NEWS

ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ಜಾರಿ, ನಗದು ರಹಿತ ವೈದ್ಯಕೀಯ ಸೌಲಭ್ಯದ ಭರವಸೆ ನಿಜವಾಗುವ ಸಮಯ ಬಂದಿದೆಯೇ?

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಇದೇ ಮೇ 10ರಂದು ನಡೆದ ರಾಜ್ಯದ 16ನೇ ವಿಧಾನಸಭಾ ಚುನಾವಣೆಯಲ್ಲಿ  ಪ್ರಮುಖ ಮೂರು ಪಕ್ಷಗಳು ಎಷ್ಟೆಷ್ಟು ಸ್ಥಾನಗಳನ್ನು ಪಡೆಯಲಿವೆ ಎಂಬ ಬಗ್ಗೆ ಎಕ್ಸಿಟ್‌ ಪೋಲ್‌ ಹೊರಬಿದ್ದಿದೆ.

ಇದನ್ನು ಗಮನಿಸಿದರೆ ಕಾಂಗ್ರೆಸ್‌ ಸಂಪೂರ್ಣ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಬಹುತೇಕ ಪಕ್ಕ ಎನ್ನಬಹುದು.   ಇನ್ನು ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ  ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಕೆಲ ಬದಲಾವಣೆಗಳನ್ನು ತರುವುದಾಗಿ ತಮ್ಮ ಪ್ರಣಾಳಿಕೆಗಳಲ್ಲಿ ಭರವಸೆ ನೀಡಿರುವಂತೆ ನಡೆದುಕೊಳ್ಳಬೇಕಿದೆ.

ಆ ರೀತಿ ಭರವಸೆ ಕೊಟ್ಟಂತೆ ನಡೆದುಕೊಂಡರೆ ಕಳೆದ 4 ದಶಕಗಳಿಗೂ ಹೆಚ್ಚಿನ ಕಾಲದಿಂದ ಕಡಿಮೆ ವೇತನದಲ್ಲೇ ಸರಿಯಾದ ಬಡ್ತಿಯನ್ನೂ ಪಡೆಯದೇ ದುಡಿಯುತ್ತಿರುವ ನೌಕರರ ವರ್ಗಕ್ಕೆ ಸಿಹಿಸುದ್ದಿಯಾಗಲಿದೆ.

ಇನ್ನು ಅಧಿಕಾರದಲ್ಲಿರುವ ಬಿಜೆಪಿಯು ನಮ್ಮ ಡಬಲ್‌ ಇಂಜಿನ್‌ ಸರ್ಕಾರವನ್ನು ರಾಜ್ಯಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ತಂದರೆ ಸಾರಿಗೆ ನಿಗಮಗಳಲ್ಲಿ ಎಲೆಕ್ಟ್ರಿಕ್‌ ಬಸ್‌ಗಳನ್ನು ಬಿಡುವುದಾಗಿ ಹೇಳಿದೆ.

ಆದರೆ, ನೌಕರರಿಗೆ ಏನು ಸೌಲಭ್ಯ ನೀಡುತ್ತೇವೆ ಎಂದು ಭರವಸೆ ಕೊಟ್ಟಿಲ್ಲ. ಕಾರಣ ಈಗಾಗಲೇ ನೌಕರರು ಇಟ್ಟಿರುವ ಯಾವೊಂದು ಬೇಡಿಕೆಯನ್ನು ಬಿಜೆಪಿ ಈಡೇರಿಸಿಲ್ಲ.

ಇನ್ನು ಜೆಡಿಎಸ್‌ ಪಕ್ಷವೂ ಕೂಡ ತನ್ನ ಪಂಚರತ್ನ ಯೋಜನೆಯಡಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಸಾರಿಗೆ ನೌಕರರ ಬೇಡಿಕೆಯಂತೆ ಸಂಸ್ಥೆಯ ನೌಕರರಿಗೆ ಸರ್ಕಾರಿ ನೌಕರರಿಗೆ ಸರಿ ಸಮಾನ ವೇತನವನ್ನು ವೇತನ ಆಯೋಗ ಜಾರಿಯಾದಾಗ ಯಥಾವತ್ತಾಗಿ ಅಳವಡಿಸುವ ಜತೆಗೆ ನಗದು ರಹಿತ ವೈದ್ಯಕೀಯ ಸೌಲಭ್ಯಗಳನ್ನು ನೀಡುವುದಾಗಿ ಭರವಸೆ ನೀಡಿದೆ.

ಅದರಂತೆ ಕಾಂಗ್ರೆಸ್‌ ಪಕ್ಷವೂ ತನ್ನ ಪ್ರಣಾಳಿಕೆಯಲ್ಲಿ ಅದರಲ್ಲೂ ಪ್ರಮುಖವಾಗಿ ಸಾರಿಗೆ ನಿಗಮಗಳ ಉದ್ಯೋಗಿಗಳ ವೇತನ ಇತ್ಯಾದಿ ಸೌಲಭ್ಯಗಳನ್ನು ಸರ್ಕಾರಿ ಸಮಾನಾಂತರವಾದ ಹುದ್ದೆಗಳ ವೇತನಗಳಿಗೆ ಅನುಗುಣವಾಗಿ, ಆಯಾ ನಿಗಮಗಳ ಆಯವ್ಯಯಗಳ ಪತ್ರಗಳಲ್ಲಿ ಅಡಕವಾಗುವಂತೆ ಕಾರ್ಯಕ್ರಮ ರಚನೆ ಮಾಡಲಾಗುವುದು ಎಂದು ತಿಳಿಸಿದೆ.

ಬಹುತೇಕ ಬಿಜೆಪಿಯು ಸಾರಿಗೆ ನೌಕರರು ಮತ್ತು ಅವರ ಕುಟುಂಬ ಹಾಗೂ ಸಂಬಂಧಿಕರ ವೋಟ್‌ಗಳನ್ನು ಗಮನದಲ್ಲಿ ಇಟ್ಟುಕೊಂಡಂತೆ ಕಾಣಲಿಲ್ಲ. ಹೀಗಾಗಿ ರಾಜ್ಯದ ಸುಮಾರು 1.25 ಲಕ್ಷ ನೌಕರರು ಮತ್ತು ಅವರ ಕುಟುಂಬ ಸದ್ಯರು ಸೇರಿದಂತೆ 7 ಲಕ್ಷಕ್ಕೂ ಹೆಚ್ಚು ವೋಟ್‌ಗಳನ್ನು ಕಳೆದುಕೊಂಡಿರಬಹುದು ಎಂದು ಕಾಣುತ್ತಿದೆ.

ಈ ಬಿಜೆಪಿಯ ನಡೆಯಿಂದ ಸಾರಿಗೆ ನೌಕರರು ಮತ್ತು ಅಧಿಕಾರಿಗಳು ಅಸಮಾಧಾನಗೊಂಡಿದ್ದು ಬಹಿರಂಗ ಸತ್ಯ.  ಇದರ  ಲಾಭ ಪಡೆಯಲು ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಸಾರಿಗೆ ನೌಕರರಿಗೆ ಪ್ರತ್ಯೇಕವಾಗಿ ಭರವಸೆ ನೀಡಿವೆ.

ಈ ಎಲ್ಲದರ ನಡುವೆ ಕಾಂಗ್ರೆಸ್‌ ಸರ್ಕಾರ ಅಧಿಕಾರ ಬರುವ ಬಗ್ಗೆ ನಾಳೆ ಮಧ್ಯಾಹ್ನದೊಳಗೆ ಗೊತ್ತಾಗಲಿದೆ.  ಆ ಬಳಿಕ  ನೌಕರರ ಸಮಸ್ಯೆ ಸ್ಪಂದಿಸುವ ಭರವಸೆ ಕೊಟ್ಟಂತೆ ಪಕ್ನ ಪಕ್ಷ ಡೆದುಕೊಳ್ಳಬೇಕಿದೆ.

ಒಟ್ಟಾರೆ, ಬಿಜೆಪಿ ಹೊರತುಪಡಿಸಿ ಉಳಿದ ಎರಡೂ ಪಕ್ಷಗಳು ಚುನಾವಣೆಯಲ್ಲಿ ಸಾರಿಗೆ ನೌಕರರು ಮತ್ತು ಅವರ ಕುಟುಂಬದವರ ವೋಟ್‌ಗಳನ್ನು ಪಡೆಯುವುದಕ್ಕೆ ಬೇಕಾದ ಸಿದ್ಧತೆ ಮಾಡಿಕೊಂಡಿದ್ದ್ದುದವು. ಈ ಎರಡೂ ಪಕ್ಷಗಳು ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ಜಾರಿಗೊಳಿಸುವ ಬಗ್ಗೆ ನೀಡಿರುವ ಭರವಸೆಯಿಂದ ನೌಕರರು ಈಗಾಗಲೇ ಯಾರ ಕೈ ಹಿಡಿದಿದ್ದಾರೆ ಎಂಬುದರ ಬಗ್ಗೆ ನಾಳೆ ( ಮೇ 13) ವರೆಗೂ ಕಾದು ನೋಡಬೇಕಿದೆ.

Leave a Reply

error: Content is protected !!
LATEST
ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ