57 ವರ್ಷ ಮೇಲ್ಪಟ್ಟ ಸಾರಿಗೆ ನೌಕರರು ಯಾವುದೇ ಲೋಪದೋಷ ಇಲ್ಲದಂತೆ ಈ ದಾಖಲಾತಿಗಳ ಸಿದ್ಧಪಡಿಸಿಟ್ಟುಕೊಳ್ಳಬೇಕು
Megha27.10.2025

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ 57 ವರ್ಷಕ್ಕಿಂತ ಮೇಲ್ಪಟ್ಟ ನೌಕರರು ಮುಂಚಿತವಾಗಿ, ಈ ದಾಖಲಾತಿಗಳನ್ನು ಯಾವುದೇ ಲೋಪದೋಷವಿಲ್ಲದ ರೀತಿಯಲ್ಲಿ ಸಿದ್ಧಪಡಿಸಿಕೊಂಡು ಇಟ್ಟುಕೊಳ್ಳಬೇಕು.
ಏಕೆಂದರೆ 58 ವರ್ಷ ಪೂರ್ಣಗೊಂಡ ನಂತರ ಪಿಂಚಣಿ ಪಡೆಯಲು ಈ ದಾಖಲಾತಿಗಳು ಅತ್ಯವಶ್ಯಕವಾಗಿದ್ದು ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಹಾಗೂ ಇನ್ನಿತರಲ್ಲಿ ಯಾವುದಾದರೂ ರೀತಿಯಲ್ಲಿ ದೋಷವಿದ್ದಲ್ಲಿ ಪಿಂಚಿಣಿ ಮಂಜೂರಾತಿಗೆ ವಿಳಂಬವಾಗುತ್ತದೆ.
ಹೀಗಾಗಿ ಈ ಮಾಹಿತಿಯನ್ನು ಸಿಬ್ಬಂದಿ ಅನುಕೂಲಕ್ಕಾಗಿ ನೀಡಲಾಗುತ್ತಿದ್ದು, ಪ್ರತಿಯೊಬ್ಬರು ಈ ಬಗ್ಗೆ ಗಮನಹರಿಸಿ ದಾಖಲಾತಿಗಳಲ್ಲಿ ಲೋಪವಿಲ್ಲದಂತೆ ಮುಂಚಿತವಾಗಿ ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ. ಇದರಿಂದ ಕಾಲಕ್ಕೆ ಸರಿಯಾಗಿ ನಿಮಗೆ ಸಿಗಬೇಕಾದ ಪಿಂಚಿಯು ಆರಂಭವಾಗುತ್ತದೆ.
ಜತೆಗೆ ನಿವೃತ್ತಿ ನಂತರ ಕಚೇರಿಯಿಂದ ಕಚೇರಿಗೆ ಅಲೆದಾಡುವುದು ಕೂಡ ತಪ್ಪುತ್ತದೆ. ಹೀಗಾಗಿ ಪ್ರತಿಯೊಬ್ಬರು ಅಧಿಕಾರಿಗಳು/ ನೌಕರರು ದಾಖಲೆಗಳ ಬಗ್ಗೆ ತಿಳಿವಳಿಕೆ ಹೊಂದುವುದು ಮುಖ್ಯವಾಗಿದೆ.

Related

Megha







