
ಕೊಪ್ಪಳ: ತೋಟದ ಮನೆಯಲ್ಲಿ ಇದ್ದ ವೇಳೆ ಸಿಡಿಲು ಬಡಿದು ಇಬ್ಬರು ಅಸುನೀಗಿರುವ ಘಟನೆ ಕೊಪ್ಪಳ ಗ್ರಾಮೀಣ ಠಾಣಾ ವ್ಯಾಪ್ತಿಯ ಚುಕ್ಕನಕಲ್ ಬಳಿ ಸಂಭವಿಸಿದೆ.
ಮಂಜುನಾಥ ಗಾಲಿ (48) ಮತ್ತು ಗೋವಿಂದಪ್ಪ ಮ್ಯಾಗಳಮನಿ (62) ಸಿಡಿಲು ಬಡಿದು ಮೃತಪಟ್ಟವರು. ನಿನ್ನೆ ಏ.10ರಂ ಗುರುವಾರ ಸಂಜೆ ಈ ಘಟನೆ ನಡೆದಿದೆ.
ಇವರಿಬ್ಬರೂ ಹಳ್ಳಿಯಲ್ಲಿರುವ ತಮ್ಮ ತೋಟದ ಮನೆಯಲ್ಲಿದ್ದರು. ಮಳೆ ಬರುತ್ತಿದ್ದಾಗ, ತೋಟದ ಮನೆಯ ಕಿಟಕಿ ಮತ್ತು ಬಾಗಿಲು ತೆರೆಯಲು ಹೋದಾಗ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ ಬಳಿಕ ದೂರು ದಾಖಲಿಸಿಕೊಂಡಿದ್ದು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.