ಬನ್ನೂರು: ತಿ.ನರಸೀಪುರ ತಾಲೂಕಿನ ಬನ್ನೂರು ಹೋಬಳಿಯ ಯಾಚೇನಹಳ್ಳಿ ಗ್ರಾಮದಲ್ಲಿ ಇಂದು ರಾತ್ರಿ 8 ಗಂಟೆ ಸುಮಾರಿನಲ್ಲಿ ಚಿರತೆಯೊಂದು ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ್ದ ಮೇಕೆಯೊಂದನ್ನು ಕೊಂದು ಪರಾರಿಯಾಗಿದೆ.
ರೈಸ್‌ಮಿಲ್ ಬಳಿ ಇಳಿರುವ ಹೊಟ್ಟೆ ಈರ ಸತೀಶ್ ಎಂಬುವರ ಮನೆಯ ಕೊಟ್ಟಿಯಲ್ಲಿ ಕಟ್ಟಿಹಾಕಿದ್ದ ಮೇಕೆಯ ಕುತ್ತಿಗೆ ಸೀಳಿ ಸಾಯಿಸಿದ್ದು ಬಳಿಕ ಅದನ್ನು ಹೊತ್ತೊಯ್ಯಲು ಯತ್ನಿಸಿದೆ ಅಷ್ಟರಲ್ಲಿ ಉಳಿದ ಮೇಕೆಗಳು ಅರುಚಾಡಿದ್ದನ್ನು ಕೇಳಿಸಿಕೊಂಡು ಕೊಟ್ಟಿಗೆಗೆ ಬಂದು ನೋಡಿದಾಗ ಚಿರತೆ ಕಾಣಿಸಿದೆ.
ಅದನ್ನು ನೋಡಿ ಗಾಬರಿಗೊಂಡ ಮೇಕೆ ಮಾಲೀಕನು ಅರುಚಿಕೊಂಡಿದ್ದರಿಂದ ಅಕ್ಕಪಕ್ಕದವರು ಬರುವಷ್ಟರಲ್ಲಿ ಚಿರತೆ ಪರಾರಿಯಾಗಿದೆ.
ಒಟ್ಟಾರೆ ಬನ್ನೂರು ಹೋಬಳಿಯ ಸುತ್ತಮುತ್ತಲ ಗ್ರಾಮಗಳಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಮನೆಯ ಕೊಟ್ಟಿಗೆಯಲ್ಲಿ ಕಟ್ಟಿಹಾಕಿರುವ ಸಾಕು ಪ್ರಾಣಿಗಳನ್ನು ಬಿಡುತ್ತಿಲ್ಲ. ಇದರಿಂದ ಗ್ರಾಮಸ್ಥರು ಸಂಜೆ 7 ನಂತರ ಮನೆಯಿಂದ ಹೊರಬರುವುದಕ್ಕೂ ಹೆದರುವಂತಾಗಿದೆ.
ಈ ನಡುವೆ ಇದೇ 5 ರಂದು ಮೈಸೂರು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಅವರು ಕಬ್ಬು ಕಟಾವು ಮಾಡುವಂತೆ ಆದೇಶ ನೀಡಿದ್ದು, ಚಿರತೆಗಳನ್ನು ಸೆರೆ ಹಿಡಿಯುವುದಕ್ಕೆ ಕಬ್ಬು ಬೆಳೆ ಬೆಳೆದು ನಿಂತಿರುವುದರಿಂದ ತೊಂದರೆ ಆಗುತ್ತಿದೆ. ಹೀಗಾಗಿ ಮೊದಲು ಕಬ್ಬು ಕಟಾವು ಮಾಡಿ ಎಂದು ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೂ ಆದೇಶ ನೀಡಿದ್ದಾರೆ.
ಇನ್ನು ಬನ್ನೂರು ಹೋಬಳಿಯ ಬಸವನಹಳ್ಳಿ ಬಳಿಯ ಕಬ್ಬಿನ ಗದ್ದೆಯಲ್ಲಿ ಎರಡು ಚಿರತೆ ಮರಿಗಳು ಸಿಕ್ಕಿದ್ದು, ಅಲ್ಲಿ ಕಬ್ಬು ಕಟಾವು ಮಾಡುತ್ತಿದ್ದವರು ಅವುಗಳನ್ನು ಅರಣ್ಯ ಅಧಿಕಾರಿಗಳು ಬಂದು ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.
Advt