NEWSಕೃಷಿರಾಜಕೀಯ

ರೈತರ ಆಸ್ತಿಪಾಸ್ತಿ ಜಪ್ತಿ ಮಾಡುವುದನ್ನು ನಿಷೇಧ ಮಾಡುತ್ತೇವೆ: ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ

ವಿಜಯಪಥ ಸಮಗ್ರ ಸುದ್ದಿ

ಚಿತ್ರದುರ್ಗ : ರೈತರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಬ್ಯಾಂಕ್ ಗಳು ಜಪ್ತಿ ಮಾಡುವುದು ನೋಟಿಸ್ ಜಾರಿ ಮಾಡುವ ಕೆಲಸ ಮಾಡುತ್ತಿದೆ. ಇದಕ್ಕೆ ಅಂತ್ಯ ಹಾಡಲು ಕಾನೂನಿನ ತಿದ್ದುಪಡಿ ತಂದು ಅವರ ಆಸ್ತಿಪಾಸ್ತಿ ಜಪ್ತಿ ಮಾಡುವುದನ್ನು ನಿಷೇಧ ಮಾಡುವುದಾಗಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

ಸಿರಿಗೆರೆ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಆಯೋಜಿಸಿದ್ದ ಶ್ರೀ ತರಳಬಾಳು ಜಗದ್ಗುರು ಲಿಂಗೈಕ್ಯ  ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ 30 ನೇ ಶ್ರದ್ಧಾಂಜಲಿ ಸಮಾರಂಭದಲ್ಲಿ ಮಾತನಾಡಿದರು.

ರೈತರಿಗೆ ಸಾಲ ತೀರಿಸುವ ಅವಕಾಶಗಳನ್ನು ಮಾಡಿಕೊಡಲಾಗುವುದು‌ ಬದ್ಧತೆಯಿಂದ ಕೆಲಸ ಮಾಡುವ ಕ್ರಿಯಾಶಕ್ತಿಯೇ ಭಕ್ತಿಯ ಶಕ್ತಿ. ಗುರುಗಳಿಂದ ಪ್ರೇರಣೆ ಪಡೆದು ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ನಮ್ಮ ಸರ್ಕಾರ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.

ನಾನು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ರೈತರ ಮಕ್ಕಳಿಗೆ ವಿದ್ಯಾನಿಧಿ ರೂಪಿಸಲಾಯಿತು. 14 ಲಕ್ಷ ರೈತರ ಮಕ್ಕಳಿಗೆ ವಿದ್ಯಾನಿಧಿ ನೀಡಲಾಗಿದೆ. ರೈತ ಕೂಲಿಕಾರ ಮಕ್ಕಳಗೆ, ನೇಕಾರರಿಗೆ, ಮೀನುಗಾರರಿಗೆ, ಆಟೋ ರಿಕ್ಷಾ ಚಾಲಕರು ಹಾಗೂ ಟ್ಯಾಕ್ಸಿ ಚಾಲಕರಿಗೆ ಯೋಜನೆ ವಿಸ್ತರಣೆಯಾಗಿದೆ ಎಂದರು.

ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡುವ ಅಂತಿಮ ಘಟ್ಟದಲ್ಲಿದೆ. ಕೇಂದ್ರ ಸಚಿವ ಸಂಪುಟದಲ್ಲಿ ಅದರ ಅನುಮೋದನೆ ದೊರೆತ ಕೂಡಲೇ 14 ಸಾವಿರ ಕೋಟಿ ರೂ.ಗಳ.ನೆರವು ನಮಗೆ ಬರಲಿದೆ. ಇದನ್ನು ಪೂರ್ಣ ಮಾಡಲು ಹಣಕಾಸಿನ ಶಕ್ತಿ ದೊರೆಯುತ್ತದೆ ಎಂದು ತಿಳಿಸಿದರು.

ದುಡ್ಡು ಸಂಬಂಧಗಳನ್ನು ಕೆಡಿಸುತ್ತದೆ. ಯಾವಾಗ ಬದುಕು ವ್ಯವಹಾರವಾಗುತ್ತದೆಯೋ ಆಗ ಸಂಬಂಧಗಳು ಉಳಿಯುವುದಿಲ್ಲ. ಬದುಕು ಬದುಕಾಗಿಯೇ ಇರಬೇಕು. ತತ್ವ ಜ್ಞಾನದಲ್ಲಿ ಪಾಪ ಪುಣ್ಯವಿದೆ. ವ್ಯಾಪಾರದಲ್ಲಿ ಲಾಭ ನಷ್ಟವಿದೆ. ಗುರುಗಳು ತಮ್ಮ ಪುಸ್ತಕ ಹಣದ ಝೇಂಕಾರ, ಸಂಬಂಧಗಳಿಗೆ ಸಂಚಕಾರ ಪುಸ್ತಕದಲ್ಲಿ ಹೇಳಿದ್ದಾರೆ. ಬದುಕನ್ನು ಸುಧಾರಿಸಲು ಮಾಡಬೇಕಾದ ಅಂಶಗಳಿವೆ. ಪರರ ನಿಂದನೆಗೆ ವೃಥಾ ವ್ಯಾಕುಲ ಪಡಬೇಡ, ದ್ವೇಷಕ್ಕಾಗಿ ತೆಗಳಿಕೆ, ತೆಗಳಿಕೆ ಅಲ್ಲ. ಇವುಗಳ ಮಧ್ಯೆ ಸ್ಥಿತಪ್ರಜ್ಞಾನಾಗಿರಬೇಕು ಎನ್ನುವುದೇ ತರಳಬಾಳು ಭೃಹನ್ಮಠದ ತತ್ವ ಎಂದರು.

ಸಮಕಾಲೀನ, ಪ್ರಗತಿ ಪರ ಚಿಂತನೆ, ಆಶೀರ್ವಾದ, ಹಿರಿಯ ಗುರುಗಳ ಆಶೀರ್ವಾದಗಳನ್ನು ಅಳವಡಿಸಿಕೊಂಡು ಸರ್ಕಾರ ಮುಂದುವರಿಯುತ್ತದೆ. ಸರ್ಕಾರ ಈ ತತ್ವಗಳಿಗೆ ಗೌರವ ತರುವ ರೀತಿಯಲ್ಲಿ ಕೆಲಸ ಮಾಡುತ್ತದೆ.ಮಠಕ್ಕೆ ಪ್ರೀತಿ ಪಾತ್ರರಾದ ರೈತರು, ದುಡಿಯುವ ವರ್ಗಕ್ಕೆ ಅತಿ ಹೆಚ್ಚು ಮಹತ್ವ ನೀಡಿ ಕೆಲಸ ಮಾಡುತ್ತದೆ ಎಂದು ತಿಳಿಸಿದರು.

ಗುರುಗಳು ಮತ್ತು ಆಡಳಿತ, ಅರಮನೆಗೂ, ಗುರುಮನೆಗೂ ಸಂಬಂಧವಿದೆ. ಸಮಾಜ ಗುರುವಿನತ್ತ ನೋಡುತ್ತದೆ. ಸರ್ಕಾರ ಸಮಾಜದತ್ತ ನೋಡುತ್ತದೆ. ಗುರುಗಳ ಮಾರ್ಗದರ್ಶನ ಸದ್ಭಕ್ತರಿಗೆ ಮತ್ತು ಸರ್ಕಾರಕ್ಕೆ ಯಾವ ರೀತಿಯಲ್ಲಿ ಇರುತ್ತದೆಯೋ ಅದರ ಮೇಲೆ ಆಡಳಿತ ಸೂತ್ರ ನಡೆದುಕೊಂಡು ಹೋಗುತ್ತದೆ.

ಈ ವ್ಯವಸ್ಥೆ ಇಂದಿನದಲ್ಲ. ಜನರ ಮನಸ್ಸು ಗುರುಗಳಿಗೆ ತಲೆಬಾಗುತ್ತದೆ. ಗುರುಗಳಾಡುವ ಪ್ರತಿ ಮಾತು ಸಮಾಜದ ಮೇಲೆ ಪ್ರಭಾವ ಬೀರಿ ಸಮಾಜದ ಧ್ವನಿಯಾಗುತ್ತದೆ. ಸಮಾಜದ ಧ್ವನಿಯನ್ನು ಸರ್ಕಾರ ಕೇಳಿಸಿಕೊಳ್ಳಬೇಕಾಗುತ್ತದೆ. ಅರಮನೆಗೂ ಗುರುಮನೆಗೂ ಅಂದಿನ ಸಂಬಂಧ, ಪ್ರಜಾಪ್ರಭುತ್ವ ದಲ್ಲಿಯೂ ಮುಂದುವರೆದಿದೆ ಎನ್ನುವುದನ್ನು ನಮ್ಮ ಅನುಭವಗಳಿಂದ ತಿಳಿದುಕೊಳ್ಳಬೇಕು ಎಂದರು.

ಅಂದಿನ ಗುರುಗಳು ಬದಲಾದ ಕಾಲಕ್ಕೆ, ಸಮಾಜ, ಭಕ್ತಾದಿಗಳಿಗೆ, ನ್ಯಾಯ ಒದಗಿಸುವ ಗುರುತರ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ಭಕ್ತಾದಿಗಳು ರೈತಾಪಿ ವರ್ಗ ಎಂದು ಮನಗಂಡು ಅವರ ದುಡಿಮೆಗೆ ಗೌರವ, ಬೆಲೆ ಬರಬೇಕೆಂದು ರೈತರ ಬೆವರಿಗೆ ಬೆಲೆ ಬರುವಂಥ ಕೆಲಸ ಮಾಡುತ್ತಿದ್ದಾರೆ.

ಮಧ್ಯ ಕರ್ನಾಟಕದಲ್ಲಿ ನೀರಿನಿಂದ ವಂಚಿತವಾಗಿದೆ. ಕೆರೆಗಳು ತುಂಬದೆ, ನೀರಾವರಿ ಇಲ್ಲದಿದ್ದರೂ ಫಲವತ್ತಾದ ಜಮೀನಿದೆ ಎನ್ನುವುದನ್ನು ಮನಗಂಡು ಸುಮಾರು 25 ವರ್ಷಗಳಿಂದ ಕೆರೆಗಳಿಗೆ ನೀರು, ನೀರಾವರಿ ಯೋಜನೆಗಳಿಗೆ ಮಹತ್ವ ನೀಡಲು ಗುರುಗಳು ಪ್ರಾರಂಭಿಸಿದರು. ಗುರುಗಳ ಇಚ್ಛಾಶಕ್ತಿ ಹಾಗೂ ಅವರ ಗುರುತ್ವದಲ್ಲಿರುವ ಅದಮ್ಯ ಶಕ್ತಿ ಸರ್ಕಾರವನ್ನು ಈ ಏತ ನೀರಾವರಿ ಯೋಜನೆಗಳನ್ನು ಮಾಡಲು ಪ್ರೇರೇಪಿಸಿದ್ದಾರೆ.

ಗುರುಗಳ ಇಚ್ಛಾಶಕ್ತಿಗೆ ಕ್ರಿಯಾ ಶಕ್ತಿಯನ್ನು ನೀಡಿದವರು ಬಿ.ಎಸ್.ಯಡಿಯೂರಪ್ಪ ಅವರು. ಇದು ಸುಲಭದ ಮಾತಲ್ಲ. ನಾಯಕನಿಗೆ ಇಚ್ಛಾಶಕ್ತಿ ಇದ್ದರೆ ಏನೆಲ್ಲಾ ಮಾಡಲು ಸಾಧ್ಯವಿದೆ ಎಂದು ನಿರೂಪಿಸಿದ್ದಾರೆ. ಎಂ.ಬಿ.ಪಾಟೀಲ್ ಮತ್ತು ನಾವು ರಾಜ್ಯದ ವಿಚಾರ ಬಂದಾಗ ಒಟ್ಟಾಗಿ ಕೆಲಸ ಮಾಡಿದ್ದೇವೆ ಎಂದು ಬೊಮ್ಮಯಿ ಹೇಳಿದರು.

ಯಡಿಯೂರಪ್ಪ ಅವರು ರಾಜ್ಯದ ಎಲ್ಲಾ ದಿಕ್ಕುಗಳಲ್ಲಿಯೂ ಪಾದಯಾತ್ರೆ ಮಾಡಿದ್ದು ಅಲ್ಲಿ ಒಂದು ಯೋಜನೆ ಸಿದ್ಧವಾಗಿ ಕಾರ್ಯರೂಪಕ್ಕೆ ಬಂದಿದೆ ಎಂದು ವಿವರಿಸಿದರು.

Leave a Reply

error: Content is protected !!
LATEST
ಕನಸನ್ನು ನನಸಾಗಿಸಲು ಪ್ರಯತ್ನ ಮುಖ್ಯ: ಮಕ್ಕಳಿಗೆ ಡಿಸಿಎಂ ಶಿವಕುಮಾರ್ ಕಿವಿಮಾತು KSRTC: ಸಮಸ್ಯೆ  ಹೇಳಿಕೊಂಡು ಬರುವ ನೌಕರರ ಭೇಟಿ ಮಾಡದೆ ಸೂಟ್‌ಕೇಸ್‌ ತಂದವರೊಂದಿಗೆ ಹರಟೆ ಹೊಡೆಯುವ ಕೆಲ ಸಾಹೇಬರೆನಿಸಿಕೊ... ಆಟೋಟದಲ್ಲಿ ಕೂಟದ ಕಟ್ಟಾಳುಗಳು ಬ್ಯುಸಿ: ನೌಕರರು ನಂಬಿ 4ವರ್ಷ ಕಳೆದರೂ ಈಡೇರೇಯಿಲ್ಲ ಬೇಡಿಕೆ - ದಿಕ್ಕು ತಪ್ಪುತ್ತಿದೆಯೇ ... BMTC ಬಸ್‌-ಟ್ರಕ್‌-ಇನೋವಾ ಕಾರು ನಡುವೆ ಸರಣಿ ಅಪಘಾತ: ಇಬ್ಬರು ಮೃತ, ಬಸ್‌ ಚಾಲಕನ ಸ್ಥಿತಿ ಗಂಭೀರ KSRTC: ಕೂಟದ ಅಜೆಂಡ ದಿಕ್ಕು ತಪ್ಪುತ್ತಿದೆಯೇ - ಸರಿ ಸಮಾನ ವೇತನದ ಪಾಡೇನು? 8ಕಿಮೀ BMTC ಬಸ್‌ ಹಿಂಬಾಲಿಸಿಕೊಂಡು ಬಂದು ಚಾಲಕನ ಮೇಲೆ ಹಲ್ಲೆಮಾಡಿ ಪೊಲೀಸರ ಅತಿಥಿಯಾದ ಬೈಕ್‌ ಸವಾರ ಸರಿ ಸಮಾನ ವೇತನಕ್ಕೆ ಅಡ್ಡಗಾಲು ಹಾಕುವುದನ್ನು ಈಗಲಾದರೂ ಬಿಡಿ- ಸಾರಿಗೆ ಅಧಿಕಾರಿಗಳು-ನೌಕರರ ಆಗ್ರಹ ತೆರಿಗೆ ಬಾಕಿ ಉಳಿಸಿಕೊಂಡಿರುವ ವಸತಿಯೇತರ ಕಟ್ಟಡಗಳಿಗೆ ಬೀಗಹಾಕಿ ವಸೂಲಿ ಮಾಡಿ: ತುಷಾರ್ ಗಿರಿನಾಥ್ ಅಂಗನವಾಡಿ ನೌಕರರ ಸರ್ಕಾರಿ ನೌಕರರಾಗಿ ಪರಿಗಣಿಸಿ: ಹೈಕೋರ್ಟ್ ತೀರ್ಪಿನಿಂದ ಕರ್ನಾಟಕದ ಅಂಗನವಾಡಿ ನೌಕರರಿಗೂ ಬಲ ವೀರವನಿತೆ ಒನಕೆ ಓಬವ್ವ ಜಯಂತಿ: ಮಹಿಳೆಯರು ಶೌರ್ಯ, ಧೈರ್ಯ ಬೆಳೆಸಿಕೊಳ್ಳಿ-ಸಚಿವ ಮುನಿಯಪ್ಪ