NEWSನಮ್ಮಜಿಲ್ಲೆಶಿಕ್ಷಣ-

ಏಷ್ಯನ್ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ “ಏಷ್ಯನ್ ಕ್ರೀಡೋತ್ಸವ” ಸಂಭ್ರಮ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ನಗರದ ಏಷ್ಯನ್ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ವತಿಯಿಂದ ವಾರ್ಷಿಕ ಕ್ರೀಡಾಕೂಟ “ಏಷ್ಯನ್ ಕ್ರೀಡೋತ್ಸವ” ಸಮಾರಂಭ ಗುರುವಾರದಿಂದ ಶಾಲಾ ಮೈದಾನದಲ್ಲಿ ನಡೆಯುತ್ತಿದೆ.

ಏಷ್ಯನ್ ಕ್ರೀಡೋತ್ಸವವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದ ಶಾಲೆಯ ವ್ಯವಸ್ಥಾಪಕರಾದ ಮಹೇಶ್ ಅವರು ಮಾತನಾಡಿ, ಎಲ್ಲ ಹಂತಗಳಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ಅಗತ್ಯ. ಮುಖ್ಯವಾಗಿ ಶಾಲಾ- ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ತರಬೇತಿ ನೀಡುವುದರಿಂದ ದೇಶಕ್ಕೆ ಉತ್ತಮ ಕ್ರೀಡಾಪಟುಗಳನ್ನು ಕೊಡುಗೆಯಾಗಿ ನೀಡಬಹುದು ಎಂದು ತಿಳಿಸಿದರು.

ಇನ್ನು ಈ ನಿಟ್ಟಿನಲ್ಲಿಏಷ್ಯನ್ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ರಚನಾತ್ಮಕ ಕಾರ್ಯಯೋಜನ ಹೊಂದಿದ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಉತ್ತೇಜನ ನೀಡುವ ಕೆಲಸವನ್ನು ಮಾಡುವ ಮೂಲ ಪ್ರೋತ್ಸಾಹ ನೀಡುತ್ತಿದೆ ಎಂದರು.

ಶಾಲಾ ಪ್ರಾಂಶುಪಾಲರಾದ ಡಿಂಪಲ್ ಆರ್. ಗೌಡ ಮಾತನಾಡಿ, ನಮ್ಮ ಶಾಲೆಯಲ್ಲಿ ಗುರುವಾರದಿಂದ ಮೂರು ದಿನಗಳ ಕಾಲ (ಡಿ.8ರಿಂದ ಡಿ.10ರವರೆಗೆ) “ಏಷ್ಯನ್ ಕ್ರೀಡೋತ್ಸವ” ಆಯೋಜನೆ ಮಾಡಿದ್ದು ಇದರಲ್ಲಿ ಮುಖ್ಯವಾಗಿ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

AIPS ಇಂಗ್ಲಿಷ್‌ ಅಕ್ಷರದ ರೀತಿಯಲ್ಲಿ ಮಕ್ಕಳನ್ನು ಕೂರಿಸಿ ಅದರ ಮಧ್ಯದಿಂದ ವಿದ್ಯಾರ್ಥಿಗಳು ಸುತ್ತುಹಾಕಿಕೊಂಡು ಬಂದು ಕ್ರೀಡಾ ಜ್ಯೋತಿಯಯನ್ನು ಪ್ರಾಂಶುಪಾಲರಾದ ಡಿಂಪಲ್ ಆರ್. ಗೌಡ ಸ್ವೀಕರಿಸುವುದರೊಂದಿಗೆ ಕ್ರೀಡೋತ್ಸವ ಉದ್ಘಾಟಿಸಿದರು.

ಇನ್ನು ಮಕ್ಕಳು “ಏಷ್ಯನ್ ಕ್ರೀಡೋತ್ಸವ”ಕ್ಕೆ ಕ್ರೀಡಾ ಸಮವಸ್ತ್ರದೊಂದಿಗೆ ಭಾಗವಹಿಸುವ ಮೂಲಕ ಸಂಭ್ರಮಿಸುತ್ತಿದ್ದಾರೆ. ಕ್ರೀಡೋತ್ಸವದ ಮೊದಲನೇ ದಿನವಾದ ಗುರುವಾರ ಸಂಸ್ಥೆಯ ವ್ಯವಸ್ಥಾಪಕ ಮಹೇಶ್ ಅವರು ಆಟೋಟಕ್ಕೆ ಚಾಲನೆ ನೀಡಿದರು. ಕ್ರೀಡೋತ್ಸವದ ಸಂಭ್ರಮದಲ್ಲಿ ಕ್ರೀಡಾ ಸಮವಸ್ತ್ರ ಧರಿಸಿದ ವಿದ್ಯಾರ್ಥಿಗಳು ಖುಷಿಯಿಂದ ಹಲವಾರು ಭಂಗಿಗಳಲ್ಲಿ ಛಾಯಾಚಿತ್ರ ತೆಗೆಸಿಕೊಂಡರು.

ಪ್ರೈಮರಿ ಹೈಸ್ಕೂಲ್ ಮಕ್ಕಳು ನಯನ ಮನೋಹರವಾದ ಸ್ಪೋರ್ಟ್ಸ್ ಡಾನ್ಸ್‌ ( ಕ್ರೀಡಾ ನೃತ್ಯ) ಮಾಡಿ ಆಟೋಟದ ಸವಿಯನ್ನು ಸವಿಯುವ ಮೂಲಕ ಕ್ರೀಡಾಭಿಮಾನಿಗಳ ಮನಸ್ಸಿಗೆ ಮುದ ನೀಡಿದರು.

ಬಳಿಕ ಕ್ರೀಡೋತ್ಸವದಲ್ಲಿ ಓಟದ ಸ್ಪರ್ಧೆ, ಲೆಮನ್ ಅಂಡ್ ಸ್ಪೂನ್ ರೇಸ್, ಪೊಟಾಟೋ ರೇಸ್, ಫ್ರಾಗ್ ರೇಸ್, ಹುಲಾ ಹೂಪ್ ರೇಸ್, ಥ್ರೋ ಬಾಲ್ ಆಟಗಳನ್ನು ಮಕ್ಕಳು ಬಹಳ ಉತ್ಸಾಹ ಮತ್ತು ಖುಷಿಯಿಂದ ಆಡಿದರು.

ಈ ಕ್ರೀಡೋತ್ಸವ ಮೂರು ದಿನಗಳವರೆಗೆ ಆಯೋಜನೆಗೊಂಡಿದ್ದು ಎರಡನೇ ದಿನವಾದ ಇಂದು ಕೂಡ ವಿವಿಧ ಆಟೋಟಗಳನ್ನು ಆಡುವ ಮೂಲಕ ಮಕ್ಕಳು ಸಂಭ್ರಮಿಸುತ್ತಿದ್ದಾರೆ. ಶಾಲೆಯ ಸಹಾಯಕ ಪ್ರಾಧ್ಯಾಪಕರಾದ ನಾಗಮಣಿ ಮತ್ತು ಎಲ್ಲ ಶಿಕ್ಷಕಿಯರು ಮಕ್ಕಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ನಾನು ಕಾದು ಕುಳಿತಿದ್ದರೂ ಬಸ್‌ ನಿಲ್ಲಿಸಿಲ್ಲ - ಚಾಲಕ, ಕಂಡಕ್ಟರ್‌ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತ... ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್ ಸ್ಮಶಾನ ಜಾಗ ಭೂಗಳ್ಳನಿಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಅಧಿಕಾರಿಗಳು: ಎನ್.ಆರ್.ರಮೇಶ್ ಆರೋಪ ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ