ವಾಷಿಂಗ್ಟನ್: ಬಾಲಕಿಯ ಸಾವಿಗೆ ಕಾರಣವಾಗಿದ್ದ ಅಮೆರಿಕದ 35 ವರ್ಷದ ವ್ಯಕ್ತಿಗೆ ನೂರು ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಅಮೆರಿಕದ ಕೋರ್ಟ್ ತೀರ್ಪು ನೀಡಿದೆ.
2021ರಲ್ಲಿ ಲುಸಿಯಾನದಲ್ಲಿ ಭಾರತ ಮೂಲದ 5 ವರ್ಷದ ಬಾಲಕಿಯ ಸಾವಿಗೆ ಕಾರಣನಾಗಿದ್ದ ಜೋಸೆಫ್ ಲೀ ಸ್ಮಿತ್ ಶಿಕ್ಷೆಗೆ ಗುರಿಯಾದ ಅಪರಾಧಿ.
ಈತ ಮಾಂಕ್‍ಹೌಸ್ ಡ್ರೈವ್‍ನ ಹೋಟೆಲ್ ಒಂದರ ಹೊರಗೆ ವ್ಯಕ್ತಿಯೊಂದಿಗೆ ಗಲಾಟೆ ಮಾಡಿಕೊಂಡು ಗುಂಡು ಹಾರಿಸಿದ್ದ. ಈ ವೇಳೆ ಗುರಿ ತಪ್ಪಿ ಹೋಟೆಲ್‍ನ ಕೊಠಡಿಯಲ್ಲಿ ಆಟವಾಡುತ್ತಿದ್ದ ಮಾಯಾ ಪಟೇಲ್ (5) ತಲೆಗೆ ಬಿದ್ದಿತ್ತು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂರು ದಿನಗಳ ನಂತರ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಳು.
ಇದರ ವಿಚಾರಣೆ ನಡೆಸಿದ ನ್ಯಾಯಾಲಯ ಜೋಸೆಫ್ ಲೀ ಸ್ಮಿತ್‌ಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.