CrimeNEWSನಮ್ಮರಾಜ್ಯಬೆಂಗಳೂರು

ವಿಜಯಪಥ ಸಂಪಾದಕರ ವಿರುದ್ಧ ಬಿಎಂಟಿಸಿ ಜಯನಗರ ಡಿಪೋ ವ್ಯವಸ್ಥಾಪಕ ಪ್ರಶಾಂತ್‌ ದಾಖಲಿಸಿದ್ದ ಪ್ರಕರಣಕ್ಕೆ ಹೈ ಕೋರ್ಟ್‌ತಡೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ನೌಕರರು 2021ರ ಏಪ್ರಿಲ್‌7ರಿಂದ ಸುಮಾರು 14 ದಿನಗಳವರೆಗೂ ನಡೆಸಿದ ಮುಷ್ಕರದ ವೇಳೆ ವಿಜಯಪಥ ಮುಖ್ಯ ಸಂಪಾದಕರ ವಿರುದ್ಧ ದಾಖಲಿಸಿದ್ದ ಪ್ರಕರಣವೊಂದಕ್ಕೆ ಕರ್ನಾಟಕ ಹೈ ಕೋರ್ಟ್‌ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.

ಈ ಮೂಲಕ ಸುಖ ಸುಮ್ಮನೇ ಆರೋಪ ಮಾಡಿ ಅಂದು ಬಿಎಂಟಿಸಿ ಜಯನಗರದ 4ನೇ ಘಟಕದ ವ್ಯವಸ್ಥಾಪಕ ಪ್ರಶಾಂತ್‌, ಘಟಕದ ನಿರ್ವಾಹಕ ಎಸ್‌.ಜೆ. ಮೇಟಿಯನ್ನು ವಿಜಯಪಥ ಸಂಪಾದಕರು ಡ್ಯೂಟಿ ಮಾಡುತ್ತಿದ್ದಾಗ ಅವರನ್ನು ತಡೆದು ಡ್ಯೂಟಿ ಮಾಡದಂತೆ ಬೆದರಿಕೆ ಹಾಕಿದ್ದರು ಎಂದು ಸುಳ್ಳು ದೂರು ನೀಡಿದ್ದರು.

ಆ ಬಗ್ಗೆ ಸರಿಯಾಗಿ ವಿಚಾರಣೆ ಮಾಡದ ತಿಲಕ್‌ನಗರ ಪೊಲೀಸ್‌ಠಾಣೆ ಐಒ ವಿಜಯಪಥ ಸಂಪಾದಕರ ಫೋನ್‌ನಂಬರ್‌ಮಾಹಿತಿಯನ್ನು ಏರ್‌ಟೆಲ್‌ಕಚೇರಿಯಿಂದ ಪಡೆದು ಅದರಲ್ಲಿ ಅಂದು ಯಾರ ಜತೆ ಮಾತನಾಡಿದ್ದಾರೆ ಎಂಬುದನ್ನು ಪರಿಶೀಲಿಸಿದ್ದಾರೆ. ಆ ವೇಳೆ ಪ್ರಶಾಂತ್‌ಮತ್ತು ಎಸ್‌.ಜೆ. ಮೇಟಿ ಅವರ ಜತೆ ಯಾವುದೇ ಸಂಭಾಷಣೆ ನಡೆಸಿರುವುದು ಕಂಡು ಬರದಿದ್ದರು ಡ್ಯೂಟಿ ಮಾಡುವುದಕ್ಕೆ ಅಡ್ಡಿ ಪಡಿಸಿದರು ಎಂಬ ದೂರಿನ ಆಧಾರದ ಮೇರೆಗೆ ಎಫ್‌ಐಆರ್‌ದಾಖಲಿಸಿಕೊಂಡು ಬಳಿಕ ಚಾರ್ಜ್‌ಶೀಟ್‌ಕೂಡ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಇದರ ವಿರುದ್ಧ ಹೈ ಕೋರ್ಟ್‌ಮೆಟ್ಟಿಲೇರಿದ ವಿಜಯಪಥ ಸಂಪಾದಕರ ಪರವಾಗಿ ಸುಪ್ರೀಂ ಕೋರ್ಟ್‌ಮತ್ತು ಹೈ ಕೋರ್ಟ್‌ವಕೀಲರಾದ ಎಚ್.ಬಿ.ಶಿವರಾಜು ಅವರು ವಕಾಲತು ವಹಿಸಿ ವಾದ ಮಂಡಿಸಿದರು. ವಾದ ಪ್ರತಿವಾದವನ್ನು ಆಲಿಸಿ ಹೈಕೋರ್ಟ್‌ಏಕಸದಸ್ಯ ನ್ಯಾಯಪೀಠದ ನ್ಯಾಯಮೂರ್ತಿಗಳಾದ ನಾಗಪ್ರಸನ್ನ ಅವರು ಪ್ರಕರಣಕ್ಕೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದ್ದಾರೆ.

ಇನ್ನು ಪ್ರಕರಣದಲ್ಲಿ ಯಾವುದೇ ಸತ್ಯಾಸತ್ಯತೆ ಮೇಲ್ನೋಟಕ್ಕೆ ಕಂಡು ಬರದ ಹಿನ್ನೆಲೆಯಲ್ಲಿ ಹಾಗೂ ದೂರು ದಾಖಲಿಸಿರುವುದು ಸುಳ್ಳು ಎಂಬುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದ್ದಾರೆ.

ಇನ್ನು ತಿಲಕನಗರ ಪೊಲೀಸರು ಚಾರ್ಜ್‌ಶೀಟ್‌ಸಲ್ಲಿಸುವ ಮುನ್ನ ಎಸ್‌.ಜೆ.ಮೇಟಿ ಎಂಬ ನಿರ್ವಾಹಕ ಡ್ಯೂಟಿ ಮಾಡಿದ್ದಾನೆ ಎಂದು ತೋರಿಸಿದ್ದಾರೆ. ಆದರೆ, ನಿಜ ಹೇಳಬೇಕು ಎಂದರೆ ಆತ ಅಂದು ಚಾರ್ಜ್‌ಶೀಟ್‌ನಲ್ಲಿ ತೋರಿಸಿರುವುದನ್ನು ಗಮನಿಸಿದರೆ ದೂರು ದಾಖಲಿಸುವುದಕ್ಕೆ ಸೃಷ್ಟಿಸಿರುವ ಟ್ರಿಪ್‌ಶೀಟ್‌ನಂತೆ ಕಂಡು ಬಂದಿದೆ.

ಎಸ್‌.ಜೆ.ಮೇಟಿ ಅಂದು ಡ್ಯೂಟಿ ಮಾಡಿದ್ದರೆ ಡಿಪೋನಿಂದ ಎಷ್ಟು ಗಂಟೆಗೆ ಬಸ್‌ಔಟ್‌ಮಾಡಿದರು ಎಷ್ಟು ಗಂಟೆಗೆ ಇನ್‌ಮಾಡಿದರು ಎಂಬುದನ್ನು ಸರಿಯಾಗಿ ತೋರಿಸಿಲ್ಲ. ಜತೆಗೆ ಅಂದು ಇವರು ಮಾಡಿರುವ ಡ್ಯೂಟಿ ರೂಟ್‌ಮೇಲೆ ಕನಿಷ್ಠ ಎಂದರೂ 8-10 ಟ್ರಿಪ್‌ಕಾರ್ಯಾಚರಣೆ ಮಾಡಬೇಕು. ಆದರೆ ಆತ ಮಾಡಿರುವುದು ಕೇವಲ 4 ಟ್ರಿಪ್‌ಮಾತ್ರ ಅಂದರೆ ಮಧ್ಯಾಹ್ನ 2 ಗಂಟೆಗೆ ಡ್ಯೂಟಿಗೆ ಬಂದರೂ 8ಗಂಟೆವರೆಗೇ ಡ್ಯೂಟಿ ಎಂದರೂ ಆತ ರಾತ್ರಿ 10 ಗಂಟೆವರೆಗೆ ಡ್ಯೂಟಿ ಮಾಡಿದ ಬಳಿಕ ಡಿಪೋಗೆ ಬರಬೇಕಿತ್ತು. ಆದರೆ ಆತನ 9 ಗಂಟೆಗೆ ಡಿಪೋನಲ್ಲಿ ಇದ್ದನು ಎಂದು ಚಾರ್ಜ್‌ಶೀಟ್‌ನಲ್ಲಿ ತೋರಿಸಲಾಗಿದೆ.

ಇನ್ನು ವಿಜಯಪಥ ಸಂಪಾದಕರ ಫೋನ್‌ನಂಬರ್‌ಮಾತ್ರ ಚಾರ್ಜ್‌ಶೀಟ್‌ನಲ್ಲಿ ಹಾಕಿದ್ದು ದೂರುದಾರ ಘಟಕ ವ್ಯವಸ್ಥಾಪಕ ಅವರ ಜತೆ ಮಾತನಾಡಿರುವುದನ್ನಾಗಲಿ ಇಲ್ಲ ನಿರ್ವಾಹಕ ಎಸ್‌.ಜೆ. ಮೇಟಿಯ ಜತೆ ಸಂಭಾಷಣೆ ನಡೆಸಿರುವ ಬಗ್ಗೆ ಆತನ ಫೋನ್‌ನಂಬರ್‌ರನ್ನಾಗಲಿ ಚಾರ್ಜ್‌ಶೀಟ್‌ನಲ್ಲಿ ತೋರಿಸಿಲ್ಲ. ಆದರೂ ಚಾರ್ಜ್‌ಶೀಟ್‌ನಲ್ಲಿ ವಿಜಯಪಥ ಸಂಪಾದಕರ ಫೋನ್‌ನಂಬರ್‌ಅನ್ನು ಪದೇ ಪದೆ ತೋರಿಸಿದ್ದಾರೆ.

ಈ ಎಲ್ಲವನ್ನು ಗಮನಿಸಿದರೆ ಇದು ಉದ್ದೇಶ ಪೂರ್ವಕವಾಗಿ ದಾಖಲಿಸಿರುವ ದೂರು ಎಂಬುವುದು ಗೊತ್ತಾಗಲಿದೆ. ಆದರೂ ತಿಲಕ್‌ನಗರ ಪೊಲೀಸರು ಎಸ್‌.ಜೆ.ಮೇಟಿಯ ಫೋನ್‌ ನಂಬರ್‌ ತೋರಿಸದೆ ಆರೋಪ ಮಾಡಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಈ ಪೊಲೀಸರು ಅರ್ಥ ಮಾಡಿಕೊಳ್ಳಬೇಕು.

ಒಬ್ಬರ ಬಗ್ಗೆ ಆರೋಪ ಮಾಡುತ್ತಿದ್ದಾರೆ ಎಂದರೆ ಅದಕ್ಕೆ ಸಂಬಂಧಪಟ್ಟ ದಾಖಲೆಗಳು ಮತ್ತು ಸಾಕ್ಷಿ, ಘಟನೆ ನಡೆದಿರುವುದು ನಿಜವೆ? ಎಲ್ಲಿ ಅವರು ತೊಂದರೆ ಕೊಟ್ಟರು, ಅದರಿಂದ ಸಾರ್ವಜನಿಕರಿಗೆ ತೊಂದರೆ ಆಗಿದ್ದು ನಿಜವೆ? ಎಂಬ ಬಗ್ಗೆ ತೀವ್ರ ತನಿಖೆ ಮಾಡಬೇಕಿತ್ತು, ಆದರೆ ಅದಾವುದನ್ನು ಮಾಡದೆ ತಿಲಕ್‌ನಗರ ಪೊಲೀಸ್ರು ಚಾರ್ಜ್‌ಶೀಟ್‌ಹಾಕಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಅವರೇ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

Vijayapatha - ವಿಜಯಪಥ

Leave a Reply

error: Content is protected !!
LATEST
KSRTC ಬಸ್‌ -ಕಾರು ನಡುವೆ ಅಪಘಾತ: ಅನಾರೋಗ್ಯದ ನಡುವೆ ಕಾರು ಚಲಾಯಿಸಿದ ಪತಿ ಮೃತ- ಪ್ರಣಾಪಾಯದಿಂದ ಪತ್ನಿ ಪಾರು 600ರಿಂದ 800 ಮಂದಿ ಅಧಿಕಾರಿಗಳಿಗಾಗಿ 1.07 ಲಕ್ಷ ನೌಕರರಿಗೆ ಅನ್ಯಾಯ ಮಾಡಲು ಹೊರಟಿರುವುದು ನ್ಯಾಯವೇ? KSRTC ನಾಲ್ಕೂ ನಿಗಮಗಳ ಸಾರಿಗೆ ನೌಕರರಿಗೆ ಸಮಾನ ವೇತನ ಲಾಭವೋ-ನಷ್ಟವೋ..!?? ಹರಿಯಾಣದಲ್ಲಿ ಸಮಾವೇಶ: ಎಂಎಸ್‌ಪಿ ಖಾತ್ರಿ ಕಾನೂನು ಜಾರಿಗೆ ಅನ್ನದಾತರ ಪಟ್ಟು ಪ್ರಜಾಪ್ರಭುತ್ವದ ಉಳಿವಿಗಾಗಿ ಮಾನವ ಸರಪಳಿ : ಉಸ್ತುವಾರಿ ಸಚಿವ ಮುನಿಯಪ್ಪ BMTC ಅಧಿಕಾರಿಗಳ ವಾಹನಗಳಿಗೂ ಖಾಸಗಿ ಚಾಲಕರ ನೇಮಕಕ್ಕೆ ಟೆಂಡರ್‌ ಕರೆದ ಸಂಸ್ಥೆ KSRTC ಮಡಿಕೇರಿ: ವೇತನ ಬಿಡುಗಡೆ ಆಗ್ರಹಿಸಿ ಪ್ರತಿಭಟನೆಗೆ ಇಳಿದ ಗುತ್ತಿಗೆ ಚಾಲಕರು KSRTC ನೌಕರರ ನಂಬಿಸಲು ಹೋದ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳಿಂದಲೇ ಅವರ ಊಸರವಳ್ಳಿ ಬಣ್ಣ ಬಯಲು..! KSRTC : ಗಣಪತಿ ಪ್ರತಿಷ್ಠಾಪಿಸಿದ್ದರಿಂದ ಡಿಪೋ ಮುಂದೆ ಚಾಲಕ ರವಿ ಪಾರ್ಥಿವ ಶರೀರ ಇಡಲಾತ್ತು, ಪ್ರಮಾದವಾಗಿಲ್ಲ- ಡಿಎಂ ಸಮ... 10 ವರ್ಷದ ಆಧಾರ್‌ ನವೀಕರಣಕ್ಕೆ ಡೆಡ್‌ಲೈನ್‌ ಫಿಕ್ಸ್‌: ನಾಳೆ ಅಂತಿಮ ಗಡುವು- ಬಳಿಕ ದಂಡ