ವಿಜಯಪುರ: ಮೆದುಳು ಜ್ವರಕ್ಕೆ ಬಾಲಕನೊಬ್ಬ ಬಲಿಯಾದ ಘಟನೆ ನಗರದ ಗೋಳಗುಮ್ಮಟ ಏರಿಯಾದಲ್ಲಿ ನಡೆದಿದೆ.
ರಜಿತ್ ಮಿಥುನ್ ಅಳ್ಳಿಮೋರೆ (10) ಮೃತ ಬಾಲಕ. ಈತ ಗೋಳಗುಮ್ಮಟ ಬಡವಾಣೆ ನಿವಾಸಿಯಾಗಿದ್ದ. ವಾರದ ಹಿಂದೆ ರಜಿತ್ ತೀವ್ರ ಜ್ವರದಿಂದ ಬಳಲುತ್ತಿದ್ದ. ಚಿಕಿತ್ಸೆಗಾಗಿ ಮಹಾರಾಷ್ಟ್ರದ ಸೊಲ್ಲಾಪುರ ಆಸ್ಪತ್ರೆಗೆ ರಜಿತ್‌ನನ್ನ ದಾಖಲಿಸಲಾಗಿತ್ತು.
ಆದರೆ, ಜ್ವರ ನೆತ್ತಿಗೆ ಏರಿದ್ದರಿಂದ ಮೆದುಳಲ್ಲಿ ಬಾವು ಕಾಣಿಸಿಕೊಂಡಿತ್ತು. ಹೀಗಾಗಿ ಚಿಕಿತ್ಸೆ ಸ್ಪಂದಿಸದೆ ಬಾಲಕ ಅಸುನೀಗಿದ್ದಾನೆ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಏನು ಅರಿಯದ ಬಾಲಕ ಕೊನೆಯುಸಿರೆಳೆದಿದ್ದರಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು.
ಮೆದುಳು ಜ್ವರದ ಲಕ್ಷಣಗಳು * ಜ್ವರ, ತಲೆನೋವು * ಮಗುವಿನ ತಲೆಯಲ್ಲಿ ಮೃದುವಾದ ಗುಳ್ಳೆಗಳು ಏಳುವುದು * ಬೆಳಕಿಗೆ ಕಣ್ಣು ತೆರೆಯಲು ಸಾಧ್ಯವಾಗದಿರುವುದು
* ಕುತ್ತಿಗೆ ಬಿಗಿಯಾಗುವುದು * ಕೋಮಾವಸ್ಥೆ * ತ್ವಚೆಯಲ್ಲಿ ಗುಳ್ಳೆಗಳು * ಹಸಿವು ಇಲ್ಲದಿರುವುದು * ಮಾತನಾಡುವಾಗ ತೊದಲುವುದು * ಮೈಯಲ್ಲಿ ನಡುಕ ಉಂಟಾಗುವ ಮೂಲಕ ಜ್ವರದ ತೀವ್ರತೆಯನ್ನು ತೋರಿಸುತ್ತದೆ. ಈ ಬಗ್ಗೆ ಪಾಲಕರು ಎಚ್ಚರಿಕೆಯಿಂದ ಇರಬೇಕು.