ಬೆಂಗಳೂರು: ಬಿಜೆಪಿ ನೇತೃತ್ವದ ಸರ್ಕಾರ ಇದ್ದಾಗ ರಾಜ್ಯ ನಾಲ್ಕೂ ರಸ್ತೆ ಸಾರಿಗೆ ನಿಗಮಗಳನ್ನು ಮುಚ್ಚುವ ಪರಿಸ್ಥಿತಿಗೆ ತಂದಿಡಲಾಗಿತ್ತು. ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ನಿಗಮಗಳು ಸುಲಲಿತವಾಗಿ ನಡೆಯುತ್ತಿವೆ. ಇದರ ಅರಿವಿಲ್ಲದೇ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅಪ್ರಬುದ್ಧ ಹೇಳಿಕೆ ನೀಡುತ್ತಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಶಕ್ತಿ ಯೋಜನೆಯಡಿ ಕೆಎಸ್ಆರ್ಟಿಸಿಗೆ 4,500 ಕೋಟಿ ರೂ,ಗಳನ್ನು ಸರ್ಕಾರ ನೀಡಬೇಕಿದೆ. ವೇತನ ಪಾವತಿಸಲು ಹಣವಿಲ್ಲದೇ ಮೂರ್ನಾಲ್ಕು ತಿಂಗಳಲ್ಲಿ ಮುಚ್ಚಬೇಕಾಗುತ್ತದೆ ಎಂದು ವಿಜಯೇಂದ್ರ ಅವರು ನೀಡಿದ್ದ ಹೇಳಿಕೆಗೆ ಸಚಿವ ರಾಮಲಿಂಗಾರೆಡ್ಡಿ ಈ ಪ್ರತಿಕ್ರಿಯೆ ನೀಡಿದ್ದಾರೆ.
ಶಕ್ತಿ ಯೋಜನೆಯ ಹಣವನ್ನು ಪ್ರತಿ ತಿಂಗಳು ನಿಗಮಗಳಿಗೆ ಪಾವತಿಮಾಡಲಾಗುತ್ತಿದೆ. ನಾಲ್ಕು ಸಾರಿಗೆಗಳಿಗೆ ಒಟ್ಟು 1,467 ಕೋಟಿ ರೂಪಾಯಿಗಳು ಬಾಕಿ ನೀಡಬೇಕಿದೆ. ಆದರೆ KSRTC ನಿಗಮ ಒಂದಕ್ಕೇ 4,500 ಕೋಟಿ ರೂ.ಗಳನ್ನು ನೀಡುವುದು ಬಾಕಿ ಇದೆ ಎಂದು ತಪ್ಪು ಮಾಹಿತಿಯನ್ನು ವಿಜಯೇಂದ್ರ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಸಾರಿಗೆ ನಿಗಮಗಳು 5,900 ಕೋಟಿ ರೂಪಾಯಿ ನಷ್ಟದ್ದಲ್ಲಿದ್ದವು. ನಿಗಮಗಳನ್ನು ಮುಚ್ಚಿಬಿಡಿ ಎಂದು ಹೇಳಿ ಹೋಗಿದ್ದರು ಎಂದು ಆದರೆ ನಾವು ನಿಗಮಗಳನ್ನು ಲಾಭದತ್ತ ಕೊಂಡೊಯ್ಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಇನ್ನು ಬಿಜೆಪಿ ಆಡಳಿತದಲ್ಲಿ ಸಾರಿಗೆ ಸಿಬ್ಬಂದಿಗೆ ವೇತನ ಪೂರ್ಣ ಪಾವತಿಯಾಗುತ್ತಿರಲಿಲ್ಲ. ಬಸ್ ಸೇರ್ಪಡೆಗೆ ಕ್ರಮ ಕೈಗೊಂಡಿರಲಿಲ್ಲ. ಖಾಲಿ ಇದ್ದ ಚಾಲನಾ ಸಿಬ್ಬಂದಿ ಹುದ್ದೆ ಸೇರಿದಂತೆ ಹಲವಾರು ಹುದ್ದೆಗಳನ್ನು ತುಂಬಿರಲಿಲ್ಲ.
ನಾವು ಆಡಳಿತಕ್ಕೆ ಬಂದ ಮೇಲೆ ಆಯಾ ತಿಂಗಳ ಮೊದಲ ವಾರದಲ್ಲಿಯೇ ವೇತನ ಪಾವತಿಯಾಗುತ್ತಿದೆ. 5,800 ಬಸ್ ಸೇರ್ಪಡೆಗೆ ಅನುಮೋದನೆ ನೀಡಿದ್ದು, ಒಂದು ವರ್ಷದಲ್ಲಿ 3,000 ಬಸ್‌ಗಳನ್ನು ಸೇರ್ಪ ಡೆಮಾಡಲಾಗಿದೆ. 9,000 ಹುದ್ದೆಗಳ ನೇಮಕಾತಿಗೆ ಅನುಮತಿ ನೀಡಿದ್ದು, 6,500 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ವಿವರಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನೆ: ಒಟ್ಟಾರೆ ರಾಜ್ಯ ರಸ್ತೆಯ ಸಾರಿಗೆಯ ನಾಲ್ಕೂ ನಿಗಮಗಳ ಲಾಭದಲ್ಲಿ ಸಾಗುತ್ತಿವೆ ಎಂದು ರಾಮಲಿಂಗಾರೆಡ್ಡಿ ಅವರು ಹೇಳಿಕೆ ನೀಡಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡುರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ.
ನಾಲ್ಕೂ ನಿಗಮಗಳ ಲಾಭದಲ್ಲಿ ಸಾಗುತ್ತಿವೆ ಎಂದು ನೀವೆ ಹೇಳಿದ್ದೀರಿ ಆದರೆ, 2020ರ ಜನವರಿ 1ರಿಂದ ಜಾರಿಗೆ ಬಂದಿರುವ ವೇತನ ಪರಿಷ್ಕರಣೆಯ 38 ತಿಂಗಳ ಹಿಂಬಾಕಿಯನ್ನು ಇನ್ನೂ ಏಕೆ ನೀಡಿಲ್ಲ. ಜತೆಗೆ 2024ರ ವೇತನ ಪರಿಷ್ಕರಣೆ ಬಗ್ಗೆ ಇನ್ನೂ ತುಟಿ ಬಿಚ್ಚಿಲ್ಲ ಏಕೆ?
ನಮ್ಮ ಕಾಲದಲ್ಲಿ ನಿಗಮಗಳಿಗೆ ಏನು ಮಾಡಿಲ್ಲ ಎನ್ನುತ್ತಿದ್ದೀರಲ್ಲ ಈಗ ನಿಗಮಗಳು ಲಾಭದಲ್ಲಿ ಇದ್ದಾಗ ಅದರ ಲಾಭವನ್ನು ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಕೊಡಬೇಕಲ್ಲವೆ? ಆರೀತಿ ಏಕೆ ಮಾಡುತ್ತಿಲ್ಲ ಎಂಬುವುದೆ ಯಕ್ಷ ಪ್ರಶ್ನೆಯಾಗಿದೆ. ಇದಕ್ಕೆ ತಾವು ಸಚಿವರು ಸಮಂಜಸವಾದ ಉತ್ತರವನ್ನು ಕೊಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೇಳಿದ್ದಾರೆ.
ಇನ್ನು ಕಳೆದ 2023ರ ಮೇ ತಿಂಗಳಿನಿಂದ ಈಚೆಗೆ ನಿವೃತ್ತಿಯಾಗಿರುವ ಬಿಎಂಟಿಸಿಯ ಅಧಿಕಾರಿಗಳು/ ಸಿಬ್ಬಂದಿಗಳಿಗೆ ಕೊಡಬೇಕಿರುವ ಸುಮಾರು 400 ಕೋಟಿ ರೂಪಾಯಿ ಗ್ರಾಚ್ಯುಟಿ ಮತ್ತು EL ಹಣವನ್ನು ಏಕೆ ಬಿಡುಗಡೆ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ.
ವಿಜೆಯೇಂದ್ರ,ನಿನಗೆ ಹಾಗು ನಿನ್ನ ಪಕ್ಷಕ್ಕೆ ಸಾರಿಗೆ ನೌಕರರ ಹಿತದ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ. ನಿಮ್ಮಪ್ಪ ಅಧಿಕಾರದಲ್ಲಿದ್ದಾಗ ಸರ್ಕಾರಿ ನೌಕರರನ್ನಾಗಿ ಮಾಡುತ್ತೇವೆ ಎಂದು ಹೇಳಿ ವಚನ ಭ್ರಷ್ಟನಾಗಿ ಆ ಮೇಲೆ ಸಾರಿಗೆ ನೌಕರರಿಗೆ ಯಮ ಯಾತನೆ ಕೊಟ್ಟಿದ್ದು ಮರೆಯಲು ಸಾಧ್ಯವೇ?. ನೀನೂ ಸಹ ಆ ದಿನ ದೊಡ್ಡದಾಗಿ ರಸ್ತೆ ಯಲ್ಲಿ ನಿಂತು ಯಾರಿಗೋ ಫೋನ್ ಮಾಡಿ ಇನ್ನೇನು ನಿಮ್ಮ ಬೇಡಿಕೆ ಈಡೇರಿತು ಅನ್ನೋ ಹಾಗೆ ಫೋಜು ಕೊಟ್ಟು ಮೋಸ ಮಾಡಿದ್ದು ಇನ್ನೂ ಮರೆತಿಲ್ಲ. ಈಗ ನವರಂಗಿ ಆಟ ಆಡ್ತಾ ಇದ್ದೀಯ ನಾಚಿಕೆ ಆಗ್ಬೇಕು ನಿನಗೆ ಸಾರಿಗೆ ನೌಕರರ ಹಿತದ ಬಗ್ಗೆ ಮಾತನಾಡೋಕ್ಕೆ. ನಿಮ್ಮಪಕ್ಷವನ್ನು ನಾವೆಲ್ಲ ದೂರ ಇಟ್ಟಾಗಿದೆ, ಕಾಂಗ್ರೆಸ್ ಸರ್ಕಾರದವರು ಶಕ್ತಿ ಯೋಜನೆಯ ಮೂಲಕ ಸಂಸ್ಥೆಯನ್ನು ಸರಿ ದಾರಿಗೆ ತರಲು ಶ್ರಮಿಸುತ್ತಿದ್ದಾರೆ, ಹಾಗೆಯೇ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಸರಿಸಮಾನ ವೇತನವನ್ನೂ ಕೊಡುತ್ತಾರೆ ಎಂಬುದು ನಂಬಿಕೆ. ಒಂದು ವೇಳೆ ಅವರೂ ನಿಮ್ಮಹಾಗೆ ವಚನ ಭ್ರಷ್ಟಾರಾದರೆ ನಿಮಗೆ ಬಂದ ಗತಿಯೇ ಅವರಿಗೆ, ಇನ್ನೊಂದು ನಾವು ಶ್ರಮ ಜೀವಿಗಳು ಯಾವ ಪಕ್ಷಕ್ಕೂ ಸೇರಿದವರಲ್ಲ ನಮ್ಮ ಹಿತ ಕಾಯುವವರಿಗೆ ನಮ್ಮ ಬೆಂಬಲ