NEWSದೇಶ-ವಿದೇಶ

ಯೂಟ್ಯೂಬ್​ಗೆ ಟಕ್ಕರ್​ ಕೊಡಲು ಎಕ್ಸ್​ ಟಿವಿ ಆ್ಯಪ್​ ಶೀಘ್ರದಲ್ಲೇ : ಲಿಂಡಾ ಯಾಕರಿನೋ

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ಯೂಟ್ಯೂಬ್​ಗೆ ಟಕ್ಕರ್​ ಕೊಡಲು ಟೆಸ್ಲಾ ಒಡೆತನದ ಎಲಾನ್​ ಮಸ್ಕ್​  ತಯಾರಿ ನಡೆಸಿದೆ. ಅದಕ್ಕಾಗಿ ಎಕ್ಸ್​ ಟಿವಿ ಆ್ಯಪ್​ ಅನ್ನು ಪ್ರಾರಂಭಿಸಲು ಮುಂದಾಗಿದೆ. ಶೀಘ್ರದಲ್ಲೇ ನೂತನ ಆ್ಯಪ್​  ಬಿಡುಗಡೆ ಆಗಲಿದೆ.

ಅಮೆರಿಕದ ಮಾಧ್ಯಮ ಕಾರ್ಯನಿರ್ವಾಹಕಿ ಮತ್ತು ಸಿಇಒ ಲಿಂಡಾ ಯಾಕರಿನೋ ಈ ಬಗ್ಗೆ ಮೈಕ್ರೋ ಬ್ಲಾಗಿಂಗ್​ ಸೈಟ್​​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಶೀಘ್ರದಲ್ಲೇ ವಿಡಿಯೋ ಸ್ಟ್ರೀಮಿಂಗ್​ ಆ್ಯಪ್​ ಅನ್ನು ಪ್ರಾರಂಭಿಸಲಾಗುವುದು ಎಂದು ಖಚಿತಪಡಿಸಿದ್ದಾರೆ.

ಶೀಘ್ರದಲ್ಲೇ ನಾವು ಎಕ್ಸ್​ ಟಿವಿ ಅಪ್ಲಿಕೇಶನ್​​ನೊಂದಿಗೆ ನಿಮ್ಮ ಸ್ಮಾರ್ಟ್​ಟಿವಿಗಳಿಗೆ ನೈಜ ವಿಷಯಗಳನ್ನು ತರುತ್ತೇವೆ. ದೊಡ್ಡ ಪರದೆಯ ಮೇಲೆ ಉತ್ತಮ ಗುಣಮಟ್ಟದ, ಮನರಂಜನೆಯನ್ನು ನೀಡಲಿದೆ ಎಂದು ತಿಳಿಸಿದ್ದಾರೆ.

ಅಂದಹಾಗೆಯೇ ನೂತನ ಆ್ಯಪ್​ ನೆಚ್ಚಿನ ವಿಡಿಯೋಗಳನ್ನು ಸ್ಮಾರ್ಟ್​ಫೋನ್​ನಿಂದ ಟಿವಿ ಪರದೆಗೆ ಎಕ್ಸ್​ ಮುಖಾಂತರ ಬಿತ್ತರಿಸಲು ಸಾಧ್ಯವಾಗುತ್ತದೆ ಎಂದು ಯಾಕರಿನೊ ವಿವರಿಸಿದ್ದಾರೆ. ಅಲ್ಲದೇ ನೂತನ ಆ್ಯಪ್​​ ಶೀಘ್ರದಲ್ಲೇ ಹೆಚ್ಚಿನ ಸ್ಮಾರ್ಟ್​ ಟಿಬಿಗಳಲ್ಲಿ ಲಭ್ಯವಿರಲಿದೆ ಎಂದು ತಿಳಿಸಿದ್ದಾರೆ.

ಸದ್ಯ ಹರಿದಾಡುತ್ತಿರುವ ಮಾಹಿತಿ ಪ್ರಕಾರ ಎಲಾನ್​ ಮಸ್ಕ್​ ಗೂಗಲ್​​ ಒಡೆತನದ ವಿಡಿಯೋ ಸ್ಟ್ರೀಮಿಂಗ್​ ಆ್ಯಪ್​​​ ಯೂಟ್ಯೂಬ್​ಗೆ ಪೈಪೋಟಿ ನೀಡುವ ಸಲುವಾಗಿ ಯೋಚಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ಪಾವತಿಸಿದ ಬಳಕೆದಾರರಿಗೆ ದೀರ್ಘವಾದ ಮತ್ತು ರೆಸಲ್ಯೂಶನ್​ ವಿಡಿಯೋ ಅಪ್​ಲೋಡ್​ ಮಾಡಲು ಅನುಮತಿಸುತ್ತದೆ ಎನ್ನಲಾಗಿದೆ.

Leave a Reply

error: Content is protected !!
LATEST
ರಾಜಕಾಲುವೆ ಒತ್ತುವರಿ ತೆರವುಗೊಳಿಸಿ, ನೆರೆ ಭೀತಿಯಿಂದ ಬೆಂಗಳೂರಿಗರ ರಕ್ಷಿಸಿ: ಡಿಸಿಎಂಗೆ ಎಎಪಿ ರಾಜ್ಯಾಧ್ಯಕ್ಷ ಆಗ್ರಹ ಮಧ್ಯಮ ವರ್ಗದ ವ್ಯಕ್ತಿ ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಮೌನಕ್ಕೆ ಶರಣಾದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ BBMP-ಡೆಂಗ್ಯೂ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ : ಸುರಳ್ಕರ್ ವಿಕಾಸ್ ಕಿಶೋರ್ ಉಚಿತ ಕೋಳಿ ಸಾಕಾಣಿಕೆ ತರಬೇತಿಗೆ 18 ರಿಂದ 45 ವರ್ಷದವರಿಂದ ಅರ್ಜಿ ಆಹ್ವಾನ ಪ್ರತಿಷ್ಠಿತ ಶಾಲೆಗಳಿಗೆ ಸೇರ ಬಯಸುವ ಮಕ್ಕಳಿಂದ ಅರ್ಜಿ ಆಹ್ವಾನ: ಷರತ್ತು ಅನ್ವಯ ವಸತಿ ಶಾಲೆಗಳಲ್ಲಿ ಪ್ರಥಮ ಪಿಯುಸಿ ತರಗತಿ ಪ್ರವೇಶಕ್ಕೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ KSRTC: ₹8.76 ಲಕ್ಷ ನಷ್ಟವುಂಟು ಮಾಡಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಸರ್ಕಾರದ ಮುಖ್ಯ ಕಾರ್ಯದರ್ಶ... BMTC ಚಾಲಕರಿಗೆ ಕೂಡಲೇ ವೇತನ ಪಾವತಿಸಿ: ಎಎಪಿಯ ಜಗದೀಶ್ ವಿ. ಸದಂ ಆಗ್ರಹ ಬಸವನಹಳ್ಳಿ: ನಿವೃತ್ತ ಸಹಾಯಕ ತೋಟಗಾರಿಕಾ ಇಲಾಖೆಯ ನಿರ್ದೇಶಕ ಚಿಕ್ಕಮಾಯಿಗೌಡರ ಪತ್ನಿ ಸಿದ್ದಮ್ಮ ನಿಧನ KSRTC ನೌಕರರ 2024ರ ವೇತನ ಪರಿಷ್ಕರಣೆ, 38 ತಿಂಗಳ ಹಿಂಬಾಕಿ ಬಿಡುಗಡೆಗೆ ಜೂನ್‌ 6ರಬಳಿಕ ನಿರ್ಧಾರ: ರಾಮಲಿಂಗಾರೆಡ್ಡಿ