ನ್ಯೂಡೆಲ್ಲಿ: ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಮತ್ತು ಅತ್ಯಾಚಾರ ಪ್ರಕರಣ ದೇಶವನ್ನೇ ಬೆಚ್ಚಿಬೀಳಿಸಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಏನನ್ನೂ ಹೇಳಿರಲಿಲ್ಲ. ಆದರೆ ಅವರು ಕೊನೆಗೂ ತುಟಿಬಿಚ್ಚಿದ್ದು, ಕಿಡಿಗೇಡಿಗಳನ್ನು ಸುಮ್ಮನೇ ಬಿಡುವುದಿಲ್ಲ ಎಂದು ಈಗ ತಿಳಿಸಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಮೋದಿ ಅವರು, ಮಣಿಪುರದ ಘಟನೆಯಿಂದ ಇಡೀ ದೇಶ ಆಕ್ರೋಶಗೊಂಡಿದೆ. ನನ್ನಗೂ ನೋವಾಗಿದೆ, ಆಕ್ರೋದದಿಂದ ಕೂಡಿದೆ. ಆರೋಪಿಗಳನ್ನು ಶಿಕ್ಷಿಸದೆ ಬಿಡಲ್ಲ ಎಂದರು.
ಇವತ್ತಿನಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗುತ್ತಿದೆ. ಈ ಬೆನ್ನಲ್ಲೇ ಮಣಿಪುರದಲ್ಲಿ ಮಾರ್ಚ್ 4 ರಂದು ನಡೆದಿರುವ ಅಮಾನುಷ ವಿಡಿಯೋವೊಂದು ವೈರಲ್ ಆಗುತ್ತಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ವಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದವು.
ಮಣಿಪುರ ಹಿಂಸಾಚಾರದಲ್ಲಿ 150ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಇದೀಗ ದೇಶವೇ ತಲೆ ತಗ್ಗಿಸುವಂತಹ ವಿಡಿಯೋವೊಂದು ವೈರಲ್ ಆಗಿದೆ. ಈ ಬಗ್ಗೆ ಪ್ರಧಾನಿ ಮೋದಿ ಸಂಸತ್ನಲ್ಲಿ ಮಾತನಾಡಬೇಕು. ಮಣಿಪುರದಲ್ಲಿ ಏನಾಗ್ತಿದೆ ಎಂದು ದೇಶದ ಜನರಿಗೆ ತಿಳಿಸಬೇಕು ಅಂತ ಆಗ್ರಹಿಸಿದ್ದವು.
ಅಂತೆಯೇ ಸಂಸತ್ ಕಲಾಪಕ್ಕೆ ಆಗಮಿಸುವ ವೇಳೆ ಮಾತನಾಡಿದ ಮೋದಿ,‘ಇಡೀ ದೇಶ ನಾಚಿಕೆಪಡುವಂತ ಘಟನೆ. ಮಣಿಪುರದ ಘಟನೆ. ಸಭ್ಯ ಸಮಾಜಕ್ಕೆ ನಾಚಿಕೆಗೇಡಿನ ಘಟನೆ ಎಂದು ಹೇಳಿದರು.
ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ ಈ ವಿಡಿಯೋ 2 ತಿಂಗಳು ಹಳೆಯದ್ದಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಮಹಿಳೆಯರು, ಇಬ್ಬರು ಪುರುಷರು ಅಪಹರಣಕ್ಕೆ ಒಳಗಾಗಿದ್ದರು. ಪೊಲೀಸ್ ಠಾಣೆಯಿಂದ ಸುಮಾರು 2 ಕಿಲೋ ಮೀಟರ್ ದೂರದಲ್ಲಿರುವ ಕಾಡಿಗೆ ಅವರನ್ನು ಎಳೆದೊಯ್ದಿದ್ದರು.
ಅಲ್ಲಿ ಅತ್ಯಾಚಾರಿಗಳ ತಂಡ ಮೊದಲು ಓರ್ವ ವ್ಯಕ್ತಿಯನ್ನು ಕೊಲೆ ಮಾಡಿದೆ. ನಂತರ ಮೂವರು ಮಹಿಳೆಯರ ನಗ್ನಗೊಳಿಸಿದ್ದಾರೆ. ಅವರ ಎದುರಲ್ಲೇ 19 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ನಂತರ ಆಕೆ ಸಹೋದರನ್ನೂ ಕೊಂದಿದ್ದಾರೆ. ಬಳಿಕ ಮೆರವಣಿಗೆ ಮಾಡಿದ್ದಾರೆ ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ನೊಂಗ್ ಪೊಕ್ ಸೆಕ್ಮಯ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.