NEWSದೇಶ-ವಿದೇಶವಿದೇಶ

ಶ್ರೀಲಂಕಾಗೆ ಗಿಫ್ಟ್​ ನೀಡಿದ್ದ ಆನೆಯನ್ನು ವಾಪಸ್‌ ಪಡೆದ ಥೈಲ್ಯಾಂಡ್ ರಾಜಮನೆತನ

ವಿಜಯಪಥ ಸಮಗ್ರ ಸುದ್ದಿ

ಥೈಲ್ಯಾಂಡ್: ಕಳೆದ 20 ವರ್ಷದ ಹಿಂದೆ ಶ್ರೀಲಂಕಾಗೆ ಆನೆಯೊಂದನ್ನು ಗಿಫ್ಟ್​ ಆಗಿ ನೀಡಿದ್ದ ಥೈಲ್ಯಾಂಡ್ ರಾಜಮನೆತನ ಆ ಆನೆಯನ್ನು ವಾಪಸ್‌ ತನ್ನ ದೇಶಕ್ಕೆ ಪಡೆದುಕೊಂಡಿದೆ.

ಎರಡು ದೇಶಗಳ ರಾಜತಾತಂತ್ರಿಕ ವ್ಯವಸ್ಥೆ ಚೆನ್ನಾಗಿರಲೆಂದು ಥಾಯ್‌ಸಾಕ್​ ಸುರಿನ್​ ಹೆಸರಿನ ಆನೆಯನ್ನು ಕೊಲಂಬೊಗೆ ಉಡುಗೊರೆಯಾಗಿ ಥೈಲ್ಯಾಂಡ್ ರಾಜಮನೆತನ ನೀಡಿತ್ತು. ಆದರೀಗ 20 ವರ್ಷಗಳ ಬಳಿ ಸಾಕ್‌ ಸುರಿನ್​ ಆನೆಯನ್ನು ವಾಪಸ್‌ ತನ್ನ ದೇಶಕ್ಕೆ ಪಡೆದುಕೊಂಡಿದೆ.

ಆನೆಯನ್ನು ಏರ್​ಲಿಫ್ಟ್​ ಮಾಡುವ ಮೂಲಕ ಬ್ಯಾಂಕಾಕ್​ಗೆ ವಾಪಸ್‌ ತೆಗೆದುಕೊಂಡು ಹೋಗಿಲಾಗಿದೆ. ಸಾಕ್​ ಸುರಿನ್​ ಆನೆಗೆ 29 ವರ್ಷ ವಯಸ್ಸಾಗಿದ್ದು ಶ್ರೀಲಂಕಾದಲ್ಲಿ ಇದಕ್ಕೆ ಮುತ್ತುರಾಜ್​ ಎಂದು ಹೆಸರಿಟ್ಟಿದ್ದರು.

ಅಂದು ಶ್ರೀಲಂಕಾದ ದಕ್ಷಿಣದಲ್ಲಿರುವ ಬೌದ್ಧ ದೇವಸ್ಥಾನಕ್ಕೆ ಆನೆಯನ್ನು ಉಡುಗೊರೆಯಾಗಿ ನೀಡಲಾಗಿತ್ತು. ಆದರೆ ಕಳೆದ ವರ್ಷ ಮುತ್ತುರಾಜ್​ನನ್ನು ಸರಿಯಾಗಿ ನೋಡುಕೊಳ್ಳುತ್ತಿಲ್ಲ ಎಂಬ ವರದಿ ಕೇಳಿಬಂದ ನಂತರ ಥಾಯ್​ ಅಧಿಕಾರಿಗಳು ಆನೆಯನ್ನು ಹಿಂತಿರುಗಿಸುವಂತೆ ಕೇಳಿಕೊಂಡಿದ್ದರು.

ಅದರಂತೆ ವಾಪಸ್‌ ಕಳಿಸಿಕೊಡಲಾಗಿದೆ. ಇನ್ನು ಮುತ್ತುರಾಜ್​ 4 ಸಾವಿರ ಕೆಜಿಯಿದ್ದು, ಥೈಲ್ಯಾಂಡ್ ವಾಣಿಜ್ಯ ವಿಮಾನ ಇಲ್ಯುಶಿನ್​ ಐಎಲ್​-76ರ ಮೂಲಕ ದುಬಾರಿ ಖರ್ಚು ಮಾಡಿ ತನ್ನ ದೇಶಕ್ಕೆ ಕರೆದೊಯ್ದಿದೆ.

Leave a Reply

error: Content is protected !!
LATEST
ಮಧ್ಯಮ ವರ್ಗದ ವ್ಯಕ್ತಿ ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಮೌನಕ್ಕೆ ಶರಣಾದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ BBMP-ಡೆಂಗ್ಯೂ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ : ಸುರಳ್ಕರ್ ವಿಕಾಸ್ ಕಿಶೋರ್ ಉಚಿತ ಕೋಳಿ ಸಾಕಾಣಿಕೆ ತರಬೇತಿಗೆ 18 ರಿಂದ 45 ವರ್ಷದವರಿಂದ ಅರ್ಜಿ ಆಹ್ವಾನ ಪ್ರತಿಷ್ಠಿತ ಶಾಲೆಗಳಿಗೆ ಸೇರ ಬಯಸುವ ಮಕ್ಕಳಿಂದ ಅರ್ಜಿ ಆಹ್ವಾನ: ಷರತ್ತು ಅನ್ವಯ ವಸತಿ ಶಾಲೆಗಳಲ್ಲಿ ಪ್ರಥಮ ಪಿಯುಸಿ ತರಗತಿ ಪ್ರವೇಶಕ್ಕೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ KSRTC: ₹8.76 ಲಕ್ಷ ನಷ್ಟವುಂಟು ಮಾಡಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಸರ್ಕಾರದ ಮುಖ್ಯ ಕಾರ್ಯದರ್ಶ... BMTC ಚಾಲಕರಿಗೆ ಕೂಡಲೇ ವೇತನ ಪಾವತಿಸಿ: ಎಎಪಿಯ ಜಗದೀಶ್ ವಿ. ಸದಂ ಆಗ್ರಹ ಬಸವನಹಳ್ಳಿ: ನಿವೃತ್ತ ಸಹಾಯಕ ತೋಟಗಾರಿಕಾ ಇಲಾಖೆಯ ನಿರ್ದೇಶಕ ಚಿಕ್ಕಮಾಯಿಗೌಡರ ಪತ್ನಿ ಸಿದ್ದಮ್ಮ ನಿಧನ KSRTC ನೌಕರರ 2024ರ ವೇತನ ಪರಿಷ್ಕರಣೆ, 38 ತಿಂಗಳ ಹಿಂಬಾಕಿ ಬಿಡುಗಡೆಗೆ ಜೂನ್‌ 6ರಬಳಿಕ ನಿರ್ಧಾರ: ರಾಮಲಿಂಗಾರೆಡ್ಡಿ ಚಿಕ್ಕಮಗಳೂರಲ್ಲಿ ಧಾರಾಕಾರ ಮಳೆ- ಬೆಂಗಳೂರಿಗೂ ಆಗಮಿಸಲಿದ್ದಾನೆ ವರುಣ