ಬೆಂಗಳೂರು: ಸಾಮಾಜಿಕ ನ್ಯಾಯದ ಬಗ್ಗೆ ಬದ್ಧತೆ ಇರಬೇಕು. ತೋರಿಕೆ ಇರಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಇಂದು ಸಿಎಂ ನಿವಾಸ ಕಾವೇರಿಯಲ್ಲಿ ಹಿರಿಯ ಪತ್ರಕರ್ತ ಡಾ.ಎಂ.ಎಸ್.ಮಣಿ ಅವರ “ಒಳಕೋವೆ” ಕೃತಿ ಬಿಡುಗಡೆಗೊಳಿಸಿ, ಐದು ಮಂದಿ ಸಾಧಕರಿಗೆ ವಿ.ಪಿ.ಸಿಂಗ್ ಪ್ರಶಸ್ತಿ ಪ್ರದಾನಮಾಡಿ ಮಾತನಾಡಿದರು.
ಇವತ್ತಿನ ಸಂದರ್ಭದಲ್ಲಿ ಸಾಮಾಜಿಕ ನ್ಯಾಯದ ಬಗ್ಗೆ ಭಾಷಣ ಮಾಡುವವರು, ಮಾತಾಡುವವರು ಬಹಳ ಮಂದಿ ಸಿಗ್ತಾರೆ. ಆದರೆ ಬದ್ಧತೆ ಇರುವವರು ಕಡಿಮೆ. ಬಾಯಲ್ಲಿ ಸಾಮಾಜಿಕ ನ್ಯಾಯ ಹೇಳೋದು, ಸಾಮಾಜಿಕ ನ್ಯಾಯದ ವಿರೋಧಿಗಳ ಜತೆ ಹೋಗಿ ಸೇರೋದು ಸರಿಯಲ್ಲ ಎಂದರು.
ಇವತ್ತಿನ ವ್ಯವಸ್ಥೆ ಸುಧಾರಣೆಗೆ ವಿರುದ್ಧವಾದದ್ದು. ವ್ಯವಸ್ಥೆ ಜತೆ ರಾಜಿ ಮಾಡಿಕೊಂಡರೆ ಏನಾಗುತ್ತೆ, ರಾಜಿ ಮಾಡಿಕೊಳ್ಳದಿದ್ದರೆ ಏನಾಗುತ್ತದೆ ಎನ್ನುವ ಅರಿವು ನನಗೆ ಇದೆ. ಈ ಅರಿವು ಎಲ್ಲರಿಗೂ ಇರಬೇಕು ಎಂದು ಹೇಳಿದರು.
ಇನ್ನು ಜಾತಿ ವ್ಯವಸ್ಥೆಗೆ ಚಲನೆ ಇಲ್ಲ, ವರ್ಗ ವ್ಯವಸ್ಥೆಗೆ ಚಲನೆ ಇದೆ. ಅದಕ್ಕೇ ಬುದ್ಧ, ಬಸವ ಅಂಬೇಡ್ಕರ್ ಎಷ್ಟು ಹೋರಾಡಿದರೂ ಜಾತಿ ಹೋಗಿಲ್ಲ. ಜಾತಿ ಎನ್ನುವುದು ಸಾಮಾಜಿಕ ವಾಸ್ತವ. ಸಾಮಾಜಿಕ ನ್ಯಾಯದ ಪರವಾದ ನಿಜವಾದ ಬದ್ಧತೆ ಇಟ್ಟುಕೊಂಡು ಕೆಲಸ ಮಾಡುವವರು ಹೆಚ್ಚೆಚ್ಚು ಬರಬೇಕು ಎಂದರು.
ಡಾ.ಎಂ.ಎಸ್.ಮಣಿ ಸಾಮಾಜಿಕ ನ್ಯಾಯದ ಪರವಾಗಿ ಬದ್ಧತೆ ಉಳ್ಳವರು. ಇವರು ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂದು ಹಾರೈಸುತ್ತೇನೆ. ಇನ್ನು ಮಾಜಿ ಪ್ರಧಾನಿ ವಿ.ಪಿ.ಸಿಂಗ್ ಪ್ರಶಸ್ತಿಗೆ ಭಾಜನರಾಗಿರುವ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಡಾ.ಷರೀಫಾ, ಡಾ.ನಳಿನಾಕ್ಷಿ ಸಣ್ಣಪ್ಪ, ನಾಗವೇಣಿ, ಸಂಗಮ್ ದೇವ್, ಶಿವಲಿಂಗಪ್ಪ ಈ ಐವರು ಗಣ್ಯರು ಪ್ರಶಸ್ತಿಗೆ ಅತ್ಯಂತ ಅರ್ಹರು ಎನ್ನುವುದು ನನ್ನ ಭಾವನೆ ಎಂದರು.

ಕೊಪ್ಪಳ ವಿಶ್ವವಿದ್ಯಾಲಯ ಕುಲಪತಿ ಪ್ರೊ ಬಿ.ಕೆ.ರವಿ ಅವರ ಪತ್ರಿಕಾ ವೃತ್ತಿಯು 50 ವಸಂತ ಪೂರೈಸಿದ ಈ ಹೊತ್ತಿನಲ್ಲಿ ಅವರನ್ನು ಅತ್ಯಂತ ಸಂತೋಷದಿಂದ ಸನ್ಮಾನಿಸಿದ್ದೇನೆ ಎಂದು ತಿಳಿಸಿದರು.
Related


You Might Also Like
ಬೆಳ್ಳಂಬೆಳಗ್ಗೆ ಅನಿರೀಕ್ಷಿತ ಭೇಟಿ ನೀಡಿ ಹಾಜರಾತಿ ಪರಿಶೀಲಿಸಿದ ಆಯುಕ್ತರು: ಪೌರ ಕಾರ್ಮಿಕರ ಮೇಲ್ವಿಚಾರಕರಿಬ್ಬರ ಮೇಲೆ ಕ್ರಮ
ಬೆಂಗಳೂರು: ಸರ್ವಜ್ಞನಗರ ಕ್ಷೇತ್ರದ ಬಾಣಸವಾಡಿಯ ಬಿಎಸ್ಎನ್ಎಲ್ ಮಸ್ಟರಿಂಗ್ ಪಾಯಿಂಟ್ (ಭುವನಗಿರಿ ಪಾರ್ಕ್) ನಲ್ಲಿ ಇಂದು ಮುಂಜಾನೆ ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್...
ನಾಡಹಬ್ಬ ದಸರಾಗೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ ಅಧಿಕೃತವಾಗಿ ಆಹ್ವಾನಿಸಿದ ಜಿಲ್ಲಾ ಉಸ್ತುವಾರಿ ಸಚಿವ HCM
ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ ಮಹದೇವಪ್ಪ ಅಧಿಕೃತವಾಗಿ ಆಹ್ವಾನಿಸಿದರು. ಇದೇ ಸೆ.22 ರಂದು ಪ್ರಾರಂಭವಾಗಲಿರುವ...
ಮೊಸಳೆಹೊಸಳ್ಳಿ ದುರಂತ: ಮೃತರ ಮನೆಗಳಿಗೆ ವ್ಹೀಲ್ ಚೇರ್ನಲ್ಲೇ ತೆರಳಿ ಸಾಂತ್ವನ ಹೇಳಿದ ಮಾಜಿ ಪ್ರಧಾನಿ ಎಚ್ಡಿಡಿ
ಹಾಸನ: ಜಿಲ್ಲೆಯ ಮೊಸಳೆಹೊಸಳ್ಳಿಯಲ್ಲಿ ಮೊನ್ನೆ ನಡೆದ ಅಪಘಾತ ಪ್ರಕರಣ ನಿಜಕ್ಕೂ ಘನಘೋರ. ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಚಂದನ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಈ ಮೂಲಕ...
ಸಾಲಬಾಧೆ-ಗಂಡ, ಇಬ್ಬರು ಮಕ್ಕಳು ಸೇರಿ ನಾಲ್ವರು ಆತ್ಮಹತ್ಯೆಗೆ ಯತ್ನ ಮೂವರು ಮೃತ: ಸಾವು ಬದುಕಿನ ನಡುವೆ ತಾಯಿ ಸೆಣಸಾಟ
ಹೊಸಕೋಟೆ: ಸಾಲಬಾಧೆ ತಾಳಲಾರದೇ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದು, ಈ ಪೈಕಿ ಮೂವರು ಮೃತಪಟ್ಟಿರುವ ಘಟನೆ ತಾಲೂಕಿನ ಗೊಣಕನಹಳ್ಳಿಯಲ್ಲಿ ಗ್ರಾಮದಲ್ಲಿ ನಡೆದಿದೆ. ಗಂಡ, ಇಬ್ಬರು ಮಕ್ಕಳನ್ನು...
KSRTC ಹಾಸನ: ಸತ್ಯ ಮರೆಮಾಚಿದ ತನಿಖಾ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಮುಂದಾದ ಡಿಸಿ
ಹಾಸನ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹಾಸನ ವಿಭಾಗದ ತನಿಖಾ ಸಿಬ್ಬಂದಿ ಸತ್ಯ ಮರೆಮಾಚಲು ಬಾಡಿ ಕ್ಯಾಮರಾ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಕೆಲವೊಂದು ಸಮಯದಲ್ಲಿ ಹ್ಯಾಂಗ್...
KSRTC ಹಾಸನ: ತನಿಖಾಧಿಕಾರಿಗಳ ಬಾಡಿ ಕ್ಯಾಮೆರಾದ ವಿಡಿಯೋ ರೆಕಾರ್ಡಿಂಗ್ ಕೊಡಲು ವಿಫಲ- ಆರೋಪ ಪತ್ರ ಜಾರಿ ಮಾಡಿದ ಡಿಸಿ
ಹಾಸನ: ಸಾರಿಗೆ ಸಂಸ್ಥೆಯ ಮಾರ್ಗ ತನಿಖಾಧಿಕಾರಿಗಳು ಬಾಡಿ ಕ್ಯಾಮೆರಾವನ್ನು ಹಾಕಿಕೊಂಡು ತನಿಖೆ ಮಾಡದ ಪರಿಣಾಮ ಮಾಹಿತಿ ಆಯೋಗದಲ್ಲಿ ಪ್ರಕರಣ ದಾಖಲು ಮಾಡಿದ ನೌಕರನಿಗೆ ವಿಡಿಯೋ ರೆಕಾರ್ಡಿಂಗ್ ಕೊಡಲು...
ಮೆಜೆಸ್ಟಿಕ್ BMTC: ಟೀ ಚೆನ್ನಾಗಿರುವುದಿಲ್ಲ ಬೇರೆ ಅಂಗಡಿಗೆ ಹೋಗೋಣ ಎಂದಿದ್ದಕ್ಕೆ ಚಾಲಕನ ಮೇಲೆ ಹಲ್ಲೆ- ಆರೋಪಿ ಬಂಧನ
ಬೆಂಗಳೂರು: ಈ ಅಂಗಡಿಯಲ್ಲಿ ಬೇಡ ಇಲ್ಲಿ ಟೀ ಚೆನ್ನಾಗಿರುವುದಿಲ್ಲ ಎಂದು ಹೇಳಿ ಅಲ್ಲಿಯೇ ಪಕ್ಕದಲ್ಲಿದ್ದ ಟೀ ಅಂಗಡಿಗೆ ಹೋಗೋಣ ಎಂದು ಸಹೋದ್ಯೋಗಿಗೆ ಹೇಳಿದ್ದಕ್ಕೆ ಕುಪಿತನಾದ ಟೀ ಮಾರುವ...
KRSTC: ಅನ್ಯಮಾರ್ಗದಲ್ಲಿ ಹೋಗಲು ಮಹಿಳಾ ಕಂಡಕ್ಟರನ್ನು ರಾತ್ರಿ ಅರ್ಧದಲ್ಲೇ ಇಳಿಸಿಹೋದ ಸಹೋದ್ಯೋಗಿಗಳು…!
ಸಾರಿಗೆ ಚಾಲನಾ ಸಿಬ್ಬಂದಿಗಳಲ್ಲಿ ಒಬ್ಬರಿಗೊಬ್ಬರು ಆಗುವುದಿಲ್ಲ ಎಂಬುದಕ್ಕೆ ಇದು ಮತ್ತೊಂದು ನಿದರ್ಶನ ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಬಹುತೇಕ ಎಲ್ಲ ಚಾಲನಾ ಸಿಬ್ಬಂದಿಗಳಲ್ಲಿ...
ಸೆ.22ರಿಂದ ಅ.7ರವರೆಗೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ರಾಜ್ಯದಲ್ಲಿ ಇದೇ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7ರವರೆಗೆ ಹೊಸದಾಗಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿದೆ. ಈ ಸಮೀಕ್ಷೆಯಲ್ಲಿ ಎಲ್ಲರೂ...