KSRTC ನೌಕರರ ವೇತನ ಕುರಿತು ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಒಕ್ಕೂಟದ ಸಭೆಯೂ ವಿಫಲ ಮತ್ತೆ ಡಿ.5ಕ್ಕೆ ನಿಗದಿ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು/ನೌಕರರ ವೇತನ ಹೆಚ್ಚಳ ಸಂಬಂಧ ಇಂದು ಸಂಜೆ ವಿಧಾನಸೌಧದಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ನಡೆದ KSRTC ನೌಕರರ ಒಕ್ಕೂಟದ ಪದಾಧಿಕಾರಿಗಳ ಸಭೆಯಲ್ಲಿಯೂ ಯಾವುದೇ ಅಂತಿಮ ತೀರ್ಮಾನವಾಗದೆ ವಿಫಲಗೊಂಡಿದೆ.

ಮತ್ತೆ ಡಿಸೆಂಬರ್ 5ರಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೆ ಪದಾಧಿಕಾರಿಗಳ ಸಭೆ ಆಯೋಜಿಸುವಂತೆ ಸಿಎಂ ತಿಳಿಸಿದ್ದಾರೆ ಅಂದು ಮತ್ತೆ ಚರ್ಚೆಯಾಗಿಲಿದೆ ಎಂದು ಒಕ್ಕೂಟದ ಮುಖಂಡರು ಮಾಧ್ಯಮದವರಿಗೆ ತಿಳಿಸಿದ್ದಾರೆ.
ಸಭೆಯಲ್ಲಿ ಏನಾಯಿತು?: ನಮಗೆ 2020 ಜನವರಿ 1ರಿಂದ ಶೇ.15ರಷ್ಟು ಆಗಿರುವ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿಯನ್ನು ಕೊಡಿ ಮತ್ತೆ 2024 ಜನವರಿ 1ರಿಂದಲೇ ಸರಿಸಮಾನ ವೇತನ ಜಾರಿ ಮಾಡಿ ಎಂದು ಸಭೆಯಲ್ಲಿ ಒತ್ತಾಯಿಸಿದ್ದೇವೆ ಎಂದು ತಿಳಿಸಿದರು.
ಇನ್ನು ಮನಗೆ ಈ ನಾಲ್ಕು ವರ್ಷಕ್ಕೊ ಆಗುತ್ತಿರುವ ಜಂಜಾಟ ಬೇಡ ಹೀಗಾಗಿ ತಾವು ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟಿರುವ ಭರವಸೆಯಂತೆ ಸರಿ ಸಮಾನ ವೇತನ ಕೊಡಬೇಕು ಎಂದು ಚರ್ಚಿಸಿದ್ದೇವೆ. ಹೀಗಾಗಿ ಮತ್ತೆ ಡಿ.6ರಂದು ಸಾರಿಗೆ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ ಎಂದರು.
ಇಂದು ನಡೆದ ಜಂಟಿ ಕ್ರಿಯಾ ಸಮಿತಿ ಹಾಗೂ ನೌಕರರ ಒಕ್ಕೂಟ ಈ ಎರಡೂ ಸಭೆಯಲ್ಲಿಯೂ ಯಾವುದೂ ಕೂಡ ಅಂತಿಮವಾಗಿಲ್ಲ. ಹೀಗಾಗಿ ಮತ್ತೆ ಡಿಸೆಂಬರ್ 5 ಹಾಗೂ 6ರಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಜತೆಗೆ ಮತ್ತೊಂದು ಸಭೆ ನಡೆಯಲಿದೆ.
Related












