NEWSನಮ್ಮಜಿಲ್ಲೆ

ಕೆಕೆಆರ್‌ಟಿಸಿ: ಬೆಳಗ್ಗೆ ಶಾಲೇ ಹೋಗೋ ಹೊತ್ತಿಗಾದರೂ ಒಮ್ಮೆ ನಮ್ಮೂರಿಗೆ ಬಸ್ ಬಿಡ್ರೀ – ವಿದ್ಯಾರ್ಥಿಗಳ ಅಳಲಿಗೆ ಸ್ಪಂದಿಸದ ಡಿಎಂ

ವಿಜಯಪಥ ಸಮಗ್ರ ಸುದ್ದಿ

ಕುಷ್ಟಗಿ: ಬೆಳಗ್ಗೆ ಶಾಲೇ ಹೋಗೋ ಹೊತ್ತಿಗಾದರೂ ಒಮ್ಮೆ ನಮ್ಮೂರಿಗೆ ಬಸ್ ಬಿಡ್ರೀ … ಸಂಜೆ ಶಾಲೆ ಬಿಟ್ ಮ್ಯಾಲೆ ಬೇಕಾದ್ರೆ ನಾವು ಕಾಲ್ನಡಿಗೆಯಲ್ಲೇ ನಮ್ಮೂರಿಗೆ ಹೋಗ್ತೀ ವಿ.. ಇದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ವಣಗೇರಾ ಗ್ರಾಮದ ವಿದ್ಯಾರ್ಥಿಗಳ ಅಳಲು.

ವಣಗೇರಾ ಗ್ರಾಮದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು 5 ಕಿ.ಮೀ. ಅಂತರದ ತಳವಗೇರಾ ಪ್ರೌಢಶಾಲೆಯಲ್ಲಿ ಓದುತ್ತಿದ್ದಾರೆ. ವಣಗೇರಾದಿಂದ ತಳವಗೇರಾ ಮಾರ್ಗವಾಗಿ ರಸ್ತೆ ಚನ್ನಾಗಿದ್ದರೂ ಈ ಒಳ ಮಾರ್ಗದಲ್ಲಿ ಒಂದೇ ಒಂದು ಬಸ್ ಸೇವೆ ಕೂಡ ಇಲ್ಲ.

ಬೆಳಗ್ಗೆ ಕುಷ್ಟಗಿಯಿಂದ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ವಣಗೇರಾವರೆಗೆ ಬಂದು ಮತ್ತೆ ಅದೇ ಮಾರ್ಗವಾಗಿ ಕುಷ್ಟಗಿಗೆ ಹೋಗುತ್ತದೆ. ಸದ್ಯ ಈ ಬಸ್‌ಅನ್ನೇ ವಣಗೇರಾ ಮಾರ್ಗವಾಗಿ ತಳವಗೇರಾ ಶಾಲೆಯ ತನಕ ಬಂದರೆ ಸಂಜೆ ಶಾಲೆ ಬಿಡುವ ಸಮಯಕ್ಕೆ ತಳವಗೇರಾ ದಿಂದ ಕುಷ್ಟಗಿಗೆ ಪ್ರಯಾಣಿಸಿದರೆ ಮಕ್ಕಳಿಗೆ ಸಹಾಯವಾಗುತ್ತದೆ ಎಂದು ಮನವಿ ಮಾಡಿದ್ದರು.

ಆದರೆ ಈ ಮನವಿಗೆ ಘಟಕ ವ್ಯವಸ್ಥಾಪಕರು ಸ್ಪಂದಿಸುತ್ತಿಲ್ಲ ಹೀಗಾಗಿ ಬೆಳಗ್ಗೆ ಶಾಲಾ ಆರಂಭದ ವೇಳೆಗೆ ಕುಷ್ಟಗಿ, ವಣಗೇರಾ ಬಸ್ ಸೇವೆಯನ್ನು ತಳವಗೇರಾಕ್ಕೆ ವಿಸ್ತರಿಸಿರಿ ಸಂಜೆ ಶಾಲೆ ಬಿಟ್ಟ ಬಳಿಕ ವಣಗೇರಾಕ್ಕೆ 5 ಕಿ.ಮೀ. ನಡೆದು ಬರುತ್ತೇವೆ ಎಂದು ಕೇಳಿಕೊಂಡರು ಘಟಕ ವ್ಯವಸ್ಥಾಪಕ ಸ್ಪಷ್ಟ ಭರವಸೆ ನೀಡಿಲ್ಲ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನು ಶಾಲಾ ದಿನಗಳಲ್ಲಿ ಇಲ್ಲಿನ ಮಕ್ಕಳು ನಿತ್ಯ ನಡೆದುಕೊಂಡು ಹೋಗಿ ಬರಬೇಕಾದ ಪರಿಸ್ಥಿತಿ ಇದೆ . ಮಕ್ಕಳು ಈ ಕಡೆಯಿಂದ ಮತ್ತು ಆ ಕಡೆಯಿಂದ ನಡೆದುಕೊಂಡು ಹೋಗಿ ಬರುವುದು ಮಾಡುತ್ತಿದ್ದಾರೆ.

ಇದರಿಂದ ಮಕ್ಕಳಿಗೆ ಆಯಾಸವಾಗುತ್ತಿದ್ದು, ಸರಿಯಾದ ಸಮಯಕ್ಕೆ ಶಾಲೆಗೆ ಹೋಗುವುದು ಕಷ್ಟವಾಗುತ್ತಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಬಸ್‌ ವ್ಯವಸ್ಥೆ ಕಲ್ಪಿಸಬೇಕು ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಉಮೇಶ್‌ ಯಾದವ್‌ ಮನವಿ ಮಾಡಿದ್ದಾರೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ನಾನು ಕಾದು ಕುಳಿತಿದ್ದರೂ ಬಸ್‌ ನಿಲ್ಲಿಸಿಲ್ಲ - ಚಾಲಕ, ಕಂಡಕ್ಟರ್‌ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತ... ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್ ಸ್ಮಶಾನ ಜಾಗ ಭೂಗಳ್ಳನಿಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಅಧಿಕಾರಿಗಳು: ಎನ್.ಆರ್.ರಮೇಶ್ ಆರೋಪ ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ