CrimeNEWSಸಿನಿಪಥ

ಮಹಿಳೆಗೆ ಶ್ವಾನ ಕಚ್ಚಿದ ಪ್ರಕರಣ: ಚಾಲೆಂಜಿಂಗ್ ಸ್ಟಾರ್​ಗೆ ನೋಟಿಸ್ ನೀಡಲು ಪೊಲೀಸರ ಸಿದ್ಧತೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಇತ್ತೀಚೆಗಷ್ಟೇ ನಟ ದರ್ಶನ ಮನೆ ಮುಂದೆ ಕಾರು ನಿಲ್ಲಿಸಿದ ವಿಚಾರ ಮಹಿಳೆಗೆ ಶ್ವಾನ ಕಚ್ಚಿದ ಆರೋಪ ಭಾರಿ ಸೌಂಡ್‌ ಮಾಡಿತ್ತು. ಬಳಿಕ ತಣ್ಣಗಾಗಿತ್ತು. ಆದರೆ, ಅದರ ಹೊಗೆ ಮಾತ್ರ ಆಡುತ್ತಲೇ ಇದೆ. ಹೀಗಾಗಿ ಈ ಪ್ರಕರಣ ಸಂಬಂಧ ಚಾಲೆಂಜಿಂಗ್ ಸ್ಟಾರ್​ಗೆ ಪೊಲೀಸರು ನೋಟಿಸ್ ನೀಡಲು ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿ ಇದೆ.

ಪೊಲೀಸ್ ಠಾಣೆಗೆ ಹಾಜರಾಗುವಂತೆ ನೋಟಿಸ್ ನೀಡಲಿದ್ದಾರೆ. ಪ್ರಕರಣದಲ್ಲಿ ದರ್ಶನ್ ಎ-2 ಆರೋಪಿಯಾಗಿದ್ದಾರೆ. ಈಗಾಗಲೇ ದೂರುದಾರೇ ಅಮಿತ ಜಿಂದಾಲ್ ಆರ್​ಆರ್ ನಗರ ಠಾಣೆಯಲ್ಲಿ ಹೇಳಿಕೆ ದಾಖಲಿಸಿದ್ದಾರೆ. ದರ್ಶನ್ ಮನೆಯ ಶ್ವಾನ ನೋಡಿಕೊಳ್ತಿದ್ದ ಸಿಬ್ಬಂದಿ ಹೇಮಂತ್ ಕೂಡ ಹೇಳಿಕೆ ನೀಡಿದ್ದಾರೆ.

ಪೊಲೀಸರು ನಟ ದರ್ಶನ್ ಹೇಳಿಕೆಯಷ್ಟೇ ದಾಖಲಿಸಬೇಕಾಗಿದೆ. ಹೀಗಾಗಿ ನಟ ದರ್ಶನ್​ಗೆ ನೋಟಿಸ್ ನೀಡಿ ಹೇಳಿಕೆ ದಾಖಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಉದ್ದೇಶ ಪೂರ್ವಕವಾಗಿ ಶ್ವಾನ ಬಿಟ್ಟಿಲ್ಲ. ಆಕಸ್ಮಿಕವಾಗಿ ನಡೆದಿರೋ ಘಟನೆ ಎಂದು ಶ್ವಾನದ ಕೇರ್ ಟೇಕರ್ ಹೇಮಂತ್ ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಆ ಶ್ವಾನ ದರ್ಶನ್ ಅವರದ್ದಲ್ಲ ಗಿಫ್ಟ್ ಆಗಿ ಬಂದಿರೋದು. ಗಿಫ್ಟ್ ಕೊಟ್ಟು ಶ್ವಾನವನ್ನು ತಾನೇ ನೋಡಿಕೊಳ್ಳುತ್ತಿದ್ದಾಗಿ ಹೇಮಂತ್ ಹೇಳಿಕೊಂಡಿದ್ದಾರೆ.

ಮತ್ತೊಂದೆಡೆ ದರ್ಶನ್ ವಿರುದ್ಧ ಮಹಿಳೆ ಗಂಭೀರ ಆರೋಪ ಮಾಡಿದ್ದಾರೆ. ದರ್ಶನ್ ದೊಡ್ಡ ವ್ಯಕ್ತಿ, ಪೊಲೀಸರ ಮೇಲೆ ಒತ್ತಡ ಹೇರಿದ್ದಾರೆ. ಹೀಗಾಗಿ ಅವರ ಮನೆಯವರನ್ನು ವಿಚಾರಣೆ ಮಾಡಿಲ್ಲ. ಶ್ವಾನವನ್ನ ಬೇಕು ಅಂತಾನೆ ನನ್ನ ಮೇಲೆ ಅಟ್ಯಾಕ್ ಮಾಡಿಸಿದ್ದಾರೆ. ಪ್ರಕರಣದಲ್ಲಿ 307 ಸೆಕ್ಷನ್ ನನ್ನು ಪೊಲೀಸರು ಸೇರಿಸಿಲ್ಲ ಎಂದು ಆರೋಪ ಮಾಡಿದ್ದಾರೆ. ಸದ್ಯ ದರ್ಶನ್ ಹೇಳಿಕೆ ದಾಖಲಿಸಿ ಆರೋಪಗಳಿಗೆ ತೆರೆ ಎಳೆಯಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಏನಿದು ಪ್ರಕರಣ..?: ಅಕ್ಟೋಬರ್​​ ಕೊನೆಯಲ್ಲಿ ದರ್ಶನ್​ ಮನೆ ಮುಂದೆ ಅಮಿತ್ ಜಿಂದಾಲ್ ಎಂಬ ಮಹಿಳೆ ತನ್ನ ಕಾರ್​ ಪಾರ್ಕ್​ ಮಾಡಿದ್ದರು. ತಮ್ಮ ಕಾರ್​​ ತೆಗೆಯುವ ವೇಳೆ ಮಹಿಳೆ, ನಾಯಿ ನೋಡಿಕೊಳ್ಳುತ್ತಿದ್ದ ವ್ಯಕ್ತಿ ಮಧ್ಯೆ ಜಗಳ ಆಗಿದೆ. ಇದರ ಪರಿಣಾಮ ದರ್ಶನ್​ ವಿರುದ್ಧ ಮಹಿಳೆ ದೂರು ನೀಡಿದ್ದಾರೆ.

ಮಹಿಳೆ ಆರೋಪ ಏನು..?: ಅಂದು ನಾನು ಖಾಸಗಿ ಆಸ್ಪತ್ರೆಯೊಂದಕ್ಕೆ ಭೇಟಿ ಕೊಟ್ಟಿದ್ದೆ. ನನ್ನ ಕಾರನ್ನು ದರ್ಶನ್ ಮನೆ ಬಳಿ ಖಾಲಿ ಸೈಟಿನಲ್ಲಿ ನಿಲ್ಲಿಸಿದ್ದೆ. ಕಾರ್​ ತೆಗೆದುಕೊಳ್ಳಲು ಬಂದಾಗ ಅದೇ ಜಾಗದಲ್ಲಿ ನಾಯಿ ಇತ್ತು. ಆಗ ಆ ನಾಯಿಯನ್ನು ಕಟ್ಟಿ ಎಂದು ಕೇಳಿದೆ. ಅದಕ್ಕೆ ನಾಯಿಯನ್ನು ನೋಡಿಕೊಳ್ಳುತ್ತಿದ್ದ ನಿರ್ಲಕ್ಷ್ಯ ತೋರಿದ. ಆಗ ಮಾತಿಗೆ ಮಾತು ಬೆಳೆದಾಗ ನಾಯಿ ನನ್ನ ಮೈಮೇಲೆ ಎಗರಿ ಕಚ್ಚಿದ್ದು, ಹೊಟ್ಟೆಯ ಭಾಗಕ್ಕೆ ಗಾಯವಾಗಿದೆ ಎಂದು ಆರೋಪಿಸಿದ್ದಾರೆ.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ