NEWSನಮ್ಮಜಿಲ್ಲೆನಮ್ಮರಾಜ್ಯ

ಕಿಲ್ಲರ್‌ BMTC ಹಣೆಪಟ್ಟಿ ಕಳಚಿ ವಿನ್ನರ್‌ ಬಿಎಂಟಿಸಿಗೆ ಏರಿಸುವುದು ನಿಮ್ಮಿಂದ ಸಾಧ್ಯ: ಚಾಲಕರಿಗೆ ಕಲಾ ಕೃಷ್ಣಸ್ವಾಮಿ ಕರೆ

ವಿಜಯಪಥ ಸಮಗ್ರ ಸುದ್ದಿ
  • ಸಂಸ್ಥೆ ಆರು ವಲಯಗಳಲ್ಲಿ ಸುರಕ್ಷಿತ ಚಾಲನೆ ತರಬೇತಿ ಕಾರ್ಯಾಗಾರಕ್ಕೆ   ಚಾಲನೆ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಕಿಲ್ಲರ್‌ ಬಿಎಂಟಿಸಿ ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡಿದೆ ಇದನ್ನು ಕಳಚಿ ವಿನ್ನರ್‌ ಬಿಎಂಟಿಸಿ ಎಂಬ ಹಣೆಪಟ್ಟಿ ಏರಿಸುವುದು ಚಾಲಕರಾದ ನಿಮ್ಮಿಂದ ಸಾಧ್ಯ. ನೀವು ಜಾಗರೂಕರಾದರೆ ಅಸಾಧ್ಯ ಎಂಬ ಪದವೇ ಸುಳಿಯಲ್ಲ. ಹೀಗಾಗಿ ಕಿಲ್ಲರ್‌ ಹೋಗಿ ವಿನ್ನರ್‌ ಏರಿಸಲು ಇಂದಿನಿಂದಲೇ ಶ್ರಮಿಸಿ ಎಂದು ಸಂಸ್ಥೆಯ ಭದ್ರತಾ ಮತ್ತು ಜಾಗ್ರತಾ ನಿರ್ದೇಶಕಿ ಕಲಾ ಕೃಷ್ಣಸ್ವಾಮಿ ಚಾಲಕರಿಗೆ ಕರೆ ನೀಡಿದರು.

ಸೋಮವಾರ ಉತ್ತರ ವಲಯದ ಯಲಹಂಕ 11ನೇ ಘಟಕದಲ್ಲಿ ಹಮ್ಮಿಕೊಂಡಿದ್ದ ಎಲ್ಲ ಘಟಕ ಮತ್ತು ವಲಯಗಳಲ್ಲಿ ಅಪಘಾತರಹಿತ ಹಾಗೂ ಸುರಕ್ಷಿತ ಚಾಲನೆ ಬಗ್ಗೆ ತರಬೇತಿ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮೊದಲು ಚಾಲಕರಾದ ನೀವು ನಿಮ್ಮ ಸಂಸಾರ ಚೆನ್ನಾಗಿದ್ದರೆ ರಸ್ತೆಯಲ್ಲಿ ಓಡಾಡುವ ಮತ್ತು ಬಸ್‌ಗಳಲ್ಲಿ ಪ್ರಯಾಣಿಸುವವರು ಅತ್ಯಂತ ಸುರಕ್ಷಿತಾಗಿರುತ್ತಾರೆ. ಅವರ ಜೀವನ, ಜೀವ ಎರಡೂ ನಿಮ್ಮ ಕೈಯಲ್ಲೇ ಇದೆ. ಹೀಗಾಗಿ ನೀವು ಮನಸ್ಸನ್ನು ಯಾವಾಗಲು ತಿಳಿಯಾಗಿ ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.

ಮುಖ್ಯ ಸಂಚಾರ ವ್ಯಸ್ಥಾಪಕ ಪ್ರಭಾಕರ ರೆಡ್ಡಿ ಮಾತನಾಡಿ, ಈ ತರಬೇತಿ ಕಾರ್ಯಾಗಾರ ನಿಮಗೆ ಚಾಲನೆ ಬಸ್‌ ಮಾಡಲು ಬರುತ್ತಿಲ್ಲ ಎಂಬುದಕ್ಕಾಗಿ ಅಲ್ಲ. ನಿವೆಲ್ಲರೂ 10-20 ವರ್ಷ ಸೇವೆ ಸಲ್ಲಿಸಿ ನುರಿತ ಚಾಲಕರೆ ಆಗಿದ್ದೀರಿ. ಆದರೆ, ವರ್ಷಕ್ಕೊಮ್ಮೆ ಮತ್ತೆ ಅದನ್ನು ಮನನ ಮಾಡಿಕೊಳ್ಳುವುದಕ್ಕಾಗಿ ಈ ತರಬೇತಿ ಕಾರ್ಯಾಗಾರ ಆಯೋಜನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಬೆಂಗಳೂರು ಜನರ ಜೀವನಾಡಿಯಾಗಿರುವ ಬಿಎಂಟಿಸಿ ಇಲ್ಲಿನ ಮಂದಿಗೆ ಶೈಕ್ಷಣಿಕ, ಆರ್ಥಿಕ, ಆರೋಗ್ಯವನ್ನು ಸಕಾಲಕ್ಕೆ ಪರೋಕ್ಷವಾಗಿ ಅಥವಾ ಪ್ರತ್ಯಕ್ಷವಾಗಿ ಒದಗಿಸಿಕೊಡುವಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ. ಇದಕ್ಕೆ ಪ್ರಮುಖ ಬುನಾದಿಯಾಗಿ ಚಾಲಕರು ನೀವು ಇದ್ದಾರ, ನೀವಿಲ್ಲದೆ ಬಿಎಂಟಿಸಿ ಎಂಬ ಪದ ಇರಲು ಸಾಧ್ಯವಿಲ್ಲ ಎಂದು ಅಭಿಪ್ರಯಾಪಟ್ಟರು.

ಇನ್ನು ನಿರ್ವಾಹಕರು ಅಜಾಗರೂಕರಾದರೆ ಒಂದು ಟಿಕೆಟ್‌ ಮಿಸ್‌ ಆಗಬಹುದು ಆದರೆ ಚಾಲಕರು ಅಜಾಗರೂಕರಾದರೆ ಒಂದು ಜೀವ, ಒಂದು ಕುಟುಂಬವೇ ನಾಶವಾಗಿ ಬಿಡುತ್ತದೆ. ಇದನ್ನು ಮನನ ಮಾಡಿಕೊಂಡು ಹೋಗಬೇಕಿದೆ ಎಂದು ಸಲಹೆ ನೀಡಿದರು.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಜಿ.ಸತ್ಯವತಿ ಅವರು ಸಂಸ್ಥೆಯ ಆರು ವಲಯಗಳಾದ ಪೂರ್ವ, ಪಶ್ವಿಮ, ಉತ್ತರ, ದಕ್ಷಿಣ, ಕೇಂದ್ರೀಯ, ಈಶಾನ್ಯ ವಲಯಗಳ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ತಮ್ಮ ವ್ಯಾಪ್ತಿಯ ಅಡಿಯಲ್ಲಿ ಬರುವ ಎಲ್ಲ ಘಟಕಗಳಲ್ಲಿನ ಚಾಲನಾ ಸಿಬ್ಬಂದಿಗಳಿಗೆ ಅಪಘಾತರಹಿತ ಮತ್ತು ಸುರಕ್ಷ ಚಾಲನಾ ಕ್ರಮಗಳ ಕುರಿತು ತೀವ್ರತರವಾದ ತರಬೇತಿ ಕಾರ್ಯಾಗಾರವನ್ನು ಆಯೋಜಿಸಬೇಕು ಎಂದು ಆದೇಶ ಹೊರಡಿಸಿದ್ದರು.

ಹೀಗಾಗಿ ಸಂಸ್ಥೆಯು ನವೆಂಬರ್ 2023ರನ್ನು ರಸ್ತೆ ಸುರಕ್ಷ ಮಾಹೆಯನ್ನಾಗಿ ಆಚರಿಸಲು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಸಂಸ್ಥೆಯ ಆರು ವಲಯಗಳಿಂದ ಅಂದಾಜು 10,000 ಚಾಲನಾ ಸಿಬ್ಬಂದಿಗಳಿದ್ದು, ದಿನಂಪ್ರತಿ 300 ಚಾಲಕರಂತೆ ವಾರಕ್ಕೆ 1,800 ಚಾಲಕರನ್ನು 35 ದಿನಗಳೊಳಗಾಗಿ ಅಪಘಾತರಹಿತ ಮತ್ತು ಸುರಕ್ಷ ಚಾಲನಾ ಕ್ರಮಗಳ ಬಗ್ಗೆ ತರಬೇತಿ ನೀಡಲು ಕ್ರಮ ಕೈಗೊಳ್ಳಲಾಗಿದೆ ಹಾಗೂ ಚಾಲನಾ ಸಿಬ್ಬಂದಿಗಳ ನೇತ್ರ ತಪಾಸಣೆ ಹಾಗೂ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ.

ಸಂಸ್ಥೆಯ ಆರು ವಲಯಗಳಿಂದ ಹೊಸಕೋಟೆ ಬಸ್ ನಿಲ್ದಾಣ, ಚಲ್ಲಘಟ್ಟ ಕಾರ್ಯಾಗಾರ, ಉತ್ತರ ವಲಯದ ಯಲಹಂಕ ಘಟಕ-11, ಪುಟ್ಟೇನಹಳ್ಳಿ ಘಟಕ, ಕೇಂದ್ರೀಯ ವಲಯದ ಘಟಕ 25, ದಕ್ಷಿಣ ವಲಯದ ಕಲಾಸಿಪಾಳ್ಯ ಬಸ್ ನಿಲ್ದಾಣ ಹಾಗೂ ಮುಂತಾದ ಸ್ಥಳಗಳಲ್ಲಿ ಸೋಮವಾರ ತರಬೇತಿ ಕಾರ್ಯಾಗಾರವನ್ನು ಆಯೋಜನೆ ಮಾಡಲಾಗಿತ್ತು.

ಈ ಕಾರ್ಯಾಗಾರದಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿಗಳು, ವಿಭಾಗ ಸಂಚಾರಾಧಿಕಾರಿಗಳು, ವಿಭಾಗೀಯ ತಾಂತ್ರಿಕ ಶಿಲ್ಪಿಗಳು, ಘಟಕ ವ್ಯವಸ್ಥಾಪಕರು ಮತ್ತು ಸಂಚಾರ ಸಂಪನ್ಮೂಲ ವ್ಯಕ್ತಿಗಳು ಚಾಲನಾ ಸಿಬ್ಬಂದಿಗೆ ರಸ್ತೆ ಸುರಕ್ಷತೆ ಬಗ್ಗೆ ತರಬೇತಿ ನೀಡಿದರು. ಪ್ರಯಾಣಿಕರ ಮತ್ತು ಸಾರ್ವಜನಿಕರ ಸುರಕ್ಷತೆಯ ಪ್ರಯಾಣವೇ ಸಂಸ್ಥೆಯ ಆದ್ಯ ಉದ್ದೇಶವಾಗಿದ್ದು, ಸಂಸ್ಥೆಯ ಎಲ್ಲ ಚಾಲನಾ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ಸಂದೇಶವನ್ನು ಸಾರಿದರು.

Leave a Reply

error: Content is protected !!
LATEST
ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ ಸಿಮೆಂಟ್ ಲಾರಿಗೆ ಕಾರು ಡಿಕ್ಕಿ: ತಂದೆ, 2ವರ್ಷದ ಮಗು ಮೃತ, ತಾಯಿ ಸ್ಥಿತಿ ಗಂಭೀರ KSRTC: ವಾರದೊಳಗೆ ವೇತನ ಹೆಚ್ಚಳದ 38ತಿಂಗಳ ಹಿಂಬಾಕಿ ನಿವೃತ್ತ ನೌಕರರ ಬ್ಯಾಂಕ್‌ ಖಾತೆಗೆ ಜಮಾ!