ಬಸ್ ಪಾಸ್ ತೋರಿಸದೆ ನಿರ್ವಾಹಕರಿಗೆ ಅವಾಜ್ ಹಾಕಿ ಬಸ್ ನಿಲ್ಲಿಸಿ ಗಲಾಟೆ ಮಾಡಿದ ಕಿರಾತಕ !
ಬೆಂಗಳೂರು: ಸಾರಿಗೆ ನೌಕರರು ಎಂದರೆ ಇವರ ಮನೆಯ ಜೀತಕ್ಕಿರುವ ಆಳುಗಳು ಎಂದುಕೊಂಡಿದ್ದಾನೆ ಈ ಕಿರಾತಕ. ನಿರ್ವಾಹಕರು ಬಸ್‌ಪಾಸ್ ತೋರಿಸು ಎಂದರೆ ಅವಾಚ್ಯವಾಗಿ ನಿಂದಿಸಿದ್ದು ಅಲ್ಲದೆ ವಾದ ಮಾಡುವುದರಲ್ಲೇ ಕಾಲ ಕಳೆದಿದ್ದಾನೆ.
ಅದಕ್ಕೆ ಸಹ ಪ್ರಯಾಣಿಕರು ಪಾಸ್ ತೋರಿಸುವುದಕ್ಕೆ ನಿನಗೇನು ಕಷ್ಟ ಎಂದು ಕೇಳಿದರೆ ನಾನು ಈಗಾಗಲೇ ಪಾಸ್ ತೋತಿಸಿದ್ದೀನಿ ನಾನು ಮತ್ತೆ ತೋರಿಸುವುದಿಲ್ಲ ಎಂದು ಅವಾಜ್ ಹಾಕಿದ್ದಾನೆ. ಜತೆಗೆ ನಾನು ಪಾಸ್ ತೋರಿಸಿದಾಗ ನೀನು ಪಾಸ್ ನೋಡಬೇಕಿತ್ತು. ನೀನು ಬಂದಾಗ ನಾನು ಪಾಸ್ ತೋರಿಸುವುದಕ್ಕೆ ಇಲ್ಲ ಎಂದು ವಾದ ಮಾಡಿದ್ದಾನೆ.
ಅಲ್ಲದೆ ಬಸ್ ನಿಲ್ಲಿಸು ಪೊಲೀಸ್ ಠಾಣೆಗೆ ಬಸ್ ತೆಗೆದುಕೊಂಡು ನಡೆ ಎಂದು ಬಾಯಿಗೆ ಬಂದಂತೆ ಮಾತನಾಡಿದ್ದಾನೆ. ಅಲ್ಲದೆ ಸುಮಾರು 4.30 ನಿಮಿಷಗಳ ಕಾಲ ವಾದ ಮಾಡಿದ್ದಾನೆ. ಆದರೂ ಪಾಸ್ ತೋರಿಸಲೇ ಇಲ್ಲ.
ಇದರಿಂದ ಸಿಟ್ಟಿಗೆದ್ದ ಸಹ ಪ್ರಯಾಣಿಕರು ಈ ಕಿರಾತಕನ ವಿರುದ್ಧ ತಿರುಗಿ ಬಿದ್ದಿದ್ದಾರೆ. ಪಾಸ್ ತೋರಿಸು ಎಂದರೆ ಏನು ನಿಂದು ಹೇಳು ಎಂದು ಕೇಳಿದ್ದಾರೆ. ಅದಕ್ಕೆ ಬಸ್ ನಿಲ್ಲಿಸಿದ್ದರಿಂದ ನಾಲ್ಕು ಬಸ್ ಪಾಸಾಗಿವೆ ನಾನು ಪಾಸ್ ತೋರಿಸುವುದಿಲ್ಲ ಎಂದು ಸಹ ಪ್ರಯಾಣಿಕರಿಗೂ ತಿರುಗಿ ಬಿದ್ದಿದ್ದಾನೆ.
ಇಂಥವರನ್ನು ಶಿಕ್ಷೆಗೆ ಒಳಪಡಿಸಬೇಕು. ಜತೆಗೆ ಕಾನೂನು ರೀತಿ ಕ್ರಮ ತೆಗೆದುಕೊಳ್ಳಬೇಕು. ಆದರೆ ಸಾರಿಗೆ ತನಿಖಾ ಸಿಬ್ಬಂದಿಗಳು ಇಂಥವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಬದಲು ನಿರ್ವಾಹಕರ ವಿರುದ್ಧವೇ ಕ್ರಮಕ್ಕೆ ಮುಂದಾಗುತ್ತಾರೆ. ಹೀಗಾಗಿ ಇಂಥ ಪುಂಡರ ಅಟ್ಟಹಾಸ ಮಿತಿಮೀರಿದೆ.
ಇದರಿಂದ ಚಾಲನಾ ಸಿಬ್ಬಂದಿ ಹಲ್ಲೆಗೊಳಗಾಗುವುದು, ಪ್ರಯಾಣಿಕರ ಜತೆಗೆ ಅಸಭ್ಯ ವರ್ತನೆ ಎಂದು ಸಂಸ್ಥೆಯ ಅಧಿಕಾರಿಗಳು ಕೊಡುವ ಮೆಮೋ ಪಡೆದು ಸಮಸ್ಯೆಗೆ ಸಿಲುಕುತ್ತಿದ್ದಾರೆ ನಿರ್ವಾಹಕರು ಹಾಗೂ ಚಾಲಕರು.
ಹೀಗಾಗಿ ಯಾರೇ ತಪ್ಪು ಮಾಡಿದರು ಅವರಿಗೆ ಶಿಕ್ಷೆ ಆಗಬೇಕು. ಅದನ್ನು ಬಿಟ್ಟು ಇಂಥ ಪುಂಡರ ಪರವಾಗಿ ತನಿಖಾ ಸಿಬ್ಬಂದಿ ಮತ್ತು ಸಾರಿಗೆ ನಿಗಮದ ಅಧಿಕಾರಿಗಳು ನಿಲ್ಲುತ್ತಿರುವುದರಿಂದ ತಪ್ಪು ಮಾಡುವ ಇಂಥ ಪ್ರಯಾಣಿಕರಿಗೆ ಯಾವುದೇ ತರಹದ ಶಿಕ್ಷೆ ಆಗುತ್ತಿಲ್ಲ.
ಅದೇ ತಮಿಳುನಾಡಿ ಸಾರಿಗೆ ನಿಗಮದಲ್ಲಿ ಪ್ರಯಾಣಿಕರು ಈ ರೀತಿ ನಿರ್ವಾಹಕರೊಂದಿಗೆ ಅಸಭ್ಯವಾಗಿ ಮಾತನಾಡುವುದಾಗಲಿ ಅಥವಾ ಪಾಸ್ ತೋರಿಸದೆ ಅಸಡ್ಡೆ ಮಾಡುವುದಾಗಲಿ ಮಾಡಿದರೆ ಅಂಥ ಪ್ರಯಾಣಿಕರಿಗೆ ದಂಡದ ಜತೆಗೆ ತಕ್ಕ ಶಿಕ್ಷೆಯನ್ನು ಕಾನೂನಾತ್ಮಕವಾಗಿ ಕೊಡಿಸುವ ಮೂಲಕ ಪಾಠ ಕಳಿಸುತ್ತಾರೆ.
ಕರ್ನಾಟಕ ಸಾರಿಗೆಯಲ್ಲೂ ಅಂಥ ನಿಯಮಗಳು ಇಲ್ಲವೆಂದೇನಿಲ್ಲ ಇವೆ. ಆದರೆ ಅಧಿಕಾರಿಗಳು ತಪ್ಪು ಮಾಡಿದ ಪ್ರಯಾಣಿಕರ ಮೇಲೆ ಆ ಕಾನೂನು ಪ್ನರಯೋಗ ಮಾಡುವ ಬದಲಿಗೆ ಚಾಲನಾ ಸಿಬ್ಬಂದಿಗಳ ಮೇಲೆ ಪ್ರಯೋಗಿಸುವ ಕೆಲಸ ನಡೆಯುತ್ತಿದೆ.
ಇದರಿಂದ ಇಂಥ ಪುಂಡರ ಕಾಟ ಹೇಚ್ಚಾಗುತ್ತಿದೆ. ಅಲ್ಲದೆ ಇವರಿಂದ ಸಹ ಪ್ರಯಾಣಿಕರಿಗೂ ಸಮಸ್ಯೆ ಆಗುತ್ತಿದೆ. ಹೀಗಾಗಿ ಇನ್ನಾದರೂ ಇಂಥ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆ ನೀಡುವುದಕ್ಕೆ ಸಾರಿಗೆ ಅಧಿಕಾರಿಗಳು ಮುಂದಾಗಬೇಕು. ಜತೆಗೆ ಸ್ಥಳದಲ್ಲೇ ದಂಡ ವಿಧಿಸುವ ಕೆಲಸ ಮಾಡಬೇಕು.
ನೋಡಿ ಸಹ ಪ್ರಯಾಣಿಕರೆ ಈತನಿಗೆ ಪಾಸ್ ತೋರಿಸುವುದಕ್ಕೆ ನಿನಗೇನು ತೊಂದರೆ ಎಂದು ಕೇಳುತ್ತಿದ್ದಾರೆ. ಆದರೆ ಈ ಪುಂಡ ಸಹ ಪ್ರಯಾಣಿಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಪಾಸ್ ತೋರಿಸುವುದಿಲ್ಲ ಎಂದು ಉದ್ಧಟತನದಿಂದಲೇ ವರ್ತಿಸಿದ್ದಾನೆ. ಈಗಲಾದರೂ ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಈತನಿಗೆ ಶಿಕ್ಷೆ ಕೊಡಿಸುವ ಕೆಲಸ ಮಾಡಬೇಕು ಎಂದು ಪ್ರಜ್ಞಾವಂತರು ಆಗ್ರಹಿಸಿದ್ದಾರೆ.