ಮುಂಬೈ: ಎರಡು ವಾರಗಳ ಹಿಂದಷ್ಟೇ ಬಿಡುಗಡೆಯಾದ ಸಿನಿಮಾದ ಯುವ ನಟಿ ಆಕಾಂಕ್ಷಾ ಮೋಹನ್ ಹೋಟೆಲ್ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.
ತಮಿಳಿನ ‘9 ತಿರುದರ್ಗಲ್’ ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದ ನಟಿ ಆಕಾಂಕ್ಷಾ ಮೋಹನ್ ಕೆಲವು ಹಿಂದಿ ಚಿತ್ರಗಳಲ್ಲಿಯೂ ನಟಿಸಿದ್ದಾರೆ ಮತ್ತು ಮಾಡೆಲಿಂಗ್ನಲ್ಲಿ ತೊಡಗಿಸಿಕೊಂಡಿದ್ದರು.
ನಿನ್ನೆ ಮುಂಜಾನೆ (ಸೆಪ್ಟೆಂಬರ್ 30) ಆಕೆಯ ಶವ ಮುಂಬೈನ ವರ್ಸೋವಾದಲ್ಲಿ ಹೋಟೆಲ್ ಕೋಣೆಯಲ್ಲಿ ಪತ್ತೆಯಾಗಿದೆ. 30 ವರ್ಷದ ನಟಿ ಬುಧವಾರ ರಾತ್ರಿ 8 ಗಂಟೆಗೆ ಹೋಟೆಲ್ಗೆ ಚೆಕ್ ಇನ್ ಮಾಡಿ ಒಂದೆರಡು ದಿನಗಳ ಕಾಲ ಉಳಿದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಕೊಠಡಿಯಿಂದ ಹಲವಾರು ಗಂಟೆಗಳಾದರು ಹೊರಬರದ ಹಿನ್ನೆಲೆಯಲ್ಲಿ ಸಿಬ್ಬಂದಿ ಹೋಗಿ ಬಾಗಿಲು ತಟ್ಟಿದಾಗ ಆಕೆ ತನ್ನ ಕೊಠಡಿಯಿಂದ ಹೊರಬರದ ಮತ್ತು ಸ್ಪಂದಿಸಿಲ್ಲ. ಹೀಗಾಗಿ ಹೋಟೆಲ್ ಆಡಳಿತ ಮಂಡಳಿಯಿಂದ ಪೊಲೀಸರಿಗೆ ದೂರು ನೀಡಿ ಕೊಠಡಿ ಬಾಗಿಲು ತೆರೆಯಲಾಗಿದೆ.
ಆ ಸಮಯದಲ್ಲಿ ಆಕಾಂಕ್ಷಾ ಡೆತ್ ನೋಟ್ವೊಂದು ಪತ್ತೆಯಾಗಿದ್ದು, ಅದರಲ್ಲಿ ಆಕಾಂಕ್ಷಾ ಅವರು “‘ನನ್ನನ್ನು ಕ್ಷಮಿಸಿ. ಇದಕ್ಕೆ ಯಾರೂ ಕಾರಣರಲ್ಲ. ನಾನು ಸಂತೋಷವಾಗಿಲ್ಲ. ನನಗೆ ಶಾಂತಿ ಬೇಕು” ಎಂದು ಬರೆದಿದ್ದಾರೆ.
ಹದಿನೈದು ದಿನಗಳ ಹಿಂದಷ್ಟೇ ಆಕಾಂಕ್ಷಾ ಮೋಹನ್ ಮುಖ್ಯ ಭೂಮಿಕೆಯಲ್ಲಿದ್ದ ಹೊಸ ಹಿಂದಿ ಸಿನಿಮಾ ‘ಸಿಯಾ’ ಬಿಡುಗಡೆಯಾಗಿತ್ತು. ಇತ್ತ ನಗರದ ಲೋಖಂಡವಾಲಾ ಪ್ರದೇಶದ ಯಮುನಾ ನಗರ ಸೊಸೈಟಿಯಲ್ಲಿ ಒಂಟಿಯಾಗಿ ವಾಸವಿದ್ದ ಆಕೆ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿರಬಹುದು ಎನ್ನಲಾಗಿದೆ.