NEWSನಮ್ಮಜಿಲ್ಲೆನಮ್ಮರಾಜ್ಯ

ವಿಜಯಪಥ ವರದಿ ಪರಿಣಾಮ: ಎಚ್ಚೆತ್ತ ರಾಜ್ಯ ಸರ್ಕಾರ- ಹೆಂಗಳೆಯರ ಶಕ್ತಿ ಯೋಜನೆಯ ಉಚಿತ ಪ್ರಯಾಣದ ಮೊತ್ತ ಪ್ರತಿ ತಿಂಗಳ ಮೊದಲ ವಾರದಲ್ಲೇ ಬಿಡುಗಡೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ವಿಜಯಪಥ.ಇನ್‌  www.vijayapatha.in ವರದಿಗೆ ಎಚ್ಚೆತ್ತ ರಾಜ್ಯ ಸರ್ಕಾರ ಪ್ರತಿ ತಿಂಗಳ ಮೊದಲ ವಾರದಲ್ಲೇ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ಮಾಡಿದ ಮಹಿಳೆಯರ ಟಿಕೆಟ್‌ ಮೌಲ್ಯದ ಮೊತ್ತವನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದೆ.

ಕಳೆದ ಜೂನ್‌ ತಿಂಗಳ ಟಿಕೆಟ್‌ ಮೌಲ್ಯದ ಮೊತ್ತವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿರಲಿಲ್ಲ ಈ ಬಗ್ಗೆ ವಿಜಯಪಥ.ಇನ್‌  www.vijayapatha.in ಇದೇ ಜುಲೈ 19ರಂದು  KSRTC – ಶಕ್ತಿ ಯೋಜನೆಯಡಿ ಹೆಂಗಳೆಯರ ಉಚಿತ ಪ್ರಯಾಣ: ಜೂನ್‌ ತಿಂಗಳ 248,30,13,266 ರೂ. ಇನ್ನೂ ಬಿಡುಗಡೆ ಮಾಡದ ಸರ್ಕಾರ ಎಂಬ ಶೀರ್ಷಿಕೆಯಡಿ ವರದಿ ಮಾಡಿತ್ತು.

ಈ ವರದಿಗೆ ಎಚ್ಚೆತ್ತ ಸರ್ಕಾರ ಒಂದು ತಿಂಗಳ ಟಿಕೆಟ್‌ ಮೌಲ್ಯದ ಮೊತ್ತವನ್ನು ಅಂದರೆ, ಜುಲೈ ತಿಂಗಳಿನದ್ದನ್ನು ಬಾಕಿ ಉಳಿಸಿಕೊಂಡು ಜೂನ್‌ ತಿಂಗಳ ಮೊತ್ತವನ್ನು ಬರುವ ಆಗಸ್ಟ್‌ ಮೊದಲ ವಾರದಲ್ಲಿ ನೀಡಲು ನಿರ್ಧರಿಸಿರುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಈ ಮೂಲಕ ರಾಜ್ಯದ ಹೆಂಗಳೆಯರು ಉಚಿತವಾಗಿ ರಾಜ್ಯ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸುವ ‘ಶಕ್ತಿ’ ಯೋಜನೆ ಜಾರಿ ಸಂಬಂಧ ಉಚಿತ ಪ್ರಯಾಣದ ಟಿಕೆಟ್‌ ಮೌಲ್ಯದ ಮೊತ್ತ ಸರ್ಕಾರದಿಂದ ನಿಗಮಗಳಿಗೆ ಯಾವಾಗ ದೊರೆಯಲಿದೆ ಎಂಬ ಆತಂಕಕ್ಕೆ ಸಚಿವರು ತೆರೆ ಎಳೆದಿದ್ದಾರೆ.

ಇನ್ನು ಮೊದಲಿಗೆ ಜೂನ್‌ ತಿಂಗಳ ಮೊತ್ತ 248.30 ಕೋಟಿ ರೂ.ಗಳು ಸೇರಿ ಜುಲೈ 31ಕ್ಕೆ ಎಷ್ಟಾಗಲಿದೆಯೋ ಆ ಮೊತ್ತವನ್ನು ಆಗಸ್ಟ್‌ ಮೊದಲ ವಾರದಲ್ಲಿ ನಿಗಮಗಳಿಗೆ ಸರ್ಕಾರದಿಂದ ಪಾವತಿಸಲಾಗುವುದು. ಅಂದರೆ, ಜೂನ್‌ 11ರಿಂದ 30ರವರೆಗೆ ರಾಜ್ಯ ರಸ್ತೆ ಸಾರಿಗೆಯ ಸಾಮಾನ್ಯ ಬಸ್‌ಗಳಲ್ಲಿ 10.54 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದು, ಅದರ ಟಿಕೆಟ್‌ ಮೌಲ್ಯ 248.30 ಕೋಟಿ ರೂ.ಗಳಾಗಿದೆ.

ಯೋಜನೆ ಜಾರಿಗೂ ಮುನ್ನ ನಾಲ್ಕೂ ನಿಗಮಗಳ ಬಸ್‌ಗಳಲ್ಲಿ 82 ಲಕ್ಷ ಜನರು ಪ್ರಯಾಣಿಸುತ್ತಿದ್ದರು. ಆದರೀಗ ಈ ಸಂಖ್ಯೆ 1.10 ಕೋಟಿಗೆ ಹೆಚ್ಚಳವಾಗಿದೆ. ಮಹಿಳಾ ಪ್ರಯಾಣಿಕರ ಸಂಖ್ಯೆಯೇ 60 ಲಕ್ಷಕ್ಕೂ ಹೆಚ್ಚಿದೆ. ಉಚಿತ ಪ್ರಯಾಣದ ಮೊತ್ತ ಸಕಾಲದಲ್ಲಿ ಸಿಗದೇ ಇದ್ದರೆ ನೌಕರರ ವೇತನ ಇತ್ಯಾದಿಗಳನ್ನು ಆಯಾ ತಿಂಗಳಲ್ಲಿ ನೀಡುವುದು ಕಷ್ಟಕರವಾಗುತ್ತಿತ್ತು. ಹೀಗಾಗಿ ಸರ್ಕಾರ ಒಂದು ತಿಂಗಳು ಬಾಕಿ ಉಳಿಸಿಕೊಂಡು, ಜೂನ್‌ ತಿಂಗಳ ಮೊತ್ತವನ್ನು ಪಾವತಿಸಲು ನಿರ್ಧರಿಸಿದೆ.

ಜೂನ್‌ 11ರಂದು ಯೋಜನೆ ಆರಂಭಗೊಂಡಾಗ ಸರಾಸರಿ 55 ಲಕ್ಷವಿದ್ದ ಉಚಿತವಾಗಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರ ಸಂಖ್ಯೆ ಈಗ ಸರಾಸರಿ 62ರಿಂದ 65 ಲಕ್ಷಕ್ಕೆ ಹೆಚ್ಚಳವಾಗಿದೆ. ಮಹಿಳಾ ಪ್ರಯಾಣಿಕರ ಟಿಕೆಟ್‌ ಮೊತ್ತದ ಮೌಲ್ಯವನ್ನು ಪ್ರತಿ ಮೂರು ತಿಂಗಳಿಗೆ ಲೆಕ್ಕ ಹಾಕಿ ಪಾವತಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗಿತ್ತು. ಆದರೆ, ಮೂರು ತಿಂಗಳವರೆಗೆ ಹಣ ಪಾವತಿಸದಿದ್ದರೆ ನಿಗಮಗಳು ಕಾರ್ಯನಿರ್ವಹಿಸುವುದು ಕಷ್ಟವಾಗಲಿದೆ. ಹೀಗಾಗಿ ಪ್ರತಿ ತಿಂಗಳು ಶಕ್ತಿ ಯೋಜನೆ ಮೊತ್ತವನ್ನು ಪಾವತಿಸಬೇಕು ಎಂದು ನಿಗಮಗಳ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದರು.

ಈ ಬಗ್ಗೆ ವಿಜಯಪಥ.ಇನ್‌  www.vijayapatha.in ಕೂಡ ಸಮಗ್ರವಾದ ವರದಿ ಮಾಡಿತ್ತು. ಶಕ್ತಿ ಯೋಜನೆಗಾಗಿ ಸರ್ಕಾರ ಬಜೆಟ್‌ನಲ್ಲಿ 2,800 ಕೋಟಿ ರೂ. ಮೀಸಲಿಟ್ಟಿದೆ. ಜೂನ್‌ನಲ್ಲಿ ಯೋಜನೆ ಆರಂಭವಾದ ಕಾರಣ 2023-24ನೇ ಸಾಲಿನಲ್ಲಿ 10 ತಿಂಗಳು ಈ ಮೊತ್ತವನ್ನು ವ್ಯಯಿಸಲಾಗುತ್ತದೆ. ಅದರ ಪ್ರಕಾರ ಪ್ರತಿ ತಿಂಗಳಿಗೆ 280 ಕೋಟಿ ರೂ. ಶಕ್ತಿ ಯೋಜನೆ ಮೊತ್ತ ಎಂದು ಅಂದಾಜಿಸಲಾಗಿದೆ.

ಅದರೆ, ಜುಲೈ ತಿಂಗಳಲ್ಲಿ 29ನೇ ತಾರೀಖಿನವರೆಗೆ ಮಹಿಳೆಯರ ಉಚಿತ ಪ್ರಯಾಣದ ಮೊತ್ತ 426.58 ಕೋಟಿ ರೂ.ಗಳಾಗಿದೆ. ತಿಂಗಳಾಂತ್ಯಕ್ಕೆ ಮೊತ್ತ 450 ಕೋಟಿ ರೂ.ಗಳಾಗುವ ಸಾಧ್ಯತೆಗಳಿವೆ. ಪ್ರತಿ ತಿಂಗಳ ಮೊತ್ತ ಸರಾಸರಿ 400 ಕೋಟಿ ರೂ. ದಾಟಿದರೆ 2023-24ನೇ ಸಾಲಿಗೇ 3,600 ಕೋಟಿ ರೂ.ಗೂ ಹೆಚ್ಚಿನ ಮೊತ್ತ ಬೇಕಾಗುತ್ತದೆ.

ಶಕ್ತಿ ಯೋಜನೆಗೆ ಸರ್ಕಾರದಿಂದ ಕೊಡಬೇಕಾಗಿರುವ ಅನುದಾನವನ್ನು ಪ್ರತಿ ತಿಂಗಳ ಮೊದಲ ವಾರ ನೀಡಲು ನಿರ್ಧರಿಸಲಾಗಿದೆ. ಜೂನ್‌ ತಿಂಗಳ ಮೊತ್ತ ಆಗಸ್ಟ್‌ ಮೊದಲ ವಾರ ಪಾವತಿಯಾಗಲಿದೆ. ನಿಗಮಗಳಿಗೆ ಆರ್ಥಿಕ ಸಂಕಷ್ಟ ಎದುರಾಗದಂತೆ ಕ್ರಮವಹಿಸಲಾಗುತ್ತದೆ.

l ರಾಮಲಿಂಗಾರೆಡ್ಡಿ, ಸಾರಿಗೆ ಸಚಿವರು

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು