NEWSನಮ್ಮಜಿಲ್ಲೆರಾಜಕೀಯ

ಎನ್‌ಟಿಎಂ ಶಾಲೆ ಕೆಡವುದಕ್ಕೆ ಆಪ್ ವಿರೋಧ: ಎಎಪಿ ಮಾಲವಿಕ

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ವಿವೇಕಾನಂದ ಸ್ಮಾರಕಕ್ಕೆ ಆಮ್ ಆದ್ಮಿ ಪಾರ್ಟಿಯ ವಿರೋಧವಿಲ್ಲ. ಆದರೆ ಐತಿಹಾಸಿಕ ಮಹತ್ವವುಳ್ಳ ಎನ್‌ಟಿಎಂ ಶಾಲೆ ಕೆಡವುದಕ್ಕೆ ನಮ್ಮ ವಿರೋಧವಿದೆ ಎಂದು ಪಕ್ಷದ ಮೈಸೂರು ಜಿಲ್ಲಾ ಸಂಚಾಲಕಿ ಮಾಲವಿಕ ಗುಬ್ಬಿವಾಣಿ ತಿಳಿಸಿದ್ದಾರೆ.

ಎನ್‌ಟಿಎಂ ಶಾಲೆ ವಿಷಯದ ಬಗ್ಗೆ ಮಾತನಾಡಿದ ಅವರು, ವಿವೇಕಾನಂದ ಸ್ಮಾರಕವನ್ನು ಅದೇ ಆವರಣದಲ್ಲಿರುವ ಮಿಕ್ಕ ಸ್ಥಳದಲ್ಲಿ ಕಟ್ಟಬಹುದು. ಯುವ ಸಭಾಂಗಣ ಬೇರೆ ಎಲ್ಲಿಯಾದರೂ ಕಟ್ಟಬಹುದು. ಸಾಮಾಜಿಕ ಬದಲಾವಣೆ ಕೇವಲ ಶಿಕ್ಷಣದಿಂದ ಮಾತ್ರ ಸಾಧ್ಯವಾಗಿದ್ದು ಸಭಾಂಗಣದಿಂದ ಆಗಿಲ್ಲ ಎಂದು ಹೇಳಿದರು.

ಕರ್ನಾಟಕ ಸರಕಾರ ಸರಕಾರಿ ಶಾಲೆಗಳನ್ನು ಸರಿಯಾಗಿ ನಡೆಸಲಾಗದೆ, ಬೇಕೆಂತಲೇ ಪರಿಸ್ಥಿತಿ ಬಿಗಡಾಯಿಸಲು ಬಿಟ್ಟು, ಶಾಲೆಯ ಅಮೂಲ್ಯ ಜಾಗವನ್ನು ಹಿತಾಸಕ್ತಿಗಳ ವಶವಾಗಲು ಬಿಟ್ಟಂತೆ ತೋರುತ್ತದೆ ಎಂದು ದೂರಿದರು.

ಇನ್ನು ಶಿಕ್ಷಣ ಕ್ಷೇತ್ರದಲ್ಲಿ ಸಾಧಿಸುವುದು ಬೇಕಾದಷ್ಟು ಇರುವಾಗ ಶಾಲೆಗಳನ್ನು ಮುಚ್ಚುವುದು ತೀವ್ರ ಹಿನ್ನಡೆ. ಶಾಲೆಗಳನ್ನು ಮುಚ್ಚುವುದರಿಂದ ಸರಕಾರ ತನ್ನ ವೈಫಲ್ಯವನ್ನು ಒಪ್ಪಿಕೊಂಡಂತೆಯೇ ಸರಿ. ಹೊಸ ಶಾಲೆ ತೆರೆಯುವ ಮಾತಿರಲಿ, ಇರುವ ಶಾಲೆಗಳನ್ನು ಮುಚ್ಚುವುದರಲ್ಲಿ ಸರಕಾರ ತೋರುತ್ತಿರುವ ಉತ್ಸಾಹ ಬಿಜೆಪಿ ಸರಕಾರಕ್ಕೆ ಮಕ್ಕಳ ಶಿಕ್ಷಣ ಆದ್ಯತೆಯೂ ಅಲ್ಲ, ಅವಶ್ಯಕತೆಯೂ ಅಲ್ಲ ಎಂದು ಸಾರುವ ನೀತಿಯಾಗಿರುವುದು ದುರಾದೃಷ್ಟಕರ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರು ಐತಿಹಾಸಿಕ ಎನ್‌ಟಿಎಂ ಶಾಲೆಯನ್ನು ಕೆಡವುದರ ವಿರುದ್ಧ ಈಗಾಗಲೇ ಪ್ರತಿಭಟಿಸುತ್ತಿದ್ದು ಮುಂದೆಯೂ ಸರಕಾರದ ಇಂತಹ ನೀತಿಯ ವಿರುದ್ಧ ಪ್ರತಿಭಟಿನೆ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದರು.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ನಾನು ಕಾದು ಕುಳಿತಿದ್ದರೂ ಬಸ್‌ ನಿಲ್ಲಿಸಿಲ್ಲ - ಚಾಲಕ, ಕಂಡಕ್ಟರ್‌ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತ... ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್ ಸ್ಮಶಾನ ಜಾಗ ಭೂಗಳ್ಳನಿಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಅಧಿಕಾರಿಗಳು: ಎನ್.ಆರ್.ರಮೇಶ್ ಆರೋಪ ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ