NEWSನಮ್ಮರಾಜ್ಯಸಂಸ್ಕೃತಿ

ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಅಗಲಿಕೆಯು ಇಡೀ ಸಮಾಜಕ್ಕೆ ತುಂಬಲಾರದ ನಷ್ಟ : ಪೃಥ್ವಿ ರೆಡ್ಡಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ದೇಶ ಕಂಡ ಅಪರೂಪದ ಸಂತ ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಅಗಲಿಕೆಯು ಇಡೀ ಸಮಾಜಕ್ಕೆ ತುಂಬಲಾರದ ನಷ್ಟವಾಗಿದ್ದು, ಅವರ ಅಪಾರ ಸಂಖ್ಯೆಯ ಭಕ್ತರ ನೋವಿನಲ್ಲಿ ನಾನೂ ಭಾಗಿಯಾಗುತ್ತೇನೆ ಎಂದು ಆಮ್‌ ಆದ್ಮಿ ಪಾರ್ಟಿ ರಾಜ್ಯಾಧ್ಕ್ಷಕ್ಷ ಪೃಥ್ವಿ ರೆಡ್ಡಿ ಸಂತಾಪ ಸೂಚಿಸಿದ್ದಾರೆ.

“ಪರಮಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರು ಮನುಕುಲವನ್ನು ಸರಿದಾರಿಯಲ್ಲಿ ಕೊಂಡೊಯ್ಯಲು ಜೀವನ ಪರ್ಯಂತ ಶ್ರಮಿಸಿದ್ದಾರೆ. ಅವರ ನಿಸ್ವಾರ್ಥ ಸೇವೆ ಹಾಗೂ ಅಪಾರ ಜ್ಞಾನವು ನಮಗೆಲ್ಲರಿಗೂ ಮಾದರಿಯಾಗಬೇಕಿದೆ. ಅತ್ಯಂತ ಸರಳ ಜೀವನವನ್ನು ಅನುಸರಿಸಿದ ಅವರು ನಡೆಗೂ ನುಡಿಗೂ ಅಂತರವಿಲ್ಲದಂತೆ ಬದುಕಿದ್ದರು. ಸಮಾಜಕ್ಕೆ ಸ್ಫೂರ್ತಿಯಾಗುವಂತೆ ಜೀವನದ ಪ್ರತಿಕ್ಷಣವನ್ನೂ ಕಳೆಯುತ್ತಿದ್ದ ಸ್ವಾಮೀಜಿಯವರು ನಮ್ಮೊಂದಿಗೆ ಇನ್ನೂ ಹಲವು ವರ್ಷಗಳು ಇರಬೇಕಿತ್ತು” ಎಂದ ಪೃಥ್ವಿ ರೆಡ್ಡಿ ಕಣ್ಣಾಲಿಗಳು ತೇವವಾದವು.

“ಕಠಿಣವಾದ ವಿಷಯಗಳನ್ನೂ ಅತ್ಯಂತ ಸರಳವಾಗಿ ಜನಸಾಮಾನ್ಯರಿಗೆ ಅರ್ಥವಾಗುವಂತೆ ಹೇಳುವ ಕೌಶಲ್ಯತೆ ಸಿದ್ದೇಶ್ವರ ಸ್ವಾಮೀಜಿಯವರಿಗೆ ಇತ್ತು. ಅವರ ಮಧುರವಾದ ಮಾತು, ಪ್ರಖರ ವಿಷಯ ಹಾಗೂ ಪ್ರಬುದ್ಧ ಚಿಂತನೆಯು ಎಂತಹವರನ್ನೂ ಆಕರ್ಷಿಸುತ್ತಿತ್ತು. ಅಧ್ಯಾತ್ಮದ ಜೊತೆಗೆ ವಿಜ್ಞಾನ, ಕೃಷಿ, ಶಿಕ್ಷಣ, ಪರಿಸರಕ್ಕೆ ಸಂಬಂಧಿಸಿದ ವಿಚಾರಗಳಲ್ಲೂ ಅವರು ಆಸಕ್ತಿ ಹೊಂದಿದ್ದರು. ಗಿಡಗಳಿಂದ ಹೆಚ್ಚು ಹೂವುಗಳನ್ನು ಕೀಳಬಾರದೆಂದು ಕೇವಲ ಒಂದೇ ಹೂವಿನಿಂದ ದೇವರನ್ನು ಪೂಜಿಸುತ್ತಿದ್ದ ಅವರದ್ದು ಹೂವಿನಷ್ಟೇ ಸೂಕ್ಷ್ಮವಾದ ಮನಸ್ಸಾಗಿತ್ತು” ಎಂದು ತಿಳಿಸಿದರು.

“ಸಿದ್ದೇಶ್ವರ ಸ್ವಾಮೀಜಿಯವರು ಜೀವನದುದ್ದಕ್ಕೂ ಅದ್ಭುತ ಸಾಧನೆ ಮಾಡಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದರೂ, ಸಾಮಾನ್ಯರಲ್ಲಿ ಸಾಮಾನ್ಯರಂತೆ ಜನರೊಂದಿಗೆ ಬೆರೆಯುತ್ತಿದ್ದರು. ಐಶಾರಾಮಿ ಉಡುಗೊರೆ, ಪ್ರಶಸ್ತಿಗಳನ್ನೆಲ್ಲ ತಿರಸ್ಕರಿಸಿ ಬದುಕಿದ್ದ ಅವರು ನಿಜಕ್ಕೂ ನಡೆದಾಡುವ ದೇವರು. ಅವರ ಅಪಾರ ಸಂಖ್ಯೆಯ ಭಕ್ತರು, ಅಭಿಮಾನಿಗಳಿಗೆ ಅವರ ನಿಧನದ ದುಃಖವನ್ನು ನೀಗಿಸಿಕೊಳ್ಳುವ ಶಕ್ತಿ ದೊರೆಯಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ” ಎಂದರು.

Leave a Reply

error: Content is protected !!
LATEST
KSRTCಯ 4ನಿಗಮಗಳ ಸಾರಿಗೆ ನೌಕರರಿಗೆ ಶೇ.45ರಷ್ಟು ವೇತನ ಹೆಚ್ಚಳಕ್ಕೆ ವೇದಿಕೆ ಆಗ್ರಹ NWKRTC: ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲಕನ ಕಾಲು ಮುರಿತ ಸಾರಿಗೆ ನೌಕರರು ಕರ್ತವ್ಯದ ವೇಳೆ ರೀಲ್ಸ್​ ಮಾಡಿದರೆ ಕೆಲಸದಿಂದ ವಜಾ: ಸಚಿವ ರಾಮಲಿಂಗಾ ರೆಡ್ಡಿ ಎಚ್ಚರಿಕೆ ಜು.22ರಂದು ಬೆಂವಿವಿಯ ಸಂವಹನ ವಿಭಾಗದ ಸುವರ್ಣ ಮಹೋತ್ಸವ- ರಾಷ್ಟ್ರೀಯ ಸಮ್ಮೇಳನ ಕಿರಿಯ ವಕೀಲರಿಗೆ ಗೌರವಾನ್ವಿತ ಸಂಬಳ ಕೊಡಿ: ಹಿರಿಯ ವಕೀಲರಿಗೆ ಸುಪ್ರೀಂ ಕೋರ್ಟ್‌ ಸಿಜೆ ಚಂದ್ರಚೂಡ್ ಕಿವಿ ಮಾತು ಬದಲಿ ಜಾಗದಲ್ಲಿ ಮನೆ ಕಟ್ಟಿಕೊಡ್ತೇವೆ: ಕಂದಾಯ ಸಚಿವ ಕೃಷ್ಣ ಬೈರೇಗೌಡ 24 ಗಂಟೆ ಉಚಿತ ವಿದ್ಯುತ್‌, ಪ್ರತಿಯೊಬ್ಬರಿಗೂ ಉಚಿತ ಚಿಕಿತ್ಸೆ, ಗುಣಮಟ್ಟದ ಶಿಕ್ಷಣ, ಯುವಕರಿಗೆ ಉದ್ಯೋಗ ಮಹಿಳೆಯರಿಗೆ ತಿ... ಮಳೆ ಹಾನಿ ಪ್ರದೇಶಗಳಿಗೆ ಸಚಿವ ಕೆ.ವೆಂಕಟೇಶ್ ಭೇಟಿ: ಮೃತ ಕುಟುಂಬಕ್ಕೆ ಸಾಂತ್ವನ ಪರಿಹಾರ ಧನ ವಿತರಣೆ ಗೊರೂರು ಜಲಾಶಯದಿಂದ 25ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ: ಇಂಜಿನಿಯರ್ ಆನಂದ್ ಶೈಕ್ಷಣಿಕ ಸಂಸ್ಥೆಗಳು ಶೇ. 25 ರಷ್ಟು ಸೇವಾ ಶುಲ್ಕ ಪಾವತಿಸಿ ಲಾಭ ಪಡೆಯಿರಿ: ತುಷಾರ್  ಗಿರಿನಾಥ್