Please assign a menu to the primary menu location under menu

NEWSನಮ್ಮಜಿಲ್ಲೆನಮ್ಮರಾಜ್ಯ

ವಿಜಯಪುರ- ಖಾಸಗಿ ಬಸ್‌ಗಳ ಕಾರ್ಯಾಚರಣೆಗೆ ಅವಕಾಶ: ಸಾರಿಗೆ ನೌಕರರ ಸಂಘಟನೆಗಳ ಪದಾಧಿಕಾರಿಗಳ ವಿರೋಧ, ಪ್ರತಿಭಟನೆ ಎಚ್ಚರಿಕೆ

ವಿಜಯಪಥ ಸಮಗ್ರ ಸುದ್ದಿ

ವಿಜಯಪುರ: ಜಿಲ್ಲೆಯು ಸಂಪೂರ್ಣ ರಾಷ್ಟ್ರಕೃತ ವಲಯವಾಗಿದ್ದು, ಈ ವಲಯದಲ್ಲಿ ಖಾಸಗಿ ಬಸ್‌ಗಳ ಕಾರ್ಯಾಚರಣೆಗೆ ಅವಕಾಶವಿಲ್ಲ. ಆದಾಗ್ಯೂ ಸಹ 24-08-2022ರಂದು ನಡೆದ ಎಸ್.ಟಿ.ಎ ಸಭೆಯ ನಡಾವಳಿಯಲ್ಲಿ ಕರ್ನಾಟಕ ಸರ್ಕಾರವು ಬೇಂದ್ರೆ ಸಾರಿಗೆ ಎಂಬ ಖಾಸಗಿ ಪ್ರವರ್ತಕರಿಗೆ ಬೆಳಗಾವಿ – ಅಥಣಿ – ವಿಜಯಪುರ ಮಾರ್ಗದಲ್ಲಿ 41ರಹದಾರಿಗಳಿಗೆ ಒಪ್ಪಿಗೆ ಸೂಚಿಸಿ, ಆದೇಶ ಹೊರಡಿಸಿದೆ. ಈ ಆದೇಶವನ್ನು ವಾಪಸ್‌ ಪಡೆಯಬೇಕು ಎಂದು ಬಿಜಯಪುರ ವಿಭಾಗದ ಸಾರಿಗೆ ಸಾರಿಗೆ ನೌಕರರ ಕೂಟ ಮತ್ತು ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

ಈ ವಿಷಯವಾಗಿ ಈ ಎರಡೂ ಸಂಘಟನೆಗಳ ಪದಾಧಿಕಾರಿಗಳು ಪ್ರತಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಈಗಾಗಲೇ ಸಾರಿಗೆ ಸಂಸ್ಥೆಯಿಂದ ಈ ಮಾರ್ಗದಲ್ಲಿ ಪ್ರತಿ 15 ನಿಮಿಷಕ್ಕೊಂದರಂತೆ ಬಸ್‌ಗಳನ್ನು ಕಾರ್ಯಾಚರಣೆ ಮಾಡುತ್ತಿದೆ. ಈ ವಿಷಯ ಸರ್ಕಾರಕ್ಕೆ ಗೊತ್ತಿದ್ದರೂ ಕೂಡ ಖಾಸಗಿ ವಾಹನಗಳಿಗೆ ಪರವಾನಗಿ ನೀಡಿರುವುದು ಕಾರ್ಮಿಕ ವಿರೋಧಿಯಾಗಿದೆ. ಹೀಗಾಗಿ ಈ ಆದೇಶವನ್ನು ವಾಪಸ್‌ ಪಡೆಯಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಜಯಪುರ ವಿಭಾಗದ ಸಮಸ್ತ ಕಾರ್ಮಿಕ ಸಂಘಟನೆ ಮುಖಂಡರು ಹಾಗೂ ಸದಸ್ಯರು ಜಂಟಿಯಾಗಿ ಈ ಮೂಲಕ ತಮ್ಮ ಗಮನಕ್ಕೆ (ಸರ್ಕಾರ) ತರಬಯಸುವದೇನೆಂದರೆ, ಹುಬ್ಬಳ್ಳಿ -ಬಾಗಲಕೋಟೆ-ವಿಜಯಪುರ ಮಾರ್ಗದಲ್ಲಿ 15, ಹುಬ್ಬಳ್ಳಿ-ಗದಗ ನಡುವೆ 11 ಹಾಗೂ ಬೆಳಗಾವಿ- ಅಥಣಿ-ವಿಜಯಪುರ ಮಾರ್ಗದಲ್ಲಿ 15. ಹೀಗೆ ಒಟ್ಟು 41 ಮಾರ್ಗಗಳಲ್ಲಿ ಪರವಾನಿಗೆ ನೀಡಿದ್ದು, ಇದರಿಂದ ಸಾರಿಗೆ ಸಂಸ್ಥೆ ಆದಾಯಕ್ಕೆ ನಷ್ಟವಾಗುವುದು ಎಂದು ಹೇಳಿದ್ದಾರೆ.

24-08-2022ರಂದು ಸರ್ಕಾರದ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ 20-07-2021ರಂದು ಹೊರಡಿಸಿದ ಅಧಿಸೂಚನೆಯನ್ನು ಪರಿಷ್ಕರಿಸಿ, ಬೆಳಗಾವಿ-ಅಥಣಿ- ವಿಜಯಪುರ ಮಾರ್ಗದಲ್ಲಿ 41 ರಹದಾರಿಗಳನ್ನು ಬೇಂದ್ರೆ ಸಾರಿಗೆಯವರಿಗೆ ಕಾರ್ಯಾಚರಣೆ ಮಾಡಲು ಅನುಮತಿಸಿ, ಆದೇಶ ಹೊರಡಿಸಲಾಗಿದೆ. ಸದರಿ ಸರ್ಕಾರದ ಆದೇಶಕ್ಕೆ ಕಲ್ಯಾಣ, ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಜಯಪುರ ವಿಭಾಗದ ಸಮಸ್ತ ಕಾರ್ಮಿಕ ಸಂಘಟನೆಗಳ ಮುಖಂಡರು, ಸದಸ್ಯರು ಹಾಗೂ ಸಮಸ್ತ ಕಾರ್ಮಿಕರಿಂದ ವಿರೋಧವಿದೆ ಎಂದು ತಿಳಿಸಿದ್ದಾರೆ.

ಈ ಮಾರ್ಗದಲ್ಲಿ ಖಾಸಗಿ ಕಾರ್ಯಾಚರಣೆಗೆ ಅನುಮತಿ ನೀಡುವುದರಿಂದ, ಪ್ರಸ್ತುತ ಸಂಸ್ಥೆಯಿಂದ ಕಾರ್ಯಾಚರಣೆಯಲ್ಲಿರುವ ವಿಜಯಪುರ-ಬೆಳಗಾವಿ ಮಾರ್ಗದಲ್ಲಿ ಆದಾಯಕ್ಕೆ ಕತ್ತರಿ ಬೀಳುತ್ತದೆ. ಈಗಾಗಲೇ ಸಾರಿಗೆ ಸಂಸ್ಥೆಯು ಕೋವಿಡ್-19 ಕಾರಣ ವಾಹನಗಳ ಕಾರ್ಯಾ ಚರಣೆಯಿಲ್ಲದೆ ವಿನಾಶದ ಅಂಚಿನಲ್ಲಿದ್ದು, ಸಂಸ್ಥೆಯ ನೌಕರರಿಗೆ ಸರಿಯಾಗಿ ವೇತನವೂ ಸಿಗುತ್ತಿಲ್ಲ. ಅದಲ್ಲದೆ ಇತ್ತೀಚೆಗೆ ಡೀಸೆಲ್‌ ಬೆಲೆಯಲ್ಲಿ ಆದ ಹೆಚ್ಚಳ ಹಾಗೂ ಬಿಡಿಭಾಗಗಳ ಬೆಲೆ ಹೆಚ್ಚಳದ ಹಿನ್ನೆಲೆಯಲ್ಲಿ ಸಂಸ್ಥೆಯ ಅರ್ಥಿಕ ಪರಿಸ್ಥಿತಿ ತುಂಬಾ ಹದಗೆಟ್ಟಿದೆ.

ಈ ನಡುವೆ 2020ರಲ್ಲೇ ಆಗಬೇಕಾಗಿರುವ ಕಾರ್ಮಿಕರ ವೇತನ ಪರಿಷ್ಕರಣೆ ಮಾಡಲು ಸರ್ಕಾರಕ್ಕೆ ಇದೂವರೆಗೂ ಸಾಧ್ಯವಾಗಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಸಂಸ್ಥೆಯನ್ನು ಉಳಿಸಬೇಕು, ಬೆಳೆಸಬೇಕು. ಸಾರ್ವಜನಿಕರಿಗೆ ಉತ್ತಮವಾದ ಸೇವೆ ಒದಗಿಸಬೇಕು ಎಂಬ ಬಲವಾದ ಧ್ಯೇಯದಿಂದ ನಿಗಮದ ಎಲ್ಲ ನೌಕರರು ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಸಕಾ೯ರವು ಬೆಳಗಾವಿ – ಅಥಣಿ- ಬೆಳಗಾವಿ ಮಾರ್ಗವನ್ನು ಖಾಸಗಿ ಪ್ರವರ್ತಕರಿಗೆ ಮಾರಿಕೊಂಡಿದ್ದು, ಸಂಸ್ಥೆಗೆ ಹಾಗೂ ಸಂಸ್ಥೆಯ ಕಾರ್ಮಿಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಈ ಮಾರ್ಗದಲ್ಲಿ 41 ರಹದಾರಿಗಳನ್ನು ಖಾಸಗೀಯವರಿಗೆ ಮಂಜೂರು ಮಾಡಿದಲ್ಲಿ ಸಂಸ್ಥೆಗೆ ಪ್ರತಿದಿನ ಅಂದಾಜು 10 ಲಕ್ಷ ರೂ.ಗಳಿಂದ 12 ಲಕ್ಷ ರೂ. ಆರ್ಥಿಕ ನಷ್ಟ ಉಂಟಾಗಿ ಸಂಸ್ಥೆ ಕಾರ್ಮಿಕರಿಗೆ ವೇತನ ನೀಡುವುದಕ್ಕೂ ಸಾಧ್ಯವಾದ ಸ್ಥಿತಿಗೆ ತಪುಪಲಿದೆ. ಆದ ಕಾರಣ ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದಾರೆ.

ಸಾರಿಗೆಯ ನಾಲ್ಕೂ ನಿಗಮಗಳಿಂದ ಸುಮಾರು 1.25 ಲಕ್ಷ ನೌಕರರು ಹಾಗೂ ಅವರ 10 ಲಕ್ಷ ಕುಟುಂಬದ ಸದಸ್ಯರು ಸಂಸ್ಥೆ ಅವಲಂಬಿಸಿದ್ದಾರೆ. ನಿಗಮದ ನೌಕರರು ಹಾಗೂ ಅವರ ಕುಟುಂಬ ವರ್ಗ ಸರ್ಕಾರ ತೆಗೆದುಕೊಂಡಿರುವ ಈ ನಡೆಯಿಂದ ಬೀದಿಗೆ ಬರುವ ಸಂಭವವಿದೆ. ಅದಕ್ಕೆ ನಮ್ಮ ಎಲ್ಲ ಕಾರ್ಮಿಕ ಸಂಘಟನೆಗಳ ತೀವ್ರ ವಿರೋಧ ಮಾಡುತ್ತಿದ್ದು ಈ ಆದೇಶವನ್ನು ಕೂಡಲೇ ಸರ್ಕಾರ ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ಸಂಸ್ಥೆಯ ಎಲ್ಲ ಕಾರ್ಮಿಕ ಸಂಘಟನೆ ಮುಖಂಡರು, ಸದಸ್ಯರು ಹಾಗೂ ಕಾರ್ಮಿಕರು ಹೋರಾಟ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದ್ದಾರೆ.

ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಉಮೇಶ ವಂದಾಲ, ಅಧ್ಯಕ್ಷ ಎಸ್ ಎಸ್ ಸೋಮಪೂರ, ಪ್ರಧಾನ ಕಾರ್ಯದರ್ಶಿ ಶಿವು ಬೈಚಬಾಳ, ಕಾರ್ಯಾಧ್ಯಕ್ಷ ಈರಣ್ಣ ತೊಂಡಿ ಕಟ್ಟಿ, ಖಜಾಂಚಿ ಸಚಿನ್ ಕುಮಾರ್, ಮುಖ್ಯ ಉಪಾಧ್ಯಕ್ಷ R.M ವಾಲಿ, ಕಾನೂನು ಸಲಹೆಗಾರರು. I.S. ಚಿಮ್ಮಲಗಿ, ಸಹ ಕಾರ್ಯದರ್ಶಿ ವೀರೇಶ ಹಂಜಗಿ, ಚಂಟಿ ಕಾರ್ಯದರ್ಶಿಗಳಾದ ಶಿವಾನಂದ ಜಾಲವಾದಿ, ಶಿವಾನಂದ ಮರಬಿ, ಉಪಾಧ್ಯಕ್ಷರಾದ ಬಸವರಾಜ ನಾವಲಗಿ, B.M. ತೇರದಾಳ ಸಂಜು ಗೌಡ ಬಿರಾದರ, ಈರಣ್ಣ ಮಾವೂರ, ರುದ್ರಗೌಡ ಬಿರಾದಾರ, ನಿಂಗಪ್ಪ ಕೌಲಗಿ, ಬಸನಗೌಡ ಚೌಕಾವಿ, ಸಂಘಟನಾ ಕಾರ್ಯದರ್ಶಿಗಳು C.S ಕುಳೆ ಕುಮುಟಿ, ರಮೇಶ್ ತೆಲಗಿ, ಗುರು ಬೀದಗೊಂಡ, ದಯಾನಂದ ಹಾವಿನಾಳ, ಬಸವರಾಜ ಹಾವಣ್ಣವರ, ವೀರೇಶ ಮರೋಳ, ಪ್ರಚಾರ ಕಾರ್ಯದರ್ಶಿಗಳು, ಸಿದ್ದಯ್ಯ ಬೇನಾಳ್ ಮಠ, ಈರಣ್ಣ ಚಿಮ್ಮಲಗಿ, ಸಿದ್ದು ಮದರಿ ಮಠ, ಬಸವರಾಜ್ ಬೋರಗಿ, ಅಮರೀಶ ಅಮರಣ್ಣವರ, ಎಸ್ ಡಿ ಪಟ್ಟಣಶೆಟ್ಟಿ, ಬಸವರಾಜ್ ಗುತ್ತರಗಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಸಿ ಆರ್ ಹಿರೇಮಠ, ವಿ ಆರ್ ಪಟ್ಟಣಶೆಟ್ಟಿ, ರಾಜು ತೊದಲ ಬಾಗಿ ಇನ್ನು ಅನೇಕ ಮುಖಂಡರು ಹೇಳಿಕೆ ನೀಡಿದ್ದಾರೆ.

Leave a Reply

error: Content is protected !!
LATEST
ದೇಶದ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಇನ್ನಿಲ್ಲ 2024ರ ಜನವರಿಯಿಂದ ಈವರೆಗೂ 48 ದೌರ್ಜನ್ಯ ಪ್ರಕರಣಗಳು ದಾಖಲು: ಅಪರ ಜಿಲ್ಲಾಧಿಕಾರಿ ಅಮರೇಶ್ KSRTC: ಡಿ.31ರಿಂದ ಕರೆ ಕೊಟ್ಟಿರುವ ಮುಷ್ಕರ ಬೆಂಬಲಿಸದ ನೌಕರರು- ವಿಲವಿಲ ಒದ್ದಾಡುತ್ತಿರುವ ಜಂಟಿ ಸಮಿತಿ ಮುಖಂಡರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಡಿ.27ರಂದು BMTC & KSRTC ನಿವೃತ್ತ ನೌಕರರ ಪ್ರತಿಭಟನೆ ಮೈಸೂರು: ದೆಹಲಿ ರೈತ ಹೋರಾಟ ಬೆಂಬಲಿಸಿ ಮೇಣದ ಬತ್ತಿ ಬೆಳಗಿಸಿ ಪ್ರತಿಭಟನೆ KSRTC: ಯಾರದೋ ಆರ್ಥಿಕ ಲಾಭಕ್ಕಾಗಿ 4 ವರ್ಷಕ್ಕೊಮ್ಮೆ ನಡೆಯೋ ಈ ಚೌಕಾಸಿ ಪದ್ಧತಿ ಬಿಟ್ಟು ಶಾಶ್ವತ ಪರಿಹಾರಕ್ಕೆ ಬದ್ಧರಾಗೋ... KSRTC: ರಸ್ತೆಗಿಳಿದ 20 ಹೊಸ ಅಂಬಾರಿ ಉತ್ಸವ ಸ್ಲೀಪರ್​​ ಬಸ್​ಗಳು- ಸಚಿವರಿಂದ ಲೋಕಾರ್ಪಣೆ KSRTCಗೆ ₹6543 ಕೋಟಿ ಅನುದಾನ ಬಿಡುಗಡೆ ಮಾಡಿರುವ ನಮಗೆ ₹414 ಕೋಟಿ ಬಿಡುಗಡೆ ಮಾಡುವುದು ಕಷ್ಟವೇ: ರಾಮಲಿಂಗಾರೆಡ್ಡಿ ಗಾಯಾಳು ಅಯ್ಯಪ್ಪ ಮಾಲಾಧಾರಿಗಳ ಆರೋಗ್ಯ ವಿಚಾರಿಸಿದ ಸಚಿವ ಪರಮೇಶ್ವರ್‌ KSRTC ಅಧಿಕಾರಿಗಳಿಲ್ಲದ ಡಿ.31ರ ಸಾರಿಗೆ ಮುಷ್ಕರ ನೌಕರರ ಹರಕೆ ಕುರಿ ಮಾಡುವ ಹೋರಾಟವೇ..!?