NEWSನಮ್ಮಜಿಲ್ಲೆನಮ್ಮರಾಜ್ಯ

ಕೆಕೆಆರ್‌ಟಿಸಿ: ಲಿಂಗಸುಗೂರು ಘಟಕದಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ ಭ್ರಷ್ಟಾಚಾರ – ಕಡಿವಾಣ ಹಾಕಬೇಕಿರುವ ವ್ಯವಸ್ಥಾಪಕರೇ ಮೌನ

ಅಧಿಕಾರಿಯ ತಮ್ಮನ ಹೆಂಡತಿಯ ಬ್ಯಾಂಕ್‌ಗೆ ಫೋನ್‌ ಪೇ ಮಾಡಿಸಿಕೊಳ್ಳುತ್ತಿರುವ ಭ್ರಷ್ಟರು

ವಿಜಯಪಥ ಸಮಗ್ರ ಸುದ್ದಿ

ಲಿಂಗಸೂಗುರು: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ರಾಯಚೂರು ವಿಭಾಗದ ಲಿಂಗಸುಗೂರು ಘಟಕದಲ್ಲಿ ಭ್ರಷ್ಟಾಚಾರ ಅವ್ಯಾಹತವಾಗಿ ನಡೆಯುತ್ತಿದೆ.

ಇಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕಿರುವ ಡಿಪೋ ವ್ಯವಸ್ಥಾಪಕರೆ ಭ್ರಷ್ಟಾಚಾರ ನಡೆಸಲು ದಾರಿ ಮಾಡಿಕೊಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಹೌದು! ಘಟಕದಲ್ಲಿರುವ ಎಟಿಐ ಒಬ್ಬರು ತಮ್ಮ ತಮ್ಮನ ಹೆಂಡತಿಯ ಬ್ಯಾಂಕ್‌ ಖಾತೆಗೆ ಘಟಕದ ನೌಕರರು ರಜೆ ತೆಗೆದುಕೊಳ್ಳುವುದು ಸೇರಿದಂತೆ ತುರ್ತು ಸಂದರ್ಭದಲ್ಲಿ ರಜೆ ಹಾಕಿಕೊಳ್ಳುವುದಕ್ಕೆ ಒಬ್ಬ ಸಿಬ್ಬಂದಿಯಿಂದ ಒಂದು ದಿನಕ್ಕೆ 200 ರೂಪಾಯಿಯಂತೆ ಅವರು ಎಷ್ಟು ದಿನಗಳು ರಜೆ ಹಾಕಿರುತ್ತಾರೋ ಅಷ್ಟೂ ದಿನದ ಹಣವನ್ನು ಫೋನ್‌ ಪೇ ಮಾಡಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಇನ್ನು ಈ ಬಗ್ಗೆ ಘಟಕದಲ್ಲಿ ಇರುವ ಸಿಸಿ ಟಿವಿ ಕ್ಯಾಮೆರಾ ಫುಟೆಜ್‌ ತೆಗೆಸಿದರು ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ಸಿಗಲಿದೆ ಎಂದು ಹೆಸಳೇಳಲಿಚ್ಚಿದ ನೌಕರರು ವಿಜಯಪಥಕ್ಕೆ ಮಾಹಿತಿ ನೀಡಿದ್ದಾರೆ.

ಇನ್ನು ಇಲ್ಲಿ ಕಾಡುತ್ತಿರುವ ಪ್ರಶ್ನೆ ಎಂದರೆ ಎಟಿಐ ಅವರ ಸೋದರನ ಪತ್ನಿಗೂ ಡಿಪೋದಲ್ಲಿ ಕೆಲಸ ಮಾಡುವ ನೌಕರರಿಗೂ ಏನು ಸಂಬಂಧ ಅವರ ಬ್ಯಾಂಕ್‌ ಖಾತೆಗೆ ರಜೆ ತೆಗೆದುಕೊಂಡ ನೌಕರರು ಏಕೆ ಹಣ ವರ್ಗಾವಣೆ ಮಾಡಬೇಕು?

ಈ ಬಗ್ಗೆ ವಿಜಯಪಥ ಮಾಹಿತಿ ಕಲೆಹಾಕಲು ಹೊರಟಾಗ ದಯಮಾಡಿ ನಮ್ಮ ಹೆಸರನ್ನು ನೀವು ಮುಂದೆ ತರಬೇಡಿ ಎಂಬ ಭಯದಲ್ಲೇ ನೌಕರರು ಮಾಹಿತಿ ಹಂಚಿಕೊಳ್ಳಲು ಹಿಂದೆ ಸರಿಯುತ್ತಿದ್ದರು. ಈ ವೇಳೆ ನಿಮ್ಮ ಹೆಸರುಗಳನ್ನು ಗೌಪ್ಯವಾಗಿಡಲಾಗುವುದು. ಅಲ್ಲದೆ ನಮ್ಮ ಉದ್ದೇಶ ನಿಮ್ಮ ಘಟಕದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದಾಗಿದೆ. ನೀವು ಭಯಬಿಟ್ಟು ಇಲ್ಲಿ ನಡೆಯುತ್ತಿರುವ ಅವ್ಯವಹಾರದ ಬಗ್ಗೆ ಹೇಳಿ ಎಂದು ಬೆನ್ನತ್ತಿದಾಗ ಈ ಎಲ್ಲ ವಿಷಯಗಳನ್ನು ಎಳೆಎಳೆಯಾಗಿ ನೌಕರರು ಬಿಚ್ಚಿಟ್ಟರು.

ಮೊದಲನೆಯದು ಎಟಿಐ ಅವರ ತಮ್ಮ ಹೆಂಡತಿಯ ಬ್ಯಾಂಕ್‌ ಖಾತೆಗೆ ನಮ್ಮ 25-30 ನೌಕರರು ತಿಂಗಳಲ್ಲಿ ಒಂದೆರಡು ಬಾರಿ ಹಣ ಹಾಕೆ ಹಾಕುತ್ತಾರೆ. ಕಾರಣ ಅವರಿಗೆ ತುರ್ತು ರಜೆ ಬೇಕಿರುತ್ತದೆ. ಈ ವೇಳೆ ಎಟಿಐ ಅವರು ರಜೆ ಮಂಜೂರು ಮಾಡುವುದಿಲ್ಲ. ಮೌಖಿಕವಾಗಿ ನೌಕರರು ಹೇಳಿ ರಜೆ ಪಡೆದಿರುತ್ತಾರೆ. ಅವರು ರಜೆ ಮುಗಿಸಿ ಬಂದ ಬಳಿಕ ಗೈರು ಹಾಜರಿ ತೋರಿಸಬೇಕಾಗುತ್ತದೆ ಇಲ್ಲ ದಿನಕ್ಕೆ 200 ರೂಪಾಯಿಯಂತೆ ಈ ಫೋನ್‌ ನಂಬರ್‌ಗೆ ಫೋನ್‌ ಪೇ ಮಾಡಿ ಎಂದು ನಂಬರ್‌ ಕೊಡುತ್ತಾರೆ.

ಈ ರೀತಿಯ ಸುಮಾರು 10 ಫೋನ್‌ ಪೇ ನಂಬರ್‌ಗಳನ್ನು ಎಟಿಐ ಹೊಂದಿದಾರೆ ಎಂಬ ಆರೋಪವನ್ನು ನೌಕರರು ಮಾಡಿದ್ದಾರೆ. ಅಲ್ಲದೆ ಈಗಾಗಲೇ ಹೇಳಿದಂತೆ ಎಟಿಐ ತಮ್ಮ ಹೆಂಡತಿಯ ಫೋನ್‌ ನಂಬರ್‌ ******1254 ಕ್ಕೆ ಫೋನ್‌ಪೇ ಮಾಡಲಾಗುತ್ತಿದೆ. ಈ ನಂಬರ್‌ ಚೆಕ್‌ ಮಾಡಿದರೆ ಯಾವ ನೌಕರರು ಎಷ್ಟೆಷ್ಟು ಫೋನ್‌ ಪೇ ಮಾಡಿದ್ದಾರೆ ಎಂಬುವುದು ತಿಳಿಯುತ್ತದೆ ಎಂದು ತಿಳಿಸಿದ್ದಾರೆ.

ಇದಲ್ಲದೆ ಉಳಿದ ಸುಮಾರ 9 ಫೋನ್‌ ನಂಬರ್‌ಗಳ ಬಗ್ಗೆಯೂ ಪರಿಶೀಲನೆ ಮಾಡಿದರೆ ಇವರ ಅಕ್ರಮ ಬಯಲಿಗೆ ಬರಲಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಘಟಕ ವ್ಯವಸ್ಥಾಪಕರನ್ನು ವಿಜಯಪಥ ಫೋನ್‌ ಮೂಲಕ ಮಾತನಾಡಿಸಿದಾಗ ಆ ಬಗ್ಗೆ ನಮಗೇನು ಗೊತ್ತಿಲ್ಲ. ಮಾಹಿತಿ ಬೇಕಿದ್ದರೆ ಡಿಪೋಗೆ ಬನ್ನಿ ಎಂದು ಹೇಳಿದರು.

ಹಲವಾರು ತಿಂಗಳುಗಳಿಂದ ಡಿಪೋ ಒಳಗಡೆಯೇ ಒಬ್ಬ ಇವರ ಅಧೀನದಲ್ಲೇ ಬರುವ ಅಧಿಕಾರಿ ನೌಕರರನ್ನು ಸುಲಿಗೆ ಮಾಡುತ್ತಿದ್ದರೂ ಈ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಡಿಪೋ ವ್ಯವಸ್ಥಾಪಕರು ಹೇಳುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕು ಎಂದು ನೌಕರರು ಮನವಿ ಮಾಡಿದ್ದಾರೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ನಾನು ಕಾದು ಕುಳಿತಿದ್ದರೂ ಬಸ್‌ ನಿಲ್ಲಿಸಿಲ್ಲ - ಚಾಲಕ, ಕಂಡಕ್ಟರ್‌ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತ... ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್ ಸ್ಮಶಾನ ಜಾಗ ಭೂಗಳ್ಳನಿಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಅಧಿಕಾರಿಗಳು: ಎನ್.ಆರ್.ರಮೇಶ್ ಆರೋಪ ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ