NEWSನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ ನೌಕರರ ಸಮಸ್ಯೆ ಪರಿಹಾರಕ್ಕೆ ಇರುವ ತೊಡಕುಗಳಾದರೂ ಏನು? ಪ್ರಶ್ನಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದ ಹಿರೇಮಠ

ವಿಜಯಪಥ ಸಮಗ್ರ ಸುದ್ದಿ

ಸಾರಿಗೆ ನೌಕರರ ಸಮಸ್ಯೆಗಳ ಪರಿಹಾರಕ್ಕೆ ಇರುವ ಕಾನೂನು ತೊಡಕುಗಳು ಏನು? ಅವುಗಳನ್ನು ಬಗೆಹರಿಸುವುದಕ್ಕೆ ಏಕೆ ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ ಎಂಬುದರ ಬಗ್ಗೆ ತಾವು ಸ್ಪಷ್ಟ ಉತ್ತರ ನೀಡಬೇಕು ಎಂದು ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣದ ನಿವಾಸಿ ಮೃತ್ಯುಂಜಯ ಹಿರೇಮಠ ಎಂಬುವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಆ ಪತ್ರದಲ್ಲಿ ಏನಿದೆ?: ಮೃತ್ಯುಂಜಯ ಹಿರೇಮಠ, ತಂದೆ ದಿವಂಗತ ರುದ್ರಯ್ಯ ಹಿರೇಮಠ, ವಯಸ್ಸು 56, ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣದ ವಾಸಿಯಾದ ನಾನು ಈ ಕೆಳಕಂಡ ಅಂಶಗಳ ಕುರಿತು ಕಾನೂನು ತಿಳಿವಳಿಕೆ ಪತ್ರವನ್ನು ಈ ಕೆಳಕಂಡವುಗಳಿಗೆ ಸಮಂಜಸವಾದ ದಾಖಲೆ ಸಮೇತ ಸ್ಪಷ್ಟ, ನಿಖರ ಕಾನೂನಾತ್ಮಕ ಉತ್ತರ ನೀಡಬೇಕೆಂದು ಮನವಿ.

01. ಮೈಸೂರು ಸರ್ಕಾರ ರಸ್ತೆ ಸಾರಿಗೆ ಇಲಾಖೆ (MGRTD) ಎಂಬ ಸಾರ್ವಜನಿಕ ಸೇವಾ ಇಲಾಖೆಯನ್ನು ಸಾರ್ವಜನಿಕ ಉದ್ದಿಮೆ ಎಂದು ಪರಿಗಣಿಸಲು ಕಾರಣವಾದ ಅಂಶಗಳ ಕುರಿತು ಮತ್ತು ಈ ಸಂಬಂಧ ಸರ್ಕಾರ ಹೊರಡಿಸಿದ ನಿರ್ದೇಶನಗಳು ಏನು?

02. ಸಾರ್ವಜನಿಕ ಉದ್ದಿಮೆ ಎಂದು ಕರೆಯಲ್ಪಡುವ ಸಾರಿಗೆ ನಿಗಮ ಉತ್ಪಾದನೆ ಮಾಡುತ್ತಿರುವ ವಸ್ತು ಯಾವುದು?‌ 03. ಸಾರ್ವಜನಿಕ ಉದ್ದಿಮೆ ಎಂದು ಕರೆಯಲ್ಪಡುವ ಸಾರಿಗೆ ನಿಗಮವನ್ನು ಎಸ್ಮಾ ಕಾಯ್ದೆ ಅಡಿಯಲ್ಲಿ ತರಲು ಕಾರಣ ಆಗಿರುವ ಅಂಶಗಳು ಯಾವುವು?

04. ಸಾರ್ವಜನಿಕ ಸೇವಾ ಸಂಸ್ಥೆಯನ್ನು ವ್ಯಾವಹಾರಿಕವಾಗಿ/ ಆರ್ಥಿಕವಾಗಿ ಲಾಭ/ ನಷ್ಟ ಎಂದು ಪರಿಗಣಿಸಲು ಇರುವ ಅಂಶಗಳು ಯಾವುವು? 05. ಮೊದಲಿನ ಹಾಗೆ ಸಾರಿಗೆ ನಿಗಮವನ್ನು ಸಾರಿಗೆ ಇಲಾಖೆಯ ಅಧೀನದ ಅಡಿಯಲ್ಲಿ ಕಾರ್ಯ ನಿರ್ವಹಿಸುವಂತೆ ಮಾಡಲು ಇರುವ ಕಾನೂನಾತ್ಮಕ ತೊಡಕುಗಳು ಏನು?

06. ಅಥವಾ ಉಳಿದ ಸಾರ್ವಜನಿಕ ಸೇವಾ ಇಲಾಖೆಗಳಾದ ಶಿಕ್ಷಣ/ ಪೊಲೀಸ್‌/ ಆರೋಗ್ಯ/ ಅಗ್ನಿಶಾಮಕ/ ಸಮಾಜ ಕಲ್ಯಾಣ ಇಲಾಖೆಗಳಂತೆ ಸಾರ್ವಜನಿಕ ಸಾರಿಗೆ ಇಲಾಖೆ ಎಂದು ಮರುನಾಮಕರಣ ಮಾಡಲು ಇರುವ ಕಾನೂನಾತ್ಮಕ ತೊಡಕುಗಳು ಏನು?

07. ಸಾರ್ವಜನಿಕ ಸೇವೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರನ್ನು ಕೈಗಾರಿಕಾ ನಿಯಮದ ಅಡಿಯಲ್ಲಿ ಕಾರ್ಮಿಕ ಎಂದು ಸಂಬೋಧಿಸಿ ಕೈಗಾರಿಕಾ ನಿಯಮಗಳ ಅಡಿಯಲ್ಲಿ ಕೈಗಾರಿಕಾ ಒಪ್ಪಂದ ಮಾಡಿಕೊಳ್ಳುವಂತೆ ಹೊರಡಿಸಿರುವ ಆದೇಶದ ಬಗ್ಗೆ ಇರುವ ನಿರ್ದೇಶನಗಳು ಯಾವುವು?

08. ಉಳಿದ ನಿಗಮ/ ಮಂಡಳಿ ನೌಕರರಿಗೆ ಅನ್ವಯಿಸುವಂತೆ ಸಾರಿಗೆ ನಿಗಮದ ನೌಕರರಿಗೂ ಸಹಾ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಲು ಇರುವ ಕಾನೂನಾತ್ಮಕ ತೊಡಕುಗಳು ಏನು?

09. ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಕೈಗಾರಿಕಾ ಒಪ್ಪಂದ ಎಂದು ಹೇಳಿಕೊಂಡು ಸಮಸ್ಯೆ ಬಗೆಹರಿಯದೆ ಇದ್ದಾಗ ಸಾರ್ವಜನಿಕರಿಗೆ/ ವಿಧ್ಯಾರ್ಥಿಗಳಿಗೆ ಪ್ರತಿಭಟನೆ/ ಮುಷ್ಕರ ಎಂದು ತೊಂದರೆ ಕೊಡುವ ಸಾರಿಗೆ ನೌಕರರನ್ನು ಸಹ ವೇತನ ಆಯೋಗದ ಅಡಿಯಲ್ಲಿ ತಂದು ಅವರೇ ಕೇಳುತ್ತಿರುವ ಹಾಗೆ ಶಾಶ್ವತ ಪರಿಹಾರ ಸೂಚಿಸಲು ಇರುವ ಕಾನೂನಾತ್ಮಕ ತೊಡಕುಗಳು ಏನು?

10. ಈ ಮೇಲ್ಕಂಡ ಎಲ್ಲ ಅಂಶಗಳಿಗೆ ಏನಾದರೂ ಕಾನೂನಾತ್ಮಕ ತೊಡಕುಗಳು ಇರುವುದೇ ಆದರೆ ಅವುಗಳನ್ನು ತಿದ್ದುಪಡಿ ಮಾಡಲು ಶಾಸಕಾಂಗದ ಅಥವಾ ನ್ಯಾಯಾಂಗದ ಮೊರೆ ಹೋಗಲು ಸಾಧ್ಯವೇ?

ಎಲ್ಲದರ ಬಗ್ಗೆ ತಾವು ಸೇರಿದಂತೆ ಕಾರ್ಯದರ್ಶಿ, ಹಣಕಾಸು ಇಲಾಖೆ, ಕಾರ್ಯದರ್ಶಿ, ಸಾರಿಗೆ ಇಲಾಖೆ, ವ್ಯವಸ್ಥಾಪಕ ನಿರ್ದೇಶಕರು, ಸಾರಿಗೆ ನಿಗಮಗಳು, ಇವರ ಮಾಹಿತಿಗಾಗಿ ಮತ್ತು ಸೂಕ್ತ ಉತ್ತರ ನೀಡಲು ಮೃತ್ಯುಂಜಯ ಹಿರೇಮಠ ಆದ ನಾನು ಪ್ರತಿಯನ್ನು ನೀಡಿ ವಂದನಾಪೂರ್ವಕವಾಗಿ ಸಮಂಜಸ ಉತ್ತರವನ್ನು ಕೋರುತ್ತಿದ್ದೇನೆ ಎಂದು ಮೃತ್ಯುಂಜಯ ಹಿರೇಮಠ ಪತ್ರ ಬರೆದಿದ್ದಾರೆ.

Leave a Reply

error: Content is protected !!
LATEST
APSRTC ನೌಕರರು ಸಂತೋಷವಾಗಿದ್ದಾರೆ, ಕರ್ನಾಟಕದ ಸಾರಿಗೆ ನೌಕರರು ತೊಂದರೆಗೆ ಒಳಗಾಗಿದ್ದಾರೆ ಇದಕ್ಕೆ ಕಾರಣರಾರು? APSRTC ನೌಕರರಿಗೆ ಸರ್ಕಾರದಿಂದಲೇ ವೇತನ ಪಾವತಿ, 5 ತಿಂಗಳ ಫ್ಯಾಮಿಲಿ ಪಾಸ್‌, ಇನ್ನಷ್ಟು ಸೌಲಭ್ಯಗಳು ಸೇರ್ಪಡೆ BBMP: ನಗರದಲ್ಲಿ ವಿಪತ್ತು ನಿರ್ವಹಣೆಯ ನಿವಾರಣೆಗೆ ತುರ್ತು ಕ್ರಮ: ತುಷಾರ್ ಗಿರಿನಾಥ್ ಕೆಎಸ್‌ಆರ್‌ಟಿಸಿ ರಾಮನಗರ: ಹೊಸ ETM ಮಷಿನ್ ಅವಾಂತರ- ಪಾಸ್ ನಮೂದಿಸಿದರೂ ಟಿಕೆಟ್ ಬರುತ್ತದೆ ! KSRTC: ಇದು ನಿನ್ನ ಮಗುವಲ್ಲ, ಪ್ಯಾಸೆಂಜರ್‌, ಫ್ಯಾಮಿಲಿ ಎದುರೆ ಸಹೋದ್ಯೋಗಿಯ ಅವಮಾನಿಸಿದ ಕಂಡಕ್ಟರ್‌!!? ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ