CrimeNEWSಶಿಕ್ಷಣ-

ಒಬ್ಬನಿಗಾಗಿ ಹಾಸ್ಟೆಲ್‌ನ ಯುವತಿಯರಿಬ್ಬರ ಕಿತ್ತಾಟ – ಅತಿರೇಕಕ್ಕೆ ಹೋಗಿ ವಾರ್ಡನ್ ಬುಡಕ್ಕೆ ಬಂತು

ವಿಜಯಪಥ ಸಮಗ್ರ ಸುದ್ದಿ

ರಾಯಚೂರು: ಒಬ್ಬ ಹುಡುಗನ ಜತೆ ಯುವತಿಯರಿಬ್ಬರು ಚಾಟಿಂಗ್ ಮಾಡುತ್ತಿದ್ದು. ಬಳಿಕ ಇದೇ ವಿಚಾರಕ್ಕೆ ಗಲಾಟೆ ಮಾಡಿಕೊಂಡಿರುವ ಘಟನೆ ರಾಯಚೂರು ನಗರದ ಡಿ.ದೇವರಾಜ ಅರಸ್ ವೃತ್ತಿಪರ ಹಾಸ್ಟೆಲ್​ನಲ್ಲಿ ಜರುಗಿದೆ.

ನಾನು ಚಾಟ್ ಮಾಡೋ ಹುಡುಗನಿಗೆ ನೀನು ಚಾಟ್ ಮಾಡಬೇಡ ಎಂದು ಒಂದೇ ರೂಮಿನಲ್ಲಿ ಇದ್ದ ಇಬ್ಬರು ಯುವತಿಯರ ನಡುವೆ ಕಿರಿಕ್ ಶುರುವಾಗಿದೆ. ಅಲ್ಲದೆ ಒಬ್ಬಾಕೆ ಬಟ್ಟೆ ಬದಲಿಸುವ ವೇಳೆ ಮತ್ತೊಬ್ಬಾಕೆ ತನ್ನ ಬಾಯ್ ಫ್ರೆಂಡ್‌ಗೆ ವಿಡಿಯೋ ಕಾಲ್ ಮಾಡಿ ಆಕೆಯ ಮೈ ಪ್ರದರ್ಶನ ಮಾಡಿಸಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಇದಲ್ಲದೆ, ರಾತ್ರಿ ಬಾಯ್ ಫ್ರೆಂಡ್‌ಅನ್ನು ಹಾಸ್ಟೆಲ್ ಆಚೆ ಕರೆಯಿಸಿ ಬಹಳ ಸಮಯದವರೆಗೆ ಟೈಂ ಪಾಸ್ ಮಾಡಿದ್ದಾರೆ ಎಂಬುವುದು ಸಹ ಬೆಳಕಿಗೆ ಬಂದಿದೆ.

ಈ ವಿಚಾರಗಳನ್ನೆಲ್ಲ ತಿಳಿದು ಅದಕ್ಕೆ ಬ್ರೇಕ್ ಹಾಕಲು ಹೊರಟ ವಾರ್ಡನ್​​ ಅವರನ್ನೇ ಈ ವಿದ್ಯಾರ್ಥಿನಿಯರು ಈಗ ಟಾರ್ಗೆಟ್ ಮಾಡಿದ್ದು, ಸಣ್ಣಪುಟ್ಟ ಲೋಪವನ್ನೇ ದೊಡ್ಡದಾಗಿ ಸೃಷ್ಟಿಸಿ ವಾರ್ಡನ್ ಎತ್ತಂಗಡಿ ಮಾಡಬೇಕು ಎಂದು ವಿದ್ಯಾರ್ಥಿನಿಯರು ಪಟ್ಟುಹಿಡಿದಿದ್ದಾರೆ.

ವೃತ್ತಿಪರ ಹಾಸ್ಟೆಲ್ ವಾರ್ಡನ್ ಗಿರಿಜಾ ಮಾಲಿ ಪಾಟೀಲ್ ವಿದ್ಯಾರ್ಥಿನಿಯರ ಈ ನಡೆಯಿಂದ ಅಸಮಾಧಾನಗೊಂಡಿದ್ದು, ಆಕ್ರೋಶ ಹೊರಹಾಕಿದ್ದಾರೆ. ಹಾಸ್ಟೆಲ್‌ನಲ್ಲಿ ಯಾವಾಗಲೂ ಗಲಾಟೆ, ಪರಸ್ಪರ ಕಿತ್ತಾಟ ನಡೆಯುತ್ತಿದೆ. ನೀರಿನ ವಿಚಾರವಾಗಿ ಸದಾಕಾಲ ಹಾಸ್ಟೆಲ್ ವಿದ್ಯಾರ್ಥಿನಿಯರು ನನಗೆ ಕಿರುಕುಳ ನೀಡುತ್ತಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

ಸದ್ಯ ಈ ಜಗಳ ಅತಿರೇಕಕ್ಕೆ ತಲುಪಿದ್ದು, ವಾರ್ಡನ್ ಎತ್ತಂಗಡಿಗೆ ಎಲ್ಲ ಸಿದ್ಧತೆ ನಡೆದಿದೆ ಎಂದು ಕೂಡ ಹೇಳಲಾಗುತ್ತಿದೆ. ಆದರೆ, ಇಲ್ಲಿ ಸತ್ಯ ಯಾವುದು ಸುಳ್ಳಾವುದು ಎಂಬುದನ್ನು ಮೊದಲು ಸಂಬಂಧಪಟ್ಟ ಅಧಿಕಾರಿಗಳು ತಿಳಿದುಕೊಂಡು ನಂತರ ಕ್ರಮ ಕೈಗೊಳ್ಳಬೇಕು ಎಂದುವುದು ವಾರ್ಡನ್ ಗಿರಿಜಾ ಮಾಲಿ ಪಾಟೀಲ್ ಹೇಳುತ್ತಿದ್ದಾರೆ.

Leave a Reply

error: Content is protected !!
LATEST
ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ವಿರೋಧಿಸಿ ನಾಳೆ ರಾಜ್ಯಾದ್ಯಂತ ಎಎಪಿ ಪ್ರತಿಭಟನೆ ನಟ ದರ್ಶನ್‌ ಸ್ಥಿತಿಗೆ ಮರುಗಿ ಅಭಿಮಾನಿ ಅನ್ನನೀರು ಬಿಟ್ಟು ಆತ್ಮಹತ್ಯೆಗೆ ಶರಣು? KSRTC ‘ಅಶ್ವಮೇಧ’ಗಳಿಂದ ಸಂಸ್ಥೆಗೆ ಶೇ.10ಕ್ಕೂ ಹೆಚ್ಚು ಲಾಭ : ಸಚಿವ ರಾಮಲಿಂಗಾರೆಡ್ಡಿ ಅತೀ ಶೀಘ್ರದಲ್ಲೇ NWKRTC ಒಡಲು ಸೇರಲಿವೆ 350 ಹೊಸ ಎಲೆಕ್ಟ್ರಿಕ್​ ಬಸ್‌ಗಳು 15 ದಿನದ ಹಸುಳೆಗೆ ಯಶಸ್ವಿ ಹೃದಯ ಶಸ್ತ್ರ ಚಿಕಿತ್ಸೆ - ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ ವೈದ್ಯರ ಸಾಧನೆ ಬಾಲ ಕಾರ್ಮಿಕ ಪದ್ದತಿಯ ನಿರ್ಮೂಲನೆಗೆ ಶಿಕ್ಷಣವೇ ಬ್ರಹ್ಮಸ್ತ್ರ: ಅಪರ ಸಿವಿಲ್ ನ್ಯಾಯಾಧೀಶೆ ಶಕುಂತಲಾ ಯೋಗ ಮಾಡಿ ಸಮೃದ್ಧ ಆರೋಗ್ಯವಂತ ಜೀವನ ನಡೆಸಿ: ಡಾ. ದಿವ್ಯಾ ಸಲಹೆ ಪೆಟ್ರೋಲ್, ಡೀಸೆಲ್ ದರ ಹೆಚ್ಚಿಸಿ ಜನರ ಜೇಬಿಗೆ ಕತ್ತರಿ ಹಾಕಿದ ಸರ್ಕಾರ: ಎಎಪಿ ಆಕ್ರೋಶ KSRTC ಬಸ್‌ನಲ್ಲಿ ಪ್ರಯಾಣಿಸುವಾಗ ಟಿಕೆಟ್‌ ಕಳೆದುಕೊಂಡ ಮಹಿಳೆ: ತನಿಖಾಧಿಕಾರಿಗಳಿಗೆ ಹೆದರಿ ಬಸ್‌ನಿಂದ ಕೆಳಗಿಳಿಸಿದ ಕಂಡ... ಜುಲೈ 7ರಂದು KSRTC ನೌಕರರ ಕ್ರೆಡಿಟ್‌ ಸಹಕಾರ ಸಂಘದ ಚುನಾವಣೆ- ಜೂ.27ರಿಂದ ನಾಮಪತ್ರ ಸಲ್ಲಿಕೆ