ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ ಆರಂಭವಾಗಿದ್ದು, ಅದರ ಅಂಗವಾಗಿ ಇಂದಿನಿಂದ ದಸರಾ ಗಜಪಡೆಗೆ ತಾಲೀಮು ಆರಂಭವಾಗಿದೆ. ಹೀಗಾಗಿ ಅರಮನೆಯಿಂದ ಬನ್ನಿಮಂಟಪದವರೆಗೂ ಈ ತಾಲೀಮು ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ನಡೆಯಲಿದೆ.
ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ತಾಲೀಮು ಶುರುವಾಗಿದೆ. ಮೊದಲ ವಾರ ಆನೆಗಳಿಗೆ ತಾವು ಸಾಗಬೇಕಾದ ಹಾದಿಯ ಪರಿಚಯ ಮಾಡಿಸುವ ಕೆಲಸ ನಡೆಯುತ್ತದೆ. ನಂತರ ಹಂತ ಹಂತವಾಗಿ ಆನೆಗಳಿಗೆ ಭಾರ ಹಾಕಿ ತಾಲೀಮು ನಡೆಸಲಾಗುತ್ತದೆ.
ಕಳೆದ ಎರಡು ವರ್ಷದಿಂದ ಕೊರೊನಾ ಹಿನ್ನೆಲೆಯಲ್ಲಿ ದಸರಾ ನಡೆಯದ ಕಾರಣ ಈ ಮಾರ್ಗವನ್ನು ಆನೆಗಳು ಮರೆತಿರುತ್ತವೆ. ಈ ದೃಷ್ಟಿಯಿಂದ ಈ ಬಾರಿ ಒಂದು ವಾರ ಕಾಲ ಕೇವಲ ಹಾದಿ ಪರಿಚಿಯಿಸುವ ತಾಲೀಮು ನಡೆಸಲಾಗುತ್ತಿದೆ. ಇದರ ಜತೆಗ ಜನಗಳನ್ನು ಕಂಡರೆ ಗಝಪಡೆ ಬೆದರದಂತೆಯೂ ತರಬೇತಿ ನೀಡಲಾಗುತ್ತಿದೆ.
57 ವರ್ಷದ ಅಭಿಮನ್ಯು, 22 ವರ್ಷದ ಭೀಮ, 38 ವರ್ಷದ ಮಹೇಂದ್ರ ಹಾಗೂ 39 ವರ್ಷದ ಗೋಪಲಸ್ವಾಮಿ, 63 ವರ್ಷದ ಅರ್ಜುನ, 59 ವರ್ಷದ ವಿಕ್ರಮ, 44 ವರ್ಷದ ಧನಂಜಯ, 45 ವರ್ಷದ ಕಾವೇರಿ, 41 ವರ್ಷದ ಗೋಪಿ, 40 ವರ್ಷದ ಶ್ರೀರಾಮ ಹಾಗೂ 63 ವರ್ಷದ ವಿಜಯಾ, 49 ವರ್ಷದ ಚೈತ್ರಾ, 21 ವರ್ಷದ ಲಕ್ಷ್ಮಿ ಹಾಗೂ 18 ವರ್ಷದ ಪಾರ್ಥಸಾರಥಿ ಆನೆಗಳ ಆಗಮನವಾಗಿದೆ.
ಇನ್ನು ದಸರಾ ಹಬ್ಬವೆಂದರೆ ಅಂಬಾರಿಯೇ ಪ್ರಮುಖ ಆಕರ್ಷಣೆಯಾಗಿರಲಿದ್ದು ಆ ಅಂಬಾರಿಯನ್ನು ಹೊತ್ತು ಸಾಗುವ ಗಜಗಳ ಪಾತ್ರವು ಪ್ರಮುಖವಾಗಿದೆ. ಈ ಹಿನ್ನೆಯಲ್ಲಿ ಆನೇಗಳಿಗೆ ತರಬೇತಿ ಕೊಡುವುದು ಬಹಳ ಮುಖ್ಯವಾಗಿದೆ.