NEWSನಮ್ಮರಾಜ್ಯಬೆಂಗಳೂರು

ಕೆಂಪೇಗೌಡ ಬಸ್‌ ನಿಲ್ದಾಣದ ನಿರ್ಮಾತೃ ರಾಜ್ಯದ ಧೀಮಂತ ಸಿಎಂ ಎನಿಸಿಕೊಂಡಿದ್ದ ಆರ್. ಗುಂಡೂರಾವ್ ಪ್ರತಿಮೆ ಅನಾವರಣ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ದಕ್ಷಿಣ ಏಷ್ಯಾದಲ್ಲೇ ಪ್ರಪ್ರಥಮ ಹಾಗೂ ಅತ್ಯಪೂರ್ವ ಎಂಬ ಖ್ಯಾತಿಯ ಕೆಂಪೇಗೌಡ ಸಾರಿಗೆ ನಿಲ್ದಾಣದ ನಿರ್ಮಾತೃ ರಾಜ್ಯದ ಧೀಮಂತ ಮುಖ್ಯ ಮಂತ್ರಿ ಎನಿಸಿಕೊಂಡಿದ್ದ ಪ್ರಾತ:ಸ್ಮರಣಿಯ ಆರ್. ಗುಂಡೂರಾವ್ ಅವರ ಪ್ರತಿಮೆ
ನಗರದ ಶಾಂತಲಾ ಸಿಲ್ಕ್ ಹೌಸ್ ಎದುರು ಇಂದು (ಮೇ 14) ಅನಾವರಣವಾಯಿತು.

ಈ ನಿಲ್ದಾಣ ನಿರ್ಮಾಣ ಹಾಗೂ ಗುಂಡೂರಾಯರ ಸಾಧನೆಯ ಬಗ್ಗೆ ಒಂದು ಇತಿಹಾಸವೇ ಇದೆ. ಈ ಸ್ಥಳ ಒಂದು ಕಾಲಕ್ಕೆ ಕೆಂಪಾಬುಧಿ ಕೆರೆ ಎನಿಸಿಕೊಂಡಿತ್ತು. ಈ ಕೆರೆಯನ್ನು ಎರಡು ಭಾಗ ಮಾಡುವ ರಸ್ತೆಯೊಂದು ಹಾದು ಹೋಗುತ್ತದೆ. ಎಡ ಭಾಗ ರಾಜ್ಯ ರಸ್ತೆಸಾರಿಗೆ ಮತ್ತು ಬಲ ಭಾಗ ನಗರ ಸಾರಿಗೆ ನಿಲ್ದಾಣಗಳಿವೆ.

ನಿಲ್ದಾಣ ಆಗುವ ಮೊದಲು ಬಲಭಾಗದ ಖಾಲಿ ಜಾಗದಲ್ಲಿ ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು, ವಸ್ತು ಪ್ರದರ್ಶನ ಮುಂತಾದ ಚಟುವಟಿಕೆಗಳು ನಡೆಯುತ್ತಿದ್ದವು. ಅನಂತರ ಇಡೀ ಕೆರೆಯ ಜಾಗವನ್ನು ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ರಾಜ್ಯ ಸಾರಿಗೆ ಸಂಸ್ಥೆಗೆ ನೀಡ ಲಾಯಿತು.

ಒಮ್ಮೆ ಪ್ರದೇಶ ಕಾಂಗ್ರೆಸ್ ಸಮಿತಿಯು ರಾಜ್ಯ ಸರ್ಕಾರದ ಸಾಧನೆಗಳನ್ನು ಪರಿಚಯಿಸುವ ವಸ್ತುಪ್ರದರ್ಶನ ಆಯೋಜಿಸಲು ನಿರ್ಧರಿಸಿ ಸಾರಿಗೆ ಸಂಸ್ಥೆಗೆ ಅರ್ಜಿ ಸಲ್ಲಿಸಿತು. ದೇವರಾಜ ಅರಸು ಮುಖ್ಯಮಂತ್ರಿ ಕೀ. ಶೇ. ಆರ್. ಗುಂಡೂರಾವ್ ಸಾರಿಗೆ ಸಚಿವ ಹಾಗೂ ಸಂಸ್ಥೆ ಅಧ್ಯಕ್ಷರು.
ಅವರು ಈ ಅರ್ಜಿಯನ್ನು ತಿರಸ್ಕರಿಸಿದರು.

ಆ ಸಂದರ್ಭದಲ್ಲಿ ಡಿ.ಎಂ.ಸಿದ್ದಯ್ಯ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ದೇವರಾಜ ಅರಸರ ಪರಮಾಪ್ತ ವೇ.ಬ್ರ.ಶ್ರೀ ಬೆಳ್ಳೂರು ಶಂಕರ ನಾರಾಯಣ್ ಅವರ ಪುತ್ರ ಬಿ.ಎಸ್. ಸತ್ಯನಾರಾಯಣ ಅವರು ಪಕ್ಷದ ಇಂಜಿನಿಯರ್ ಮತ್ತು ಸಾರ್ವಜನಿಕ ಸಂಪರ್ಕಧಿಕಾರಿ.

ಸಿದ್ದಯ್ಯನವರು ಇವರನ್ನು ಕರೆದು ಅನುಮತಿ ದೊರಕಿಸುವ ಅಧಿಕಾರ ವಹಿಸಿದರು. ಸತ್ಯನಾರಾಯಣರ ಮನವೊಲಿಕೆಗೆ ಮಣಿದ ಗುಂಡೂರಾವ್ ಎರಡು ಷರತ್ತಿನ ಮೇಲೆ ಅನುಮತಿ ನೀಡಿದರು. ರ್ಪ್ರದರ್ಶನ ಮುಗಿದ ಮೇಲೆ ಆ ಜಾಗವನ್ನು ಸಂಸ್ಥೆಗೆ ವಾಪಸು ಮಾಡಬೇಕು ಮತ್ತು ಮಧ್ಯದಲ್ಲಿದ್ದ ಚಿಕ್ಕ ರಸ್ತೆಯನ್ನು ಅಗಲಿಕರಣ ಮಾಡಿಸಿಕೊಡಬೇಕು ಎಂಬ ಒಪ್ಪಂದಕ್ಕೆ ಪಕ್ಷದ ಪರಾಗಿ ಸತ್ಯನಾರಾಯಣರೇ ಸಹಿ ಹಾಕಬೇಕು ಎಂಬ ಷರತ್ತು ಹಾಕಿದರು.

ಅದರಂತೆಯೇ ಸಾರಿಗೆ ಸಂಸ್ಥೆಗೆ ವಾಪಸಾಗಿ ಇಂದಿನ ಈ ನಿಲ್ದಾಣಗಳು ತಲೆ ಎತ್ತಿ ನಿಂತಿವೆ. ನಗರದ ಹೃದಯಭಾಗ ಹಾಗೂ ರೈಲ್ವೆ ನಿಲ್ದಾಣಗಳೆರಡಕ್ಕೂ ಹತ್ತಿರ ಇರುವ ಬಸ್ ನಿಲ್ದಾಣ ಇನ್ನೆಲ್ಲೂ ಇಲ್ಲ.
ಮಾಹಿತಿ: ವೆಂಕಟಾನರಾಯಣ, ಹಿರಿಯ ಪತ್ರಕರ್ತರು

Megha
the authorMegha

Leave a Reply

error: Content is protected !!