ಬೆಂಗಳೂರು: ಈಗಾಗಲೇ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಒಂದರಲ್ಲೇ ಕಳೆದ 8ತಿಂಗಳಲ್ಲಿ 4093 ಪ್ರಕರಣಗಳು ಚಾಲಕ ನಿರ್ವಾಹಕರ ಮೇಲೆ ದಾಖಲಾಗಿವೆ. ಹೀಗೆ ನಾಲ್ಕೂ ನಿಗಮಗಳಲ್ಲೂ ಚಾಲಕ ನಿರ್ವಾಹಕರ ಮೇಲೆ ಸಾವಿರಾರು ದೂರು ದಾಖಲಾಗಿವೆ, ದಾಖಲಾಗುತ್ತಲೇ ಇರುತ್ತವೆ.
ಆದರೆ, ವಿಷಯ ಅದಲ್ಲ ಈ ದೂರು ದಾಖಲಾದ ಬಳಿಕ ಶಿಸ್ತು ಪ್ರಕರಣಗಳಡಿ ನಿವೃತ್ತ ನ್ಯಾಯಾಧೀಶರು ಹಾಗೂ ಇಲಾಖೆಯ ಕಾನೂನು ವಿಭಾಗದ ಅಧಿಕಾರಿಗಳು ವಿಚಾರಣೆ ನಡೆಸುವ ಸಮಯದಲ್ಲಿ ವಿಚಾರಣೆ ನಡವಳಿಗೆ ನೌಕರರು ಹಾಗೂ ಆಪಾದಿತ ನೌಕರರು ಸಹಿ ಹಾಕಬೇಕೆಂಬ ಒತ್ತಡವನ್ನು ಕೆಲ ಅಧಿಕಾರಿಗಳು/ ಸಿಬ್ಬಂದಿಗಳು ಹೇರುತ್ತಿದ್ದಾರೆ.
ಆದರೆ ಈ ರೀತಿ ಸಹಿಯಾಕಬೇಕು ಎಂಬ ಯಾವುದೇ ನಿಯಮ ನಾಲ್ಕೂ ನಿಗಮಗಳಲ್ಲಿ ಇರುವುದಿಲ್ಲ. ಆದ್ದರಿಂದ ಸಹಿ ಮಾಡಿ ಎಂದು ಬಲವಂತ ಮಾಡುವ ಅಧಿಕಾರಿಗಳ ವಿರುದ್ಧವೇ ನೊಂದ ನೌಕರರು ಕ್ರಮಕ್ಕೆ ಮೇಲಧಿಕಾರಿಗಳಿಗೆ ಲಿಖಿತ ದೂರು ಕೊಡಬಹುದು.
ಅಲ್ಲದೆ ತಾವು ವಿಚಾರಣೆಗೆ ಬಂದ ಸಮಯದಲ್ಲಿ ಕೇವಲ ಭದ್ರತಾ ಶಾಖೆಯ ರಿಜಿಸ್ಟರ್‌ನಲ್ಲಿ ತಾವು ಬಂದಿರುವ ಉದ್ದೇಶವೇನು ಎಂದು ನಮೂದಿಸಿ ಸಹಿ ಮಾಡಿದರೆ ಸಾಕು. ಕಾರಣ ವಿಚಾರಣೆ ನಡವಳಿಗೆ ನೌಕರರು ಹಾಗೂ ಆಪಾದಿತ ನೌಕರರು ಸಹಿ ಹಾಕಬೇಕೆಂಬ ನಿಯಮ ಸಂಸ್ಥೆಯಲ್ಲಿ ಇಲ್ಲ.
ವಿಚಾರಣೆ ನಡವಳಿಗೆ ನೌಕರರು ಹಾಗೂ ಆಪಾದಿತ ನೌಕರರು ಸಹಿ ಹಾಕಬೇಕೆಂಬ ನಿಯವಿಲ್ಲ ಎಂದು KSRTC ಕೇಂದ್ರೀಯ ವಿಭಾಗದ ಸಾರ್ವಜನಿಕ ಮಾಹಿತಿ ಅಧಿಕಾರಿಗಳು RTI ಅಡಿ ಸಮಗ್ರ ಮಾಹಿತಿ ಕೋರಿ ಹಾಕಿದ್ದ ಅರ್ಜಿಗೆ ಈ ಬಗ್ಗೆ ನಿರ್ದಿಷ್ಟವಾದ ಸುತ್ತೋಲೆ ಇರುವುದಿಲ್ಲ ಎಂದು ಇದೇ 2025ರ ಆಗಸ್ಟ್ 4ರಂದು ಮಾಹಿತಿ ನೀಡಿದ್ದಾರೆ.


Related









