ಥೈಲ್ಯಾಂಡ್: ಕಳೆದ 20 ವರ್ಷದ ಹಿಂದೆ ಶ್ರೀಲಂಕಾಗೆ ಆನೆಯೊಂದನ್ನು ಗಿಫ್ಟ್ ಆಗಿ ನೀಡಿದ್ದ ಥೈಲ್ಯಾಂಡ್ ರಾಜಮನೆತನ ಆ ಆನೆಯನ್ನು ವಾಪಸ್ ತನ್ನ ದೇಶಕ್ಕೆ ಪಡೆದುಕೊಂಡಿದೆ.
ಎರಡು ದೇಶಗಳ ರಾಜತಾತಂತ್ರಿಕ ವ್ಯವಸ್ಥೆ ಚೆನ್ನಾಗಿರಲೆಂದು ಥಾಯ್‌ಸಾಕ್ ಸುರಿನ್ ಹೆಸರಿನ ಆನೆಯನ್ನು ಕೊಲಂಬೊಗೆ ಉಡುಗೊರೆಯಾಗಿ ಥೈಲ್ಯಾಂಡ್ ರಾಜಮನೆತನ ನೀಡಿತ್ತು. ಆದರೀಗ 20 ವರ್ಷಗಳ ಬಳಿ ಸಾಕ್ ಸುರಿನ್ ಆನೆಯನ್ನು ವಾಪಸ್ ತನ್ನ ದೇಶಕ್ಕೆ ಪಡೆದುಕೊಂಡಿದೆ.
ಆನೆಯನ್ನು ಏರ್ಲಿಫ್ಟ್ ಮಾಡುವ ಮೂಲಕ ಬ್ಯಾಂಕಾಕ್ಗೆ ವಾಪಸ್ ತೆಗೆದುಕೊಂಡು ಹೋಗಿಲಾಗಿದೆ. ಸಾಕ್ ಸುರಿನ್ ಆನೆಗೆ 29 ವರ್ಷ ವಯಸ್ಸಾಗಿದ್ದು ಶ್ರೀಲಂಕಾದಲ್ಲಿ ಇದಕ್ಕೆ ಮುತ್ತುರಾಜ್ ಎಂದು ಹೆಸರಿಟ್ಟಿದ್ದರು.
ಅಂದು ಶ್ರೀಲಂಕಾದ ದಕ್ಷಿಣದಲ್ಲಿರುವ ಬೌದ್ಧ ದೇವಸ್ಥಾನಕ್ಕೆ ಆನೆಯನ್ನು ಉಡುಗೊರೆಯಾಗಿ ನೀಡಲಾಗಿತ್ತು. ಆದರೆ ಕಳೆದ ವರ್ಷ ಮುತ್ತುರಾಜ್ನನ್ನು ಸರಿಯಾಗಿ ನೋಡುಕೊಳ್ಳುತ್ತಿಲ್ಲ ಎಂಬ ವರದಿ ಕೇಳಿಬಂದ ನಂತರ ಥಾಯ್ ಅಧಿಕಾರಿಗಳು ಆನೆಯನ್ನು ಹಿಂತಿರುಗಿಸುವಂತೆ ಕೇಳಿಕೊಂಡಿದ್ದರು.
ಅದರಂತೆ ವಾಪಸ್ ಕಳಿಸಿಕೊಡಲಾಗಿದೆ. ಇನ್ನು ಮುತ್ತುರಾಜ್ 4 ಸಾವಿರ ಕೆಜಿಯಿದ್ದು, ಥೈಲ್ಯಾಂಡ್ ವಾಣಿಜ್ಯ ವಿಮಾನ ಇಲ್ಯುಶಿನ್ ಐಎಲ್-76ರ ಮೂಲಕ ದುಬಾರಿ ಖರ್ಚು ಮಾಡಿ ತನ್ನ ದೇಶಕ್ಕೆ ಕರೆದೊಯ್ದಿದೆ.