NEWSನಮ್ಮರಾಜ್ಯನಿಮ್ಮ ಪತ್ರ

KSRTC ಹಳೆಯ 1500 ಬಸ್‌ಗಳ ನವೀಕರಣ – ಈಗಾಗಲೇ 500 ಬಸ್‌ಗಳಿಗೆ ಮೇಜರ್‌ ಸರ್ಜರಿ ಮಾಡಿ ಮುಗಿಸಿರುವ ನುರಿತ ತಜ್ಞರ ತಂಡ

ಮಧುವಣಗಿತ್ತಿಯಂತೆ ಮಿನುಗುತ್ತಿರುವ ಗುಜರಿ ಸೇರಬೇಕಿದ್ದ ವಾಹನಗಳು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬಸ್‌ನ ಬಾಡಿ ಸೇರಿದಂತೆ ಇತರೆ ಭಾಗಗಳು ಹಾಳಾಗಿರುವುದನ್ನು ತೆಗೆದು ಹೊಸತನ್ನು ಅಳವಡಿಸುವ ಮೂಲಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (ಕೆಎಸ್‌ಆರ್‌ಟಿಸಿ ಹಳೆಯ ಬಸ್‌ಗಳನ್ನು ನವೀಕರಿ ರಸ್ತೆಗಿಳಿಸಲು ಈಗಾಗಲೇ ಕೆಲಸ ಆರಂಭಿಸಿದೆ.

ಕೊರೊನಾ ಸಂಕಷ್ಟದಿಂದ ತುಂಬ ನಷ್ಟ ಅನುಭವಿಸಿರುವ ಸಂಸ್ಥೆ, ಅದನ್ನು ಸರಿದೂಗಿಸುವ ಸಲುವಾಗಿ ಸಂಸ್ಥೆ ತನ್ನಲ್ಲಿರುವ ಸಂಪನ್ಮೂಲಗಳನ್ನೇ ಸಮರ್ಪಕವಾಗಿ ಬಳಸಿಕೊಂಡು ರಾಜ್ಯದ ಎಲ್ಲ ವಿಭಾಗೀಯ ಮತ್ತು ಪ್ರಾದೇಶಿಕ ಕಾರ್ಯಾಗಾರಗಳಲ್ಲಿ ಹಳೆಯ ಬಸ್‌ಗಳನ್ನು ನವೀಕರಿಸುತ್ತಿದೆ.

ಈ ಮೂಲಕ ಹಳೇ ಬಸ್‌ಗಳನ್ನೇ ರಿಪೇರಿ ಮಾಡಿ ರಸ್ತೆಗಳಿಸಲು ಮುಂದಾಗಿದ್ದು, ಅದಕ್ಕಾಗಿಯೇ ಈಗ ರಿಪೇರಿ ಆಗಬೇಕಿರುವ ಒಂದೂವರೆ ಸಾವಿರ ಬಸ್‌ಗಳ ನವೀಕರಣ ಮಾಡುತ್ತಿದೆ. ಈ ಬಸ್‌ಗಳು 10ರಿಂದ 11 ವರ್ಷಗಳ ಕಾಲ ಪ್ರಯಾಣಿಕರನ್ನು ಒಂದುಕಡೆಯಿಂದ ಮತ್ತೊಂದು ಸ್ಥಳಕ್ಕೆ ತಲುಪಿಸಿವೆ.

ಈ ನಡುವೆ ತಲಾ 10 ಲಕ್ಷ ಕಿಮೀ ಸಂಚರಿಸಿದ ಬಳಿಕ ದುಸ್ತಿಗೊಳ್ಳದೆ ನಿಂತಲೇ ನಿಂತಿವೆ. ಹೀಗಾಗಿ ಧೂಳು ಹಿಡಿಯುತ್ತ ನಿಂತ ಈ ಒಂದೂವರೆ ಸಾವಿರ ಬಸ್‌ಗಳನ್ನು ನವೀಕರಿಸಲಾಗುತ್ತಿದ್ದು, 2022ರ ಆಗಸ್ಟ್‌ನಿಂದಲೇ ಈ ನವೀಕರಣ ಕೆಲಸಕ್ಕೆ ಕೈಯಾಕಿದ್ದು, ಈವರೆಗೆ 500 ಬಸ್‌ಗಳ ನವೀಕರಣ ಕಾರ್ಯ ಮುಗಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಕೆಂಗೇರಿಯಲ್ಲಿರುವ ಪ್ರಾದೇಶಿಕ ಕಾರ್ಯಾಗಾರದಲ್ಲಿ 180ಬಸ್‌ಗಳು ನವೀಕರನಗೊಂಡಿದ್ದು, ಅದರಂತೆ ಹಾಸನದ ಪ್ರಾದೇಶಿಕ ಕಾರ್ಯಾಗಾರದಲ್ಲಿ 180 ಬಸ್‌ಗಳು ಸೇರಿ ಇತರ ಕಾರ್ಯಾಗಾರಗಳಲ್ಲಿ ಈಗಾಗಲೇ 500 ಬಸ್‌ಗಳು ನವೀಕರಣಗೊಂಡಿವೆ.

ಒಮ್ಮೆ ನವೀಕರಿಸಿದ ಬಸ್‌ಗಳನ್ನು 3-4 ವರ್ಷಗಳ ಕಾಲ ಸಣ್ಣಪುಟ್ಟ ಸಮಸ್ಯೆ ಹೊರತುಪಡಿಸಿ ಯಾವುದೇ ತೊಂದರೆ ಇಲ್ಲದೆ ಕಾರ್ಯಾಚರಣೆ ಮಾಡಬಹುದಾಗಿದೆ. ಇನ್ನು ಒಂದು ಬಸ್‌ ನವೀಕರಿಸಲು 12 ದಿನಗಳು ಬೇಕಾಗುತ್ತದೆ. ಅಂದರೆ ತಿಂಗಳಿಗೆ ಸುಮಾರು 50 ಬಸ್‌ಗಳಿಗೆ ಹೊಸ ರೂಪ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೊಸದಾಗಿ ಏನೆಲ್ಲ ಅಳವಡಿಕೆ: ಈಗಾಗಲೇ 10-11 ವರಷ್‌ ಓಡಿರುವ ಬಸ್‌ಗಳಾಗಿರುವುದರಿಂದ ಅವುಗಳ ಬಹುತೇಕ ಭಾಗಗಳು ಹಾಳಾಗಿರುತ್ತವೆ. ಹೀಗೆ ಹಾನಿಗೊಳಗಾದ ಭಾಗಗಳನ್ನು ತೆಗೆದುಹಾಕಿ, ಬಾಡಿಯನ್ನು ಹೊಸದಾಗಿ ನಿರ್ಮಿಸಲಾಗುವುದು. ಇನ್ನು ಕಿಟಕಿಗಳು ಮತ್ತು ವಿಂಡ್ ಶೀಲ್ಡ್‌ಗಳ ಮೇಲಿನ ಗ್ಲಾಸ್‌ಗಳನ್ನು ಬದಲಾಯಿಸಲಾಗುತ್ತಿದೆ. ಹೊಸ ಸೀಟ್ ಕುಶನ್‌ಗಳು ಮತ್ತು ಕವರ್ ಹಾಕಲಾಗುತ್ತಿದೆ.

ಇದೆಲ್ಲ ಆದ ಮೇಲೆ ನವೀಕರಿಸಿದ ಬಸ್‌ಗಳಿಗೆ ಆರ್‌ಟಿಒನಿಂದ ಫಿಟ್‌ನೆಸ್‌ ಸರ್ಟಿಫಿಕೆಟ್‌ ಪಡೆದು ಬಳಿಕ ರಸ್ತೆಗಿಳಿಸಲಾಗುವುದು. ಅಲ್ಲಿಯ ವರೆಗೂ ನಾವು ಎಲ್ಲ ಹಾಳಾಗಿರುವ ಬಸ್‌ಗಳನ್ನು ಹೊಸ ಬಸ್‌ಗಳಿಗೆ ಸರಿ ಸಮಾನಾಗಿ ಸಿದ್ಧಗೊಳಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಸಿಬ್ಬಂದಿಗೆ ಲಕ್ಷ ರೂ. ಬಹುಮಾನ: ಆಗಸ್ಟ್ 1 ರಂದು ಕೆಎಸ್‌ಆರ್‌ಟಿಸಿಯ 63ನೇ ವರ್ಷದ ಸಂಸ್ಥಾಪಕರ ದಿನಾಚರಣೆ ಮಾಡಲಾಗುವುದು. ಈ ಹಿನ್ನೆಲೆಯಲ್ಲಿ ಅತ್ಯಂತ ಹೆಚ್ಚು ಬಸ್‌ಗಳ ನವೀಕರಣ ಮಾಡುವ ವಿಭಾಗೀಯ ಕಾರ್ಯಾಗಾರ ಮತ್ತು ಪ್ರಾದೇಶಿಕ ಕಾರ್ಯಾಗಾರದ ಸದಸ್ಯರ ತಂಡಕ್ಕೆ ಒಂದು ಲಕ್ಷ ರೂ. ಬಹುಮಾನ ನೀಡಲು ನಿರ್ಧರಿಸಲಾಗಿದೆ. ಸಿಬ್ಬಂದಿಯ ಕೆಲಸ-ಕಾರ್ಯಗಳನ್ನು ಉತ್ತೇಜಿಸುವ ಸಲುವಾಗಿ ಈ ಬಹುಮಾನ ಘೋಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಲ ಬಸ್‌ಗಳನ್ನು ಅಂದರೆ ಈ ಹಿಂದೆ ಖರೀದಿಸಿದ ಬಸ್‌ಗಳನ್ನು ಬಿಎಂಟಿಸಿಯಲ್ಲಿ ಇತ್ತೀಚೆಗೆ ರಸ್ತೆಗಿಳಿಸಿದ್ದೂ ಬಿಟ್ಟರೆ ಕೆಎಸ್‌ಆರ್‌ಟಿಸಿ ನಿಗಮದಿಂದ ಕಳೆದ ಐದು ವರ್ಷಗಳಲ್ಲಿ ನಾವು ಯಾವುದೇ ಹೊಸ ಬಸ್‌ಗಳನ್ನು ಖರೀದಿ ಮಾಡಿಲ್ಲ. ಈಗ ನಾವು ಬಸ್ ಖರೀದಿ ಮಾಡಬೇಖು ಎಂದರೆ ಒಂದು ಬಸ್‌ಗೆ ಸುಮಾರು 40 ಲಕ್ಷ ರೂ. ಬೇಕಾಗುತ್ತದೆ. ಹೀಗಾಗಿ ಹಳೇ ಬಸ್‌ಗಳನ್ನೇ ನವೀಕರಿಸಿದರೆ ಅಂದಾಜು 3 ಲಕ್ಷ ರೂ.ವರೆಗೆ ಖರ್ಚಾಗಲಿದೆ. ಇದರಿಂದ ಸಂಸ್ಥೆಗೂ ಸುಮಾರು 37 ಸಾವಿರ ಕೋಟಿ ರೂ.ಗಳು ಉಳಿತಾಯವಾಗಲಿದೆ.

l ಅನ್ಬುಕುಮಾರ್, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ

Leave a Reply

error: Content is protected !!
LATEST
ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ