
- ನೌಕರರು ಮಾರ್ಚ್ 10ರಂದು ಕೋರ್ಟ್ ಮೆಟ್ಟಿಲೇರಿರುವುದು ಪಾಪ ಸಾರಿಗೆ ಮಂತ್ರಿಗೆ ಗೊತ್ತೇಯಿಲ್ಲವಂತೆ
- ಅಂದರೆ ಇವರು ಸಾರಿಗೆ ಇಲಾಖೆಯ ಸಚಿವರು ಅಥವಾ ಜವಾನರೋ!!?
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರಿಗೆ 2024ರ ಜ.1ರಿಂದ ಆಗಬೇಕಿರುವ ವೇತನ ಹೆಚ್ಚಳ ಸಂಬಂಧ ಹಾಗೂ 38 ತಿಂಗಳ ವೇತನ ಹಿಂಬಾಕಿ ಕೊಡಬೇಕು ಎಂದು ಕಳೆದ ಮಾ.10ರಂದು ನೌಕರರು ಹೈ ಕೋರ್ಟ್ ಮೆಟ್ಟಿಲೇರಿದ್ದು, ಈ ವಿಷಯವೆ ನಮಗೆ ಗೊತ್ತಿಲ್ಲ ಎಂದು ಹೇಳುವ ಮೂಲಕ ಜಾಣ ನಡೆಯನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅನುಸರಿಸಲು ಹೋಗಿ ಈಗ ದೊಡ್ಡ ಮೂರ್ಖರಾಗಿದ್ದಾರೆ.
ಸಾರಿಗೆ ಸಚಿವರು ಯಾಕೆ ಮೂರ್ಖರಾದರು ಎಂದು ಕೇಳಬಹುದು. ಏಕೆಂದರೆ ಹೈಕೋರ್ಟ್‌ನಿಂದ ಸರ್ಕಾರಕ್ಕೆ ಸಾರಿಗೆಯ ನಾಲ್ಕೂ ನಿಗಮಗಳ ಎಂಡಿಗಳಿಗೆ ಹಾಗೂ ಸಿಎಒ ಅವರಿಗೆ ಈ ಸಂಬಂಧ ಮಾ.11ರಂದು ನೋಟಿಸ್ ಜಾರಿ ಮಾಡಿ ಬವಳಿಕ ಇದೇ ಏ.7ರಂದು ಸರ್ಕಾರದ ಪರ ಹಾಗೂ ಸಾರಿಗೆ ನಿಗಮಗಳ ಪರ ಇಬ್ಬರು ವಕೀಲರು ಬಂದು ವಕಾಲತ್ತು ಹಾಕುವುದಕ್ಕೆ 2ವಾರಗಳ ಕಾಲ ಸಮಯ ಕೇಳಿದ್ದಾರೆ.
ಆದರೆ, ನೌಕರರು ವಕೀಲ ಎಚ್.ಬಿ.ಶಿವರಾಜು ಅವರ ಮೂಲಕ ಹೋರ್ಟ್ ಮೆಟ್ಟಿಲೇರಿರುವುದು ನಮಗೆ ಗೊತ್ತೇಯಿಲ್ಲ ಎಂದು ಹೇಳುವ ಮೂಲಕ ಮಾಧ್ಯಮದವರ ಮುಂದೆ ದೊಡ್ಡ ಮೂರ್ಖತನ ಪ್ರದರ್ಶಿಸಿದ್ದಾರೆ ಸಾರಿಗೆ ಸಚಿವರು. ಅಲ್ಲದೆ ಇವರಿಗೆ ಗೊತ್ತಿಲ್ಲದೇ ಸಾರಿಗೆ ಸಂಸ್ಥೆಯ ಹಾಗೂ ಸರ್ಕಾರದ ಪರ ವಕೀಲರು ಕೋರ್ಟ್‌ಗೆ ಬಂದು ಸಮಯ ಕೇಳಿದರೆ ಎಂಬ ಪ್ರಶ್ನೆ ಈಗ ಮೂಡುತ್ತಿದೆ.
ಒಂದು ವೇಳೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಈ ವಿಷಯವೇ ಗೊತ್ತಿಲ್ಲ ಎಂದರೆ ಇವರು ಮಂತ್ರಿಯಾಗಿ ಈ ಇಲಾಖೆಯಲ್ಲಿ ಹಾಗೂ ಸರ್ಕಾರದಲ್ಲಿ ಮುಂದುವರಿಯುವುದಕ್ಕೆ ಯೋಗ್ಯರ ಎಂಬುವುದು ಇಲ್ಲಿ ಅನುಮಾನ ಮೂಡಿಸುತ್ತಿದೆ. ಕಾರಣ ಒಬ್ಬ ಮಂತ್ರಿಗೆ ತನ್ನ ಇಲಾಖೆಯಲ್ಲಿ ನಡೆಯುತ್ತಿರುವ ಪ್ರಚಲಿತ ವಿದ್ಯಮಾನಗಳೇ ಗೊತ್ತಿಲ್ಲ ಎಂದರೆ ಆ ಮಂತ್ರಿ ಸ್ಥಾನಕ್ಕೆ ಆತ ನಾಲಾಯಕ್ ಅಲ್ಲವೇ?
ಈಗ ಹೇಳಿ ಸಾರಿಗೆ ಸಚಿವರಿಗೆ ನಿಮಗೆ ನಿಮ್ಮ ಇಲಾಖೆಯ ನೌಕರರು ವೇತನ ಹೆಚ್ಚಳ ಸಂಬಂಧ ಹೈ ಕೋರ್ಟ್‌ನಲ್ಲಿ ಸುಪ್ರೀಂ ಕೋರ್ಟ್ ಹಾಗೂ ಹೈ ಕೋರ್ಟ್ ವಕೀಲ ಎಚ್.ಬಿ.ಶಿವರಾಜು ಅವರ ಮೂಲಕ ಅರ್ಜಿ ಹಾಕಿದ್ದಾರೋ ಇಲ್ಲವೋ ಅಂತ ಈಗ ಹೇಳಿ.
ಈ ರೀತಿ ಮಾಧ್ಯಮದವರ ಹಾಗೂ ಸಾರಿಗೆ ಅಧಿಕಾರಿಗಳು/ನೌಕರರ ದಿಕ್ಕು ತಪ್ಪಿಸುವ ಹೇಳಿಕೆ ನೀಡಿ ನಗೆಪಾಟಲಿಗೆ ಗುರಿಯಾಗುವ ಬದಲು ನೌಕರರಿಗೆ ಸಂವಿಧಾನತ್ಮಕವಾಗಿ ಹಾಗೂ ಕಾನೂನು ಬದ್ಧವಾಗಿ ಸಿಗಬೇಕಿರುವ 2020ರ ಜನವರಿ 1ರಿಂದ ಅನ್ವಯವಾಗಿರುವ ಶೇ.15ರಷ್ಟು ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಹಾಗೂ 2024ರ ಜನವರಿ 1ರಿಂದ ಆಗಬೇಕಿರುವ ವೇತನ ಹೆಚ್ಚಳವನ್ನು ಮಾಡುವ ಮೂಲಕ ನೌಕರ ಸ್ನೇಹಿ ಹಾಗೂ ಸಾರ್ವಜನಿಕ ಸ್ನೇಹಿ ಆಡಳಿತ ಮಾಡಿ.
ಅದನ್ನು ಬಿಟ್ಟು ಒಂದು ಸುಳ್ಳು ಹೇಳಲು ಹೋಗಿ ಮತ್ತೊಂದು ಸುಳ್ಳುವ ಹೇಳುವ ಪರಿಸ್ಥಿರಿಗೆ ತಲುಪಿ ಈ ರೀತಿ ಜನರ ಮುಂದೆ ಹಾಗೂ ನಿಮ್ಮ ಇಲಾಖೆಯ ಹಾಗೂ ನಿಮಗಳ ಅಧಿಕಾರಿಗಳು/ನೌಕರರ ಮುಂದೆ ಜಾರಿ ಬಿದ್ದು ಮುಖಮುಚ್ಚಿಕೊಂಡು ಹೋಗುವ ಸ್ಥಿತಿಗೆ ನಿಮಗೆ ನೀವೆ ಬರಬೇಡಿ ಎಂಬುವುದು ನಮ್ಮ ಕಳಕಳಿ.