ಬೆಂಗಳೂರು: ಬ್ರಾಹ್ಮಣ ಸಮುದಾಯದ ಉಪ ಪಂಗಡಗಳಲ್ಲಿ ಒಂದಾದ ಸಿರಿನಾಡು ಪಂಗಡದ ಸಂಘಟನೆ ಸಿರಿನಾಡು ಮಹಾಸಭಾ ಸೆ.24ರ ಶನಿವಾರ ಬೆಳಗ್ಗೆ 11ಗಂಟೆಗೆ ಅತ್ಯಂತ ವಿಶಿಷ್ಟ ಕಾರ್ಯಕ್ರಮವೊಂದನ್ನು ಆಯೋಜಿಸಿದೆ.
ಶೇಷಾದ್ರಿಪುರ(ಶೇಷಾದ್ರಿ ಪುರ ಕಾಲೇಜು ಹಿಂಭಾಗದ ಬಡಗನಾಡು ಸಂಘದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಹಿರಿಯ ಪತ್ರಕರ್ತ ಹಾಗೂ ಸಿರಿನಾಡು ಮಹಾಸಭಾದ ಉಪಾಧ್ಯಕ್ಷ ವೆಂಕಟ ನಾರಾಯಣ ತಿಳಿಸಿದ್ದಾರೆ.
ಬ್ರಾಹ್ಮಣ ಸಮುದಾಯದ ಎಲ್ಲ ಉಪ ಪಂಗಡಗಳ ಅಧ್ಯಕ್ಷರನ್ನು ಒಂದೇ ವೇದಿಕೆಯ ಮೇಲೆ ಸೇರಿಸಿ ಗೌರವಿಸುವ ಕಾರ್ಯಕ್ರಮ ಇದಾಗಿದ್ದು, ತನ್ಮೂಲಕ ಸಮುದಾಯದ ಬಲವರ್ಧನೆ ಉದ್ದೇಶ ಹೊಂದಲಾಗಿದೆ ಎಂದು ವಿವರಿಸಿದ್ದಾರೆ.
ಇನ್ನು ಕರ್ನಾಟಕ ಶ್ರೇಷ್ಠ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಎನ್. ಕುಮಾರ್, ಸಚಿವರಾದ ಮುನಿರತ್ನ ಮತ್ತು ಡಾ. ಅಶ್ವತ್ಥನಾರಾಯಣ್, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಶ್ರೀಸಚ್ಚಿದಾನಂದ ಮೂರ್ತಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಅಧ್ಯಕ್ಷ ಹಾರ್ನಳ್ಳಿ ಅಶೋಕ್, ವಿಶ್ವ ವಿಪ್ರ ಪರಿಷತ್ ಅಧ್ಯಕ್ಷ ಎಸ್. ರಘುನಾಥ್ ಹಾಗೂ ಮಾನಸ ವೈದ್ಯಸಮೂಹ ಸಂಸ್ಥೆಗಳ ಅಧ್ಯಕ್ಷರು ಮತ್ತು ಯುವ ನಾಯಕ ಡಾ.ಎಚ್ ಎಸ್. ಶಶಿಧರ್ ಕುಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮದ ಮಾಹಿತಿ: Sirinadu Invitation-5