಎಂಬ ಭರವಸೆ ನೀಡಿದ್ದರಿಂದ ಪ್ರತಿಭಟನೆ ನಿಲ್ಲಿಸಿ ಕಾಲೇಜುಗಳಿಗೆ ತೆರಳಿಸಿದರು.